ರೋಹಿತ್ ಶರ್ಮಾ IPL ಕುಬೇರ – ಧೋನಿ, ಕೊಹ್ಲಿ, ಎಬಿಡಿ ಸಂಪಾದಿಸಿದ್ದೆಷ್ಟು?
17 ಸೀಸನ್.. ಯಾರ ಅದೃಷ್ಟ ಚೇಂಜ್?

ರೋಹಿತ್ ಶರ್ಮಾ IPL ಕುಬೇರ – ಧೋನಿ, ಕೊಹ್ಲಿ, ಎಬಿಡಿ ಸಂಪಾದಿಸಿದ್ದೆಷ್ಟು?17 ಸೀಸನ್.. ಯಾರ ಅದೃಷ್ಟ ಚೇಂಜ್?

ಐಪಿಎಲ್ ಆಕ್ಷನ್​ಗೆ ಕೌಂಟ್​ ಡೌನ್ ಶುರುವಾಗಿದೆ. ಈಗಾಗ್ಲೇ ಫ್ರಾಂಚೈಸಿಗಳು ಪ್ಲೇಯಿಂಗ್ 11 ಸ್ಲಾಟ್​ಗಳಿಗೆ ತಕ್ಕಂತೆ ಯಾವ ಪ್ಲೇಯರ್ಸ್ ಮೇಲೆ ಬಿಡ್ ಮಾಡ್ಬೇಕು ಅಂತಾ ಕ್ಯಾಲ್ಕುಲೇಟ್ ಮಾಡಿಕೊಳ್ತಿವೆ. ಈಗಾಗ್ಲೇ 10 ಫ್ರಾಂಚೈಸಿಗಳು ಒಂದಷ್ಟು ಆಟಗಾರರನ್ನ ರಿಟೇನ್ ಮಾಡಿಕೊಂಡು ಉಳಿದವ್ರನ್ನ ಮೆಗಾ ಹರಾಜಿಗೆ ಬಿಟ್ಟಿದ್ದಾರೆ. ಈ ಸಲವಂತೂ ಆಕ್ಷನ್​ಗೂ ಮುಂಚೆಯೇ ಸ್ಟಾರ್ ಆಟಗಾರರಿಗೆ ಭರ್ಜರಿ ಸಂಭಾವನೆಯನ್ನೇ ನೀಡಲಾಗಿದೆ. ಐಪಿಎಲ್ ಅಂದ್ರೆ ದೇಶ, ವಿದೇಶಗಳ ಆಟಗಾರರು ಯಾಕೆ ಮುಗಿಬೀಳ್ತಾರೆ ಅನ್ನೋದಕ್ಕ ಕಾರಣ ಹಣದ ಹೊಳೆ. ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಅಷ್ಟಕ್ಕೂ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರು ಯಾರು? ಕಿಂಗ್ ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ.? ಐಪಿಎಲ್​ನಿಂದ ಯಾರೆಲ್ಲಾ ಜೀವನ ಚೇಂಜ್ ಆಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KL ರಾಹುಲ್ ಗೆ ಎಷ್ಟು ಅನ್ಯಾಯ? – ದುರಾದೃಷ್ಟನೋ Or ಮೋಸದಾಟನೋ?

2025ರ ಐಪಿಎಲ್ ಹಿಂದೆಂದಿಗಿಂತಲೂ ಭರ್ಜರಿಯಾಗಿ ಸಿದ್ಧವಾಗ್ತಿದೆ. ಸೂಪರ್ ಸ್ಟಾರ್ ಪ್ಲೇಯರ್​​ಗಳೇ ಆಕ್ಷನ್​ಗೆ ಎಂಟ್ರಿ ಕೊಡ್ತಿರೋದ್ರಿಂದ ಸಂಭಾವನೆಯಲ್ಲಿ ಚರಿತ್ರೆಯೇ ಸೃಷ್ಟಿಯಾಗೋದಂತೂ ಪಕ್ಕಾ. ಅದ್ರಲ್ಲೂ ಬೆಂಗಳೂರು, ದೆಹಲಿ, ಪಂಜಾಬ್, ಕೊಲ್ಕತ್ತಾ ಹಾಗೇ ಲಕ್ನೋ ತಂಡಗಳು ಕ್ಯಾಪ್ಟನ್ ಹುಡುಕಾಟದಲ್ಲಿವೆ. ಈ ಐದೂ ಫ್ರಾಂಚೈಸಿಗಳು ದಿಗ್ಗಜ ಆಟಗಾರರ ಮೇಲೆಯೇ ಕಣ್ಣಿಟ್ಟಿದ್ದಾರೆ. 2008 ರಿಂದ ಆರಂಭವಾದ ಐಪಿಎಲ್​ನಿಂದ ಹಿಡಿದು 2025 ಸೀಸನ್​ವರೆಗೆ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಕೆಲವೇ ಕೆಲ ಪ್ಲೇಯರ್ಸ್ ಮಾತ್ರ ಡೇ ಒನ್​ನಿಂದ ಆಡ್ತಿದ್ದಾರೆ.

ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರ ರೋಹಿತ್ ಶರ್ಮಾ!

ರೋಹಿತ್ ಶರ್ಮಾ. ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್. ಕ್ಯಾಪ್ಟನ್ ಆಗಿ, ಆಟಗಾರನಾಗಿ ಸಕ್ಸಸ್ ಕಂಡಿರುವ ಪ್ಲೇಯರ್. ಅದ್ರಲ್ಲೂ ಕೂಡ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 2011 ರಿಂದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆದ್ದುಕೊಟ್ಟ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಅಲ್ದೇ ಸಂಭಾವನೆ ವಿಚಾರದಲ್ಲೂ ಟಾಪ್​ನಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ಐದು ಟ್ರೋಫಿ ನೀಡಿರುವ ರೋಹಿತ್ ಶರ್ಮಾ ಐಪಿಎಲ್ ಮೂಲಕವೇ 178.6 ಕೋಟಿ ರೂಪಾಯಿ ಗಳಿಸಿದ್ದಾರೆ. ಈ ಬಾರಿ ಮುಂಬೈ ತಂಡದಿಂದ 16.3ಕೋಟಿ ಸಂಭಾವನೆ ಪಡೆಯಲಿದ್ದಾರೆ. ಕಳೆದ ಮೂರು ವರ್ಷಗಳಿಂದ 16 ಕೋಟಿ ಪಡೆದಿದ್ದರು. , ಐಪಿಎಲ್ ಟೂರ್ನಿಯ ಮೂಲಕ ಅತಿ ಹೆಚ್ಚು ಸಂಪಾದಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.

5 ಬಾರಿ ಟ್ರೋಫಿ ಗೆದ್ದ ಧೋನಿ ಸಂಭಾವನೆಯಲ್ಲಿ ಸೆಕೆಂಡ್ ಪ್ಲೇಸ್!

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲೂ ಯಶಸ್ವೀ ಲೀಡರ್. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ, ಕೂಡಾ ಐಪಿಎಲ್‌ ಸಂಭಾವನೆ ಪಡೆಯುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.  ಮುಂಬೈ ಇಂಡಿಯನ್ಸ್ ತಂಡದಂತೆಯೇ ಸಿಎಸ್‌ಕೆ ತಂಡಕ್ಕೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ ಮಹಿ. ಸಿಎಸ್‌ಕೆ ಪರ ಆಡಿರುವ ಧೋನಿ ಕಳೆದ ಐಪಿಎಲ್​ವರೆಗೆ ಒಟ್ಟು 176.8 ಕೋಟಿ ರೂಪಾಯಿ ಸಂಪಾದಿಸಿದ್ದಾರೆ.

ಆರ್ ಸಿಬಿಯಲ್ಲೇ ಆಡಿ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರ ಕೊಹ್ಲಿ!

ಐಪಿಎಲ್​ನಲ್ಲಿ ಆರ್​ಸಿಬಿ ಅಂದ್ರೆ ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಅಂದ್ರೆ ಆರ್​ಸಿಬಿ. ಟೂರ್ನಿ ಆರಂಭವಾದ ಡೇ 1ನಿಂದ ಹಿಡಿದು ಇಂದಿನವರೆಗೂ ಒಂದೇ ಫ್ರಾಂಚೈಸಿ ಪರ ಆಡ್ತಿರೋ ಏಕೈಕ ಆಟಗಾರ ಕಿಂಗ್ ವಿರಾಟ್ ಕೊಹ್ಲಿ. ಬೆಂಗಳೂರು ತಂಡದ ಪರ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರನೂ ಹೌದು. ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಟಾಪ್ 3 ಪ್ಲೇಯರ್ ಲಿಸ್ಟ್​ನಲ್ಲಿದ್ದಾರೆ. ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ 173.2 ಕೋಟಿ ಪಡೆದಿದ್ದಾರೆ. ಕೊಹ್ಲಿ ಕಳೆದ ಮೂರು ವರ್ಷಗಳಿಂದ 15 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ ಈ ಬಾರಿ 21 ಕೋಟಿಗೆ ಆರ್​ಸಿಬಿ ರಿಟೇನ್ ಮಾಡಿಕೊಂಡಿದೆ.

ಟಾಪ್ 4 ಪ್ಲೇಸ್ ನಲ್ಲಿದ್ದಾರೆ ಚೆನ್ನೈ ಮಾಜಿ ಪ್ಲೇಯರ್ ಸುರೇಶ್ ರೈನಾ!

