ಜಗ ಮೆಚ್ಚಿದ ಜೋಡಿ ಗಿಲ್ಲಿ- ಗಗನಾ.. ಶಿವಣ್ಣ ಸ್ಟೈಲ್‌ ನಲ್ಲಿ ಬಳೆ ತೊಡಿಸಿದ ನಟ – ಕಾಮಿಡಿ ಕಿಂಗ್‌ ಗೆ ಹೊಸ ಅವಾರ್ಡ್‌  

ಜಗ ಮೆಚ್ಚಿದ ಜೋಡಿ ಗಿಲ್ಲಿ- ಗಗನಾ.. ಶಿವಣ್ಣ ಸ್ಟೈಲ್‌ ನಲ್ಲಿ ಬಳೆ ತೊಡಿಸಿದ ನಟ – ಕಾಮಿಡಿ ಕಿಂಗ್‌ ಗೆ ಹೊಸ ಅವಾರ್ಡ್‌  

ಜೀಕನ್ನಡದಲ್ಲಿ ಪ್ರಸಾರವಾಗ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ಸದ್ಯ ಅಂತಿಮ ಹಂತಕ್ಕೆ ತಲುಪಿದೆ. ವೀಕೆಂಡ್‌ ನಲ್ಲಿ Pre Finale Celebration ನಡಿತಾ ಇದೆ. ಈ ಸೀಸನ್‌ನಲ್ಲಿ ಹೆಚ್ಚು ಹೈಲೈಟ್‌ ಆಗಿದ್ದು ಅಂದ್ರೆ ಗಗನಾ ಹಾಗೂ ಗಿಲ್ಲಿನಟ.. ಗಗನಾ ಸ್ಟೇಜ್‌ ನಲ್ಲಿದ್ರೆ ಗಿಲ್ಲಿ ಅಲ್ಲಿ ಇರ್ಲೇ ಬೇಕು.. ಗಿಲ್ಲಿ ಸ್ಟೇಜ್‌ನಲ್ಲಿದ್ರೆ ಗಗನಾ ಅಲ್ಲಿಗೆ ಬರ್ಲೇ ಬೇಕು.. ಇವರಿಬ್ಬರ ಕಾಂಬಿನೇಷನ್‌ ವೀಕ್ಷಕರಿಗೂ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಗಿಲ್ಲಿ ಲವ್‌ ಫಿಲೋಸಫಿ ಕೇಳೊದಿಕ್ಕೆ ಇನ್ನೂ ಚೆಂದ.. ಕಳೆದ ವೀಕೆಂಡ್‌  ಸಂಚಿಕೆಯಲ್ಲಿ ಗಿಲ್ಲಿ ಶಿವಣ್ಣನ ಸ್ಟೈಲ್‌ನಲ್ಲಿ  ಗಗನಾಗೆ ಬಳೆ ತೊಡೆಸಿದ್ದಾರೆ.. ಗಗನಾ ನಾಚಿ ನೀರಾಗಿದ್ದಾರೆ.. ಅಷ್ಟೇ ಅಲ್ಲ ಗಿಲ್ಲಿಗೆ ಹೊಸ ಅವಾರ್ಡ್‌ ಕೂಡ ಸಿಕ್ಕಿದೆ.. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಛತ್ರಪತಿ ಶಿವಾಜಿ  ಮಹಾರಾಜ್‌ ಲುಕ್‌ ನಲ್ಲಿ ರಿಷಭ್‌ ಶೆಟ್ಟಿ – ಡಿವೈನ್‌ ಸ್ಟಾರ್ ಪೋಸ್ಟರ್‌ ಔಟ್‌

ಡಿಕೆಡಿ ಶೋನಲ್ಲಿ ಗಿಲ್ಲಿ ನಟ ಡ್ಯಾನ್ಸ್ ಜತೆಗೆ ತಮ್ಮ ಹಾಸ್ಯದ ಮೂಲಕ ಆಗಾಗ ಸಖತ್‌‌ ಪ್ರೇಕ್ಷಕರಿಗೆ ರಂಜಿಸುತ್ತಲೇ ಇರ್ತಾರೆ. ಗಗನಾಗೆ ಫ್ಲರ್ಟ್‌ ಮಾಡ್ತಾ, ಯಶಸ್ವಿನಿ ಅವರನ್ನು ಯಾವಾಗಲೂ ತಾನು ಪ್ರೀತಿಸುತ್ತೇನೆ ಎಂದು ವೇದಿಕೆಯಲ್ಲಿ ತಮಾಷೆಯಾಗಿ ಪೀಡಿಸುತ್ತಲೇ ಇರ್ತಾರೆ ಗಿಲ್ಲಿ ನಟ. ಇತ್ತೀಚೆಗೆ ಯಶು ಜತೆಗಿನ ಫೋಟೋಶೂಟ್‌‌ವನ್ನು ವೇದಿಕೆ ಮೇಲೆ ಅನಾವರಣ ಮಾಡಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಫೋಟೋಶೂಟ್‌ ಆಗಿದೆ ಅಂತಾ ಬಿಲ್ಡಪ್‌ ಕೊಟ್ಟಿದ್ರು ಗಿಲ್ಲಿ.. ಇದೀಗ ಗಿಲ್ಲಿ ಗಗನಾ ಜೊತೆ ಭರ್ಜರಿ ಸ್ಟೆಪ್‌ ಹಾಕಿದ್ದಲ್ಲದೇ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸ್ಟೈಲ್‌ ನಲ್ಲೇ ಗಗನಾಗೆ ಹಸಿರು ಗಾಜಿನ ಬಳೆ ತೊಡಿಸಿದ್ದಾರೆ.

