ವಿರಾಟ್ ಕೊಹ್ಲಿಯೇ RCB ಕ್ಯಾಪ್ಟನ್ – ಓಪನರ್ To ಡೆತ್ ಓವರ್ ಬೌಲರ್
18ನೇ ಸೀಸನ್ ಗೆ ಕಪ್ ನಮ್ದೇ
ಐಪಿಎಲ್ ಹರಾಜು ಮುಗೀತು. 22 ಆಟಗಾರರು ತಂಡವನ್ನೂ ಸೇರಿದ್ರು. ಬಟ್ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ ಕ್ಯಾಪ್ಟನ್ ಯಾರು? ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಯೋರು ಯಾರು ಅನ್ನೋದು. ಹಾಗಾದ್ರೆ 18ನೇ ಸೀಸನ್ಗೆ ನಾಯಕ ಯಾರಾಗ್ತಾರೆ..? ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ..? ಬ್ಯಾಟಿಂಗ್, ಆಲ್ ರೌಂಡರ್, ಬೌಲಿಂಗ್ ಸ್ಕ್ವಾಡ್ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCBಯಲ್ಲಿ 3+19 = 22 ಸೂತ್ರ – ಕನ್ನಡಿಗರು ಬೆಂಚ್ ಗೋ.. ಮೈದಾನಕ್ಕೋ?
2025ರ ಐಪಿಎಲ್ಗಾಗಿ ಬೆಂಗಳೂರು ಫ್ರಾಂಚೈಸಿ 8 ವಿದೇಶಿಗರು ಸೇರಿದಂತೆ 19 ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ರಿಟೇನ್ ಸೇರಿದಂತೆ ಟೋಟಲ್ಲಾಗಿ 22 ಆಟಗಾರರು ರೆಡ್ ಆರ್ಮಿ ಭಾಗವಾಗಿದ್ದಾರೆ. ಕಳೆದ ಹಲವು ಐಪಿಎಲ್ ಟೂರ್ನಿಗಳನ್ನು ಗಮನಿಸಿದಾಗ ಆರ್ ಸಿಬಿಯಲ್ಲಿ ಬ್ಯಾಟರ್ ಗಳಿಗೆ ಯಾವತ್ತೂ ಕೊರತೆಯಾಗಿಲ್ಲ. ರನ್ ಗಳ ಮಳೆಯನ್ನು ಸುರಿಸುವಂತಹ ಬ್ಯಾಟರ್ ಗಳು ಬಂದು ಹೋಗಿದ್ದಾರೆ. ಈಗಲೂ ಬಲಿಷ್ಠ ಬ್ಯಾಟರ್ ಗಳು ಇದ್ದಾರೆ. ಆದರೆ ಪದೇ ಪದೆ ಕೈ ಕೊಡುತ್ತಿರುವುದು ಮಾತ್ರ ಬೌಲಿಂಗ್ ವಿಭಾಗ. ಎಷ್ಟೋ ಬಾರಿ 200 ರನ್ ಗಳ ಬೃಹತ್ ಮೊತ್ತ ಪೇರಿಸಿದರೂ ಈ ಗುರಿಯನ್ನು ಡಿಫೆಂಡ್ ಮಾಡಿಕೊಳ್ಳಲು ಬೌಲರ್ ಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಂಡದಲ್ಲಿ ಬೌಲರ್ ಗಳ ಪಾತ್ರ ಮಹತ್ವದ್ದಾಗಿದೆ. ಈ ಕಾರಣದಿಂದಾಗಿ ಈ ಬಾರಿ ಬೌಲರ್ ಗಳು ಹಾಗೂ ಆಲ್ ರೌಂಡರ್ ಗಳಿಗೆ ಹೆಚ್ಚಿನ ಆದ್ಯತೆಯನ್ನ ನೀಡಿದೆ. ಸೋ ಇಷ್ಟು ಜನ್ರಲ್ಲಿ ಯಾರು ಬ್ಯಾಟಿಂಗ್ ಲೈನಪ್ನಲ್ಲಿ ಸ್ಟ್ರಾಂಗ್ ಆಗಿದ್ದಾರೆ? ಮಿಡಲ್ ಆರ್ಡರ್ ಮತ್ತು ಬೌಲಿಂಗ್ ಬಳಗ ಹೇಗಿದೆ ಅನ್ನೋದನ್ನ ನೋಡ್ತಾ ಹೋಗೋಣ..
