ಕೀರ್ತಿ ಸತ್ಯ ಕೊನೆಗೂ ರಿವೀಲ್ – ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿ
ಕೀರ್ತಿ ಯಾರ ಕೈಗೊಂಬೆ?
ಕೀರ್ತಿ ವಾಪಸ್ ಬಂದಿದ್ದೂ ಆಯ್ತು.. ವೈಷ್ಣವ್ ಮನೆಗೆ ಎಂಟ್ರಿ ಕೊಟ್ಟಿದ್ದೂ ಆಯ್ತು.. ಬೆಟ್ಟದ ಮೇಲೆ ಏನೇನಾಯ್ತು ಅನ್ನೋದನ್ನ ಬಾಯ್ಬಿಟ್ಟು ಸತ್ಯದ ಬಾಂಬ್ ಸ್ಫೋಟಿಸಿದ್ದಾಳೆ ಕೀರ್ತಿ. ಸಾಲದಕ್ಕೆ ಕಿಡ್ನ್ಯಾಪ್ ಮಾಡಿದ ರೌಡಿಗಳು ಹಾಗೂ ಬೆಟ್ಟದ ಮಾದೇವಯ್ಯನನ್ನ ಸಾಕ್ಷಿಯಾಗಿ ಕರೆದುಕೊಂಡು ಬಂದಿದ್ದು, ಕಾವೇರಿ ಅರೆಸ್ಟ್ ಆಗುವಂತೆ ಮಾಡಿದ್ದಾಳೆ.. ಇದೀಗ ಸತ್ಯ ಸುಳ್ಳಿನ ಹೋರಾಟ ನಡಿತಾ ಇದೆ.. ಆದ್ರೀಗ, ವಾಪಸ್ ಬಂದಿರೋದು ಕೀರ್ತಿನಾ ಅಥವಾ ಬೇರೆ ಯಾರ ಅನ್ನೋ ಮೂಡಿದೆ. ಈ ಹೊತ್ತಲ್ಲೇ ಲಕ್ಷ್ಮೀ ಕೂಡ ಎಂಟ್ರಿ ಕೊಟ್ಟಿದ್ದಾಳೆ.. ಹಾಗಾದ್ರೆ ಸುಳ್ಳು ಸತ್ಯದ ಹೋರಾಟದಲ್ಲಿ ಗೆಲ್ಲೋದ್ಯಾರು? ಕೀರ್ತಿ ಯಾರ ಸೂತ್ರದ ಗೊಂಬೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬ್ರಹ್ಮಗಂಟು ಸೀರಿಯಲ್ ನಟಿ ಸೂಸೈಡ್ – ಗಂಡ ಮನೆಯಲ್ಲೇ ಇದ್ದಾಗಲೇ ಘೋರ ದುರಂತ
ಲಕ್ಷ್ಮೀ ಬಾರಮ್ಮ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಕಾವೇರಿಯ ಮೋಸದ ಆಟ ಬಯಲಾಗುವಂತೆ ಕಾಣುತ್ತಿಲ್ಲ. ಜೈಲಿಗೆ ಹೋದರೂ ಆಕೆಯ ದೌಲತ್ತಿಗೇನು ಕಡಿಮೆಯಿಲ್ಲ.. ಜೈಲಲ್ಲೂ ತನ್ನ ದರ್ಪ ತೋರಿಸ್ತಿದ್ದಾಳೆ.. ಮಗನ ಮೇಲೆ ಆಣೆ ಹಾಕಿದರೂ ಸಹ ನಿಜವನ್ನು ಹೇಳುವ ಯೋಚನೆಯೇ ಮಾಡಿಲ್ಲ..ಆಕೆಗೆ ಮಗನ ಮುಂದೆ ಯಾವತ್ತಿಗೂ ತಾನು ಕುಗ್ಗಬಾರದು ಅನ್ನೋದು ಮಾತ್ರ. ಸದ್ಯ ಕೇಸು ಕೋರ್ಟು ಮೆಟ್ಟಿಲೇರಿದೆ.. ಒಂದು ಕಡೆ ಕಾವೇರಿ ಪರ ವಾದಿಸೋಕೆ ಜನಪ್ರಿಯ ಕ್ರಿಮಿನಲ್ ಲಾಯರ್ ಕೂಡ ಇದ್ದಾರೆ. ಲಾಯರ್ ಮುಂದೆ ಕಾವೇರಿಯ ಸತ್ಯ ಎಲ್ಲವೂ ಬಯಲಾಗಿದೆ. ಈ ಕೇಸು ಗೆದ್ದೆ ಗೆಲ್ಲುವ ಭರವಸೆಯಲ್ಲಿದ್ದಾರೆ ಲಾಯರ್ . ಇದೀಗ ಕೋರ್ಟ್ನಲ್ಲಾದ ವಾದ ನೋಡಿ ವೈಷ್ಣವ್ ಗೆ ಒಂದೊಂದೇ ಸತ್ಯ ದರ್ಶನವಾಗ್ತಿದೆ. ನೀನೂ ಒಬ್ಳು ತಾಯಿನ.. ನಿನ್ನನ್ನ ಅಮ್ಮ ಅಂತಾ ಹೇಳಲು ನಾಚಿಕೆ ಅಗುತ್ತೆ ಅಂತಾ ಹೇಳಿದ್ದಾನೆ. ಇವೆಲ್ಲದ್ರ ಮಧ್ಯೆ ಲಕ್ಷ್ಮೀ ಈ ಎಂಟ್ರಿ ಮುನ್ಸೂಚನೆ ಸಿಕ್ಕಿದೆ.
