ರೋಹಿತ್ ಎಂಟ್ರಿ.. KL ಎತ್ತಂಗಡಿ! – ಸ್ಲಾಟ್ ಚೇಂಜ್ Or ಟೀಂನಿಂದ ಔಟ್?
ಮತ್ತೆ ಫಾರ್ಮ್ ಕಳ್ಕೊಳ್ತಾರಾ ರಾಹುಲ್?
ತಾಯ್ನಾಡಿನಲ್ಲಿ ಆಡ್ಬೇಕು ಅನ್ನೋ ಆಸೆ ಈಡೇರಲಿಲ್ಲ. ಕಳೆದ ಬಾರಿಯಂತೆ ಬಹುದೊಡ್ಡ ಮೊತ್ತವೂ ಸಿಗಲಿಲ್ಲ. ಐಪಿಎಲ್ ಆಕ್ಷನ್ನಲ್ಲಿ ಕೆಎಲ್ ರಾಹುಲ್ ಬಗ್ಗೆ ಕನ್ನಡಿಗರು ಬೇಸರದಲ್ಲಿ ಇರುವಾಗ್ಲೇ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ವಿಕೆಟ್ ಕೀಪರ್, ಕ್ಯಾಪ್ಟನ್, ಓಪನರ್, ಮಿಡಲ್ ಆರ್ಡರ್ ಹೀಗೆ ಎಲ್ಲಾ ಸ್ಲಾಟ್ಗಳಲ್ಲಿ ಆಡುವ ಸಾಮರ್ಥ್ಯ ಇದ್ರೂ ಕನ್ನಡಿಗ ಕೆಎಲ್ ರಾಹುಲ್ ಗೆ ಅದೃಷ್ಟ ಮಾತ್ರ ಕೈ ಹಿಡೀತಿಲ್ಲ. ಇದೀಗ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸಿಸ್ ನೆಲದಲ್ಲೂ ಇದೇ ರಿಪೀಟ್ ಆಗ್ತಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ತಂಡಕ್ಕೆ ಕಮ್ ಬ್ಯಾಕ್ ಮಾಡಿರೋದು ಕೆಎಲ್ಗೆ ಹೊಡೆತ ಕೊಡ್ತಿದೆ.. ಕಾಂಗರೂಗಳ ನಾಡಲ್ಲೂ ಕೆಎಲ್ ರಾಹುಲ್ ಹರಕೆಯ ಕುರಿ ಆಗ್ತಾರಾ? ಸ್ಲಾಟ್ ಚೇಂಜ್ ಮಾಡ್ತಾರೋ ಅಥವಾ ಪ್ಲೇಯಿಂಗ್ 11ನಿಂದಲೇ ಕೈಬಿಡ್ತಾರೋ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಟೀಂ ಸೆಲೆಕ್ಷನ್ ಸೂಪರ್ – ಸ್ಟಾರ್ಸ್ ಕೈಬಿಟ್ರೂ ಬಲಿಷ್ಠ ತಂಡ ರೆಡಿ
ಕೆಎಲ್ ರಾಹುಲ್. ಟೀಂ ಇಂಡಿಯಾದ ಕ್ಲಾಸಿಕ್ ಌಂಡ್ ಸ್ಟಾರ್ ಆಟಗಾರ. ರಾಹುಲ್ ದ್ರಾವಿಡ್ರಂತೆ ತಾಳ್ಮೆಯಿಂದಲೇ ಆಡುವ ರಾಹುಲ್ ನಿಜಕ್ಕೂ ಜೆಂಟಲ್ಮೆನ್. ಆಟದ ಹೊರತಾಗಿ ಮತ್ಯಾವ ತಗಾದೆಗೂ ಹೋಗೋ ಪ್ಲೇಯರ್ ಅಲ್ವೇ ಅಲ್ಲ. ಹೀಗಿದ್ರೂ ಟೀಂ ಇಂಡಿಯಾದಲ್ಲಿ ಹಾವು ಏಣಿಯಂತೆ ಅವ್ರ ಜರ್ನಿ ಸಾಗ್ತಿದೆ. ಈ ಮ್ಯಾಚ್ ಆಡಿದ್ರೆ ನೆಕ್ಸ್ಟ್ ಮ್ಯಾಚ್ ಆಡ್ತಾರೋ ಇಲ್ವೋ ಅನ್ನೋ ಕ್ಲಾರಿಟಿ ಇರೋದಿಲ್ಲ. ಅದ್ರ ಜೊತೆಗೆ ಟೀಂ ಮ್ಯಾನೇಜ್ಮೆಂಟ್ ಕೂಡ ರಾಹುಲ್ ಮೇಲೆ ಪದೇಪದೇ ಪ್ರಯೋಗ ಮಾಡ್ತಾನೇ ಇದೆ.
