ಹಿಂದೂ ಹುಲಿ Vs ರಾಜಾಹುಲಿ .. ಯತ್ನಾಳ್‌ಗೆ ನಕಲಿ ನೋಟಿಸ್ ನೀಡಿದ್ರಾ? – ಹೈಕಮಾಂಡ್‌ಗೆ ಗೊತ್ತಾ ಯತ್ನಾಳ್ ಶಕ್ತಿ?
ಆರಕ್ಕೆ ಏರ್ತಾ ಇಲ್ಲ.. ಮೂರಕ್ಕೆ ಇಳಿತಾ ಇಲ್ಲ.. ಬಿಜೆಪಿಯಲ್ಲಿ ಬಣ ಬಡಿದಾಟ ಕಮ್ಮಿಯಾಗುತ್ತಿಲ್ಲ.. ಒಂದೇ ಪಕ್ಷದಲ್ಲಿದ್ದರು ಅವ್ರ ವಿರುದ್ಧ ಇವ್ರು. ಇವ್ರು ವಿರುದ್ಧ ಅವ್ರು ಬೈಗೆ ಬಂದ ಹಾಗೇ ಬೈದಾಡಿಕೊಳ್ಳುತ್ತಿದ್ದಾರೆ. ಯತ್ನಾಳ್ ಬಣ ಮತ್ತು ವಿಜಯೇಂದ್ರ ಬಣದ ತಿಕ್ಕಾಟ ಈಗ ದೆಹಲಿ ಅಂಗಳಕ್ಕೆ ಹೋಗಿದ್ದು.. ಯತ್ನಾಳ್ ಭವಿಷ್ಯದ ಬಗ್ಗೆ ಸಾಷ್ಟು ಚರ್ಚೆ ಆಗುತ್ತಿದೆ. ಹಾಗೇ ವಿಜಯೇಂದ್ರ ರಾಜ್ಯಾಧ್ಯಕ್ಷರ ಕುರ್ಚಿಯಿಂದ ಕಳಗೆ ಇಳಿತಾರೆ ಅಂತಾ ಕೂಡ ಟಾಕ್ ಶುರವಾಗಿದೆ.
ಇದನ್ನೂ ಓದಿ: ₹20 ಕೋಟಿಗಾಗಿ ₹2,000 ಕೋಟಿ ಖರ್ಚು! – IPLನಲ್ಲಿ ಫ್ರಾಂಚೈಸಿಗಳಿಗೆ ಲಾಭ ಹೇಗೆ?
ಕರ್ನಾಟಕ ಬಿಜೆಪಿ ನಾನೊಂದು ತೀರಾ. ನೀನೊಂದು ತೀರಾ ಎನ್ನುವಂತಾಗಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರದ್ದು ಒಂದು ಬಣವಾದರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೂ ಒಂದು ಬಣವಾಗಿದೆ. ಎರಡೂ ಬಣಗಳ ನಾಯಕರು ಪರಸ್ಪರ ಬಹಿರಂಗವಾಗಿಯೇ ವಾಗ್ದಾಳಿ ಮಾಡುತ್ತಿದ್ದಾರೆ. ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ಬಣ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಬಿವೈ ವಿಜಯೇಂದ್ರ ಬಣದವರು ಒತ್ತಡ ಹೇರುತ್ತಿದ್ದಾರೆ. ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿವೈ ವಿಜಯೇಂದ್ರ ಅವರ ಹೊಂದಾಣಿಕೆ ದಾಖಲೆ ಬಿಡುಗಡೆ ಮಾಡಲೇ ಎಂದು ಸವಾಲು ಹಾಕಿದ್ದಾರೆ. ಎರಡೂ ಬಣದ ಕಿತ್ತಾಟ ಹೈಕಮಾಂಡ್ ಅಂಗಳ ತಲುಪಿದೆ. ಈಗಾಗಲೆ ಬಿಜೆಪಿ ವರಿಷ್ಠರು ಬನಸಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಶೋಕಾಸ್ ನೋಟಿಸ್ ನೀಡುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ಹಾರಿದ್ದಾರೆ.