ಹೌದು, ಕೋರ್ಟ್ ಆವರಣದಲ್ಲಿ ಸುಪ್ರೀತಾ ಮಗ ಲಕ್ಷ್ಮೀಯನ್ನು ನೋಡಿದ್ದಾನೆ. ಪ್ರೊಮೋದಲ್ಲಿ ತೋರಿಸಿದಂತೆ, ಲಕ್ಷ್ಮಿಯನ್ನು ಹಿಂದಿನಿಂದ ತೋರಿಸಿದ್ದಾರೆ. ಅಂಕಿತ್ ಲಕ್ಷ್ಮೀಯನ್ನು ನೋಡಿ ಆಕೆಯ ಮುಂದೆ ನಿಂತು ಶಾಕ್ ಆದವನ ಹಾಗೆ ವರ್ತಿಸಿದ್ದಾನೆ. ಬಳಿಕ ಇದೇ ವಿಷ್ಯವನ್ನು ವಿಧಿ ಮುಂದೆ ಸಹ ಹೇಳಿದ್ದಾನೆ ಅಂಕಿತ್. ಅಷ್ಟೇ ಅಲ್ಲ ಕೋರ್ಟ್ ನಿಂದ ಬಂದ ವೈಷ್ಣವ್ ನೀವು ಇರ್ಬೇಕು ಅಂತಾ ಹೇಳಿದ್ದಾನೆ. ಬಳಿಕ ಒಂದು ಪೇಪರ್ ನಲ್ಲಿ ಬರೆದು ರಾಕೆಟ್ ಮಾಡಿ ಎಸೆದಿದ್ದಾನೆ. ಇದನ್ನೂ ಯಾಕೆ ತೆಗೆದುಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಲಕ್ಷ್ಮೀ ಬರೋದು ಫಿಕ್ಸ್ ಅಂತ ವೀಕ್ಷಕರು ಹೇಳ್ತಿದ್ದಾರೆ. ಹಾಗಿದ್ರೆ ಲಕ್ಷ್ಮೀ ರಾವಣ ದಹನದಲ್ಲಿ ಭಸ್ಮ ಆಗಿಲ್ವಾ? ಹಾಗಾದರೆ ಆಗಿದ್ದೇನು? ಕಥೆಯಲ್ಲಿ ಇನ್ನೇನು ಟ್ವಿಸ್ಟ್ ಕಾದಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಕೀರ್ತಿ ಸತ್ತಿದ್ದಾಳೆ ಎನ್ನುತ್ತಲೇ, ಸದ್ಯ ಕೀರ್ತಿಯ ಎಂಟ್ರಿ ಕೂಡ ಆಗಿದೆ, ಆದರೆ ಕೀರ್ತಿ ಮಾತ್ರ ವಿಚಿತ್ರವಾಗಿ ಆಡುತ್ತಾ, ನನಗೆ ಕೀರ್ತಿ ಆಗಿ ಸಾಕಾಗೋಯ್ತು ಎಂದಿದ್ದಾಳೆ. ಇದರಿಂದಲೂ ವೀಕ್ಷಕರು ಕನ್ ಫ್ಯೂಸ್ ಆಗಿದ್ದಾರೆ.
ಇದೀಗ ಕಥೆಯ ನಾಯಕಿಯೇ ಸೀರಿಯಲ್ ನಿಂದ ಕಾಣೆಯಾಗಿ ವಾರಗಳೇ ಕಳೆದಿದೆ. ಇನ್ನೂ ಪತ್ತೆಯಾಗಿಲ್ಲ. ಏನು ಕಥೆ ಅನ್ನೋದೆ ಗೊತ್ತಿಲ್ಲ.. ಲಕ್ಷ್ಮೀ ಮತ್ತೆ ಎಂಟ್ರಿ ಕೊಡ್ತಿದ್ದಾಳ? ಹಾಗಿದ್ರೆ ಆಕೆ ಇಲ್ಲಿವರೆಗೆ ಯಾಕೆ ಬಂದಿರಲಿಲ್ಲ? ಇಲ್ಲಿವರೆಗೆ ಎಲ್ಲಿದ್ಲು? ಏನು ಕಥೆ ಅನ್ನೋದು ಜನರಲ್ಲಿ ಮತ್ತಷ್ಟು ಸಂಶಯ ಹುಟ್ಟಿಸಿದೆ.
ಇನ್ನು ಇದನ್ನೆಲ್ಲಾ ನೋಡಿ ಜನರು ಲಕ್ಷ್ಮೀ ವಾಪಾಸ್ ಬರ್ತಾಳೆ ಅಂತ ಖುಷಿ ಪಟ್ರೆ, ಇನ್ನೂ ಕೆಲವರು, ಬಹುಶಃ ಲಕ್ಷ್ಮೀ ಪಾತ್ರಧಾರಿಯ ಬದಲಾವಣೆಯಾಗಿರಬೇಕು, ಅದಕ್ಕೆ ಇಷ್ಟೊಂದು ತಡ ಮಾಡ್ತಿದ್ದಾರೆ ಆಕೆಯನ್ನು ತೋರಿಸೋಕೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಕೀರ್ತಿ ಸತ್ಯ ಹೇಳಲ್ಲ, ಲಕ್ಷ್ಮೀ ವಾಪಸ್ ಬರಲ್ಲ, ಕಾವೇರಿ ಆಟ ಕೊನೆ ಆಗಲ್ಲ. ಈ ಧಾರವಾಹಿ ಮುಗಿಯಲ್ಲ ಎಂದು ಕಿಡಿ ಕಾರಿದ್ದಾರೆ.