RCB ಸೇರಿದ ಪಾಂಡ್ಯ.. ರಹಾನೆ, ಮಯಾಂಕ್ UNSOLD – ಡೆಲ್ಲಿ ಪಾಲಾದ ಫಾಫ್ ಡುಪ್ಲೆಸಿಸ್

RCB ಸೇರಿದ ಪಾಂಡ್ಯ.. ರಹಾನೆ, ಮಯಾಂಕ್ UNSOLD – ಡೆಲ್ಲಿ ಪಾಲಾದ ಫಾಫ್ ಡುಪ್ಲೆಸಿಸ್

ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಲ್ ರಾಹುಲ್, ಜೋಸ್ ಬಟ್ಲರ್, ಮೊಹಮ್ಮದ್ ಶಮಿ, ಚಹಾಲ್ ಹೀಗೆ ಸ್ಟಾರ್ ಆಟಗಾರರನ್ನೇ ಆರ್​ಸಿಬಿ ಕೈಬಿಟ್ಟಿದೆ. ಕೈ ತುಂಬಾ ಕಾಸಿದ್ರೂ ಸ್ಟಾರ್ ಪ್ಲೇಯರ್​ಗಳನ್ನೇ ಕೈ ಬಿಟ್ಟಿರೋ ಆರ್​ಸಿಬಿ ಮೆಗಾ ಹರಾಜಿನ ಮೊದಲ ದಿನವೇ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. 30 ಕೋಟಿ ರೂಪಾಯಿ ಬ್ಯಾಲೆನ್ಸ್​ನೊಂದಿಗೆ 2ನೇ ದಿನದ ಹರಾಜಿಗೆ ಸಿದ್ಧವಾಗಿರೋ ಫ್ರಾಂಚೈಸಿ ಮಾಲೀಕರು ಇವತ್ತಾದ್ರೂ ಒಳ್ಳೊಳ್ಳೆ ಆಟಗಾರರನ್ನ ಸೆಲೆಕ್ಟ್ ಮಾಡ್ತಾರಾ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಅಷ್ಟಕ್ಕೂ ಫಸ್ಟ್ ಡೇ ಬೆಂಗಳೂರು ಟೀಂ ಸೇರಿದ್ದು ಯಾರ್ಯಾರು? ಎರಡನೇ ದಿನದ ಹರಾಜಿನಲ್ಲಿ ಯಾರೆಲ್ಲಾ ಜಾಯ್ನ್ ಆಗಿದ್ದಾರೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆಸಿಸ್ ನಲ್ಲಿ KING IS BACK  – 2024ರಲ್ಲಿ ಕೊಹ್ಲಿ ಫಸ್ಟ್ ಸೆಂಚುರಿ

ಐಪಿಎಲ್ ಹರಾಜಿಗೂ ಮುನ್ನ ಮೂವರು ಆಟಗಾರರನ್ನ ರಿಟೇನ್ ಮಾಡಿಕೊಂಡಿರುವ ಆರ್​ಸಿಬಿ, ಮೆಗಾ ಹರಾಜಿನಲ್ಲಿ ಮೊದಲ ದಿನ 6 ಆಟಗಾರರನ್ನ ಖರೀದಿ ಮಾಡಿತ್ತು. ಮಾರ್ಕ್ಯೂ ಪ್ಲೇಯರ್ ಲಿಸ್ಟ್​ನಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್​ ಮೇಲೆ ಬೆಂಗಳೂರು ಫಸ್ಟ್ ಬಿಡ್ಡಿಂಗ್ ನಡೀತು. 2 ಕೋಟಿ ಮೂಲಬೆಲೆ ಹೊಂದಿದ್ದ ಲಿವಿಂಗ್​ಸ್ಟೋನ್​ರನ್ನ ಖರೀದಿಸಲು ಮೊದಲು ಬಿಡ್ ಮಾಡಿತು. ಆರ್​ಸಿಬಿಗೆ ಸನ್​ರೈಸರ್ಸ್ ಸ್ವಲ್ಪ ಸಮಯ ಬಿಡ್ ಮಾಡಿ ಕೈಬಿಟ್ಟಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್, ಸಿಎಸ್​ಕೆ ತಂಡಗಳೊಂದಿಗೆ ಪೈಪೋಟಿ ನೀಡಿದ ಆರ್​ಸಿಬಿ 8.75 ಕೋಟಿಗೆ ಬಿಡ್ ಮಾಡಿ ಖರೀದಿ ಮಾಡಿದೆ. ಹಾಗೇ ಜೋಸ್ ಹೇಜಲ್​ವುಡ್​ಗಾಗಿ ಭಾರೀ ಪೈಪೋಟಿ ನಡೆಸಿ 12.50 ಕೋಟಿ ನೀಡಿ ತಂಡಕ್ಕೆ ಕರೆ ತಂದಿದೆ.  ಹಾಗೇ ಫಿಲ್ ಸಾಲ್ಟ್ ರನ್ನು 11.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಜಿತೇಶ್ ಶರ್ಮಾಗೆ 11 ಕೋಟಿ ಕೊಟ್ಟು ಜಾಯ್ನ್ ಮಾಡಿಸಿಕೊಂಡಿದೆ. ರಾಸಿಖ್‌ ದಾರ್‌ ಗೆ 6 ಕೋಟಿ ರೂಪಾಯಿ, ಸುಯಶ್ ಶರ್ಮಾ -2.60 ಕೋಟಿ ರೂಪಾಯಿ ನೀಡಿತ್ತು. ಫಸ್ಟ್ ಡೇ 6 ಆಟಗಾರರು ರಿಟೇನ್​ನ ಮೂವರು ಸೇರಿ ಟೋಟಲ್ 9 ಪ್ಲೇಯರ್ಸ್ ಆಗಿದ್ರು. ಇನ್ನುಳಿದ ಆಟಗಾರರನ್ನ ಕೊಂಡುಕೊಳ್ಳೋಕೆ ಸೆಕೆಂಡ್ ಡೇ ಬಿಡ್ ಮಾಡ್ತಿದೆ.