ಬ್ಯಾಟಿಂಗ್ ನಲ್ಲಿ ಬಲ ತುಂಬಲಿದ್ದಾರೆ 6 ಪ್ಲೇಯರ್ಸ್!
ಒಂದು ತಂಡಕ್ಕೆ ಬಲಿಷ್ಠ ಬ್ಯಾಟಿಂಗ್ ಪಡೆ ಇರೋದು ತುಂಬಾನೇ ಇಂಪಾರ್ಟೆಂಟ್. ಅದ್ರಲ್ಲೂ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಹೇಳೋದೇ ಬೇಡ. ಕಳೆದ ಬಾರಿಯ ಆರೆಂಜ್ ಕ್ಯಾಪ್ ವಿನ್ನರ್ ಕೊಹ್ಲಿ ಈ ಸಲವೂ ರನ್ ಕೊಳ್ಳೆ ಹೊಡಿಯೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಕೊಹ್ಲಿ ಜೊತೆ ರಜತ್ ಪಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ ತಂಡದಲ್ಲಿದ್ದು ಬ್ಯಾಟಿಂಗ್ ಬಲ ಸ್ಟ್ರಾಂಗ್ ಆಗಿ ಕಾಣ್ತಿದೆ.
7 ಜನರ ಹೆಗಲಿಗೆ ಆಲ್ ರೌಂಡರ್ ಪ್ರದರ್ಶನದ ಜವಾಬ್ದಾರಿ!
ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಬ್ಯಾಟಿಂಗ್ ನಲ್ಲಿ ಬಲ ತುಂಬೋದ್ರ ಜೊತೆಗೆ ಬೌಲಿಂಗ್ ನಲ್ಲೂ ಕಮಾಲ್ ಮಾಡುವಂತ 7 ಪ್ಲೇಯರ್ಸ್ ಇದ್ದಾರೆ. ಲಿಯಾಮ್ ಲಿವಿಂಗ್ ಸ್ಟೋನ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಾಕೋಬ್ ಬೆತೆಲ್, ರೊಮಾರಿಯೋ ಶೆಫರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಬಾಂಢಗೆ. ಸೋ ಇವ್ರಿಷ್ಟು ಪ್ಲೇಯರ್ಸ್ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ತಂಡಕ್ಕೆ ಆಸರೆಯಾಗಬಲ್ಲರು.
ಎದುರಾಳಿ ತಂಡವನ್ನು ಕಟ್ಟಿ ಹಾಕ್ತಾರಾ 9 ಬೌಲರ್ಸ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದ್ಲಿಂದಲೂ ಇರೋ ಮೇನ್ ಪ್ರಾಬ್ಲಂ ಅಂದ್ರೆ ಬೌಲಿಂಗ್ ಸಮಸ್ಯೆ. ಕಳೆದ ಬಾರಿಯೂ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡಿದ್ರು. ಸೋ ಈ ಸಲ ತಂಡಕ್ಕೆ ಮೇಜರ್ ಸರ್ಜರಿ ಆಗಿರೋದ್ರಿಂದ ಬೌಲಿಂಗ್ ಟೀಂ ಎದುರಾಳಿ ತಂಡಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ರಸಿಕ್ ದಾರ್, ಯಶ್ ದಯಾಳ್, ಸುಯಾಶ್ ಶರ್ಮಾ, ಲುಂಗಿ ಎನ್ಗಿಡಿ, ನುವಾನ್ ತುಷಾರ, ಅಭಿನಂದನ್ ಸಿಂಗ್ ಹಾಗೇ ಮೋಹಿತ್ ರಾತೀ ಬೌಲಿಂಗ್ನಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ.
