ಪಂತ್ಗೆ ಪಂಥ ಕಟ್ಟಿದ್ದೇಕೆ LSG? – KLಗೆ ಉರಿಸಿದ್ರಾ ಗೋಯೆಂಕಾ?
ಶ್ರೇಯಸ್ಸ್ ಗೆ 26.7 Cr ಬೇಕಿತ್ತಾ?
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹಳೇ ದಾಖಲೆ ಪುಡಿ ಪುಡಿಯಾಗಿದ್ದು. ಸ್ಟಾರ್ ಪ್ಲೆಯರ್ ಗಳು ದಾಖಲೆ ಮಟ್ಟದಲ್ಲಿ ಬಿಡ್ ಆಗಿದ್ದಾರೆ.. ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು ಅನ್ನುವಾಗಲೇ ಈ ದಾಖಲೆಯನ್ನು ರಿಷಬ್ ಪಂತ್ ಪುಡಿ ಮಾಡಿದ್ದಾರೆ. ಹಾಗಿದ್ರೆ ಈ ಇಬ್ಬರು ಪ್ಲೆಯರ್ ಎಷ್ಟು ಕೋಟಿಗೆ ಬಿಡ್ ಆಗಿದ್ದಾರೆ..? ತಂಡಗಳು ಇವರನ್ನ ಕಾಲು ಕೋಟಿ ಕೊಟ್ಟು ಖರೀದಿ ಮಾಡಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಗೆ ಗಿಲ್ಲಿನಟ – ಕಾಮಿಡಿ, ಡೈಲಾಗ್ಗೆ ಶರಣ್ ಶರಣು
ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಖರೀದಿಗೆ ತಂಡಗಳು ಮುಗಿ ಬಿದ್ದವು. 20.75 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಬಿಡ್ ಮುಗಿಸಿತು. ಈ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್ಟಿಎಂ ಕಾರ್ಡ್ ಬಳಸಿತು. ಆದರೆ, ಲಕ್ನೋ ತಂಡ 27 ಕೋಟಿ ರೂ ಬಿಡ್ ಕರೆದು ಪಂತ್ ತಮಗೆ ಬೇಕೆಂದಿತು. ಅಷ್ಟರಲ್ಲಿ ಡೆಲ್ಲಿ ಬಿಡ್ನಿಂದ ಹಿಂದೆ ಸರಿಯಿತು.
ಐಪಿಎಲ್ 2025ರ ಆವೃತ್ತಿಯ ಮೆಗಾ ಹರಾಜಿನಲ್ಲಿ, ರಿಷಬ್ ಪಂತ್ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಹರಾಜಿಗೂ ಮುನ್ನವೇ ದೊಡ್ಡ ಮೊತ್ತ ಪಡೆಯುವ ನಿರೀಕ್ಷೆ ಮೂಡಿಸಿದ್ದ ವಿಕೆಟ್ ಕೀಪರ್, ಬರೋಬ್ಬರಿ 27 ಕೋಟಿ ರೂ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. ಮೂಲ ಬೆಲೆ 2 ಕೋಟಿ ರೂಪಾಯಿಗೆ ರಿಷಬ್ ಪಂತ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪೈಪೋಟಿಗಿಳಿದವು. ಕ್ಷಣ ಮಾತ್ರದಲ್ಲೇ ಬಿಡ್ 10 ಕೋಟಿಗೇರಿತು. ಈ ವೇಳೆ ಆರ್ಸಿಬಿ ಬಿಡ್ಡಿಂಗ್ ತುಸು ನಿಧಾನಗೊಳಿಸಿತು. ಈ ವೇಳೆ ಸನ್ರೈಸರ್ಸ್ ಹೈದರಾಬಾದ್ ಬಿಡ್ ವಾರ್ಗೆ ಇಳಿಯಿತು. ಮಾಲಕಿ ಕಾವ್ಯಾ ಮಾರನ್ ತಾನು ಪಂತ್ ಬಿಟ್ಟುಕೊಡಲ್ಲ ಎಂಬಂತೆ ಬಿಡ್ಡಿಂಗ್ ವಾರ್ಗೆ ಧುಮುಕಿದರು. ಬರೋಬ್ಬರಿ 20 ಕೋಟಿ ಬಿಡ್ ಮಾಡಿದರು.
ಒಂದು ಹಂತದಲ್ಲಿ 20.75 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಬಿಡ್ ಮುಗಿಸಿತು. ಈ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್ಟಿಎಂ ಕಾರ್ಡ್ ಬಳಸಿ ಪಂತ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಯ್ತು. ಆದರೆ, ಲಕ್ನೋ ತಂಡ 27 ಕೋಟಿ ರೂ ಬಿಡ್ ಕರೆದು ಪಂತ್ ತಮಗೆ ಬೇಕೆಂದಿತು.
