10 ಟೀಂ.. 10 ಕ್ಯಾಪ್ಟನ್ಸ್ ಫೈನಲ್ – IPL ಕಪ್ ಗೆಲ್ಲಿಸೋ ನಾಯಕ ಯಾರು?
RCB ಸಾರಥಿ ಯಾರಾದ್ರೆ ಬೆಸ್ಟ್?
2025ರ ಐಪಿಎಲ್ಗೆ ಆಟಗಾರರನ್ನ ಖರೀದಿ ಮಾಡಿರೋ ಫ್ರಾಂಚೈಸಿಗಳು ಈಗಾಗ್ಲೇ ಪ್ಲೇಯಿಂಗ್ 11 ಬಗ್ಗೆ ಲೆಕ್ಕಾಚಾರ ಶುರು ಮಾಡಿವೆ. ಯಾರನ್ನ ಓಪನರ್ ಆಗಿ ಕಣಕ್ಕಿಳಿಸ್ಬೇಕು..? ಯಾರು ವಿಕೆಟ್ ಕೀಪರ್..? ಯಾರು ಡೆತ್ ಓವರ್ ಬೌಲರ್ ಅಂತಾ ಕ್ಯಾಲ್ಕುಲೇಟ್ ಮಾಡ್ತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ತಂಡಗಳ ಸಾರಥ್ಯ ಯಾರಿಗೆ ಅನ್ನೋದು ಕೂಡ ಫೈನಲ್ ಆಗಿದೆ. ಹಾಗಾದ್ರೆ 10 ಫ್ರಾಂಚೈಸಿಗಳ ನಾಯಕರು ಯಾರ್ಯಾರು? ಕ್ಯಾಪ್ಟನ್ಸಿ ಚೇಂಜ್ ಮಾಡ್ತಿರೋ ತಂಡಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ PAK ಔಟ್? -ಭಾರತ Or ಸೌತ್ ಆಫ್ರಿಕಾದಲ್ಲಿ ಟೂರ್ನಿ
ಐಪಿಎಲ್ ಮೆಗಾ ಆಕ್ಷನ್ಗೂ ಮುನ್ನ ಹಲವು ತಂಡಗಳು ಕ್ಯಾಪ್ಟನ್ಗಳನ್ನೇ ತಂಡದಿಂದ ರಿಲೀಸ್ ಮಾಡಿ ಅಚ್ಚರಿ ಮೂಡಿಸಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ಎಲ್ಎಸ್ಜಿ, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ಪಂಜಾಬ್ ಕಿಂಗ್ಸ್ ತಂಡಗಳು ಸಹ ತಮ್ಮ ನಾಯಕರನ್ನು ರಿಲೀಸ್ ಮಾಡಿದ್ದವು. ಇದೀಗ ಹರಾಜಿನಲ್ಲಿ ಭವಿಷ್ಯದ ನಾಯಕನಿಗೆ ತಂಡಗಳ ಮಾಲೀಕರು ಮಣೆ ಹಾಕಿದ್ದಾರೆ.
ವೆಂಕಟೇಶ್ ಅಯ್ಯರ್ ಗೆ ಕ್ಯಾಪ್ಟನ್ಸಿ ನೀಡುತ್ತಾ ಕೆಕೆಆರ್?
2024ರ ಐಪಿಎಲ್ನಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ಮೆಗಾ ಹರಾಜಿಗೆ ತನ್ನ ನಾಯಕನನ್ನೇ ರಿಲಿಸ್ ಮಾಡಿ ಶಾಕ್ ಕೊಟ್ಟಿತ್ತು. ಹಾಲಿ ಚಾಂಪಿಯನ್ ಕೆಕೆಆರ್ ಶ್ರೇಯಸ್ ಅಯ್ಯರ್ ಅವರನ್ನು ಆರ್ ಟಿಎಂ ಕಾರ್ಡ್ ಬಳಸಿಯೂ ಉಳಿಸಿಕೊಳ್ಳಲಿಲ್ಲ. ವೆಂಕಟೇಶ್ ಅಯ್ಯರ್ಗೆ 23.75 ಕೋಟಿ ನೀಡಿ ಖರೀದಿ ಮಾಡಿದೆ. ವೆಂಕಿ ದೇಶೀಯ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ತಂಡದ ನಾಯಕರಾಗಿದ್ದಾರೆ. ಇದೀಗ ಕೆಕೆಆರ್ ನಾಯಕತ್ವದ ನಿರೀಕ್ಷೆಯಲ್ಲಿದ್ದು, ಕ್ಯಾಪ್ಟನ್ಸಿ ಹೊಣೆ ನೀಡುವ ಸಾಧ್ಯತೆ ಹೆಚ್ಚಿದೆ.
ಲಕ್ನೋ ತಂಡಕ್ಕಿನ್ನು ರಿಷಭ್ ಪಂತ್ ಬಾಸ್!
ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ರಿಷಭ್ ಪಂತ್. ಬರೋಬ್ಬರಿ 27 ಕೋಟಿ ರೂಪಾಯಿಗೆ ಈ ಸಲ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಿಂದ ರಿಲೀಸ್ ಆಗಿದ್ದ ಪಂತ್ ಗೆ ಎಲ್ಎಸ್ಜಿ ಟಾರ್ಗೆಟ್ ಮಾಡಿ 27 ಕೋಟಿಗೆ ಖರೀದಿಸಿದೆ. ಇದೀಗ ಎಲ್ಎಸ್ಜಿಗೆ ಪಂತ್ ನಾಯಕನಾಗುವುದು ಫಿಕ್ಸ್. ಈ ಮೊದಲು ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿದ್ದರು. ಇದೀಗ ಡೆಲ್ಲಿ ತಂಡಕ್ಕೆ 14 ಕೋಟಿಗೆ ಸೇರ್ಪಡೆಯಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಲೀಡ್ ಮಾಡಲಿದ್ದಾರೆ ಕೆಎಲ್ ರಾಹುಲ್!
ಲಕ್ನೋ ಸೂಪರ್ ಜೇಂಟ್ಸ್ ತಂಡದಿಂದ ರಿಲೀಸ್ ಆಗಿದ್ದ ಕನ್ನಡಿಗ ಕೆಎಲ್ ರಾಹುಲ್ ಆರ್ಸಿಬಿ ಸೇರ್ತಾರೆ. ಕ್ಯಾಪ್ಟನ್ ಆಗ್ತಾರೆ ಅಂತಾನೇ ನಿರೀಕ್ಷೆ ಮಾಡಲಾಗಿತ್ತು. ಬಟ್ ಖರೀದಿ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಹುಲ್ಗೆ ಬಿಡ್ ಮಾಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ರಿಷಭ್ ಪಂತ್ ರಿಲೀಸ್ ಆಗಿರೋ ಕಾರಣಕ್ಕೆ ಡೆಲ್ಲಿ ತಂಡದಲ್ಲಿ ನಾಯಕನ ಸ್ಥಾನ ಖಾಲಿ ಇದೆ. ರಾಹುಲ್ ನಾಯಕ ಆದ್ರೂ ಆಗಬಹುದು. ಬಟ್ ಡಿಸಿ ಟೀಮ್ನಲ್ಲಿ ರಾಹುಲ್ಗೆ ಅಕ್ಷರ್ ಪಟೇಪ್ ಪೈಪೋಟಿ ನೀಡ್ತಿದ್ದು ಅವ್ರೂ ಕೂಡ ಸಾರಥಿಯ ರೇಸ್ನಲ್ಲಿದ್ದಾರೆ.
ಆರ್ ಸಿಬಿಯಲ್ಲಿ ವಿರಾಟ್ ಕೊಹ್ಲಿಗೆ ಮತ್ತೆ ಪಟ್ಟಾಭಿಷೇಕ!
ಹರಾಜಿಗೂ ಮುನ್ನ ಫಾಫ್ ಡು ಪ್ಲೆಸಿಸ್ ರನ್ನು ಬಿಡುಗಡೆ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡೋದು ಫಿಕ್ಸ್ ಆದಂತಿದೆ. ಯಾಕಂದ್ರೆ ಹರಾಜಿನಲ್ಲಿ ಕ್ಯಾಪ್ಟನ್ ಆಗುವ ಆಟಗಾರರನ್ನು ಖರೀದಿಸಿಲ್ಲ. ಸೋ 2025ರಲ್ಲಿ ಕೊಹ್ಲಿಯೇ ನಾಯಕರಾಗೋದ್ರಲ್ಲಿ ಡೌಟೇ ಇಲ್ಲ.
ಪಂಜಾಬ್ ಕಿಂಗ್ಸ್ ಗೆ ಕಪ್ ಗೆಲ್ಲಿಸಿಕೊಡ್ತಾರಾ ಶ್ರೇಯಸ್ ಅಯ್ಯರ್?
ಐಪಿಎಲ್ ಇತಿಹಾಸದಲ್ಲಿ ಈವರೆಗೂ ಪಂಜಾಬ್ ಕಿಂಗ್ಸ್ ಕೂಡ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಬಟ್ ಈ ಸಲ ಚಾಂಪಿಯನ್ ಪಟ್ಟಕ್ಕೇರೋ ನಿರೀಕ್ಷೆಯಲ್ಲಿದೆ. ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಗೆ ಗಾಳ ಹಾಕಿರುವ ಪಂಜಾಬ್ ಕಿಂಗ್ಸ್ ಮಾಲೀಕರು ಅವ್ರಿಗೇ ಪಟ್ಟ ಕಟ್ಟೋ ಪ್ಲ್ಯಾನ್ ನಲ್ಲಿದ್ದಾರೆ. ಶ್ರೇಯಸ್ ಗೆ 26.75 ಕೋಟಿ ರೂಪಾಯಿ ಸಂಭಾವನೆ ನೀಡಿದೆ. ಐಪಿಎಲ್ ಹಿಸ್ಟರಿಯಲ್ಲಿ ಪಂತ್ ಬಳಿಕ ಹೈಯೆಸ್ಟ್ ಬಿಡ್ ನಡೆದಿರೋದು ಶ್ರೇಯಸ್ ಮೇಲೆಯೇ.