ಹೌದು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ತಲುಪಿದೆ. ಜಬರ್‌ದಸ್ತ್‌ ಪರ್ಫಾಮೆನ್ಸ್‌ ಮೂಲಕ ಸ್ಪರ್ಧಿಗಳು ಮನರಂಜಿಸ್ತಾ ಇದ್ದಾರೆ. ಗಿಲ್ಲಿ ಕಳೆದ ಸಂಚಿಕೆಯಲ್ಲಿ ಸ್ವಾತಿ ಮುತ್ತಿನ ಮಳೆಹನಿಯೇ ಸಾಂಗ್‌ ಗೆ ಸಖತ್‌ ಆಗೇ ಹೆಜ್ಜೆ ಹಾಕಿದ್ದಾರೆ.. ಗಿಲ್ಲಿ ಪಾರ್ಫಾಮೆನ್ಸ್‌ ಗೆ ಜಡ್ಜಸ್‌ ಕೂಡ ಫಿದಾ ಆಗಿದ್ದಾರೆ. ಈ ವೇಳೆ  ಅನುಶ್ರೀ ಗಿಲ್ಲಿ ಪಾರ್ಫಾಮೆನ್ಸ್‌ ನೋಡಿ ಏನ್‌ ಅನ್ನಿಸ್ತು ಅಂತಾ ಗಗನಾ ಬಳಿ ಕೇಳಿದ್ದಾರೆ.. ಅದಕ್ಕೆ ಚೆನ್ನಾಗಿತ್ತು ಅಂತಾ ಹೇಳಿದ ಗಗನಾ ಏನೋ ಕೈಸನ್ನೆ ಮಾಡಿದ್ದಾರೆ.. ಏನ್‌ ಹೇಳು ಫುಲ್‌ ಬಾಟಲಾ ಅಂತಾ ಗಿಲ್ಲಿ ಕೇಳಿದ್ದಾರೆ.. ಅದಕ್ಕೆ ಫಯರ್‌ ಬ್ರಾಂಡ್‌ ಬಂದಿಲ್ಲ ಅಂದ್ರೆ ಎಷ್ಟು ಚೆನ್ನಾಗ್‌ ಮಾಡಿದ್ಯಾ ಅಂತಾ ಅರ್ಥ ಮಾಡ್ಕೊಬೇಕು ಅಂತಾ  ಗಗನಾ ಗಿಲ್ಲಿ ಕಾಲೆಳೆದಿದ್ದಾರೆ. ಆಗ ಗಗನಾ ಜೊತೆ ಡ್ಯಾನ್ಸ್‌ ಮಾಡಲು ಅನುಶ್ರೀ ಹೇಳಿದ್ದಾರೆ.

