RCBಯಲ್ಲಿ ಎಮೋಷನ್ಸ್ ಗಿಲ್ಲ ಬೆಲೆ – ಸಿರಾಜ್ ಮತ್ತು ಜಾಕ್ಸ್ ಕೈ ಬಿಟ್ಟಿದ್ದೇಕೆ?
ರಿಲೀಸ್ ಹಿಂದಿದೆಯಾ ಒಳ ಒಪ್ಪಂದ?

RCBಯಲ್ಲಿ ಎಮೋಷನ್ಸ್ ಗಿಲ್ಲ ಬೆಲೆ – ಸಿರಾಜ್ ಮತ್ತು ಜಾಕ್ಸ್ ಕೈ ಬಿಟ್ಟಿದ್ದೇಕೆ?ರಿಲೀಸ್ ಹಿಂದಿದೆಯಾ ಒಳ ಒಪ್ಪಂದ?

ಐಪಿಎಲ್ ಅನ್ನೋದು ಜಗತ್ತಿನ ರಿಚೆಸ್ಟ್ ಲೀಗ್. ಇಲ್ಲಿ ಕೋಟಿಗಳಿಗೂ ಲೆಕ್ಕ ಇರಲ್ಲ. ಆಟಗಾರರ ಮೇಲೆ ದುಡ್ಡು ಸುರಿಯೋಕೂ ಹಿಂದೆ ಮುಂದೆ ನೋಡಲ್ಲ. ಇದೇ ಕಾರಣಕ್ಕೆ 17 ವರ್ಷಗಳ ಐಪಿಎಲ್ ಇತಿಹಾಸಿದಲ್ಲೇ ಕಂಡು ಕೇಳರಿಯಂಥ ಬೃಹತ್ ಮೊತ್ತಗಳಿಗೆ ಪ್ಲೇಯರ್ಸ್ ಸೇಲ್ ಆಗಿದ್ದಾರೆ. ಅಷ್ಟೇ ಯಾಕೆ ಕೆಲ ಫ್ರಾಂಚೈಸಿಗಳ ಐಕಾನ್​ನಂತಿದ್ದ ಆಟಗಾರರೇ ಈ ಸಲ ಹೊಸಹೊಸ ತಂಡಗಳಿಗೆ ಜಿಗಿದಿದ್ದಾರೆ. ಮಾಲೀಕರು ಮತ್ತು ಆಟಗಾರರಿಗೆ ಇದು ಕಾಮನ್ ಅನ್ನಿಸಿದ್ರೂ ಅಭಿಮಾನಿಗಳಿಗೆ ಮಾತ್ರ ಬೇಸರ ಇದೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ಕೂಡ ಕೆಲವ್ರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಆರ್​ಟಿಎಂ ಕಾರ್ಡ್ ಬಳಸಿ ತಂಡಕ್ಕೆ ಕರೆಸಿಕೊಳ್ಬೋದಿತ್ತು ಅಂತಾ ಅಸಮಾಧಾನ ಹೊರ ಹಾಕ್ತಿದ್ದಾರೆ. ಹಾಗಾದ್ರೆ ಕನ್ನಡದ ಅಭಿಮಾನಿಗಳನ್ನ ಕಾಡ್ತಿರೋ ಆಟಗಾರರು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ PAK ಔಟ್? -ಭಾರತ Or ಸೌತ್ ಆಫ್ರಿಕಾದಲ್ಲಿ ಟೂರ್ನಿ

