ಫ್ಯಾನ್ಸ್ ಹಾರ್ಟ್‌ ಗೆ RCB ಕೊಳ್ಳಿ! – KL ಖರೀದಿಸದ ದುಡ್ಡೇಕೆ?
RCB ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು

ಫ್ಯಾನ್ಸ್ ಹಾರ್ಟ್‌ ಗೆ RCB ಕೊಳ್ಳಿ! – KL ಖರೀದಿಸದ ದುಡ್ಡೇಕೆ?RCB ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು

ಆರ್‌ ಸಿಬಿ.. ಆರ್ ಸಿಬಿ.. ಈ ಸಲ ಕಪ್ ನಮ್ದೆ ಅಂತಾ ಹೇಳಿದ್ದೇ ಬಂತು.. ಪ್ರತಿವರ್ಷ ಇದೇ ಹಾಡು.. ನಮ್ಮ ಟೀಂ ನಮ್ಮ ಆರ್ ಸಿಬಿ ಅಂತಾ ಅಭಿಮಾನಿಗಳು ಅಭಿಮಾನಿ ತೋರಿಸಿದ್ದೇ ಬಂತು.. ಕನ್ನಡಿಗರ ಟೀಂ ಅಂತಾ ಹೇಳಿದ್ದೇ ಬಂತು.. ಆದ್ರೆ ಆರ್ ಸಿಬಿ ಫ್ರಾಂಚೈಸಿಗೆ ಕನ್ನಡಿಗರ ಮೇಲೆ ಕನ್ನಡ ಆಟಗಾರರ ಮೇಲೆ, ಫ್ಯಾನ್ಸ್ಗಳ ಅಭಿಮಾನಿದ ಮೇಲೆ ಚೂರೇ ಚೂರು  ಮರ್ಯಾದೆ ಇಲ್ಲ.. ಈ ಬಾರಿ ನಮ್ಮ ಕನ್ನಡಿಗ ಆರ್ ಸಿಬಿ ಸೇರ್ತಾನೆ.. ಕಪ್ ಗೆದ್ದೆ ಗೆಲ್ಲುತ್ತಿವಿ.. 25 ಕೋಟಿ ಆದ್ರೂ ಆರ್ ಸಿಬಿ ಪ್ರಾಂಚೈಸಿ ಕೆಎಲ್ ರಾಹುಲ್ ನ ಖರೀದಿ ಮಾಡುತ್ತೆ ಅಂತ ಅಂದ್ಕೊಂಡಿದ್ವಿ.. ಆದ್ರೆ ಆರ್ ಸಿಬಿ ಪ್ರಾಂಚೈಸಿ ತಲೆಯಲ್ಲಿ ಮೆದಳು ಇದ್ಯಾ ಅಥವ ಸಗಣಿ ಇದ್ಯಾ ಅನ್ನೋದೇ ಗೊತ್ತಿಲ್ಲ.. ಒಳ್ಳೆಳ್ಳೆಯ ದೇಶಿ ಆಟಗಾರರನ್ನ ಬಿಡ್ ಮಾಡೋಕೆ ಹೋಗುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದ್ದು, ಸೌದಿ ಮರುಭೂಮಿಯಲ್ಲಿ ಆರ್ ಸಿಬಿ ಅಭಿಮಾನಿಗಳ ಆಸೆ ಮಣ್ಣಾಗಿ ಹೋಗಿದೆ.. ಬಾಯಿಗೆ ಬಂದ ಹಾಗೇ ಬೈತಾ ಇದ್ದಾರೆ.. ನಿಜಕ್ಕೂ ಆರ್ ಸಿಬಿಪ್ರಾಂಚೈಸಿಗೆ ತಲೆ ಕೆಟ್ಟು ಹೋಗಿದೆ ಅನ್ಸುತ್ತೆ.

ಇದನ್ನೂ ಓದಿ:ಕಾಂತಾರ ಕಲಾವಿದರು ತೆರಳುತ್ತಿದ್ದ ವಾಹನ ಪಲ್ಟಿ –  6 ಮಂದಿಗೆ ಗಂಭೀರ

ಕನ್ನಡಿಗ ಕೆಎಲ್ ರಾಹುಲ್ ಖರೀದಿಸಲು ಆರ್ ಸಿಬಿಗೆ ಸಾಧ್ಯವಾಗಿಲ್ಲ. ಕೆಎಲ್ ರಾಹುಲ್ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಆರ್ಸಿಬಿ ಫ್ರಾಂಚೈಸಿ ನಡೆಗೆ ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ.   ಉತ್ತಮ ಆಟಗಾರರನ್ನು ಆರ್ ಸಿಬಿ ಖರೀದಿಸುತ್ತಿಲ್ಲ ಅನ್ನೋ ಹಲವು ವರ್ಷಗಳ ಆರೋಪ ಮತ್ತೆ ಪ್ರೂ ಆಗಿದೆ.  ಪ್ರಮುಖ ಆಟಗಾರರ ಬಿಡ್ಡಿಂಗ್ ವೇಳೆ ಲಾಸ್ಟ್ ಬೆಂಚ್ಲ್ಲಿ ಕುಳಿತು ಬೇಕಾ ಬೇಡ್ವಾ ಅನ್ನೋ ರೀತಿಯಲ್ಲಿ ಬಿಡ್ಡಿಂಗ್ ಬೋರ್ಡ್ ಎತ್ತಿ ಹಿಡಿಯುವ ಪ್ರಯತ್ನ ಮಾಡಿತ್ತು. ಅಭಿಮಾನಿಗಳ ಮುಂದೆ ತಾವು ಬಿಡ್ಡಿಂಗ್ನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ಆರ್ ಸಿಬಿ ಪ್ರಾಂಚೈಸಿ ಡವ್ ಮಾಡುತಿತ್ತು ಹೊರತಾಗಿ ಖರೀದಿ ಮಾಡೋಕೆ ಮನಸಿಲ್ಲ ಅನ್ನೋದು ಎದ್ದು ಕಾಣುತಿತ್ತು..

