ಅ‘ವಿದ್ಯಾಮಂತ್ರಿ’ಗೆ ಕನ್ನಡ ಬರಲ್ವಾ? – ಗುಬ್ಬಿ ಮೇಲೆ ಶಿಕ್ಷಣ ಸಚಿವರ ಬ್ರಹ್ಮಾಸ್ತ್ರ
ಮೀಮ್ಸ್‌ಗೆ ಆಹಾರವಾದ ಮಿನಿಸ್ಟರ್
ಅಧಿಕಾರ ಇದ್ರೆ ಏನ್ ಬೇಕಾದ್ರೂ ಮಾಡಬಹುದಾ?. ಸಚಿವಾರದ್ರೆ ಮಕ್ಕಳ ಮೇಲೆ ದರ್ಪ ತೋರಿಸಬಹುದು? ಕೋಟಿ ಕೋಟಿ ಕೊಳ್ಳೆ ಹೊಡೆದವರನ್ನ ಬಿಟ್ಟು ಮಕ್ಕಳ ಮೇಲೆ ಅಧಿಕಾರ ತೋರಿಸೋದು ಎಷ್ಟು ಸರಿ..? ಮಿಸ್ಟರ್ ಮಧು ಬಂಗಾರಪ್ಪ ನೀವು ಮಾಡಿದ್ದು ಎಷ್ಟು ಸರಿ ಅಂತಾ ನಾವಲ್ಲಾ.. ಕರ್ನಾಟಕದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಶ್ನೆ ಕೇಳುವುದಕ್ಕೆ ಕಾರಣ ಈ ಮಾತು.. Byte Flow.. ಅಬ್ಬಾ.. ಅದೇನ್ ಮಾಡಬಾರದ ತಪ್ಪನ್ನೇ ಮಾಡಿದ್ದಾನೆ ಅನ್ನೋ ಹಾಗೇ ನಮ್ಮ ಶಿಕ್ಷಣ ಸಚಿವರ ಮಾತನಾಡ್ತಾ ಇರೋದನ್ನ ಕೇಳಿದ್ರಿ ಅಲ್ವಾ.. ಅಂದಹಾಗೇ ಆಗಿದ್ದು ಇಷ್ಟೇ.. ಬುಧವಾರ ವಿಧಾನಸೌಧದಲ್ಲಿ ನಡೆದ ನೀಟ್ ಕೋಚಿಂಗ್ ತರಬೇತಿ ಉದ್ಘಾಟನೆಯಲ್ಲಿ ಶಿಕ್ಷಣ ಸಚಿವರು ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಈ ವೇಳೆ ಆನ್ಲೈನ್ನಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೊಬ್ಬ “ ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ” ಅಂತ ಹೇಳಿದ್ದಾನೆ. ವಿದ್ಯಾರ್ಥಿ ಹೇಳಿಕೆಯನ್ನು ಆರಂಭದಲ್ಲಿ ತಮಾಷೆಯಾಗಿ ತೆಗೆದುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಂತರ ವಿದ್ಯಾರ್ಥಿ ವಿರುದ್ಧ ಗರಂ ಆದರು. “ಈಗ ನಾನೇನು ಉರ್ದುವಿನಲ್ಲಿ ಮಾತನಾಡುತ್ತಿದ್ದೇನಾ? ಸ್ಟುಪೀಡ್. ಯಾರೂ ಹಾಗೆ ಹೇಳಿದ್ದು, ಮಾಹಿತಿ ತೆಗದುಕೊಳ್ಳಿ ಸುಮ್ಮನೆ ಬಿಡಬೇಡಿ” ಅಂತಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: RCB 4 ಸ್ಲಾಟ್.. ರಿಷಭ್ ಟಾರ್ಗೆಟ್ – ಪಂತ್ ಗೆ ಹರಾಜಿನಲ್ಲಿ ₹30 ಕೋಟಿ?