ಸೌದಿ ಅರೇಬಿಯಾದಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19 ಆಟಗಾರರನ್ನ ಖರೀದಿ ಮಾಡಿತ್ತು. ರಿಟೇನ್​ ಮಾಡಿಕೊಂಡಿದ್ದ ಮೂವರು ಸೇರಿದಂತೆ ಟೋಟಲ್ಲಾಗಿ 22 ಪ್ಲೇಯರ್ಸ್ ಆಗಿದ್ದಾರೆ. ಬಟ್ 2024ರ ಸೀಸನ್​ನಲ್ಲಿ ಬೆಂಗಳೂರು ತಂಡದ ಪರ ಬಹುತೇಕರು ಬೇರೆ ಬೇರೆ ಫ್ರಾಂಚೈಸಿಗಳನ್ನ ಸೇರಿಕೊಂಡಿದ್ದಾರೆ. ಕೆಲವ್ರು ಬೆಂಗಳೂರು ತಂಡ ಬಿಟ್ಟಿರೋದನ್ನ ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅಷ್ಟೇ ಯಾಕೆ ಆರ್ ಸಿಬಿ ಕೈಬಿಟ್ಟಿದ್ದಕ್ಕೆ ಕೆಲ ಪ್ಲೇಯರ್ಸ್ ಕೂಡ ಭಾವುಕರಾಗಿದ್ದಾರೆ.

ಆರ್ ಸಿಬಿ ಕೈ ಬಿಟ್ಟಿದ್ದಕ್ಕೆ ಭಾವುಕ ಪೋಸ್ಟ್ ಹಾಕಿದ ಸಿರಾಜ್!

ಮೊಹಮ್ಮದ್ ಸಿರಾಜ್. ಟೀಂ ಇಂಡಿಯಾದ ಸ್ಟಾರ್ ಬೌಲರ್. ಅದಕ್ಕಿಂತ್ಲೂ ಹೆಚ್ಚಾಗಿ ನಮ್ಮ ಆರ್ ಸಿಬಿಯಲ್ಲಿ ಪಳಗಿದ ಹುಡುಗ. ಕೊಹ್ಲಿ ಜೊತೆಗಿನ ಸಿರಾಜ್ ಬಾಂಧವ್ಯವನ್ನ ಮರೆಯೋಕೆ ಸಾಧ್ಯನೇ ಇಲ್ಲ. ಇವ್ರಿಬ್ರು ಮೈದಾನದಲ್ಲಿದ್ದಾಗ ಯಾರಾದ್ರೂ ಕೆಣಕಿದ್ರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ವಾಪಸ್ ಕೊಟ್ಟೇ ಬರೋದು. ಬಟ್ ಮುಂದಿನ ಸೀಸನ್​ಗೆ ಸಿರಾಜ್​ರನ್ನ ಬೆಂಗ್ಳೂರು ಜೆರ್ಸಿಯಲ್ಲಿ ನೋಡೋಕೆ ಆಗಲ್ಲ. ಗುಜರಾತ್ ಟೈಟನ್ಸ್ ತಂಡ ಹರಾಜಿನಲ್ಲಿ ಖರೀದಿ ಮಾಡಿದೆ. ಆರ್​ಟಿಎಂ ಕಾರ್ಡ್ ಬಳಕೆಗೆ ಅವಕಾಶ ಇದ್ರೂ ಫ್ರಾಂಚೈಸಿ ಬಳಸದೇ ಇರೋದು ಅಭಿಮಾನಿಗಳ ಸಿಟ್ಟಿಗೆ ಕಾರಣ ಆಗಿದೆ. ಅಲ್ದೇ ಸಿರಾಜ್​ಗೂ ಕೂಡ ಬೆಂಗಳೂರು ತಂಡವನ್ನ ಬಿಟ್ಟು ಹೋಗೋದು ಇಷ್ಟ ಇಲ್ಲ. ಫ್ಯಾನ್ಸ್​ಗೆ ಬರೆದ ಭಾವುಕ ಪತ್ರದಲ್ಲಿ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಆರ್​ಸಿಬಿಗಾಗಿ ಕಳೆದ 7 ವರ್ಷಗಳಿಂದ ಕಣಕ್ಕಿಳಿದಿದ್ದ ಸಿರಾಜ್, ನಮ್ಮದು ಒಂದೇ ಕುಟುಂಬ ಎಂದಿದ್ದಾರೆ. ನಾವು ಸೋತಾಗ ನಿಮ್ಮ ಕಣ್ಣೀರನ್ನು ನೋಡಿದ್ದೇನೆ. ನಾವು ಗೆದ್ದಾಗ ನಿಮ್ಮ ಸಂಭ್ರಮಾಚರಣೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲಿ ಎಲ್ಲೂ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ನಿಷ್ಠೆ- ನಾನು ನನ್ನ ಜೀವನದುದ್ದಕ್ಕೂ ಮೆಚ್ಚುತ್ತೇನೆ ಎಂದು ಬರೆದಿದ್ದಾರೆ. 2018ರಲ್ಲಿ ಆರ್​​ಸಿಬಿ ಪರ ಪದಾರ್ಪಣೆ ಮಾಡಿದ ಸಿರಾಜ್ ಅವರನ್ನು 2025ರ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗೆ ಖರೀದಿಸಿದೆ.