ರೋಹಿತ್ ಶರ್ಮಾ ರೀ ಎಂಟ್ರಿ.. ರಾಹುಲ್ ಎತ್ತಂಗಡಿ!
5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸಿಸ್ಗೆ ಕಾಲಿಟ್ಟಿರೋ ಟೀಂ ಇಂಡಿಯಾ ಈಗಾಗ್ಲೇ ಒಂದು ಪಂದ್ಯವನ್ನ ಗೆದ್ದುಕೊಂಡಿದೆ. ವೈಯಕ್ತಿಕ ಕಾರಣಗಳಿಂದ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ವೈಸ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ ಕಾಂಗರೂಗಳಿಗೆ ಬೆಂಡೆತ್ತಿ ಬ್ರೇಕ್ ಹಾಕಿತ್ತು. ಇದೀಗ 2ನೇ ಪಂದ್ಯದ ವೇಳೆಗೆ ರೋಹಿತ್ ಶರ್ಮಾ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಲ್ಲಿ ಯುವ ಆಟಗಾರ ದೇವದತ್ ಪಡಿಕ್ಕಲ್ ಬದಲಿಗೆ ಸ್ಥಾನ ಪಡೆಯಲಿದ್ದಾರೆ. ರೋಹಿತ್ ಓಪನರ್ ಆಗಿ ಕಣಕ್ಕಿಳಿಯೋದ್ರಿಂದ ಕೆಎಲ್ ರಾಹುಲ್ ಗೆ ಮತ್ತೊಮ್ಮೆ ಸ್ಲಾಟ್ ಚೇಂಜ್ ಆಗಲಿದೆ.
ಗಿಲ್ ಕೂಡ ಫಿಟ್ ಆದ್ರೆ ಹೊರ ಬೀಳೋದು ಯಾರು?
ಕ್ಯಾನ್‌ಬೆರಾದಲ್ಲಿ ನವೆಂಬರ್ 30ರಿಂದ ಆರಂಭವಾಗಲಿರುವ ಎರಡು ದಿನಗಳ ಪಿಂಕ್‌ಬಾಲ್ ಅಭ್ಯಾಸದ ವೇಳೆ ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೇ ಕ್ಯೂರಿಯಾಸಿಟಿ ಜೋರಾಗಿದೆ. ಪ್ರಾಕ್ಟೀಸ್ ವೇಳೆ ಗಾಯಗೊಂಡು ಮೊದಲ ಪಂದ್ಯದಿಂದ ಹೊರಗೆ ಉಳಿದಿದ್ದ ಶುಭ್ಮನ್ ಗಿಲ್ 2ನೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗುತ್ತಾರೆಯೇ ಅಥವಾ ಇಲ್ಲವೋ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಹಾಗೇನಾದ್ರೂ ಗಿಲ್ ವಾಪಸ್ ಬಂದ್ರೆ ಆನಂತ್ರ ರೋಹಿತ್ ಮತ್ತು ರಾಹುಲ್ ಬ್ಯಾಟಿಂಗ್ ಕ್ರಮಾಂಕ ಡಿಸೈಡ್ ಆಗುತ್ತೆ. ಫಿಟ್ ಆಗದೇ ಇದ್ರೆ ಪಡಿಕ್ಕಲ್ ಬದಲಿಗೆ ರಾಹುಲ್ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಬಟ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡುವ ರೋಹಿತ್ ಶರ್ಮಾ ಒಪ್ತಾರಾ ಅನ್ನೋ ಪ್ರಶ್ನೆಯೂ ಇದೆ. 5 ಅಥವಾ 6ನೇ ಕ್ರಮಾಂಕದಲ್ಲಿ ರಾಹುಲ್ ಆಡಿದ್ರೆ ತಂಡಕ್ಕೆ ಪ್ಲಸ್ ಆಗಲಿದೆ ಎನ್ನುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಮೊದಲ ಇನ್ನಿಂಗ್ಸ್ ನಲ್ಲಿ 26, ಎರಡನೇ ಇನ್ನಿಂಗ್ಸ್ ನಲ್ಲಿ 77 ರನ್!
