IND Vs AUS.. ಇಬ್ಬರು ಡ್ರಾಪ್! – 2ನೇ ಪಂದ್ಯಕ್ಕೆ KL ಸ್ಲಾಟ್ ಚೇಂಜ್
ಪಿಂಕ್ ಬಾಲ್ ಟೆಸ್ಟ್.. ಯಾರು ಬೆಸ್ಟ್?

IND Vs AUS.. ಇಬ್ಬರು ಡ್ರಾಪ್! – 2ನೇ ಪಂದ್ಯಕ್ಕೆ KL ಸ್ಲಾಟ್ ಚೇಂಜ್ಪಿಂಕ್ ಬಾಲ್ ಟೆಸ್ಟ್.. ಯಾರು ಬೆಸ್ಟ್?

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವನ್ನ ಸಾಧಿಸಿರೋ ಟೀಂ ಇಂಡಿಯಾ ಸೆಕೆಂಡ್​ ಮ್ಯಾಚ್​ನಲ್ಲೂ ಕೂಡ ಕಾಂಗರೂಗಳನ್ನ ಬಗ್ಗು ಬಡಿಯೋ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ತವರಿನಲ್ಲೇ ಮೊದಲ ಪಂದ್ಯ ಸೋತು ಮುಖಭಂಗಕ್ಕೆ ಒಳಗಾಗಿರೋ ಆಸಿಸ್ ಪಡೆ ಸೋಲಿನ ಸೇಡು ತೀರಿಸಿಕೊಳ್ಳೋಕೆ ಹವಣಿಸ್ತಿದೆ. ಬಟ್ ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ  ಮೇಜರ್ ಸರ್ಜರಿ ಆಗಲಿದೆ. ಪ್ಲೇಯಿಂಗ್ 11ನಲ್ಲಿ ಬಿಗ್ ಟ್ವಿಸ್ಟ್ ಇರಲಿದೆ. ಎರಡನೇ ಪಂದ್ಯದಲ್ಲಿ ಏನೆಲ್ಲಾ ಚೇಂಜಸ್ ಇರುತ್ತೆ? ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಯೋರು ಯಾರು? ಯಾರೆಲ್ಲಾ ಹೊರ ಬೀಳ್ತಾರೆ? ಕನ್ನಡಿಗರಿಗೂ ಶಾಕ್ ಕಾದಿದ್ಯ? ಇಬ್ಬರು ಹಿರಿಯ ಆಟಗಾರರಿಗೆ ಈ ಪಂದ್ಯದಲ್ಲೂ ಅವಕಾಶ ಇಲ್ವಾ? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಜಗ ಮೆಚ್ಚಿದ ಜೋಡಿ ಗಿಲ್ಲಿ- ಗಗನಾ.. ಶಿವಣ್ಣ ಸ್ಟೈಲ್‌ ನಲ್ಲಿ ಬಳೆ ತೊಡಿಸಿದ ನಟ – ಕಾಮಿಡಿ ಕಿಂಗ್‌ ಗೆ ಹೊಸ ಅವಾರ್ಡ್‌  

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ರೇಸ್​ನಲ್ಲಿ ಉಳಿಯಲು ಟೀಂ ಇಂಡಿಯಾಗೇ ಆಸ್ಟ್ರೇಲಿಯಾ ಸರಣಿಯನ್ನ ಗೆಲ್ಲಲೇಬೇಕಿದೆ. ಈಗಾಗ್ಲೇ ಒಂದು ಮ್ಯಾಚ್ ಗೆದ್ದು ಶುಭಾರಂಭ ಮಾಡಿರೋ ಭಾರತೀಯ ಆಟಗಾರರು ಸೆಕೆಂಡ್ ಟೆಸ್ಟ್ ಕೂಡ ಗೆಲ್ಲೋ ಜೋಶ್​ನಲ್ಲಿದ್ದಾರೆ. ಬಟ್ ಇದಕ್ಕೆ ಕೌಂಟರ್ ಆಗಿ ಆಸಿಸ್ ಆಟಗಾರರು ಮೈಂಡ್ ಗೇಮ್ ಶುರು ಮಾಡಿದ್ದಾರೆ. ಅದೂ ಅಲ್ದೇ ಇದು ಪಿಂಕ್ ಬಾಲ್ ಮ್ಯಾಚ್ ಆಗಿರೋದ್ರಿಂದ ತುಂಬಾನೇ ಕ್ಯೂರಿಯಾಸಿಟಿ ಹುಟ್ಟಿಸಿದೆ. ಡಿಸೆಂಬರ್ 6ರಿಂದ ಅಡಿಲೇಡ್ ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನ ಮಣಿಸಲು ರೋಹಿತ್ ಶರ್ಮಾ ಪಡೆ ಹೊಸ ಸ್ಟ್ರಾಟರ್ಜಿ ಮಾಡಿಕೊಳ್ತಿದೆ.

