ರಾಜ್ಯ ಬಿಜೆಪಿ ರಾಜಕೀಯ ದಿಲ್ಲಿಗೆ ಶಿಫ್ಟ್ – 2 ಬಣಗಳ ವಿರುದ್ಧ ಸಿಡಿದೆದ್ದ 3ನೇ ಬಣ
ಯತ್ನಾಳ್ ಭವಿಷ್ಯ R. ಅಶೋಕ್ ಕೈಯಲ್ಲಿ?

ರಾಜ್ಯ ಬಿಜೆಪಿಯಲ್ಲಿರುವ ಬಣ ಬಡಿದಾಟ ಸದ್ಯಕ್ಕೆ ಮುಗಿಯೋ ತರ ಕಾಣುತ್ತಿಲ್ಲ. ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷವೇ ಸಖತ್ ಸೌಡ್ ಮಾಡುತ್ತಿದೆ. ವಿಜಯೇಂದ್ರ ಬಣ ಮತ್ತು ಯತ್ನಾಳ್ ಬಣದ ಬಡಿದಾಟ ದಿಲ್ಲಿ ಅಂಗಳಕ್ಕೆ ಹೋಗಿದ್ದು, ಇದಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ.. ದೆಹಲಿಯಲ್ಲಿ ಯತ್ನಾಳ್ ಬೀಡು ಬಿಟ್ಟು ವರಿಷ್ಠರಿಗೆ ವಕ್ಫ್ ಹೋರಾಟದ ವರದಿ ಒಪ್ಪಿಸಿ, ತನ್ನ ಬಣದ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ.. ಇತ್ತ ವಿಜಯೇಂದ್ರ ವಕ್ಫ್ ವಿರುದ್ಧ ಈಗ ಹೋರಾಟ ಆರಂಭಿಸಿದ್ದಾರೆ. ಹಾಗೇ ಆರ್ ಆಶೋಕ್ ನಡೆ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.
ವಕ್ಪ್ ವಿಚಾರವಾಗಿ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರಗೆ ಸೆಡ್ಡು ಹೊಡೆದಿರುವ ಯತ್ನಾಳ್ ಬಣ, ಸಮರ ಮುಂದುವರೆಸಿದೆ. ಇದೀಗ ಬಿಜೆಪಿಯೊಳಗಿನ ನಾಯಕರೇ ಕೆಲವರು ಯತ್ನಾಳ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಮತ್ತೊಂದೆಡೆ, ಆರ್ ಅಶೋಕ್ ನಡೆ ತೀವ್ರ ಕುತೂಹಲ ಕೆರಳಿಸಿದೆ. ಕೆಲವರು ವಿಜಯೇಂದ್ರ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡುವವರ ಬಣ ಒಂದೆಡೆಯಾದ್ರೆ, ಮತ್ತೊಂದಷ್ಟು ಜನರು, ಯತ್ನಾಳ್ ಬೆಂಬಲಕ್ಕೆ ನಿಂತಿದ್ದಾರೆ. ಇದು ಸಹಜವಾಗಿ ಹೈ ಕಮಾಂಡ್ ತಲೆ ನೋವಿಗೆ ಕಾರಣವಾಗಿದೆ.
ಕುಟುಂಬದ ಕಪಿಮುಷ್ಟಿಯಿಂದ ಪಕ್ಷ ಹೊರ ಬರಲಿ
ದೆಹಲಿಯಲ್ಲಿ ಬುಧವಾರ ಶಿಸ್ತು ಸಮಿತಿಯ ಮುಂದೆ ಹಾಜರಾದ ಯತ್ನಾಳ್, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ನಂತ್ರ ಮಾತನಾಡಿದ ಯತ್ನಾಳ್ ಬಹಳ ಮಂದಿ ಹೇಳುತ್ತಾರೆ ಪಕ್ಷ ತಾಯಿ ಇದ್ದಂತೆ ಅಂತಾ ಹೇಳುತ್ತಾರೆ. ಆದ್ರೆ, ರಾಷ್ಟ್ರೀಯ ಪಕ್ಷಕ್ಕೆ ಅವರು ಮೋಸ ಮಾಡಿದ್ದರೆ ಎಂದು ಮತ್ತೆ ಪರೋಕ್ಷವಾಗಿ ವಿಜಯೇಂದ್ರ ವಿರುದ್ದ ಕಿಡಿಕಾರಿದರು. ಕುಟುಂಬದ ಕಪಿ ಮುಷ್ಟಿಯಿಂದ ಪಕ್ಷ ಹೊರ ಬರಬೇಕು. ಹಿಂದುತ್ವದ ಧ್ವನಿಯಾಗಬೇಕು ಪಕ್ಷ. ಕೆಲವರು ಅವರದ್ದೇ ಆದ ಟೀಮ್ ಕಟ್ಟಿಕೊಂಡು ಹೋಗ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪತ್ರದಲ್ಲಿ ಬರೆದಿದ್ದೇನೆ. ಒಟ್ಟು ಆರು ಪುಟಗಳ ಉತ್ತರ ನೀಡುತ್ತೇನೆ ಎಂದರು. ರಾಜನಾಥ್ ಸಿಂಗ್ ಭೇಟಿಯ ಸಂದರ್ಭದಲ್ಲಿ ಸದ್ಯದ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪಾಪ ಅವರಿಗೆ ಸಣ್ಣ ಪುಟ್ಟ ವಿಚಾರ ಅನ್ನಿಸಿರಬೇಕು. ಅವರು ಅಲ್ಲೇ ಕುಳಿತುಕೊಳ್ಳುವವರು ಅಲ್ವಾ? ಅಪ್ಪ ಮಗನ ಆಸೆ ಈಡೇರುವುದಿಲ್ಲ ಹಾಗೂ ಅವರು ಅಂದುಕೊಂಡಿದ್ದು ಯಾವಾಗಲೂ ಈಡೇರುವುದಿಲ್ಲ ಎಂದು ತಿರುಗೇಟು ನೀಡಿದರು.