ರೋಹಿತ್ ಶರ್ಮಾ ಆಬ್ಸೆನ್ಸ್ ನಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 26 ಮತ್ತು 77 ರನ್ ಗಳಿಸಿದ್ರು. ಹಾಗೆ ನೋಡಿದ್ರೆ ಟೀಂ ಇಂಡಿಯಾ ಪರ ರಾಹುಲ್ ಸೇರಿ ಮೂವರು ಆಟಗಾರರಷ್ಟೇ 25+ ರನ್ ಸ್ಕೋರ್ ಮಾಡಿದ್ರು. ಹಾಗೇ ಎರಡನೇ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ಎಂಸಿಜಿಯಲ್ಲಿ ಭಾರತ ‘ಎ’ ಪರ ಹಾಗೂ ಈಗ ಟೆಸ್ಟ್ ಪಂದ್ಯ ಆಡಿರುವ ರಾಹುಲ್, ಅಗ್ರ ಕ್ರಮಾಂಕಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಅವರ ಕ್ರಮಾಂಕ ಬದಲಾದರೆ ಬ್ಯಾಟಿಂಗ್ ಪ್ರದರ್ಶನದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಮತ್ತೊಂದೆಡೆ ರನ್ ಗಳಿಸೋಕೆ ಒದ್ದಾಡ್ತಿರೋ ಟೀಮ್ ಇಂಡಿಯಾ ನಾಯಕ ರೋಹಿತ್, ಕಳೆದ ಐದು ವರ್ಷಗಳಿಂದಲೂ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
ಅಶ್ವಿನ್ ಮತ್ತು ಜಡೇಜಾಗೆ ಸಿಗುತ್ತಾ ಚಾನ್ಸ್?
ಫಸ್ಟ್ ಮ್ಯಾಚ್ ನಡೆದಿದ್ದ ಪರ್ತ್ ಟೆಸ್ಟ್‌ನಲ್ಲಿ ಪ್ಲೇಯಿಂಗ್ 11ನಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡಲಾಗಿತ್ತು. ಬಟ್ ಈಗ ಅಡಿಲೇಡ್‌ನ ಓವಲ್‌ನಲ್ಲಿ ಆಡುವ ಬಳಗದಲ್ಲಿ ಪ್ರಮುಖ ಬದಲಾವಣೆ ಅಂದ್ರೆ ಅದು ಸ್ಪಿನ್ ಬೌಲಿಂಗ್ ಆಯ್ಕೆ. ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ಕಲ್ಪಿಸುವ ಮೂಲಕ ಸ್ಪಿನ್ ತಾರೆಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಡಲಾಗಿತ್ತು. ಒಂದು ವೇಳೆ 2021ರ ಅಡಿಲೇಡ್ ಪಿಂಕ್‌ಬಾಲ್ ಟೆಸ್ಟ್ ಪಂದ್ಯವನ್ನು ಪರಿಗಣಿಸಿದರೆ, ಅಶ್ವಿನ್ ಮತ್ತು ಜಡೇಜಾ ಮೈದಾನಕ್ಕಿಳಿಯಬಹುದು. ಈ ಟೆಸ್ಟ್‌ನಲ್ಲಿ ಅಶ್ವಿನ್ 45ಕ್ಕೆ 4 ವಿಕೆಟ್ ಪಡೆದಿದ್ದರು.
ಒಟ್ನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಡಬ್ಲ್ಯುಟಿಸಿ ಫೈನಲ್ ಆಸೆಯನ್ನೂ ಜೀವಂತವಾಗಿರಿಕೊಂಡಿದೆ. ಎರಡನೇ ಟೆಸ್ಟ್ ಡಿಸೆಂಬರ್ 6 ರಂದು ಪ್ರಾರಂಭವಾಗಿ ಡಿಸೆಂಬರ್ 10 ರಂದು ಮುಕ್ತಾಯಗೊಳ್ಳಲಿದೆ. ಭಾರತೀಯ ಕಾಲಮಾನ 09:30ಕ್ಕೆ ಪಂದ್ಯ ಆರಂಭವಾಗಲಿದೆ. ಸದ್ಯ ಐಪಿಎಲ್ ಆಕ್ಷನ್ ಗುಂಗಿನಲ್ಲಿರೋ ಕ್ರಿಕೆಟ್ ಫ್ಯಾನ್ಸ್ ಇದೀಗ ಆಸಿಸ್ ಸರಣಿಗಾಗಿ ಕಾಯ್ತಿದ್ದಾರೆ. ಅದ್ರಲ್ಲೂ ನಮ್ಮ ಕರ್ನಾಟಕ ಫ್ಯಾನ್ಸ್ ಅಂತೂ ರಾಹುಲ್ ಮೇಲೆಯೇ ಕಣ್ಣಿಟ್ಟಿದ್ದಾರೆ. ತವರಿನ ತಂಡಕ್ಕಂತೂ ಕರೆಸಿಕೊಳ್ಳೋಕೆ ಆಗ್ಲಿಲ್ಲ ಟೀಂ ಇಂಡಿಯಾದಲ್ಲಾದ್ರೂ ಚೆನ್ನಾಗಿ ಪರ್ಫಾರ್ಮ್ ಮಾಡ್ಲಿ ಅಂತಾ ಕೇಳಿಕೊಳ್ತಿದ್ದಾರೆ.