ಯತ್ನಾಳ್‌ಗೆ ಫೇಕ್ ನೋಟಿಸ್ ಕೊಟ್ರಾ?
ಡೆಲ್ಲಿಯಲ್ಲಿ ಮಾತನಾಡಿದ ಯತ್ನಾಳ್ ನೊಟೀಸ್ ಬಂದ ಕೂಡಲೇ ಒಂದೇ ನಿಮಿಷದಲ್ಲಿ ಉತ್ತರ ಕೊಡುತ್ತೇನೆ. ಈಗಾಗಲೇ ಉತ್ತರ ಸಿದ್ಧಪಡಿಸಿದ್ದೇನೆ. ಆದರೆ, ಅಧಿಕೃತವಾಗಿ ಕೇಂದ್ರ ಸಮಿತಿಯಿಂದ ನೋಟಿಸ್ ಬಂದಿಲ್ಲ. ಬಿವೈ ವಿಜಯೇಂದ್ರ ಅವರು ನೋಟಿಸ್ ಕಳುಹಿಸಿರುವ ಸಾಧ್ಯತೆ ಇದೆ. ಹೀಗಾಗಿ ಉತ್ತರಿಸಲಿಲ್ಲ. ಇ-ಮೇಲ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಬರಬೇಕು. ಪಕ್ಷದಿಂದ ಅಧಿಕೃತವಾಗಿ ನೋಟಿಸ್ ಬಂದ ಮೇಲೆ ಉತ್ತರಿಸುತ್ತೇನೆ ಎಂದಿದ್ದಾರೆ.
ಕೇಂದ್ರ ಮಟ್ಟದಲ್ಲಿ ಬೆಂಬಲಗಳಿಸ್ತಾರಾ ಯತ್ನಾಳ್?
ಈಗಾಗಲೇ ಯತ್ನಾಳ್ ತಂಡ 10 ರ ಗಡಿ ದಾಟಿದೆ. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾಬಳಿ, ಪ್ರತಾಪ ಸಿಂಹ, ರಮೇಶ್ ಜಿಗಜಿಣಗಿ, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಸೇರಿಕೊಂಡಿದ್ದಾರೆ. ಇನ್ನು ಕೇಂದ್ರದ ಕೆಲವು ನಾಯಕರ ಬೆಂಬಲವನ್ನು ಪಡೆದುಕೊಳ್ಳಲು ಈ ತಂಡ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ ಕೇಂದ್ರ ತಂಡ ಬೆನ್ನಿಗೆ ನಿಂತದಲ್ಲಿ ಯಾವುದೇ ಕ್ರಮ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಹೈ ಕಮಾಂಡ್ ಕ್ರಮ ಕೈಗೊಂಡರೆ ಏನಾಗುತ್ತೆ?
ಯತ್ನಾಳ್ ಬಿಜೆಪಿಯ ಪ್ರಭಾವಿ ನಾಯಕ. ಮಾಜಿ ಕೇಂದ್ರ ಸಚಿವರೂ ಆಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಸಾಕಷ್ಟು ಚರ್ಚೆಗಳು ನಡೆಯಲಿದೆ. ಸದ್ಯ ಕೇವಲ ನೋಟಿಸ್ ನೀಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಹೈಕಮಾಂಡ್ ನಾಯಕರು ಮಾಡಬಹುದು. ಆದರೆ ಇದು ಇನ್ನೂ ತಾರಕಕ್ಕೇರಿದರೆ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ. ಆದ್ರೆ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರದ ನಾಯಕರ ಮೇಲೆ ಕೂಡ ಪ್ರಭಾವವನ್ನ ಬೀರುವ ಶಕ್ತಿ ಹೊಂದಿದ್ದು, ಮುಂದೆ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.