ವಿಜಯೇಂದ್ರ ವಕ್ಫ್ ಹೋರಾಟಕ್ಕೆ ಯತ್ನಾಳ್ ತಿರುಗೇಟು
ಇನ್ನು ವಕ್ಫ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಆರಂಭಿಸಿರುವ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟಕ್ಕೆ ಚಾಲನೆ ನೀಡಲಾಯ್ತು. ಬೀದರ್‌ನಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತ್ರ ಹೋರಾಟ ಆರಂಭಿಸಿದ್ದಾರೆ. ಆದ್ರೆ ಇದಕ್ಕೆ ಯತ್ನಾಳ್ ಟಾಂಗ್ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಿಗೆ ಈಗ ಜ್ಞಾನೋದಯವಾದಂತಿದೆ. ಈಗ ಅವರು ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ಮತ್ತು ಬೀದರ್‌ನಲ್ಲಿ ರೈತರನ್ನು ಭೇಟಿಯಾಗುತ್ತಿದ್ದಾರೆ, ಪ್ರಾಯಶಃ ವಕ್ಫ್ ವಿರುದ್ಧ ಇದು ಅವರ ಮೊದಲ ಹೋರಾಟವಿರಬಹುದು, ಅದರೆ ಈಗ ಹೋರಾಟ ಮಾಡವಂದಥದ್ದು ಏನೂ ಇಲ್ಲ, ತಮ್ಮ ತಂಡ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ದಾಖಲಿಸಿಕೊಂಡು ದಾಖಲೆ ಸಮೇತ ವರದಿಯನ್ನು ಜೆಪಿಸಿಗೆ ನೀಡಿದೆ ಎಂದು ಯತ್ನಾಳ್ ಹೇಳಿದರು. ಹಾಗೇ ಆರ್ ಆಶೋಕ್ ಕೂಡ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ದೆಹಲಿಗೆ ಹೋಗಿದ್ದಾರೆ. ಹೀಗಾಗಿ ಆರ್ ಅಶೋಕ್ ಯಾರ ಪರವಾಗಿ ಮಾತನಾಡ್ತಾರೆ ಅನ್ನೋ ಕುತೂಹಲ ಸಹಜವಾಗಿ ಎದ್ದಿದೆ.
ರಾಜ್ಯ ಬಿಜೆಪಿ ಬಗ್ಗೆ ಜೆ.ಪಿ.ನಡ್ಡಾ ಮಾಹಿತಿ ಸಂಗ್ರಹ
ರಾಜ್ಯದ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದೆ ಎಂಬ ಆರೋಪ ಕೂಡ ಇದೆ. ಈ ಬಗ್ಗೆ ಕೆಲ ರಾಜ್ಯ ನಾಯಕರು ಬಿಜೆಪಿ ಹೈಕಮಾಂಡ್ ನಾಯಕರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ದೆಹಲಿಯ ಪಾರ್ಲಿಮೆಂಟ್ ಹೌಸ್ನಲ್ಲಿ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ರಾಜ್ಯದಲ್ಲಿ ಇತ್ತೀಚಿನ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಬಂಡಾಯದ ತಾರತಮ್ಯ ಈ ಮಟ್ಟಕ್ಕೆ ಹೋಗಿದೆ ಏಕೆ ಎಂಬ ಬಗ್ಗೆ ಜೆ.ಪಿ.ನಡ್ಡಾ ಮಾಹಿತಿ ಸಂಗ್ರಹಿಸಿದ್ದಾರೆ. ಕೆಲ ರಾಜ್ಯ ನಾಯಕರು, ಉಚ್ಛಾಟನೆ ಮಾಡಿ, ಯತ್ನಾಳ್ರನ್ನು ಕರೆದು ಮಾತನಾಡಿ, ಖಡಕ್ ವಾರ್ನಿಂಗ್ ಕೊಡಿ ಎಂದು ನಡ್ಡಾ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ರಾಜ್ಯ ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಹೈ ಕಮಾಂಡ್ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.