ವಿಜಯೇಂದ್ರಗೆ ಯತ್ನಾಳ್ ಸೆಡ್ಡು – ವಕ್ಫ್ ಹೋರಾಟದಲ್ಲಿ ಉರುಳುತ್ತಾ ಕುರ್ಚಿ?
BSY ಪುತ್ರನ ಪಟ್ಟಕ್ಕೆ ಬಂತು ಕುತ್ತು?
ವಕ್ಫ್ ವಿರುದ್ಧ ಹೋರಾಟ ರಾಜ್ಯದಲ್ಲಿ ಜೋರಾಗಿದೆ. ಬಿಜೆಪಿಯಲ್ಲಿ ಎರಡು ಬಣಗಳಾಗಿ ವಕ್ಫ್ ವಿರುದ್ದ ಹೋರಾಡುತ್ತಿದ್ದು, ಯತ್ನಾಳ್ ಟೀಂ ಅಖಾಡಕ್ಕಿಳಿದಿದೆ. ಈ ಹೋರಾಟ ವಿಜಯೇಂದ್ರ Vs ಯತ್ನಾಳ್ ಎನ್ನುವಂತಾಗಿದ್ದು, ಇವರಿವರ ನಡುವೆ ಬಿಗ್ ಫೈಟ್ ಶುರುವಾಗಿದೆ. ತನ್ನದೇ ಬಣದ ಮೂಲಕ ಕಾಂಗ್ರೆಸ್ ಜೊತೆ ವಿಜಯೇಂದ್ರಗೆ ಯತ್ನಾಳ್ ಟೀಂ ಟಾಂಗ್ ಕೊಡುತ್ತಿದ್ದು, ಬಿಜೆಪಿಯಲ್ಲಿ ಒಡಕು ಹೆಚ್ಚಾಗಿದೆ.. ಹಾಗಿದ್ರೆ ವಕ್ಫ್ ಹೋರಾಟದಲ್ಲಿ ಏನೆಲ್ಲಾ ಬೆಳವಣಿಗೆ ಆಗಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಸೇರಿದ ಪಾಂಡ್ಯ.. ರಹಾನೆ, ಮಯಾಂಕ್ UNSOLD – ಡೆಲ್ಲಿ ಪಾಲಾದ ಫಾಫ್ ಡುಪ್ಲೆಸಿಸ್
ವಕ್ಫ್ ವಿರುದ್ಧ ಬಿಜೆಪಿ ನಾಯಕರು ಸಮರ ಸಾರಿದ್ದು, ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ 3 ತಂಡಗಳನ್ನು ರಚನೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ. ಮತ್ತೊಂದೆಡೆ ರೆಬಲ್ಸ್ ನಾಯಕರ ತಂಡ ಹೋರಾಟ ಮಾಡುತ್ತಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಗಡಿ ಜಿಲ್ಲೆ ಬೀದರ್ನಿಂದ ಪ್ರತ್ಯೇಕ ಹೋರಾಟ ಆರಂಭಿಸಿದೆ. ಬಡವರ ಮನೆ ದೇವಸ್ಥಾನ ಎಲ್ಲದರಲ್ಲಿ ಮುಸ್ಲಿಂ ಜಿಲ್ಲಾಧಿಕಾರಿಗಳು ವಕ್ಫ್ ಅಂತ ಮಾಡಿದ್ದಾರೆ. ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಮುಸ್ಲಿಂ ಅಧಿಕಾರಿಗಳ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.
ಇಡೀ ರಾಜ್ಯದಲ್ಲಿ ತಂಡ ಮಾಡಿದ್ದೇವೆ, ಜನಜಾಗೃತಿ ಮಾಡುತ್ತಿದ್ದೇವೆ. ವಕ್ಫ್ ಬರೀ ತಿದ್ದುಪಡಿ ಅಲ್ಲ, ಇಡೀ ವಕ್ಫ್ ಬೋರ್ಡನ್ನೇ ಭಾರತದಿಂದ ತೆಗೆದುಹಾಕಬೇಕು. ಒಂದೇ ಒಂದು ಮನೆಗೆ ಕೈ ಹಾಕಿದರೆ ಪರಿಣಾಮ ಸರಿ ಇರೋದಿಲ್ಲವೆಂದು ವಕ್ಫ್ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಹಾಗಾಗಿ ಅವರು ಸುಮ್ಮನಿದ್ದಾರೆ. ಅನೇಕ ಇಲಾಖೆಗಳಿಗೆ ಅಧಿಕಾರಿಗಳಿಲ್ಲ, ಆದರೆ ವಕ್ಫ್ನಲ್ಲಿರುವ ಅಧಿಕಾರಿಗಳು ಸರ್ಕಾರಿ ಜಾಗ ಸೇರಿ, ಕಂಡ ಜಾಗವನ್ನೆಲ್ಲಾ ವಕ್ಫ್ ಆಸ್ತಿ ಎಂದು ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು..
BJPಗೆ ಮುಖಭಂಗ ಮಾಡಲು ಹೊರಟ್ರಾ ಯತ್ನಾಳ್?
ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ವಕ್ಫ್ ನೋಟಿಸ್ ನೀಡಲಾಗಿದೆಯಂದೆ ಗೃಹಸಚಿವರು ಗುಡುಗಿದ್ದಾರೆ. ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ವಿಚಾರದಲ್ಲಿ ಬಿಜೆಪಿಯವರ ಮುಖಭಂಗ ಮಾಡಲು ಹೋರಾಟಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವಧಿಯಲ್ಲಿ ಹೆಚ್ಚು ನೋಟಿಸ್ ಕೊಟ್ಟಿರುವುದು ಗೊತ್ತಾಗಿಯೇ ಬಿಜೆಪಿಯವರಿಗೆ ಮುಜುಗರ ಮಾಡಲು ಹೋರಾಟ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ರು. ಬಿಜೆಪಿ ಎರಡು ಟೀಂ ಆಗಿ ಹೋರಾಟ ಮಾಡುತ್ತಿರುವುದು ಹೈ ಕಮಾಂಡ್‌ಗೆ ದೊಡ್ಡ ತಲೆ ನೋವು ಆಗಿದೆ. ಅಲ್ಲದೇ ಉಪ ಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲನ್ನ ಗಮನಿಸಿರೋ ವರಿಷ್ಠರು.. ಯತ್ನಾಳ್ ಮತ್ತು ವಿಜಯೇಂದ್ರ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.