ಕೊಹ್ಲಿ ಜೊತೆ ಇನ್ನಿಂಗ್ಸ್ ಯಾರು ಆರಂಭಿಸಬಹುದು?
ವಿರಾಟ್ ಆರಂಭಿಕರಾಗಿ ಕಣಕ್ಕಿಳಿಯುವುದು ಪಕ್ಕಾ. ದಶಕದಿಂದಲೂ ಆರ್ಸಿಬಿ ಪರ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಈ ಸಲವೂ ಅವರೇ ಇನ್ನಿಂಗ್ಸ್ ತೆರೆಯಲಿದ್ದಾರೆ. ಅವರೊಂದಿಗೆ ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇವರು ವಿಕೆಟ್ ಕೀಪರ್ ಜವಾಬ್ದಾರಿ ಕೂಡ ನಿಭಾಯಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಜತ್ ಪಾಟೀದಾರ್, ನಾಲ್ಕನೇ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅಥವಾ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಲಿಯಾಮ್ ವಿಲಿಂಗ್ಸ್ಟನ್, ಟಿಮ್ ಡೇವಿಡ್ ಫಿನಿಷರ್ಗಳಾಗಲಿದ್ದಾರೆ. ಕೃನಾಲ್ ಪಾಂಡ್ಯ ಸ್ಪಿನ್ ಆಲ್ರೌಂಡರ್ ಆಗಿದ್ದು, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್ ವೇಗಿಗಳಾಗಲಿದ್ದಾರೆ. ಸುಯಾಶ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು.
ವಿರಾಟ್ ಕೊಹ್ಲಿಯೇ 2025ರಲ್ಲಿ ಆರ್ ಸಿಬಿ ನಾಯಕ!
ಯೆಸ್.. ಹರಾಜು ಪ್ರಕ್ರಿಯೆ ಶುರುವಾಗೋಕೂ ಮುಂಚೆಯಿಂದ ಕಾಡ್ತಿರೋ ಪ್ರಶ್ನೆಯೇ ಕ್ಯಾಪ್ಟನ್ ಯಾರು.. ಸೋ ಹರಾಜಿಗೂ ಮುನ್ನ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜೋಸ್ ಬಟ್ಲರ್ ಹೀಗೆ ಒಂದಷ್ಟು ಪ್ಲೇಯರ್ಸ್ ಮೇಲೆ ಬಿಡ್ ಮಾಡಿ ಅವ್ರಿಗೆ ಕ್ಯಾಪ್ಟನ್ಸಿ ನೀಡ್ತಾರೆ ಅನ್ಕೊಂಡಿದ್ರು. ಇವರ್ಯಾರು ತಂಡ ಸೇರಿಲ್ಲ. ಸೋ ಈಗ ಇರೋರಲ್ಲೇ ಒಬ್ಬರಿಗೆ ಪಟ್ಟಾಭಿಷೇಕ ಮಾಡ್ಬೇಕಿದೆ. ಅದೂ ಕೂಡ ನಮ್ಮ ವಿರಾಟ್ ಕೊಹ್ಲಿಯೇ ಬೆಂಗಳೂರು ಸಾಮ್ರಾಜ್ಯದ ಕಿಂಗ್ ಅನ್ನೋ ಟಾಕ್ ಜೋರಾಗಿದೆ. ಅದಕ್ಕೆ ಕಾರಣವೂ ಇದೆ. ಕ್ಯಾಪ್ಟನ್ ಮೆಟಿರೀಯಲ್ ಆಗುವಂಥ ಆಟಗಾರರ ಖರೀದಿಗೆ ಫ್ರಾಂಚೈಸಿ ಮುಂದಾಗದಿರುವುದು ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗುವ ಮುನ್ಸೂಚನೆ ನೀಡಿದೆ. ಪ್ರಸ್ತುತ ಆರ್ಸಿಬಿ ತಂಡ ಸೇರಿರೋ ಆಟಗಾರರನ್ನ ಗಮನಿಸಿದರೂ ಕೊಹ್ಲಿಯೇ ನಾಯಕ ಅನ್ನೋದು ಕನ್ಫರ್ಮ್ ಆಗ್ತಿದೆ. 2013ರಿಂದ 2021ರವರೆಗೆ ಬೆಂಗಳೂರು ತಂಡವನ್ನ ಲೀಡ್ ಮಾಡಿದ್ದ ಕೊಹ್ಲಿ 2016ರಲ್ಲಿ ಫಿನಾಲೆಗೂ ಕಾಲಿಟ್ಟಿದ್ರು. ಬಟ್ ಕೊಂಚದರಲ್ಲೇ ಕಪ್ ಮಿಚ್ ಆಗಿತ್ತು. ಹೀಗಾಗಿ ಅವ್ರ ನಾಯಕತ್ವದಲ್ಲೇ ಈ ಸಲ ಕಪ್ ಗೆಲ್ಲೋಣ ಅನ್ನೋದು ಫ್ರಾಂಚೈಸಿಯ ಲೆಕ್ಕಾಚಾರ.
ಒಟ್ನಲ್ಲಿ ಐಪಿಎಲ್ ಹರಾಜು ಆರಂಭವಾದ ಮೊದಲ ದಿನ ಬೆಂಗಳೂರು ಫ್ರಾಂಚೈಸಿ ಮಹಾಎಡವಟ್ಟನ್ನೇ ಮಾಡಿಕೊಳ್ತಿದೆ ಅನ್ನಿಸಿದ್ರೂ ಕೂಡ ಫೈನಲ್ಲಾಗಿ ಟೀಂ ಫಾರ್ಮ್ ಆದ್ಮೇಲೆ ಓಕೆ ಎನ್ನುವಂತೆಯೇ ಇದೆ. ಬಟ್ ಕೆಎಲ್ ರಾಹುಲ್ಗೆ 10.75 ಕೋಟಿ ರೂಪಾಯಿ ತನಕ ಬಿಡ್ ಮಾಡಿ ಕೈ ಬಿಟ್ಟದ್ದು ಕನ್ನಡಿಗರಿಗೆ ನಿರಾಸೆ ಮೂಡಿಸಿದೆ. ಹಾಗೇ ಯಾರ್ಕರ್ ಸ್ಪೆಷಲಿಸ್ಟ್ ಮಿಚೆಲ್ ಸ್ಟಾರ್ಕ್, ಫಿನಿಷರ್ ಡೇವಿಡ್ ಮಿಲ್ಲರ್, ವಿಲ್ ಜಾಕ್ಸ್ ಸೇರಿ ಹಲವರು ತಾವು ಅಂದುಕೊಂಡ ದರಕ್ಕೆ ಸಿಕ್ಕರೂ ಖರೀದಿಸದೆ ಕೈಬಿಟ್ಟಿದ್ದು ಕೂಡ ಯಾಕೆ ಅನ್ನೋ ಪ್ರಶ್ನೆ ಕಾಡ್ತಿದೆ. ಬಟ್ ಈಗಂತೂ ಆಕ್ಷನ್ ಮುಗಿದಿದೆ. 22 ಆಟಗಾರರು ತಂಡವನ್ನೂ ಸೇರಿದ್ದಾರೆ. ಸೋ ಈಗ ಎಲ್ಲರ ಟಾರ್ಗೆಟ್ ಕಪ್ ಗೆಲ್ಲೋದಷ್ಟೇ ಆಗಿರಬೇಕು.