ಕ್ಯಾಪ್ಟನ್ ಗಳ ಕ್ಯಾಪ್ಟನ್ ಪಾಂಡ್ಯ.. MIನಲ್ಲಿ ಹಾರ್ದಿಕ್ ಹೇಳಿದ್ದೇ ಶಾಸನ – ರೋಹಿತ್, ಸೂರ್ಯ, ಬುಮ್ರಾ ಒಪ್ಪಿದ್ದೇಗೆ?
2024ರ ಐಪಿಎಲ್ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಟ್ ಅದು ಆಟದಿಂದ ಅಲ್ಲ. ಕ್ಯಾಪ್ಟನ್ಸಿ ಬದಲಾವಣೆಯಿಂದ. ಒಂದಲ್ಲ ಎರಡಲ್ಲ ಐದು ಬಾರಿ ಚಾಂಪಿಯನ್ಸ್ ಟ್ರೋಫಿಗಳನ್ನ ಗೆದ್ದು ಕೊಟ್ಟಿದ್ದಂತ ನಾಯಕ ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟಾಭಿಷೇಕ ಮಾಡ್ಲಾಗಿತ್ತು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಇದೇ ನಡೆ ಅಭಿಮಾನಿಗಳ ಕೆಂಗಣ್ಣಿಗೆ ಕಾರಣ ಆಗಿತ್ತು. ಸೋ 2025ರ ಐಪಿಎಲ್ ಸೀಸನ್ಗೆ ಬೇರೆ ಕ್ಯಾಪ್ಟನ್ ಆಗ್ತಾರೇ ಅಂತಾನೇ ಕ್ಯಾಲ್ಕುಲೇಟ್ ಮಾಡ್ತಿದ್ರು. ಬಟ್ ಮತ್ತೊಮ್ಮೆ ಪಾಂಡ್ಯನೇ ಸಾರಥಿಯಾಗೋದು ಫಿಕ್ಸ್ ಆಗಿದೆ. ಅದ್ರಲ್ಲೂ ಕ್ಯಾಪ್ಟನ್ ಗಳ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ. ಹಾಗಾದ್ರೆ ಪಾಂಡ್ಯಗೆ ಯಾಕೆ ಅಷ್ಟು ಇಂಪಾರ್ಟೆನ್ಸ್? ರೋಹಿತ್, ಸೂರ್ಯ, ಬುಮ್ರಾ ಸೈಡ್ಲೈನ್ ಆದ್ರಾ? ಟೀಂ ಇಂಡಿಯಾ ಕ್ಯಾಪ್ಟನ್ಗಳಿಗೆ ಐಪಿಎಲ್ನಲ್ಲಿ ಪಾಂಡ್ಯ ಲೀಡರ್ ಆಗಿದ್ದೇಗೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜಗ ಮೆಚ್ಚಿದ ಜೋಡಿ ಗಿಲ್ಲಿ- ಗಗನಾ.. ಶಿವಣ್ಣ ಸ್ಟೈಲ್ ನಲ್ಲಿ ಬಳೆ ತೊಡಿಸಿದ ನಟ – ಕಾಮಿಡಿ ಕಿಂಗ್ ಗೆ ಹೊಸ ಅವಾರ್ಡ್
ಮುಂಬೈ ಇಂಡಿಯನ್ಸ್.. ಐಪಿಎಲ್ನ ಹತ್ತು ಫ್ರಾಂಚೈಸಿಗಳ ಪೈಕಿ ಅತ್ಯಂತ ಯಶಸ್ವೀ ತಂಡ. 17 ಸೀಸನ್ಗಳ ಪೈಕಿ 5 ಸಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ 5 ಸಲ ಕಪ್ ಗೆದ್ದಿದ್ರೂ ಮೊದಲು ಈ ಸಾಧನೆ ಮಾಡಿದ್ದು ಮುಂಬೈ ತಂಡ. ಹೀಗೆ ಐದಕ್ಕೆ ಐದೂ ಟ್ರೋಫಿಗಳನ್ನ ಎಂಐಗೆ ಗೆಲ್ಲಿಸಿಕೊಟ್ಟಿದ್ದೇ ನಾಯಕ ರೋಹಿತ್ ಶರ್ಮಾ. ಬಟ್ ಅಂಬಾನಿ ಬ್ರಿಗೇಡ್ ಕಳೆದ ವರ್ಷ ಅಚ್ಚರಿ ಎನ್ನುವಂತೆ ರೋಹಿತ್ಗೆ ಕೊಕ್ ಕೊಟ್ಟು ಪಾಂಡ್ಯಗೆ ಕ್ಯಾಪ್ಟನ್ಸಿ ಕಟ್ಟಿದ್ರು. ಅದೇ ಪಾಂಡ್ಯ ಈಗ ನಾಯಕರಿಗೇ ನಾಯಕ ಆಗಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ & ಒಡಿಐ ನಾಯಕ ರೋಹಿತ್ ಗೆ ಪಾಂಡ್ಯ ಕ್ಯಾಪ್ಟನ್!