ಐಪಿಎಲ್ನಲ್ಲಿ ಪಂತ್ 1 ಶತಕ ಮತ್ತು 18 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಪರ 446 ರನ್ ಗಳಿಸಿದ್ದಾರೆ. ಇದರಲ್ಲಿ 88 ರನ್ ಗರಿಷ್ಠ ಮೊತ್ತ. 155.40ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಅವರು 3 ಅರ್ಧಶತಕ ಸಿಡಿಸಿದ್ದಾರೆ. ಹೀಗಾಗಿ ಫಾರ್ಮ್ನಲ್ಲಿರುವ ಪಂತ್ನ್ನ ಕ್ಯಾಪ್ಟನ್ ಮಾಡೋಕೆ ಎಲ್ಎಸ್ಜಿ 27 ಕೋಟಿಗೆ ಬಿಡ್ ಮಾಡಿಕೊಂಡಿದೆ.. ಆದ್ರೆ ಆರ್ಸಿಬಿ ಕೈಯಲ್ಲಿ ಹೆಚ್ಚು ದುಡ್ಡಿಲ್ಲ ಅನ್ನೋ ಕಾರಣಕ್ಕೆ ಬಿಡ್ನಿಂದ ಹಿಂದೆ ಸರಿದಿದೆ. 2016ರಲ್ಲಿ 1.9 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಪಂತ್, 2018ರ ವೇಳೆಗೆ ತಮ್ಮ ಸಂಭಾವನೆಯನ್ನು 8 ಕೋಟಿಗೆ ಏರಿಸಿಕೊಂಡರು. 2021ರ ವೇಳೆಗೆ ಇದು 15 ಕೋಟಿಗೆ ಏರಿಕೆಯಾಯ್ತು. ಮುಂದಿನ ಆವೃತ್ತಿಯಲ್ಲಿ 16 ಕೋಟಿಗೆ ಏರಿತು. ಕಳೆದ ಆವೃತ್ತಿಯಲ್ಲೂ ಪಂತ್ 16 ಕೋಟಿ ರೂಪಾಯಿಗೆ ಡೆಲ್ಲಿ ಪರ ಆಡಿದ್ದರು. ಇದೀಗ ಈ ಬಾರಿ ಬೃಹತ್ ಮೊತ್ತಕ್ಕೆ ಬಿಕರಿಯಾಗಿದ್ದಾರೆ.
ಶ್ರೇಯಸ್ ಅಯ್ಯರ್ 26.75 ಕೋಟಿಗೆ ಸೇಲ್
ಟೀಂ ಇಂಡಿಯಾದ ಆಟಗಾರ ಶ್ರೇಯಸ್ ಅಯ್ಯರ್ ಅವರ ಅದೃಷ್ಟ ಬದಲಾಗಿದೆ. ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಬರೋಬ್ಬರಿ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಈ ಮೂಲಕ ಭಾರತೀಯ ಆಟಗಾರನೊಬ್ಬ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ 2ನೇ ಆಟಗಾರ ಎನಿಸಿದ್ದಾರೆ. 2022ರ ಐಪಿಎಲ್ನಲ್ಲಿ 12.50 ಕೋಟಿಗೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದ ಅಯ್ಯರ್, 2023ರಲ್ಲಿ ಗಾಯದ ಕಾರಣ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಆದರೆ 2024ರ ಐಪಿಎಲ್ಗೆ ಮರಳಿದ ಶ್ರೇಯಸ್ ಕೆಕೆಆರ್ ತಂಡವನ್ನು ಗೌತಮ್ ಗಂಭೀರ್ ಬಳಿಕ ಮೂರನೇ ಬಾರಿಗೆ ಚಾಂಪಿಯನ್ ಮಾಡಿದರು. ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. 2019ರಲ್ಲಿ ಆ ತಂಡವನ್ನು ಫೈನಲ್ಗೇರಿಸುವಲ್ಲಿ ಯಶಸ್ವಿಯಾಗಿದ್ದರು. ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಡೆಲ್ಲಿ ಕ್ಯಾಪಿಟಲ್ಸ್ 26.50 ಕೋಟಿಯವರಿಗೆ ಬಿಡ್ ಮಾಡಿತು. ಆದರೆ ಅಂತಿಮವಾಗಿ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾದರು ಅಯ್ಯರ್ ಅವರನ್ನು ಖರೀದಿಸಲು ಆರಂಭದಿಂದಲೂ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯಿತು. ಈ ಎರಡು ಫ್ರಾಂಚೈಸಿಗಳನ್ನು ಬಿಟ್ಟು ಬೇರೆ ಫ್ರಾಂಚೈಸಿಗಳಿಗೆ ಅವಕಾಶವೆ ಸಿಗಲಿಲ್ಲ. ಅಂತಿಮವಾಗಿ ಶ್ರೇಯಸ್, ಬರೋಬ್ಬರಿ 26.75 ಕೋಟಿ ರೂ.ಗೆ ಪಂಜಾಬ್ ಪಾಲಾದರು. ಶ್ರೇಯಸ್ ಅಯ್ಯರ್ ಇದುವರೆಗೆ ಐಪಿಎಲ್ನಲ್ಲಿ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಅಯ್ಯರ್ ತಮ್ಮ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ ಮಾಡುವುದರ ಜೊತೆಗೆ, ದೆಹಲಿ ತಂಡವನ್ನು ಒಮ್ಮೆ ಫೈನಲ್ಗೆ ಕೊಂಡೊಯ್ದಿದ್ದಾರೆ. ಅಂದರೆ ಒತ್ತಡದ ನಡುವೆಯೂ ತಂಡವನ್ನು ಹೇಗೆ ನಡೆಸಬೇಕೆಂಬ ಕಲೆ ಅಯ್ಯರ್ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ 26 ಕೋಟಿ ಕೊಟ್ಟು ಪಂಜಾಬ್ ಶ್ರೇಯಸ್ನ್ನ ಖರೀದಿ ಮಾಡಿದೆ. ಶ್ರೇಯಸ್ ಅಯ್ಯರ್ ಐಪಿಎಲ್ನಲ್ಲಿ ಇದುವರೆಗೆ ಒಟ್ಟು 115 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 32.24ರ ಸರಾಸರಿಯಲ್ಲಿ 3127 ರನ್ ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳು ಸೇರಿವೆ. ಈ ಬಾರಿಯ ಐಪಿಎಲ್ನಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಲಕ್ ತಿರುಗಿದ್ದಂತು ಸತ್ಯ.