ದರ್ಶನ್ ಅರೆಸ್ಟ್ ಗೆ ಲಾಯರ್ ಟ್ವಿಸ್ಟ್ – ಪೊಲೀಸರ ತಪ್ಪೇ ಜಾಮೀನು ಕೊಡಿಸುತ್ತಾ?
ಸಿ.ವಿ ನಾಗೇಶ್ ಸಾಕ್ಷಿಗೆ ಕಂಗೆಟ್ಟ ಖಾಕಿ

ದರ್ಶನ್ ಅರೆಸ್ಟ್ ಗೆ ಲಾಯರ್ ಟ್ವಿಸ್ಟ್ – ಪೊಲೀಸರ ತಪ್ಪೇ ಜಾಮೀನು ಕೊಡಿಸುತ್ತಾ?ಸಿ.ವಿ ನಾಗೇಶ್ ಸಾಕ್ಷಿಗೆ ಕಂಗೆಟ್ಟ ಖಾಕಿ

ಸ್ಯಾಂಡಲ್‌ ವುಡ್‌ ನಲ್ಲಿ ಡಿ ಬಾಸ್ , ದಾಸ, ಕರಿಯಾ ಅಂತಾ ಕರೆಸಿಕೊಳ್ಳುವ ನಟ ದರ್ಶನ್ಗೆ ಕೊಲೆ ಕೇಸ್ ಕ್ಷಣ ಕ್ಷಣಕ್ಕೂ ಕಾಡುತ್ತಿದೆ.  ಮಂಧ್ಯತರ ಬೇಲ್ ಮೇಲೆ ಹೊರ ಬಂದ ದಾಸ ಈಗ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಇದು ನಾಟಕ ಅಂತ ಕೂಡ ಕೆಲವರು ಹೇಳುತ್ತಿದ್ದಾರೆ. ಅವರಿಗೆ ಏನೂ ಆಗಿಲ್ಲ ಆದ್ರೂ ಡವ್ ಮಾಡಿ ಬೇಲ್ ತಗೊಂಡಿದ್ದಾರೆ ಅಂತ ಪೊಲೀಸ್ ಇಲಾಖೆಯೇ ಹೇಳುತ್ತಿದೆ. ಅದಕ್ಕೆ ಕಾರಣ ಅವರು ಬೇಲ್ ಮೇಲೆ ಹೊರ ಬಂದ 4 ವಾರ ಕಳೆದ್ರು ಯಾವುದೇ ಸರ್ಜರಿ ಕೂಡ ಮಾಡಿಸಿಕೊಂಡಿಲ್ಲ.. ಈ ನಡುವೆ ಬೇಲ್ ಅರ್ಜಿ ವಿಚಾರಣೆ ಕೂಡ ನಡೆದಿದ್ದು, ದರ್ಶನ್ ಬಿಗ್ ಶಾಕ್ ಎದುರಾಗಿದೆ. ಹಾಗಿದ್ರೆ ದರ್ಶನ್ ಬೇಲ್ ಸಿಗುತ್ತಾ? ಸಿಗಲ್ವಾ? ದರ್ಶನ್ ಆಸ್ಪತ್ರೆ ಕಥೆ ಏನಾಯ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCBಯಲ್ಲಿ 3+19 = 22 ಸೂತ್ರ – ಕನ್ನಡಿಗರು ಬೆಂಚ್ ಗೋ.. ಮೈದಾನಕ್ಕೋ?

ದರ್ಶನ್ ಒಂದ್ಕಡೆ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಚಿಕೆತ್ಸೆ ಪಡೆಯುತ್ತಿದ್ದಾನೆ ಅಂತಾ ಹೇಳುತ್ತಿದ್ದಾರೆ.. ಅವರಿಗೆ ಯಾವುದೇ  ಬೆನ್ನು ನೋವು ಇಲ್ಲ.. ಕೋರ್ಟ್‌ಗೆ ಸುಳ್ಳು ಹೇಳಿ ಜಾಮೀನು ಪಡೆದ ಆಸ್ಪತ್ರೆ ಅಂತ ಕಥೆ ಕಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಈ ನಡುವೆ ಇಂದು ದರ್ಶನ್ ಅವರ ಬೇಲ್ ಅರ್ಜಿ ವಿಚಾರಣೆ ನಡೆದಿದೆ. ಹೈಕೋರ್ಟ್‌ ನಲ್ಲಿ ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆಯುತ್ತಿದ್ದು, ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ತನಿಖೆ ವೇಳೆ ನಡೆದ ಲೋಪದೋಷಗಳನ್ನ ಎತ್ತಿ ಹಿಡಿದಿದ್ದಾರೆ. ಸಿವಿ ನಾಗೇಶ್ ರೇಣುಕಾಸ್ವಾಮಿ ಕೇಸ್ನ್ನ ಠುಸ್ ಪಾಟಿ ಮಾಡೋಕೆ ಹೊರಟಿದ್ದಾರೆ.