ಡೆಲ್ಲಿ ತಂಡದ ಪಾಲಾದ ಫಾಫ್ ಡುಪ್ಲೆಸಿಸ್!

ಕಳೆದ ಮೂರು ಸೀಸನ್​ಗಳಿಂದ ಆರ್ ಸಿಬಿ ತಂಡವನ್ನ ಲೀಡ್ ಮಾಡಿದ್ದ ಫಾಫ್ ಡುಪ್ಲೆಸಿಸ್ ಈ ಸಲ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಮೂಲ ಬೆಲೆ 2 ಕೋಟಿ ರೂಪಾಯಿ ಇತ್ತು. ಲಾಸ್ಟ್ ಮೂಮೆಂಟ್ ವರೆಗೆ ಅನ್ ಸೋಲ್ಡ್ ಆಗುವಂತೆ ಕಂಡಿದ್ದ ಫಾಫ್ ರನ್ನ ಕೊನೆಗೂ ಡೆಲ್ಲಿ ಮೂಲಬೆಲೆಗೆ ಖರೀದಿ ಮಾಡಿದೆ.

ಕೃನಾಲ್ ಪಾಂಡ್ಯಗೆ 5.75 ಕೋಟಿ ರೂಪಾಯಿ ನೀಡಿದ ಆರ್ ಸಿಬಿ!

ಅಂತೂ ಇಂತೂ ಇವತ್ತಿನ ಬಿಡ್ಡಿಂಗ್ ನಲ್ಲಿ ಬೌಲರ್ ಖರೀದಿಗೆ ಆರ್ ಸಿಬಿ ಮುಂದಾಯ್ತು. ಕೃನಾಲ್ ಪಾಂಡ್ಯ 2 ಕೋಟಿ ಮೂಲ ಬೆಲೆ ಹೊಂದಿದ್ರು. ಅದ್ರಂತೆ ರಾಜಸ್ಥಾನ ರಾಯಲ್ಸ್ ಮತ್ತು ಬೆಂಗಳೂರು ನಡುವೆ ಪೈಪೋಟಿ ನಡೆದು ಕೊನೆಗೆ 5.75 ಕೋಟಿ ರೂಪಾಯಿಗೆ ಬೆಂಗಳೂರು ತಂಡ ಪಾಂಡ್ಯರನ್ನ ಖರೀದಿ ಮಾಡಿತು. ಇನ್ನು ಇವತ್ತಿನ ಬಿಡ್ಡಿಂಗ್ ನಲ್ಲಿ ಸಾಕಷ್ಟು ಆಟಗಾರರು ಅನ್ ಸೋಲ್ಡ್ ಆಗಿದ್ದಾರೆ. ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್ 2, ಅಜಿಂಕ್ಯ ರಹಾನೆ, ಮಯಾಂಕ್ ಅಗರ್ ವಾಲ್, ಶಾರ್ದೂಲ್ ಠಾಕೂರ್ ರನ್ನ ಯಾರೂ ಖರೀದಿ ಮಾಡ್ಲಿಲ್ಲ. ರೊವನ್ ಪೊವೆಲ್ ರನ್ನ 1.50 ಕೋಟಿ ಮೂಲಬೆಲೆಗೆ ಕೆಕೆಆರ್  ಸೇರಿಸಿಕೊಳ್ತು.  ವಾಷಿಂಗ್ಟನ್ ಸುಂದರ್ ಗೆ  3.20 ಕೋಟಿ ಕೋಡಿ ನೀಡಿ ಗುಜರಾತ್ ಟೈಟನ್ಸ್ ಖರೀದಿ ಮಾಡಿದ್ರೆ ಸ್ಯಾಮ್ ಕರ್ರನ್ ಗೆ 2.40 ಕೋಟಿ ನೀಡಿ ಸಿಎಸ್ ಕೆ ತನ್ನ ತೆಕ್ಕೆಗೆ ಹಾಕಿಕೊಳ್ತು. ಹೀಗೆ ಬಿಡ್ಡಿಂಗ್ ಅಖಾಡದಲ್ಲಿ ಇವತ್ತು ಉಳಿದ ಪ್ಲೇಯರ್ಸ್ ಮೇಲೆ ಹರಾಜು ನಡೀತಿದ್ರು ಕೂಡ ನಿನ್ನೆಯಷ್ಟು ಕಿಕ್ ಕೊಡ್ತಿಲ್ಲ.

Shwetha M

Leave a Reply

Your email address will not be published. Required fields are marked *