ಯತ್ನಾಳ್ & ಟೀಂ ಆಟಕ್ಕೆ ಬ್ರೇಕ್! – ವಿಜಯೇಂದ್ರ ಪ್ಲ್ಯಾನ್ ಸಕ್ಸಸ್ ಆಯ್ತಾ?
‘ಹೈ’ ಟೆನ್ಶನ್‌ನಲ್ಲಿ ಹಿಂದೂ ಫೈರ್ ಬ್ರ್ಯಾಂಡ್
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡೋಕೆ ಬಿಜೆಪಿಗೆ ವಕ್ಫ್ ಆಸ್ತಿ ಅಸ್ತ್ರ ಸಿಕ್ಕಿದೆ. ಆದ್ರೆ ಇದು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವುದಕ್ಕಿಂತ ಹೆಚ್ಚಾಗಿ, ಸ್ವಪಕ್ಷಗಳ ಒಡಕಿಗೆ ಕಾರಣವಾಗಿದೆ. ವಕ್ಫ್ ಹೋರಾಟದಿಂದ ದಿನದಿಂದ ದಿನಕ್ಕೆ ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಭಿನ್ನಮತ ಹೆಚ್ಚುತ್ತಲೇ ಇದೆ. ವಕ್ಫ್ ವಿಚಾರವಾಗಿ ಪಕ್ಷದ ಅಧ್ಯಕ್ಷರ ಅನುಮತಿ ಇಲ್ಲದೇ ಯತ್ನಾಳ್ ಅವರು ರಾಜ್ಯ ಪ್ರವಾಸ ರೂಪಿಸಿದ್ದಾರೆ. ವಿಜಯೇಂದ್ರ ಅವರ ಅನುಮತಿ ಪಡೆಯದೆ ಹೋರಾಟ ರೂಪಿಸಿದ್ದಾರೆ. ಅಷ್ಟೇ ಅಲ್ಲ ಯತ್ನಾಳ್ ವಿಜಯೇಂದ್ರ ಅವರಿಗೆ ನೇರವಾಗಿ ಸವಾಲು ಹಾಕುತ್ತಿದ್ದಾರೆ. ಒಂದು ವೇಳೆ ಯತ್ನಾಳ್ ಪ್ರವಾಸ ಮುಂದುವರೆದರೆ ಪಕ್ಷದ ಮೇಲೆ ವಿಜಯೇಂದ್ರ ಅವರ ಹಿಡಿತ ಸಡಿಲಗೊಳ್ಳಲಿದೆ ಎಂಬ ಮಾತು ಕೇಳಿ ಬಂದಿದೆ.. ಹಾಗಿದ್ರೆ ಯತ್ನಾಳ್‌ನ್ನ ಕಟ್ಟಿ ಹಾಕೋಕೆ ವಿಜಯೇಂದ್ರ & ಟೀಂ ಮಾಡ್ತಿರೋ ಪ್ಲ್ಯಾನ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB 4 ಸ್ಲಾಟ್.. ರಿಷಭ್ ಟಾರ್ಗೆಟ್ – ಪಂತ್ ಗೆ ಹರಾಜಿನಲ್ಲಿ ₹30 ಕೋಟಿ?
ರಾಜ್ಯ ಬಿಜೆಪಿಯನ್ನ ನೋಡಿದ್ರೆ ಇದಕ್ಕೆ ಯಾರು ನಾಯಕರು ಅನ್ನೋ ಪ್ರಶ್ನೆ ಕಾಡುತ್ತೆ.. ಅದಕ್ಕೆ ಕಾರಣ ಯತ್ನಾಳ್ ಮತ್ತು ವಿಜಯೇಂದ್ರ.. ಯಾಕಂದ್ರೆ ರಾಜ್ಯದಲ್ಲಿ ಯಾವುದೇ ಬೆಳವಣಿಗೆ ನಡೆದ್ರೂ ಅದಕ್ಕೆ ಫಸ್ಟ್ ರಿಯಾಕ್ಟ್ ಮಾಡ್ತಾ ಇರೋದು ಯತ್ನಾಳ್.. ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ ಪ್ರತಿಕ್ರಿಯೆ ನೀಡುವ ಮುನ್ನವೇ ಯತ್ನಾಳ್ ರಿಯಾಕ್ಟ್ ಮಾಡುತಿದ್ದು, ನಾನೇ ಬಿಜೆಪಿಯ ಮಾಸ್ ಲೀಡರ್ ಅನ್ನೋದನ್ನ ಪರೋಕ್ಷವಾಗಿ ಹೇಳುವುದಕ್ಕೆ ಹೊರಟಿದ್ದಾರೆ. ವಕ್ಫ್ ವಿಚಾರದಲ್ಲಿ ಮೊದಲು ಧ್ವನಿ ಎತ್ತಿ ತನ್ನ ಬಣದ ಜೊತೆ ಹೋರಾಟ ನಡೆಸಿದ ಯತ್ನಾಳ್ ಮೇಲೆ ವಿಜಯೇಂದ್ರ ಬಣ ಕೆಂಡ ಕಾರುತ್ತಿದೆ. ಹೇಗಾದ್ರೂ ಮಾಡಿ ಯತ್ನಾಳ್ ಆಟಕ್ಕೆ ರಾಜ್ಯದಲ್ಲಿ ಬ್ರೇಕ್ ಹಾಕೋಕೆ ವಿಜಯೇಂದ್ರ ಪಡೆ ಪ್ಲ್ಯಾನ್ ಮಾಡುತ್ತಿದೆ. ಆದ್ರೆ ಯತ್ನಾಳ್ ನೀವು ಏನ್ ಬೇಕಾದ್ರೂ ಮಾಡಿ ಆದ್ರೆ ನಾನು ನನ್ನ ಸ್ಟೈಲ್‌ನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡ್ತೀನಿ ಇದೇ 25 ರಿಂದ ಅಖಾಡಕ್ಕೆ ಇಳಿಯೋಕೆ ಸಜ್ಜಾಗಿದೆ.