ಅದೆಂಥಾ ಅಚ್ಚರಿ. ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕ. ಟಿ-20 ವಿಶ್ವಕಪ್ನಲ್ಲಿ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ವಿಶ್ವಕಪ್ ಬಳಿಕ ಟಿ-20 ಫಾರ್ಮೆಟ್ಗೆ ಗುಡ್ ಬೈ ಹೇಳಿರೋ ರೋಹಿತ್ ಶರ್ಮಾ ಸದ್ಯ ಭಾರತದ ಪರ ಏಕದಿನ ಮತ್ತು ಟೆಸ್ಟ್ ಮ್ಯಾಚ್ಗಳ ಸಾರಥ್ಯ ವಹಿಸಿಕೊಂಡಿದ್ದಾರೆ. ಇಂಥಾ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಅಡಿಯಲ್ಲಿ ಪಂದ್ಯಗಳನ್ನ ಆಡ್ಬೇಕಾದ ಸಿಚುಯೇಷನ್ ಇದೆ. ಟೀಂ ಇಂಡಿಯಾದಲ್ಲಿ ರೋಹಿತ್ ಕೈಕೆಳಗೆ ಆಡೋ ಪಾಂಡ್ಯ ಐಪಿಎಲ್ನಲ್ಲಿ ತಾನೇ ರೋಹಿತ್ರನ್ನ ಲೀಡ್ ಮಾಡ್ತಾರೆ. ಈ ವರ್ಷ ಕೂಡ ಅದೇ ಕಂಟಿನ್ಯೂ ಆಗಲಿದೆ. ಮುಂಬೈ ಇಂಡಿಯನ್ಸ್ನ ಕೋಚ್ ಮಹೇಲ ಜಯವರ್ಧನೆ ಕೂಡ ಪಾಂಡ್ಯರೇ ಕ್ಯಾಪ್ಟನ್ ಆಗಿ ಕಂಟಿನ್ಯೂ ಆಗ್ತಾರೆ ಅಂದಿದ್ದಾರೆ. ಸೋ ಈ ಮೂಲಕ 18ನೇ ಸೀಸನ್ ಐಪಿಎಲ್ನಲ್ಲೂ ಹಿಟ್ಮ್ಯಾನ್ ರೋಹಿತ್ ಶರ್ಮಾ ಪಾಂಡ್ಯ ಕೈಕೆಳಗೇ ಕಣಕ್ಕಿಳಿಯಬೇಕಾಗಿದೆ. ಪಾಂಡ್ಯ ನಾಯಕತ್ವದಲ್ಲಿ ಎರಡನೇ ಸೀಸನ್ ಆಡಲಿದ್ದಾರೆ. ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದಾರೆ.
ಮುಂಬೈಗೆ 10 ವರ್ಷಗಳ ಕಾಲ ಕ್ಯಾಪ್ಟನ್ ಆಗಿದ್ದ ರೋಹಿತ್!
2011ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ರೋಹಿತ್ ಶರ್ಮಾ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ರಿಕಿ ಪಾಂಟಿಂಗ್ ಅವರಿಂದ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿ ಪಡೆದಿದ್ದ ರೋಹಿತ್ ಶರ್ಮಾ, 10 ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿದ್ರು. ತಮ್ಮ ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಮುಂಬೈ ಫ್ರಾಂಚೈಸಿಗೆ ಟ್ರೋಫಿ ಗೆದ್ದುಕೊಟ್ಟಿದ್ದರು. ಆ ಬಳಿಕ 2015, 2017, 2019 ಹಾಗೂ 2020ರಲ್ಲೂ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟು, ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕ ಎಂಬ ದಾಖಲೆ ನಿರ್ಮಿಸಿದ್ದರು. ಆದ್ರೆ 2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್ ಶರ್ಮಾರ ದಾಖಲೆಗೆ ಜೊತೆಗೂಡಿದ್ರು.
ಟೀಂ ಇಂಡಿಯಾ ಟಿ-20 ನಾಯಕ ಸೂರ್ಯನದ್ದೂ ಅದೇ ಕಥೆ!
ರೋಹಿತ್ ಶರ್ಮಾ ಟಿ-20 ಫಾರ್ಮೆಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಬಳಿಕ ಯಾರಾಗ್ತಾರೆ ಭಾರತ ತಂಡದ ಟಿ-20 ಕ್ಯಾಪ್ಟನ್ ಅನ್ನೋ ಪ್ರಶ್ನೆಗೆ ಹಲವು ಹೆಸರುಗಳು ಕೇಳಿ ಬಂದಿದ್ವು. ಅದ್ರಲ್ಲೂ ಹಾರ್ದಿಕ್ ಪಾಂಡ್ಯ ಹೆಸರು ಪ್ರಬಲವಾಗಿ ಚರ್ಚೆಯಾಗಿತ್ತು. ಬಟ್ ಬಿಸಿಸಿಐ ಮ್ಯಾನೇಜ್ಮೆಂಟ್ ಅಂತಿಮವಾಗಿ ಸೂರ್ಯಕುಮಾರ್ ಯಾದವ್ಗೆ ಕ್ಯಾಪ್ಟನ್ಸಿ ನೀಡಿತ್ತು. ಭಾರತ ಟಿ20 ತಂಡದ ಕ್ಯಾಪ್ಟನ್ ಆದ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಆಡಲು ಸಜ್ಜಾಗಿರುವ ಸೂರ್ಯ ಕೂಡ ಹಾರ್ದಿಕ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವುದು ವಿಶೇಷ.
ವೈಸ್ ಕ್ಯಾಪ್ಟನ್ & ಹಂಗಾಮಿ ನಾಯಕ ಬುಮ್ರಾಗೂ ಸೇಮ್ ಸಂಕಷ್ಟ!
ಈ ಹಿಂದೆಯಿಂದಲೂ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಮತ್ತಯ ಐಪಿಎಲ್ ಕ್ಯಾಪ್ಟನ್ಸಿಗಳ ಮೇಲೆ ಕಣ್ಣಿಟ್ಟಿದ್ರು. ರೋಹಿತ್ ಶರ್ಮಾ ಬಳಿಕ ತಾವೇ ನಾಯಕತ್ವ ಪಡೆಯೋ ಲೆಕ್ಕಾಚಾರದಲ್ಲಿದ್ರು. ಸದ್ಯ ಟೀಂ ಇಂಡಿಯಾದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯವನ್ನ ನಾಯಕನಾಗಿ ಕಣಕ್ಕಿಳಿದು ಗೆಲ್ಲಿಸಿಕೊಟ್ಟಿದ್ದಾರೆ. ಹಾಗೇ ಟೂರ್ನಿಗೆ ವೈಸ್ ಕ್ಯಾಪ್ಟನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಬಟ್ ಈಗ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಬೇಕಾಗಿದೆ.
ಒಟ್ನಲ್ಲಿ ಐಪಿಎಲ್ನ 18ನೇ ಆವೃತ್ತಿಗೆ ಹರಾಜು ಮುಗಿದು ಮಾರ್ಚ್ 14 ರಿಂದ ಟೂರ್ನಿ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಮೇ 25 ರಂದು ಆಯೋಜಿಸಲು ನಿರ್ಧಿಸಲಾಗಿದೆ. ಮುಂಬೈ ತಂಡಕ್ಕೆ ನಾಯಕರಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಬಟ್ ಟೀಮ್ ಇಂಡಿಯಾದ ಕ್ಯಾಪ್ಟನ್ ಪಟ್ಟದಲ್ಲಿರುವ ಇಬ್ಬರು ಆಟಗಾರರು ಹಾಗೂ ಒಬ್ಬ ಉಪನಾಯಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕನಲ್ಲದ ಆಟಗಾರನ ಕ್ಯಾಪ್ಟನ್ಸಿ ಅಡಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