ರೋಹಿತ್ & ಗಿಲ್ ರೀಎಂಟ್ರಿ.. ಪಡಿಕ್ಕಲ್ ಮತ್ತು ಜುರೇಲ್ ಡ್ರಾಪ್!

ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ವೈಯಕ್ತಿಕ ಕಾರಣಗಳಿಂದಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾಗಿಯಾಗಿರಲಿಲ್ಲ. ಹಾಗೇ ಗಾಯದ ಕಾರಣದಿಂದ ಬೆಂಚ್‌ಗೆ ಸೀಮಿತವಾಗಿದ್ದ ಶುಬ್ಮನ್ ಗಿಲ್ ಪಿಂಕ್ ಬಾಲ್ ಟೆಸ್ಟ್‌ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಹಾಗಾಗಿ ತಂಡದಲ್ಲಿ ಕೆಲ ಚೇಂಜಸ್ ಮಾಡೋದು ಅನಿವಾರ್ಯವಾಗಿದೆ.  ರೋಹಿತ್ ಶರ್ಮಾ ಹಾಗೂ ಗಿಲ್​ ತಂಡಕ್ಕೆ ಮರಳಿರುವುದರಿಂದ ಮೊದಲ ಟೆಸ್ಟ್​ ಪಂದ್ಯದಲ್ಲಿ ಫೇಲ್ಯೂರ್ ಅನುಭವಿಸಿದ್ದ ದೇವದತ್ ಪಡಿಕ್ಕಲ್ ಹಾಗೂ ಧ್ರುವ್​ ಜುರೆಲ್ ಇಬ್ಬರನ್ನ ಡ್ರಾಪ್ ಮಾಡಬೇಕಾಗುತ್ತೆ. ಬಟ್ ರೋಹಿತ್ ಓಪನರ್ ಆಗಿ ಆಡ್ತಾರಾ? ಅಥವಾ ಮೊದಲ ಪಂದ್ಯದಂತೆಯೇ ಕೆಎಲ್ ರಾಹುಲ್​ ಮತ್ತು ಯಶಸ್ವಿ ಜೈಸ್ವಾಲ್ ಜೋಡಿಯನ್ನ ಮುಂದುವರಿಸುತ್ತಾರಾ ಅನ್ನೋ ಕ್ಯೂರಿಯಾಸಿಟಿ ಇದೆ.  ಮೊದಲ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ರಾಹುಲ್​-ಜೈಸ್ವಾಲ್​ ಇಬ್ಬರು 201ರನ್​ಗಳ ಜೊತೆಯಾಟ ಆಡಿ ದಾಖಲೆ ಬರೆದಿದ್ದರು.

ಸೆಕೆಂಡ್ ಮ್ಯಾಚ್ ನಲ್ಲೂ ಜಡೇಜಾ, ಅಶ್ವಿನ್ ಗೆ ಇಲ್ವಾ ಚಾನ್ಸ್?

ಮೊದಲ ಟೆಸ್ಟ್​ ಮ್ಯಾಚ್​ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ದಾಳಿ ಸಕ್ಸಸ್ ಆಗಿದೆ. ಬುಮ್ರಾ, ಸಿರಾಜ್ ಹಾಗೇ ಹರ್ಷಿತ್ ರಾಣಾ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದಾರೆ. ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಹರ್ಷಿತ್ ರಾಣಾ 6 ಓವರ್​ಗಳಲ್ಲಿ 4 ವಿಕೆಟ್ ಕಬಳಿಸಿದ್ದರು. ಅಲ್ದೇ ವಾಷಿಂಗ್ಟನ್ ಸುಂದರ್​ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಅಬ್ಬರಿಸಿದ್ದಾರೆ. ಅದೂ ಅಲ್ದೇ ಅಡಿಲೇಡ್ ಪಿಚ್ ಸ್ಪಿನ್ ಪರವಾಗಿರುವುದರಿಂದ ರವೀಂದ್ರ ಜಡೇಜಾ ಅವರನ್ನು ಪ್ಲೇಯಿಂಗ್ 11ಗೆ ಸೇರಿಸಿಕೊಳ್ಬೋದು. ಬಟ್  ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲಿ ಧೂಳೆಬ್ಬಿಸಿರೋ ಸುಂದರ್​ನ ಕೈ ಬಿಡ್ತಾರಾ ಅನ್ನೋದೇ ಪ್ರಶ್ನೆ. ಇನ್ನು ಆರ್.ಅಶ್ವಿನ್ ಈ ಪಂದ್ಯದಲ್ಲೂ ಬೆಂಚ್ ಕಾಯಿಸಬಹುದು.

ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ಎಂದರೇನು? 

ಭಾರತ ಮತ್ತು ಆಸಿಸ್ ವಿರುದ್ಧ ಫಸ್ಟ್ ಮ್ಯಾಚ್ ಮುಗಿದ್ಮೇಲೆ ಪಿಂಕ್ ಬಾಲ್ ಟೆಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪಿಂಕ್ ಬಾಲ್ ಟೆಸ್ಟ್ ಅಂದ್ರೆ ಡೇ ಌಂಡ್ ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತಿದೆ. ನಾರ್ಮಲ್ ಆಗಿ ಕ್ರಿಕೆಟ್​​ನಲ್ಲಿ ರೆಡ್ ಮತ್ತು ವೈಟ್ ಬಾಲ್​  ಬಳಸಲಾಗುತ್ತದೆ. ಆದರೆ ಡೇ-ನೈಟ್ ಟೆಸ್ಟ್​ ಪಂದ್ಯವನ್ನು ಪಿಂಕ್ ಬಾಲ್​ನಲ್ಲಿ ಆಡಲಾಗುತ್ತಿದೆ. ಇದಕ್ಕೆ ಕಾರಣ ನೈಟ್ ಟೈಮಲ್ಲಿ ಬಾಲ್ ಸ್ಪಷ್ಟವಾಗಿ ಕಾಣ್ಲಿ ಅನ್ನೋ ಕಾರಣಕ್ಕೆ. ಈ ಹಿಂದೆ ಡೇ-ನೈಟ್ ಟೆಸ್ಟ್​ ಪಂದ್ಯಕ್ಕಾಗಿ ಯೆಲ್ಲೊ, ಪಿಂಕ್ ಮತ್ತು ಗಾಢ ಬಿಳಿ ಬಣ್ಣದ ಚೆಂಡುಗಳ ಎಕ್ಸ್​​ಪೆರಿಮೆಂಡ್ ನಡೆದಿತ್ತು. ಆಗ ಪಿಂಕ್ ಬಾಲ್ ಬೆಸ್ಟ್ ಎಂದು ಬ್ಯಾಟರ್ಸ್ ಹೇಳಿದ್ರು. ಹೀಗಾಗಿ ಡೇ-ನೈಟ್ ಟೆಸ್ಟ್​​ನಲ್ಲಿ ಪಿಂಕ್ ಬಾಲ್ ಬಳಸಲಾಗ್ತಿದೆ. 2015 ರಲ್ಲಿ ಅಡಿಲೇಡ್​​ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಇದುವರೆಗೆ 22 ಡೇ-ನೈಟ್ ಟೆಸ್ಟ್ ಪಂದ್ಯಗಳು ನಡೆದಿದೆ. ಆಸೀಸ್ ತಂಡ ಇದುವರೆಗೆ 10 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನಾಡಿದ್ರೆ ಟೀಮ್ ಇಂಡಿಯಾ 4 ಡೇ-ನೈಟ್ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಮೂರು ಪಂದ್ಯಗಳಲ್ಲಿ ಗೆಲುವು ಕಂಡಿದ್ರೆ ಆಸ್ಟ್ರೇಲಿಯಾ ವಿರುದ್ಧ ಒಂದು ಸಲ ಸೋಲು ಕಂಡಿದೆ.

ಆಸಿಸ್ ತಂಡದಲ್ಲಿ ಬಿರುಕು.. ಹೆಡ್ ಮೈಂಡ್ ಗೇಮ್!

ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 295 ರನ್‌ಗಳಿಂದ ಸೋಲಿಸಿತ್ತು. ಈ ಸೋಲಿನ ಬಳಿಕ  ಜೋಶ್ ಹೇಜಲ್‌ವುಡ್ ಪತ್ರಿಕಾಗೋಷ್ಠಿಯಲ್ಲಿ ಆಸೀಸ್ ತಂಡದೊಳಗೆ ಬಿರುಕು ಮೂಡಿದೆ ಎನ್ನುವಂತೆ ಹೇಳಿಕೆ ಕೊಟ್ಟಿದ್ರು. ಬಳಿಕ ಆಸ್ಟ್ರೇಲಿಯಾದ ಮಾಜಿ ವಿಕೆಟ್​ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಕೂಡ ತಂಡದಲ್ಲಿ ಒಡಕು ಉಂಟಾಗಿದೆ ಎಂದಿದ್ರು. ಬಟ್ ಈ ಹೇಳಿಕೆಗೆ ಟ್ರಾವಿಡ್ ಹೆಡ್ ಕ್ಲಾರಿಟಿ ಕೊಟ್ಟಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ರೀತಿಯ ವಿವಾದ ಅಥವಾ ಭಿನ್ನಾಭಿಪ್ರಾಯವಿಲ್ಲ. ಇದೆಲ್ಲ ವದಂತಿಗಳಷ್ಟೆ. ಮುಂದಿನ ಪಂದ್ಯಗಳನ್ನ ಗೆಲ್ಲೋದಷ್ಟೇ ನಮ್ಮ ಗುರಿ ಎಂದಿದ್ದಾರೆ. ಇದ್ರ ಜೊತೆಗೆ ಮೈಂಡ್ ಗೇಮ್ ಕೂಡ ಶುರು ಮಾಡಿದ್ದಾರೆ.  ಟೀಮ್​ ಇಂಡಿಯಾ ಮ್ಯಾಚ್​ ವಿನ್ನರ್​ ಜಸ್​ಪ್ರಿತ್​ ಬೂಮ್ರಾರನ್ನು ಕೆಣಕಿರೋ ಹೆಡ್, ಬುಮ್ರಾ ಬೌಲಿಂಗ್​ಗಿಂತ ನಾನೇ ಬೆಸ್ಟ್ ಅಂತಾ ಟಾಂಟ್ ಕೊಟ್ಟಿದ್ದಾರೆ.   ಹಾಗೇ ನೋಡಿದ್ರೆ ಬುಮ್ರಾ ಬೌಲಿಂಗ್​ಗೆ ಹೆಡ್ ಪತರಗುಟ್ಟಿರೋದು ಅಂಕಿಅಂಶಗಳಲ್ಲೇ ಗೊತ್ತಾಗುತ್ತೆ. ಟೆಸ್ಟ್​​ ಕ್ರಿಕೆಟ್​ನಲ್ಲಿ ಈವರೆಗೆ ಬೂಮ್ರಾ ಬೌಲಿಂಗ್​ನಲ್ಲಿ 159 ಎಸೆತಗಳನ್ನ ಹೆಡ್​​ ಎದುರಿಸಿದ್ದಾರೆ. ಕೇವಲ 22.3ರ ಸರಾಸರಿಯಲ್ಲಿ 67 ರನ್​ಗಳಿಸಿದ್ದು, ಒಟ್ಟು 3 ಬಾರಿ ಔಟ್ ಆಗಿದ್ದಾರೆ.

ಸದ್ಯ ಪರ್ತ್ ಟೆಸ್ಟ್ ಪಂದ್ಯದ ಬಳಿಕ ವೈಯುಕ್ತಿಕ ಕಾರಣಗಳಿಂದಾಗಿ ಭಾರತಕ್ಕೆ ವಾಪಸ್ ಆಗಿದ್ದ ಕೋಚ್ ಗೌತಮ್ ಗಂಭೀರ್ ಮರಳಿ ಆಸಿಸ್ ಸೇರಿದ್ದಾರೆ. ಕೋಚ್ ಜೊತೆ ಕ್ಯಾಪ್ಟನ್ ರೋಹಿತ್ ಶರ್ಮಾ ಚರ್ಚೆ ನಡೆಸಿ ಪ್ಲೇಯಿಂಗ್ 11 ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಬಟ್ ಈಗ ಇರೋ ಪ್ರಶ್ನೆ ಪ್ಲೇಯಿಂಗ್ 11 ಮತ್ತು ಸ್ಲಾಟ್​ಗಳು ಹೇಗೆ ಅನ್ನೋದು.

Shwetha M

Leave a Reply

Your email address will not be published. Required fields are marked *