ಶಿಕ್ಷಣ ಸಚಿವರ ಈ ಆದೇಶಕ್ಕೆ ಜನ ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. “ಟ್ವೀಟ್ ಮಾಡಿ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ. ಇದು ಅಕ್ಷರಶಃ ನಮ್ಮ ಅವಿದ್ಯಾವಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅನ್ವಯಿಸುತ್ತದೆ. “ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಮಧು ಬಂಗಾರಪ್ಪ ಅವರೆ ಹಿಂದೊಮ್ಮೆ ಹೇಳಿದ್ದರು, ಅದನ್ನೇ ವಿದ್ಯಾರ್ಥಿಯೊಬ್ಬ ನೆನಪಿಸದ ತಕ್ಷಣ, ಆ ವಿದ್ಯಾರ್ಥಿ ಸೇರಿದಂತೆ ಅಲ್ಲಿನ ಶಿಕ್ಷಕರು ಹಾಗೂ ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿರುವುದು ನಿಜಕ್ಕೂ ಸ್ಟುಪಿಡ್!! ಕಾಂಗ್ರೆಸ್ಸಿಗರ ಈ ರೀತಿಯ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ” ಎಂದಿದೆ. ಅಷ್ಟೇ ಅಲ್ಲ ಈ ವಿಡಿಯೋ ಸಖತ್ ವೈರಲ್ ಆಗುತಿದ್ದು, ಶಿಕ್ಷಣ ಸಚಿವರನ್ನ ಟ್ರೋಲ್ ಕೂಡ ಮಾಡಲಾಗುತ್ತಿದೆ. ಸತ್ಯ ಹೇಳಿದ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಅವಿದ್ಯಾ ಮಂತ್ರಿ ಮಧು ಬಂಗಾರಪ್ಪ, ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನೆ ಮಾಡು ಅನ್ನೋ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ಹಿಂದೆ ನನಗೆ ಕನ್ನಡ ಓದೋದಕ್ಕೆ ಬರೆಯೋದಕ್ಕೆ ಬರೋದಿಲ್ಲ ಅಂತ ಮಧು ಬಂಗಾರಪ್ಪ ಹೇಳಿದ್ದರು. ಇದಕ್ಕೆ ಸಾಹಿತಿಗಳು, ಸಾರ್ವಜನಿಕರು, ಜನ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ತೀವ್ರ ಆಕ್ರೋಶ, ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಭಾಷಣವನ್ನು ತಪ್ಪು ತಪ್ಪಾಗಿ ಓದಿ ಮಧು ಬಂಗಾರಪ್ಪ ಟ್ರೋಲ್ ಆಗಿದ್ರು. ಆಗ ಸಿದ್ದರಾಮಯ್ಯನವರೇ, ಮಧು ಬಂಗಾರಪ್ಪನವರಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಕನ್ನಡ ಕಲಿಸಿ ಅಂತ ವ್ಯಂಗ್ಯವಾಗಿ ಬಿಜೆಪಿ ಟ್ವೀಟ್ ಮಾಡಿತ್ತು. ಈಗವಿದ್ಯಾರ್ಥಿಗಳ ಕೈಯಲ್ಲಿ ಕನ್ನಡದ ಬರಲ್ಲ ಅಂತಾ ಹೇಳಿಸಿಕೊಂಡು ಮತ್ತೆ ಟ್ರೋಲ್ ಆಗುತ್ತಿದ್ದರು.. ಒಂದು ವೇಳೆ ವಿದ್ಯಾರ್ಥಿ ಮಾತು ಕೇಳಿ ಸುಮ್ಮನೆ ಆಗಿದ್ರೆ ಏನ್ ಆಗ್ತಾ ಇರಲಿಲ್ಲ ಅನ್ಸುತ್ತೆ.. ಅಧಿಕಾರ ಇದೆ ಅನ್ನೋ ದರ್ಪದಲ್ಲಿ ಆ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದು ಇಷ್ಟಕ್ಕೆಲ್ಲಾ ಕಾರಣವಾಗಿದೆ.