ಕೆಎಲ್ ರಾಹುಲ್ ಈ ಬಾರಿ ಮತ್ತೆ ಆರ್ ಸಿಬಿ ತಂಡ ಸೇರಿಕೊಳ್ಳ ಬಹುದು ಅಂತಾ ಅಭಿಮಾನಿಗಳು ಖುಷಿ ಪಟ್ಟಿದ್ರು.. ರಾಹುಲ್ ಕೂಡ ಪರೋಕ್ಷವಾಗಿ ಆರ್‌ಸಿಬಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಆರ್ ಸಿಬಿ ಮ್ಯಾನೇಜ್ಮೆಂಟ್ ಮಾತ್ರ ಬೇರೆ ಪ್ಲಾನ್‌ನಲ್ಲಿದೆ. ಇದಕ್ಕೂ ಮೊದಲು ಆರ್‌ಸಿಬಿಯ ಭಾಗವಾಗಿದ್ದ ವೇಗಿ ಮೊಹಮ್ಮದ್ ಸಿರಾಜ್ ಖರೀದಿಗೆ ಆರ್‌ಸಿಬಿ ಹಿಂದೇಟು ಹಾಕಿತ್ತು. ಹೊಂಚು ಹಾಕಿದ್ದ ಗುಜರಾತ್ ಟೈಟಾನ್ಸ್ 12.25 ಕೋಟಿ ರೂಪಾಯಿ ನೀಡಿ ಸಿರಾಜ್ ಖರೀದಿಸಿತು.

ಹರಾಜಿನಲ್ಲಿ ಸಿರಾಜ್ ಹಾಗೂ ಯಜುವೇಂದ್ರ ಚಹಾಲ್ ಖರೀದಿ ಮಾಡುವ ಭರವಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಆದರೆ ಚಹಾಲ್, ಸಿರಾಜ್, ಕೆಎಲ್ ರಾಹುಲ್ ಯಾರನ್ನೂ ಆರ್‌ಸಿಬಿ ಖರೀದಿಸಿಲ್ಲ. ಈ ರೀತಿ ಆಟಗಾರರನ್ನು ಕೈಬಿಟ್ಟರೆ ಈ ಬಾರಿಯೂ ಆರ್‌ಸಿಬಿ ಕಪ್ ಗೆಲ್ಲಲ್ಲ  ಚಿಪ್ ಗತಿ ಅನ್ನೋ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. . ಕರ್ನಾಟಕದ ಸ್ಟಾರ್‌ ಆಟಗಾರನನ್ನು ಆರ್‌ಸಿಬಿ ಕರೆದು ತರುವಂತೆ ಅಭಿಮಾನಿಗಳು ಹ್ಯಾಷ್‌ ಟ್ಯಾಗ್‌ ಅಭಿಯಾನವನ್ನೇ ಆರಂಭಿಸಿದ್ದರು. ಆದರೆ ಆರ್‌ಸಿಬಿ ಇವರ ಅಭಿಮಾನಕ್ಕೆ ಮಣೆ ಹಾಕದೆ, ತನ್ನ ಲೆಕ್ಕಾಚಾರದಲ್ಲಿ ಬಿಡ್‌ ನಡೆಸಿದೆ.