ವಿಜಯೇಂದ್ರ ಹೋರಾಟಕ್ಕಿಲ್ಲ ಯತ್ನಾಳ್ ಟೀಂ ಬೆಂಬಲ
ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಯತ್ನಾಳ್ ಅವರನ್ನು ನಿಯಂತ್ರಿಸುವಂತೆ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಆದ್ರೆ ಹೈಕಮಾಂಡ್ ಈ ವಿಚಾರದಲ್ಲಿ ಮೌನತಾಳಿದೆ. ಹೀಗಾಗಿ ರೆಬಲ್ಸ್ ಟೀಂಗೆ ತಿರುಗೇಟು ನೀಡೋಕೆ ಸಂಸದರು, ಶಾಸಕರನ್ನ ಒಳಗೊಂಡತಹ ಟೀಂ ಕಟ್ಟೋಕೆ ವಿಜಯೇಂದ್ರ ಸಜ್ಜಾಗಿದ್ದಾರೆ. ಬಲಿಷ್ಠ ಟೀಂ ಕಟ್ಟಿ ಯತ್ನಾಳ್‌ಗೆ ತಿರುಗೇಟು ನೀಡೋಕೆ ಸಜ್ಜಾಗಿದ್ದಾರೆ. ಈಗಾಗಲೇ ಎಲ್ಲಾ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಕ್ಫ್ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಶುರುವಾಗಿದೆ. ಈ ಹೋರಾಟದಲ್ಲಿ ಯತ್ನಾಳ್ ಹೆಸರಿದ್ದು, ಯತ್ನಾಳ್ ಟೀಂ ವಿಜಯೇಂದ್ರ ಹೋರಾಟಕ್ಕೆ ಸಾಥ್ ನೀಡಿಲ್ಲ.
ಯತ್ನಾಳ್ ಪ್ರತ್ಯೇಕ ಹೋರಾಟಕ್ಕೆ ವಿರೋಧ
ವಕ್ಫ್ ವಿವಾದದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲೇ ಹೋರಾಟ ನಡೆಯಬೇಕು ಅನ್ನೋದು ವಿಜಯೇಂದ್ರ ಬೆಂಬಲಿಗರ ಆಗ್ರಹವಾಗಿದೆ. ಯತ್ನಾಳ್ ಪ್ರತ್ಯೇಕ ಹೋರಾಟವನ್ನು ಈ ತಂಡ ವಿರೋಧಿಸಿದೆ. ಈಗಾಗಲೇ ಮೂರು ತಂಡದಿಂದ ಪ್ರವಾಸ ನಡೆಯಲಿದೆ. ಯಾವುದೇ ಕಾರಣಕ್ಕೂ ನಾಲ್ಕನೇ ತಂಡಕ್ಕೆ ಅವಕಾಶ ಕೊಡಬಾರದು. ಯತ್ನಾಳ್ ಆಟಕ್ಕೆ ಬ್ರೇಕ್ ಹಾಕಿ ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡುತ್ತೇವೆ ಅಂತಾ ವಿಜಯೇಂದ್ರ ಬಣದವರು ಹೇಳುತ್ತಿದ್ದಾರೆ.
ಗುಂಪುಗಾರಿಕೆಯಿಂದ ಪಕ್ಷ ಸಂಘಟನೆಗೆ ಹಿನ್ನಡೆ!
ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚುತ್ತಲೇ ಇದೆ. ಇದ್ರಿಂದ ಪಕ್ಷದ ಸಂಘಟನೆಗೆ ಹಿನ್ನಡೆಯಾಗಲಿದೆ. ಅಕಸ್ಮಾತ್ ಉಪ ಚುನಾವಣೆಗಳ ಫಲಿತಾಂಶ ಬಿಜೆಪಿ ಪರವಾಗಿ ಇಲ್ಲದೆ ಹೋದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಜೊತೆಗೆ ಯತ್ನಾಳ್ ಅವರು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದ್ದರೂ ಅವರ ವಿರುದ್ಧ ಒಂದು ಸಣ್ಣ ಕ್ರಮಕ್ಕೂ ಬಿಜೆಪಿ ಹೈ ಕಮಾಂಡ್ ಮುಂದಾಗಿಲ್ಲದಿರುವುದು ಅಚ್ಚರಿ ಮೂಡಿಸಿದೆ ಯಾಕಂದ್ರೆ ಯತ್ನಾಳ್ ಅವರ ಬೆಂಬಲಕ್ಕೆ ಹೈಕಮಾಂಡ್ ನ ಒಂದು ಗುಂಪು ನಿಂತಿದೆ ಎಂಬ ಡೌಟ್ ಆರಂಭದಿಂದಲೂ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ 100ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ಶಾಸಕರು ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.