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಯೇ ಇಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಒತ್ತಡ ಹೇರಿ ಕರ್ಕೊಂಡು ಬಂದ ಬಗ್ಗೆ ಸಾಕ್ಷ್ಯಗಳು ಇಲ್ಲ. ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಜೂನ್ 11 ರಂದು ಬಾಡಿ ಐಡೆಂಟಿಫೈ ಮಾಡಲು ಬಂದಿದ್ದಾರೆ. ಅಲ್ಲಿ ಅವರ ಹೇಳಿಕೆಯನ್ನು ದಾಖಲು ಮಾಡಲಾಗುತ್ತೆ. ಅವರ ಹೇಳಿಕೆಯಲ್ಲಿ ತಮ್ಮ ಮಗ ಅವರ ನಾಲ್ವರು ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದು ಸಂಜೆ ಬರ್ತಿನಿ ಅಂತ ಹೇಳಿದ್ದಾನೆ ಅಂತ ಹೇಳಿಕೆ ನೀಡಿದ್ದಾರೆ. ಇಲ್ಲಿ ಕಿಡ್ನಾಪ್ ಅಂತ ಎಲ್ಲಿಯೂ ಹೇಳಿಲ್ಲ ಎಂದಿರುವ ಸಿವಿ ನಾಗೇಶ್ ಅವರು ಕಾಶಿನಾಥಯ್ಯ ಹೇಳಿಕೆ ಓದಿದ್ದಾರೆ.  ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸಾಕ್ಷ್ಯನಾಶವಲ್ಲ ಎಂದಿರುವ ಸಿವಿ ನಾಗೇಶ್ ಅವರು ಅಲಹಾಬಾದ್ ಹೈಕೋರ್ಟ್ನ ತೀರ್ಪು ಉಲ್ಲೇಖಿಸಿದರು.  ಮೃತದೇಹವನ್ನು ಸುಟ್ಟುಹಾಕಿದ್ರೆ  ಸಾಕ್ಷ್ಯನಾಶ ಎನ್ನಬಹುದಿತ್ತು. ಆದರೆ ಆ ರೀತಿ ಆಗಿಲ್ಲ, ಕೇವಲ ಮೃತದೇಹ ಸ್ಥಳಾಂತರಿಸಲಾಗಿದೆ ಎಂದು ನಾಗೇಶ್ ಹೇಳಿದ್ರು. ಕೇಸ್ ವಿಚಾರಣೆ ವೇಳೆ ನಟ ದರ್ಶನ್ ಕೊಟ್ಟ ಹೇಳಿಕೆಯನ್ನು ಸಿವಿ ನಾಗೇಶ್ ಅವರು ನ್ಯಾಯಾಧೀಶರ ಮುಂದೆ ಓದಿ ಹೇಳಿದ್ದಾರೆ.  ನನ್ನನ್ನು ಕರ್ಕೊಂಡು ಹೋದ್ರೆ ಕೊಲೆಯಾದ ಸ್ಥಳದ ಬಗ್ಗೆ ಹೇಳ್ತೀನಿ. ವಿನಯ್ಗೆ ಹಣ ನೀಡಿದ ಸ್ಥಳ ಕೂಡ ತೋರಿಸ್ತೀನಿ ಎಂದಿದ್ದಾರೆ. ನಾನು ಧರಿಸಿದ್ದ ಬಟ್ಟೆ ನಮ್ಮ ಮನೆ ಒಳಗೆ ಇದೆ ತೋರಿಸ್ತೀನಿ ಅಂದಿದ್ದಾರೆ. ಜೂನ್ 14ರಂದು ಐಡಿಯಲ್ ಹೋಂ ನ ಮನೆಯಲ್ಲಿ ಮಹಜರು ಮಾಡಿದ್ದಾರೆ. ದರ್ಶನ್ ಜೂನ್ 11ರಂದು ಸ್ವಇಚ್ಚಾ ಹೇಳಿಕೆ ನೀಡಿದ್ರೇ ಜೂನ್ 14ಕ್ಕೆ ಹೋಗಿದ್ದಾರೆ. ಯಾಕೆ ತಡ ಮಾಡಿದ್ರು, ಇವ್ರು ಎವಿಡೆನ್ಸ್ಗಳನ್ನು ಸೃಷ್ಟಿ ಮಾಡಲು ತಡ ಮಾಡಿದ್ದಾರೆಂದು ಸಿವಿ ನಾಗೇಶ್ ವಾದ ಮಾಡಿದ್ರು.  ಅಷ್ಟೇ ಚಪ್ಪಳಿ ವಿಚಾರ ,ಬಟ್ಟೆ ವಿಚಾರ, ಸಾಕ್ಷಿ ನಾಶಕ್ಕೆ ಬಳಸಿದ ದುಡ್ಡಿನ ವಿಚಾರದ ಬಗ್ಗೆ ಕೂಡ ಸಿವಿ ನಾಗೇಶ್ ಕೋರ್ಟ್ನಲ್ಲಿ ಪ್ರಭಲವಾದ ಮಂಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *