ಜನಸಂಖ್ಯೆ ಕುಸಿತ, 3 ಮಕ್ಕಳು ಬೇಕೆ ಬೇಕಾ? – ಭಾರತದ TFR ಕಮ್ಮಿಯಾದ್ರೆ ಏನಾಗುತ್ತೆ?
ಮೊದಲೆಲ್ಲಾ ಮನೆ ತುಂಬ ಮಕ್ಕಳು ಇರುತ್ತಿದ್ದವು.. ಮನೆಯಲ್ಲಿ ಕಿತ್ತು ತಿನ್ನೋ ಬಡತನವಿದ್ರೂ, ಒಬ್ಬೊಬ್ಬರು 7-15 ಮಕ್ಕಳು ಹೊಂದುತ್ತಿದ್ದರು.. ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನ ಸಾಕುತ್ತಿದ್ದರು.. ಆ ನಂತ್ರ ಒಂದು ಕುಂಟಬದಲ್ಲಿ ಇಬ್ಬರು ಮಕ್ಕಳು ಮಾತ್ರ ಹೊಂದೋಕೆ ಶುರುಮಾಡಿದ್ರು. ಆದ್ರೆ ಈಗ ಒಂದೇ ಒಂದು ಮಗವನ್ನ ಹೊಂದುತ್ತಿದ್ದಾರೆ. ಜನ ಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ತಂದ ಯೋಜನೆ, ವಿದ್ಯಾವಂತರ ಯೋಚನೆಯಿಂದ ಮಕ್ಕಳು ಮಾಡಿಕೊಳ್ಳುವವರ ಸಂಖ್ಯೆ ಕಮ್ಮಿಯಾಗಿದೆ. ಈ ನಡುವೆ ಭಾರತದ ಜನಸಂಖ್ಯಾ ವಿಚಾರ ಕುರಿತಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಹೇಳಿಕೆ ನೀಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಹಾಗಿದ್ರೆ ಅವರು ಹೇಳಿದ್ದೇನು? ಅವರು ಹೇಳಿದಂತೆ ಮಾಡಿದ್ರೆ ಏನಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ₹20 ಕೋಟಿಗಾಗಿ ₹2,000 ಕೋಟಿ ಖರ್ಚು! – IPLನಲ್ಲಿ ಫ್ರಾಂಚೈಸಿಗಳಿಗೆ ಲಾಭ ಹೇಗೆ?
ಕೇಳಿದ್ರಿ ಅಲ್ವಾ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ ಮಾತುಗಳನ್ನ.. ಜನಸಂಖ್ಯಾ ಕುಸಿತ ಕಳವಳಕಾರಿ ವಿಷಯ. ಯಾವುದೇ ಸಮಾಜದ ಜನಸಂಖ್ಯಾ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆಯಾದರೆ ಅಂಥ ಸಮಾಜ ತಾನಾಗಿಯೇ ನಾಶವಾಗುತ್ತದೆ. ಅದನ್ನು ಬೇರೆ ಯಾರೋ ನಾಶಪಡಿಸುವ ಅಗತ್ಯವೇ ಇಲ್ಲ” ನಮಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಬೇಕು. ಅಂದರೆ ಮೂರು ಮಕ್ಕಳನ್ನು ಹೆರಬೇಕು. ಜನಸಂಖ್ಯಾ ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ಸಮಾಜ ಉಳಿಯಬೇಕಾದರೆ ಈ ಪ್ರಮಾಣದ ಜನಸಂಖ್ಯಾ ಬೆಳವಣಿಗೆ ದರ ಅಗತ್ಯವಾಗಿದೆ” ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಹಾಗಿದ್ರೆ ಯಾಕೆ ಈಗ ಹೆಚ್ಚು ಮಕ್ಕಳನ್ನ ಮಾಡಿಕೊಳ್ಳಬೇಕು ಅನ್ನೋ ಚರ್ಚೆ ಬಂದಿದೆ ಅನ್ನೋ ಪ್ರಶ್ನೆ ಹುಟ್ಟುವುದು ಸಹಜ..
ಕುಸಿಯುತ್ತಿದ್ಯಾ ಭಾರತದ ಟಿಎಫ್ಆರ್?
ಅಂದಹಾಗೇ ಭಾರತದ ಜನಸಂಖ್ಯಾ ನೀತಿಯು ಜನಸಂಖ್ಯಾ ಬೆಳವಣಿಗೆಯ ದರವು 2.1ಕ್ಕಿಂತ ಕಡಿಮೆ ಇರಬಾರದು ಎಂದು ಹೇಳುತ್ತಿದೆ. ಅಂದ್ರೆ ಸಮನಾಗಿ ಇರಬೇಕು.. ಒಂದು ಹೆಣ್ಣಿಗೆ ಒಂದು ಗಂಡು ಅಂತ ಇರಬೇಕು. ಇದು ಕಮ್ಮಿಯಾದ್ರೆ ದೇಶಕ್ಕೆ ಎಫೆಕ್ಟ್ ಆಗುತ್ತೆ.. ಹೀಗಾಗಿಯೇ ಹೆಚ್ಚು ಮಕ್ಕಳನ್ನ ಹೊಂದುವಂತೆ ಮೋಹನ್ ಭಾಗವತ್ ಸೇರಿದಂತೆ ಸಾಕಷ್ಟು ನಾಯಕರು ಈಗ್ ಈಗ ಕರೆ ನೀಡುತ್ತಿದ್ದಾರೆ.