ಫಾಫ್‌ ಡುಪ್ಲೇಸಿಸ್‌ ಬದಲಿಗೆ ಒಬ್ಳ ಒಳ್ಳೆಯ ನಾಯಕನ ಹುಡುಕಾಟದಲ್ಲಿರುವ ಆರ್‌ಸಿಬಿ ಕಂಡಿತವಾಗಿ ಕೆಎಲ್‌ ರಾಹುಲ್‌ ಅವರಿಗೆ ಬಿಡ್‌ ಮಾಡುತ್ತದೆ ಎಂದೇ ಎಲ್ಲರೂ ಅನ್ಕೊಂಡಿದ್ಕರ. ಆದರೆ ಎಲ್ಲವೂ ಠುಸ್ ಪಟಾಕಿಯಂತೆ ಆಗಿದೆ. ಹರಾಜಿನಲ್ಲಿ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್‌ ಇಬ್ಬರೂ ಎಲ್ಲರ ಚಿತ್ತ ಕದ್ದಿದ್ದರು. ರಿಷಭ್‌ ಪಂತ್‌ ಅವರನ್ನು ಆರ್‌ಸಿಬಿ ಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆರ್‌ಸಿಬಿ ಇವರನ್ನು ಕೊಳ್ಳುವ ಆಸೆಯನ್ನು ಮಧ್ಯದಲ್ಲೇ ಕೈ ಬಿಟ್ಟಿತು.  ನಾಯಕ ಹಾಗೂ ವಿಕೆಟ್‌ ಕೀಪರ್‌ ಹುಡುಕಾಟದಲ್ಲಿದ್ದ ಆರ್‌ಸಿಬಿ ರಣ ರಂಗದಿಂದ ಹಿಂದೆ ಹೆಜ್ಜೆ ಇಟ್ಟಿತ್ತು.. ಮೊಸ್ಟಿ ಕೆಎಲ್ ರಾಹುಲ್ ಖರೀದಿ ಮಾಡೋಕಾಗಿ ಪಂತ್ ಕೈ ಬಿಟ್ಟಿದೆ ಆರ್ಸಿಬಿ ಪ್ರಾಂಚೈಸಿ ಅಂತ ಅನ್ಕೊಂಡಿದ್ರು. ಒಬ್ಬ ಪ್ಲೇಯರ್‌ ಹೋದರೆ ಏನ್‌ ಅಂತೆ, ಕರ್ನಾಟಕದ ಸೂಪರ್‌ ಸ್ಟಾರ್ ಬ್ಯಾಟರ್‌ ಕೆಎಲ್‌ ರಾಹುಲ್ ಅವರನ್ನು ಕೊಳ್ಳಲು ಆರ್‌ಸಿಬಿ ಹಣವನ್ನು ಹೂಡಬಹುದು ಎಂದು ಅಭಿಮಾನಿಗಳು ಅನ್ಕೊಂಡಿದ್ರು . ಆರ್‌ಸಿಬಿ ಆರಂಭದಲ್ಲಿ ಬಿಡ್‌ ಅಂಗಳ ಪ್ರವೇಶಿಸಿ ಎಲ್ಲರ ಚಿತ್ತ ಕದ್ದಿತು. ಈ ವೇಳೆ ಅಭಿಮಾನಿಗಳು ಸಹ ರಾಹುಲ್‌ ಆರ್‌ಸಿಬಿಗೆ ಬರಲಿ ಎಂಬ ಹರಕೆಯನ್ನು ಕಟ್ಟಿದ್ದರು. ಆದರೆ ಇವರ ಹರಕೆಗೆ ಯಾವುದೇ ಬೆಲೆ ಇಲ್ಲ ಎಂದು ಆರ್‌ಸಿಬಿ ಮ್ಯಾನೇಜ್ಮೆಂಟ್‌ ತಿಳಿಸಿದೆ. ಈ ಮೂಲಕ ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅಲ್ಲಿಗೆ ಈ ಆರ್‌ಸಿಬಿ ಪ್ರಾಂಚೈಸಿಗೆ ಕನ್ನಡಿಗರ ಆಟಗಾರರ ಮೇಲೆ ಬೆಲೆ ಇಲ್ಲಾ ಜೊತೆ ಆರ್‌ಸಿಬಿಯನ್ನ ಹೊತ್ತು ತಿರುಗುತ್ತಿರುವ ಫ್ಯಾನ್ಸ್‌ಗಳ ಅಭಿಮಾನಕ್ಕೂ ಬೆಲೆ ಇಲ್ಲ ಅನ್ನೋದು. ಆರ್‌ಸಿಬಿಯನ್ನ ಅಭಿಮಾನಿಗಳು ಹೃದಯದಲ್ಲಿಟ್ಟು ಪೂಜೆಸಿದ್ದೇ ಈ ಪ್ರಾಂಚೈಸಿ ಸೊಕ್ಕಿಗೆ ಕಾರಣ.. ನಮ್ಮ ಟೀಂ, ಕನ್ನಡದ ಟೀಂ ಅಂತಾ ಆರ್‌ಸಿಬಿಗೆ ಅಭಿಮಾನ ತೋರಿಸಿದ್ದಕ್ಕೆ ಸರಿಯಾಗೇ ಚಿಪ್ಪು ಕೊಟ್ಟಿದ್ದಾರೆ. ಕನ್ನಡಿಗರನ್ನ ಖರೀಸಿದ ದುಡ್ಡು ಆರ್‌ಸಿಬಿ ಬಳಿ ಇದ್ದರೆಷ್ಟು ಬಿಟ್ಟರೆಷ್ಟು.. ಫ್ಯಾರಿನ್ ಪ್ಲೆಯರ್‌ಗಳ ವ್ಯಾಮೋಹದಲ್ಲಿ ಮುಳುಗಿರೋ ಆರ್‌ಸಿಬಿ  ಪ್ರಾಂಚೈಸಿಗೆ ಕನ್ನಡಿಗರೇ ತಕ್ಕ ಪಾಠ ಕಲಿಸಬೇಕು.

Shwetha M

Leave a Reply

Your email address will not be published. Required fields are marked *