ಇನ್ನು ಗಗನಾ ಜನುಮದ ಜೋಡಿ ಹಾಡಿಗೆ ಹಳ್ಳಿ ಹುಡುಗಿ ಗೆಟಪ್‌ ನಲ್ಲಿ ಡ್ಯಾನ್ಸ್‌ ಮಾಡಿದ್ರು.. ಈ ವೇಳೆ ಗಿಲ್ಲಿ ಆ ಬುಟ್ಟಿ ಬೇರೆ ಅಲ್ಲ, ನನ್ನ ಹಾರ್ಟ್‌ ಬೇರೆ ಅಲ್ಲ.. ಬುಟ್ಟಿಗೂ ಮಿಸ್‌ ಆದೇ ನನ್ನ ಹಾರ್ಟ್‌ ಗೂ ಮಿಸ್‌ ಆದೆ.. ಎರಡಕ್ಕೂ ಸಿಗ್ತಾ ಇಲ್ಲ.. ಎಂದು ಹೇಳಿದ್ದಾರೆ.. ಆಗ ಇಲ್ಲಿ ಮಿಸ್‌ ಆಗಿ ಬೇರೆಯವರ ಮಿಸ್ಸಸ್‌ ಆಗ್ತೀನಿ ಅಂತಾ ಗಗನಾ ಹೇಳಿದ್ದಾರೆ.. ಆಗ ನೀನು ಹೂವಿನ ಹಾರ.. ನಾನು ಅದ್ರೋಳಗಿರೋ ದಾರ.. ನಿನ್‌ ಲೈಫ್‌ ಕಲರ್‌ಫುಲ್‌ ಆಗ್ಬೇಕಾದ್ರೆ ದಾರ ತರ ಇರೋ ನಾನು ಒಳಗಿರೋತರ ಇರ್ಬೇಕು ಅಂತ ಮಸ್ತ್‌ ಡೈಲಾಗ್‌ ಹೇಳಿದ್ದಾರೆ.. ಆಗ ನನ್ನಿಂದ ಸ್ಪಲ್ಪ ದೂರ ಹೋಗ್ತೀಯಾ ಅಂತಾ ಗಗನಾ ಹೇಳಿದಾಗ ಈ ಮಾತು ನನ್ನ ಮನಸಿಗೆ ತುಂಬಾ ದಾರ ಅಂತಾ ಗಿಲ್ಲಿ ಹೇಳಿದ್ದಾರೆ.. ಬಳಿಕ ಗಗನಾಗೆ ಹಸಿರು ಗಾಜಿನ ಬಳೆ ತೊಡಿಸಿದ್ದಾರೆ ಗಿಲ್ಲಿ.. ಗಗನಾ ನಾಚಿ ನೀರಾಗಿದ್ರೆ, ನಾನು ಜಗ ಮೆಚ್ಚಿದ ಜೋಡಿ ಅಂತಾ ಗಿಲ್ಲಿ ಹೇಳಿದ್ದಾರೆ..

ಇನ್ನು ಗಗನಾ ಹಾಗೂ  ಯಶು ಸದಾ ಕಾಲೆಳಿತಾ ಮನರಂಜನೆ ನೀಡೋ ಗಿಲ್ಲಿಗೆ ಹೊಸ ಅವಾರ್ಡ್‌ ಕೂಡ ಸಿಕ್ಕಿದೆ. ನೊಂದ ಮನಸುಗಳ ಅವಾರ್ಡ್‌ ಅನ್ನ ಗಿಲ್ಲಿಗೆ ನೀಡಲಾಗಿದೆ. ಇದ್ರಲ್ಲಿ ಒಂದು ಎಣ್ಣೆ ಬಾಟಲ್‌ ಹಾಗೂ ಶಾಲ್‌ ಕೊಡಲಾಗಿದೆ.. ಈ ವೇಳೆ ಗಿಲ್ಲಿ ಫುಲ್‌ ಎಮೋಷನಲ್‌ ಆಗಿ ವಿನ್ನಿಂಗ್‌ ಸ್ಪೀಚ್‌ ಮಾಡಿದ್ದಾರೆ.. ಈ ಸ್ಟೇಜ್‌ ಗೆ ಬರಲು ತುಂಬಾ ಕಷ್ಟ ಪಟ್ಟಿದ್ದೇನೆ.. ಅಲ್ಲಿ ಮೆಟ್ಟಿಲು ಹತ್ತಿ ಇಲ್ಲಿ ತನಕ ಬಂದಿದ್ದೀನಿ.. ಬಿರಿಯಾನಿಗೆ ದುಡ್ಡಿಲ್ದೇ ಬರೀ ಕುಷ್ಕಾ ತಿಂತಿದ್ವೀ ಅಂತಾ ಫನ್ನಿಯಾಗೇ ಸ್ಪೀಚ್‌ ಮಾಡಿದ್ದಾರೆ.. ಗಿಲ್ಲಿ ಆಕ್ಟಿಂಗ್‌ ಗೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

ಒಟ್ಟಾರೆ ಗಿಲ್ಲಿ ನಟ ಹಾಗೂ ಗಗನಾ ಡಿಕೆಡಿಯಲ್ಲಿ ಜಬರ್ದಸ್ತ್‌ ಮನರಂಜನೆ ನೀಡ್ತಾ ಬಂದಿದ್ದಾರೆ.. ಇಬ್ಬರ ಪಂಚಿಂಗ್‌ ಡೈಲಾಗ್ಸ್‌ ನೋಡಿ ವೀಕ್ಷಕರು ಫುಲ್‌ ಫಿದಾ ಆಗಿದ್ದಾರೆ. ಡಿಕೆಡಿ ಮುಗಿದ ಬಳಿಕ ಗಿಲ್ಲಿ ಹಾಗೂ ಗಗನಾ ಕಾಂಬಿನೇಷನ್‌ ಅನ್ನ ವೀಕ್ಷಕರು ಮಿಸ್‌ ಮಾಡಿಕೊಳ್ಳೋದಂತೂ ಗ್ಯಾರಂಟಿ.

Shwetha M

Leave a Reply

Your email address will not be published. Required fields are marked *