ಒಂದು ವರದಿಯ ಪ್ರಕಾರ, ಹಿಂದೂಗಳ ಜನಸಂಖ್ಯೆಯು ಶೇಕಡಾ 7.8ರಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ ನೆರೆಯ ದೇಶಗಳ ಜನಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಜನಸಂಖ್ಯಾ ಫಲವತ್ತತೆ ದರವು ನಿರಂತರವಾಗಿ ಕುಸಿಯುತ್ತಿದೆ. ಸ್ವಾತಂತ್ರ್ಯದ ನಂತರ, 1950ರಲ್ಲಿ, ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆಯ ದರವು 6.2ರಷ್ಟಿತ್ತು. ಆದರೆ ಈಗ ಅದು 2.2ಕ್ಕೆ ಇಳಿದಿದೆ. ಇದು ಹೀಗೆಯೇ ಮುಂದುವರಿದರೆ, 2050ರ ವೇಳೆಗೆ ಭಾರತದ ಜನಸಂಖ್ಯಾ ಬೆಳವಣಿಗೆಯ ದರ 1.3ಕ್ಕೆ ಕುಸಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆ ಬಹಳ ಮುಖ್ಯವಾಗುತ್ತದೆ. ಮುಸ್ಮಿಂ ಸಮುದಾಯ ಕೂಡ ಈಗ ಹೆಚ್ಚು ಮಕ್ಕಳನ್ನ ಹೊಂದುತ್ತಿಲ್ಲ. ಮುಸ್ಮಿಂ TFR 2.7 ಯಿದ್ರೆ, ಹಿಂದೂ ಸಮುದಾಯದಲ್ಲಿ 2.1ಇದೆ. ಮುಸ್ಮಿಂ ಸಮುದಾಯದಲ್ಲಿ ಈಗ ಹೆಚ್ಚು ಜನ ಶಿಕ್ಷಣ ಪಡೆಯುತ್ತಿದ್ದು, ಮಕ್ಕಳನ್ನ ಸಾಕುವುದು ಕಷ್ಟ ಅನ್ನೋ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಮಕ್ಕಳನ್ನ ಹೊಂದುತ್ತಿಲ್ಲ. ಅಲ್ಲದೇ ಹೆಚ್ಚು ಮಕ್ಕಳನ್ನ ಹೊಂದಿದ್ರೆ ಸರ್ಕಾರದ ಸೌಲಭ್ಯ ಸಿಗಲ್ಲ ಅನ್ನೋ ಕಾರಣಕ್ಕೆ ಯಾವ ಸಮುದಾಯ ಕೂಡ ಹೆಚ್ಚು ಮಕ್ಕಳನ್ನ ಹೊಂದುತ್ತಿಲ್ಲ. ಈಗ ಹೆಚ್ಚು ಮಕ್ಕಳನ್ನ ಹೊಂದುವುದು ಬೇಡ ಅಂತ ನಿರ್ಲಕ್ಷ್ಯ ಮಾಡಿದ್ರೆ, ಇನ್ನೂ 25 ವರ್ಷ ಬಿಟ್ಟು ಅದ್ರೆ 2050ರ ಹೊತ್ತಿಗೆ ಎಫೆಕ್ಟ್ ಆಗಲಿದೆ.
‘ಆರ್ಎಸ್ಎಸ್ನವರು ಮದುವೆಯಾಗಬೇಕು’
ಇನ್ನು ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಅಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರ ಮತ್ತು ಹೆಣ್ಣುಮಕ್ಕಳ ಮಂಗಳಸೂತ್ರ ಸೇರಿದಂತೆ ಜನರ ಚಿನ್ನವನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚುತ್ತಾರೆ ಎಂದು ಹೇಳಿದ್ದರು. ಆದ್ರೆ ಈಗ ಹೆಚ್ಚು ಮಕ್ಕಳನ್ನು ಹುಟ್ಟುಹಾಕಿ ಎನ್ನುತ್ತಾರೆ ಭಾಗವತ್. ಈಗ ಆರ್ಎಸ್ಎಸ್ನಲ್ಲಿರುವವರು ಮದುವೆಯಾಗಲು ಆರಂಭಿಸಬೇಕು ಎಂದು ಓವೈಸಿ ಹೇಳಿದ್ದಾರೆ. ನಾಯಕರು ಎಷ್ಟೇ ಹೇಳಿದ್ರೂ ಜನ ಅವರಿಗಿ ಅನಿಸಿದ್ದೇ ಮಾಡೋದು.. ಒಂದು ಮಕ್ಕಳನ್ನ ಸಾಕೋದೇ ಕಷ್ಟ ಅನ್ನೋ ಕಾಲದಲ್ಲಿ 3 ಮಕ್ಕಳನ್ನ ಯಾರು ಹೊಂದುತ್ತಾರೆ.. ಸಿಟಿ ಜನ ಅಂತ ಒಂದಕ್ಕಿಂತ ಹೆಚ್ಚು ಮಕ್ಕಳನ್ನ ಹೊಂದಲ್ಲ. ಹಾಗಂತ ಹಳ್ಳಿ ಜನ ಕೂಡ ಹೆಚ್ಚು ಮಕ್ಕಳನ್ನ ಮಾಡಿಕೊಳ್ಳಲ್ಲ..