ಐಪಿಎಲ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಮಾಜಿ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ರು. 2020ರಲ್ಲಿ ಸ್ವಾತಂತ್ರ್ಯ ದಿನ ಆಗಸ್ಟ್‌ 15 ರಂದು ಎಂ.ಎಸ್‌ ಧೋನಿ ಜೊತೆಗೆ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದರು. ಆ ನಂತ್ರ ಐಪಿಎಲ್​ನಲ್ಲಿ ಕಣಕ್ಕಿಳಿಯುತ್ತಿದ್ದ ರೈನಾ 2022ರ ಸೆಪ್ಟೆಂಬರ್ ನಲ್ಲಿ ಭಾರತದ ಎಲ್ಲ ಮಾದರಿಯ ಕ್ರಿಕೆಟ್​ನಿಂದ ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ ನಿವೃತ್ತಿ ಘೋಷಿಸಿದ್ರು. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 5000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆ ಹೊಂದಿರುವ ಸುರೇಶ್‌ ರೈನಾ, ಹಣ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ 110.74 ಕೋಟಿ ರೂಪಾಯಿ ಸಂಪಾದಿಸಿದ್ದಾರೆ.

ಟಾಪ್ 5 ಪ್ಲೇಸ್ ನಲ್ಲಿ ಚೆನ್ನೈನ ಆಲ್ ರೌಂಡರ್ ರವೀಂದ್ರ ಜಡೇಜಾ!

ಕ್ರಿಕೆಟ್​ ಅಭಿಮಾನಿಗಳ ಪಾಲಿನ ಫೇವರೇಟ್​ ಆಟಗಾರ ಜಡ್ಡು. ಸದ್ಯ ಐಪಿಎಲ್​ನಲ್ಲಿ ಸಿಎಸ್​ಕೆ ಪರವಾಗಿ ಆಡುತ್ತಿರೋ ರವೀಂದ್ರ ಜಡೇಜಾ ಟೀಂ ಇಂಡಿಯಾ ಪರವೂ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಐಪಿಎಲ್ ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರ ಪೈಕಿ ಐದನೇ ಪ್ಲೇಸ್​ನಲ್ಲಿದ್ದಾರೆ.  ಒಟ್ಟಾರೆ 109 ಕೋಟಿ ಸಂಪಾದನೆ ಮಾಡಿದ್ದಾರೆ.

ಇನ್ನು ಆರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಲೆಜೆಂಡರಿ ಆಟಗಾರರಲ್ಲಿ ಒಬ್ಬರಾದ ಸುನಿಲ್ ನರೈನ್ ಇದ್ದು, ಪದಾರ್ಪಣೆ ಮಾಡಿದಾಗಿನಿಂದ ಕೆಕೆಆರ್ ತಂಡಕ್ಕಾಗಿ ಆಡುತ್ತಿದ್ದಾರೆ. ನರೈನ್ ಒಟ್ಟಾರೆ 107.2 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಅತಿ ಹೆಚ್ಚು ಸಂಪಾದಿಸಿರುವ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಹಾಗೇ 7ನೇ ಸ್ಥಾನದಲ್ಲಿ ನಮ್ಮ ಆರ್​ಸಿಬಿಯ ದತ್ತುಪುತ್ರ ಎಬಿ ಡಿ ವಿಲಿಯರ್ಸ್ ಇದ್ದು, 102 ಕೋಟಿ ಗಳಿಸಿದ್ದರು. 8ನೇ ಸ್ಥಾನದಲ್ಲಿ ಗಂಭೀರ್ ಇದ್ದು, 94.62 ಕೋಟಿ ಸಂಭಾವನೆ ಪಡೆದಿದ್ದಾರೆ. 9ನೇ ಪ್ಲೇಸ್​ನಲ್ಲಿರೋ ಶಿಖರ್ ಧವನ್ 91.8 ಕೋಟಿ ಪಡೆದ್ರೆ ಆರ್​ಸಿಬಿಯ ಮಾಜಿ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ 86.62 ಕೋಟಿ ಗಳಿಸಿದ್ದಾರೆ.

ಒಟ್ನಲ್ಲಿ 2025ರ ಐಪಿಎಲ್​ಗಾಗಿ ಇಡೀ ವಿಶ್ವವೇ ಕಾದು ಕುಳಿತಿದೆ. ಮೆಗಾ ಹರಾಜಿನಲ್ಲಿ ಒಟ್ಟು 204 ಸ್ಲಾಟ್​ಗಳು ಖಾಲಿಯಿದ್ದು, 70 ವಿದೇಶಿ ಆಟಗಾರರನ್ನ ಖರೀದಿಸುವ ಅವಕಾಶ ಫ್ರಾಂಚೈಸಿಗಳಿಗಿದೆ. ಭಾನುವಾರ ಹಾಗೇ ಸೋಮವಾರ ಸೌದಿ ಅರೇಬಿಯಾದ ಜಿಡ್ಡಾದಲ್ಲಿ ಮೆಗಾ ಹರಾಜು ನಡೆಯುತ್ತಿದೆ. ಮೆಗಾ ಹರಾಜಿನಲ್ಲಿ ಹಿಂದಿನ ಎಲ್ಲಾ ದಾಖಲೆಗಳು ಕೂಡ ಬ್ರೇಕ್ ಆಗಲಿದೆಯಾ ಅನ್ನೋ ಕುತೂಹಲ ಗರಿಗೆದರಿದೆ.

Shwetha M

Leave a Reply

Your email address will not be published. Required fields are marked *