ಶತಕವೀರ ವಿಲ್ ಜಾಕ್ಸ್ ಕೂಡ ಬೇಡವಾಗಿದ್ದೇಕೆ?

ಕಳೆದ ಸೀಸನ್​ನಲ್ಲಿ ಗುಜರಾತ್ ವಿರುದ್ಧ ವಿಲ್ ಜಾಕ್ಸ್ ಆಡಿದ್ದನ್ನ ಮರೆಯೋಕೆ ಸಾಧ್ಯನೇ ಇಲ್ಲ. ಬಟ್ ಈ ಸಲ ಹರಾಜಿನಲ್ಲಿ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್‌ರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 5.25 ಕೋಟಿಗೆ ಖರೀದಿಸಿದೆ.  2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ವಿಲ್ ಜ್ಯಾಕ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರ್‌ಟಿಎಂ ಕಾರ್ಡ್‌ ಬಳಸಿ ರೀಟೈನ್ ಮಾಡಿಕೊಳ್ಳಬಹುದು ಎಂದು ಫ್ಯಾನ್ಸ್ ಭಾವಿಸಿದ್ರು. ಆದ್ರೆ  ಜ್ಯಾಕ್ಸ್ ಅವರಿಗೆ ಆರ್‌ಟಿಎಂ ಬಳಸದೇ ಹೋದದ್ದು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದ್ರಲ್ಲೂ ಮುಂಬೈ ಇಂಡಿಯನ್ಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಟ್ಟುಕೊಟ್ಟಿರೋ ಆರೋಪವೂ ಇದೆ. ಇನ್ನು ಜಾಕ್ಸ್ ಐಪಿಎಲ್‌ನಲ್ಲಿ 8 ಪಂದ್ಯಗಳನ್ನು ಆಡಿದ್ದು 230 ರನ್ ಗಳಿಸಿದ್ದಾರೆ. ಇದ್ರಲ್ಲಿ ಒಂದು ಶತಕ, ಒಂದು ಅರ್ಧಶತಕವೂ ಸೇರಿದೆ.

ಹೀಗೆ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಸೇರಿದಂತೆ ಇನ್ನೊಂದಷ್ಟು ಪ್ಲೇಯರ್ಸ್ ನ ಬಿಟ್ಟುಕೊಟ್ಟಿದ್ದೂ ಕೂಡ ಬೇಸರಕ್ಕೆ ಕಾರಣವಾಗಿದೆ. ಏನೇ ಹೇಳಿ ಫ್ರಾಂಚೈಸಿಗಳಿಗೆ ಇದೊಂದು ಗೇಮ್, ಹರಾಜೆಲ್ಲಾ ಪ್ರೊಸೀಜರ್ಸ್ ಅಷ್ಟೇ. ಯಾವ ಸೆಂಟಿಮೆಂಟ್ಸ್, ಎಮೋಷನ್ಸ್ ಕೂಡ ಇರೋದಿಲ್ಲ. ಬಟ್ ಅಭಿಮಾನಿಗಳಿಗೆ ಹಾಗಲ್ಲ.

Shwetha M