2ನೇ ಬಾರಿಗೆ ಚೆನ್ನೈ ತಂಡ ಮುನ್ನಡೆಸಲಿದ್ದಾರೆ ಗಾಯಕ್ವಾಡ್!
ಐಪಿಎಲ್ 2024ರಲ್ಲಿ ಎಂಎಸ್ ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಿದರು. ಗಾಯಕ್ವಾಡ್ ಅವರೇ ಐಪಿಎಲ್ 2025ರಲ್ಲೂ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ.
ವಿರೋಧದ ನಡುವೆಯೂ ಮುಂಬೈ ತಂಡಕ್ಕೆ ಪಾಂಡ್ಯನೇ ಸಾರಥಿ!
2024ರ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಅದಕ್ಕೆ ಕಾರಣ ಕ್ಯಾಪ್ಟನ್ಸಿ ಬದಲಾವಣೆ. ರೋಹಿತ್ ಶರ್ಮಾರನ್ನ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಟ್ ಹೀಗಿದ್ರೂ ಮುಂಬರುವ ವರ್ಷವೂ ಅವರೇ ಮುಂಬೈ ಇಂಡಿಯನ್ಸ್ ಮುನ್ನಡೆಸಲಿದ್ದಾರೆ.
ರಾಜಸ್ಥಾನಕ್ಕೆ ಈ ವರ್ಷವೂ ಸಂಜು ಸ್ಯಾಮ್ಸನ್ ನಾಯಕ!
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುವುದು ಗ್ಯಾರಂಟಿ. ಕಳೆದ ಸೀಸನ್ನಲ್ಲೂ ಉತ್ತಮ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿದ್ದರು. ಹೀಗಾಗಿ ಐಪಿಎಲ್ 2025 ರಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ.
2025ಕ್ಕೂ ಗುಜರಾತ್ ತಂಡಕ್ಕೆ ಗಿಲ್ ಲೀಡರ್!
2024ರ ಐಪಿಎಲ್ ಸೀಸನ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ತೆರಳಿದ ಬಳಿಕ ಗುಜರಾತ್ ಟೈಟಾನ್ಸ್ ಜವಾಬ್ದಾರಿ ಶುಭ್ಮನ್ ಗಿಲ್ಗೆ ಬಂದಿತ್ತು. ಪ್ರಸ್ತುತ ರಶೀದ್ ಖಾನ್ ಮತ್ತು ಜೋಸ್ ಬಟ್ಲರ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿದ್ದರೂ ಗಿಲ್ ಅವರೇ ಐಪಿಎಲ್ 2025ರಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
2025ಕ್ಕೆ ಹೈದ್ರಾಬಾದ್ ನ ಚಾಂಪಿಯನ್ ಪಟ್ಟಕ್ಕೇರಿಸುತ್ತಾರಾ ಕಮಿನ್ಸ್?
ಸನ್ರೈಸರ್ಸ್ ಹೈದರಾಬಾದ್ ಹರಾಜಿಗೂ ಮುನ್ನ ತಮ್ಮ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಉಳಿಸಿಕೊಂಡಿತ್ತು. ಅವರ ನಾಯಕತ್ವದಲ್ಲಿ ಎಸ್ಆರ್ಹೆಚ್ ಉತ್ತಮ ಪ್ರದರ್ಶನ ನೀಡಿ ಕಳೆದ ಬಾರಿ ಫೈನಲ್ ತಲುಪಿತ್ತು. ಐಪಿಎಲ್ 2025ರಲ್ಲಿ ಕಮಿನ್ಸ್ ಅವರೇ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.
ಒಟ್ಟಾರೆ 10 ಫ್ರಾಂಚೈಸಿಗಳು ಈಗ ತಮ್ಮ ತಮ್ಮ ತಂಡಗಳಲ್ಲಿ ಉತ್ತಮ ಆಟಗಾರರನ್ನೇ ಖರೀದಿಸುವ ಮೂಲಕ 2025ರ ಐಪಿಎಲ್ಗೆ ಬಲಿಷ್ಠವಾಗಿಯೇ ರೆಡಿಯಾಗಿವೆ. ಎಲ್ಲಾ ತಂಡಗಳಲ್ಲೂ ಉತ್ತಮ ಸಾರಥಿಗಳೇ ಇರೋದ್ರಿಂದ 18ನೇ ಸೀಸನ್ಗ ಜಿದ್ದಾಜಿದ್ದಿನಿಂದ ಕೂಡಿರೋದ್ರಲ್ಲಿ ಅನುಮಾನವೇ ಇಲ್ಲ.