ನರ್ಬಾಡ್ ಸಾಲಕ್ಕೆ ಕೇಂದ್ರದ ಕೊಳ್ಳಿ – ನೆರವು ಕಡಿತದಿಂದ ಏನೆಲ್ಲಾ ಎಫೆಕ್ಟ್?
ರೈತರಿಗೆ ಸಿಗಲ್ವಾ ಬಡ್ಡಿರಹಿತ ಸಾಲ?
ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಮತ್ತೆ ಕೈ ಕೊಟ್ಟಿದ್ದು, ಕೇಂದ್ರದ ಜೊತೆ ಗುದ್ದಾಡೋಕೆ ಕೈಗೆ ಮತ್ತೊಂದು ಅಸ್ತ್ರ ಸಿಕ್ಕಿದೆ. ರಾಜ್ಯಕ್ಕೆ ಅಲ್ಪಾವಧಿ ಕೃಷಿ ಸಾಲ ಮಂಜೂರು ಮಿತಿಯನ್ನು ನಬಾರ್ಡ್ ದೊಡ್ಡ ಪ್ರಮಾಣದಲ್ಲಿ ಕಡಿತ ಮಾಡಿದೆ. ಇದು ಸಿದ್ದು ಸರ್ಕಾರದ ಕೋಪವನ್ನ ನೆತ್ತಿಗೆರುವಂತೆ ಮಾಡಿದೆ. ಬರೋಬ್ಬರಿ 58 % ರಷ್ಟು ಹಣ ಕಡಿತ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದೆ. ಹಾಗಿದ್ರೆ ಏನಿದು ನಬಾರ್ಡ್ ಲೋನ್? ಇದ್ರಿಂದ ರಾಜ್ಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; AUS ಫೈಟ್.. ಕೊಹ್ಲಿಯೇ KING -ಪರ್ತ್ ನಲ್ಲಿ ಸ್ಪೆಷಲ್ ಸೆಂಚುರಿ ಸಿಡಿಸ್ತಾರಾ?
ನಬಾರ್ಡ್ ವತಿಯಿಂದ ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ. ಸಾಲ ನೀಡಲಾಗಿತ್ತು. ಆದರೆ ಈ ವರ್ಷ 2,340 ಕೋಟಿ ರೂ. ನೀಡಿದ್ದಾರೆ ಅಂದ್ರೆ ಸಾಲದ ಪ್ರಮಾಣ 58 % ರಷ್ಟು ಕಡಿತವಾಗಿದೆ. ಇದರಿಂದ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ಮತ್ತು ರಿಯಾಯಿತಿ ಬಡ್ಡಿ ದರದ ಸಾಲ ಸೌಲಭ್ಯಕ್ಕೆ ಹೊಡೆತ ಬಿದ್ದಿದೆ. ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ 35 ಲಕ್ಷ ರೈತರಿಗೆ ಒಟ್ಟು 25,000 ಕೋಟಿ ರೂ. ಅಲ್ಪಾವಧಿ ಬೆಳೆಸಾಲ ವಿತರಿಸುವ ಗುರಿ ವಿಫಲವಾಗುವ ಆತಂಕ ಎದುರಾಗಿದೆ. ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ಪ್ರತಿವರ್ಷ ಅಲ್ಪಾವಧಿ ಕೃಷಿ ಸಾಲದ ಮಿತಿ ನಿಗದಿಪಡಿಸಲಿದೆ. ಈ ಸಾಲಕ್ಕೆ ರಾಜ್ಯ ಸರಕಾರ ಖಾತರಿ ನೀಡಿದ ಬಳಿಕ ಬಿಡುಗಡೆಯಾಗುವ ಈ ಸಾಲದ ಮೊತ್ತವು ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ಡಿಸಿಸಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆಯಾಗಲಿದೆ. ಆದರೆ, ಕಳೆದ ವರ್ಷ 5,600 ಕೋಟಿ ರೂ. ಇದ್ದ ಸಾಲದ ಮಿತಿಯನ್ನು ನಬಾರ್ಡ್ ಈ ಸಾಲಿಗೆ ಶೇ. 58 ಕಡಿತಗೊಳಿಸಿ 2,340 ಕೋಟಿ ರೂ.ಗಳನ್ನಷ್ಟೇ ಮಂಜೂರು ಮಾಡಿದೆ. ಹಾಗಿದ್ರೆ ಕಳೆದ 5 ವರ್ಷದಲ್ಲಿ ನಬಾರ್ಡ್ ಎಷ್ಟು ಸಾಲ ಬಿಡುಗಡೆ ಮಾಡಿತ್ತು.
2020-21ರಲ್ಲಿ 5,500 ಕೋಟಿ ರೂ. ಸಾಲ ಮಂಜೂರು ಮಾಡಿದ್ದು, ಶೇ 27 ರಷ್ಟು ಹೆಚ್ಚು ಸಾಲ ನೀಡಿತ್ತು. 2021-225 ರಲ್ಲಿ 5483 ಕೋಟಿ ನೀಡಿದ್ರೆ, 2022-23 ರಲ್ಲಿ 5,550 ಕೋಟಿ ನೀಡಲಾಗಿತ್ತು. ಇಲ್ಲಿ ಶೇ 1 ಏರಿಕೆಯಾಗಿತ್ತು. ಇನ್ನು 2023-24 ರಲ್ಲಿ 5,600 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು. ಈ ವರ್ಷವೂ ಶೇ 1 ಏರಿಕೆಯಾಗಿತ್ತು. ಇನ್ನು 2024-25 ಅಂದ್ರೆ ಈ ವರ್ಷ 2,340 ಕೋಟಿ ರೂ. ನೀಡಿದ್ರೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಶೇ 58 ಇಳಿಕೆಯಾಗಿದೆ.
ಕಡಿಮೆ ಸಾಲ ರೈತರಿಗೆ ಎಫೆಕ್ಟ್
ಈ ಬಗ್ಗೆ ಮಾತನಾಡಿದ ಸಹಕಾರ ಸಚಿವ ಕೆ. ಎನ್ ರಾಜಣ್ಣ ಈ ವರ್ಷ 9,200 ಕೋಟಿ ರೂ. ಧನ ಸಹಾಯ ಕೇಳಿದ್ವಿ, ಕಳೆದ ವರ್ಷಕ್ಕಿಂತ ಹೆಚ್ಚು ಹಣ ಸಿಗುವ ನಿರೀಕ್ಷೆಯಲ್ಲಿ ಇದ್ವೇ. ಕರ್ನಾಟಕಕ್ಕೆ 2,340 ಕೋಟಿ ದೊರೆತಿದ್ದು, ಕಳೆದ ವರ್ಷದ 5,600 ಕೋಟಿಗಿಂತ ಶೇ.58 ರಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಇದರಿಂದ ರೈತರಿಗೆ ಒದಗಿಸಲಾದ ಬಡ್ಡಿರಹಿತ ಸಾಲದ ಮೇಲೆ ಪರಿಣಾಮ ಬೀರುತ್ತದೆ, ಅವರು ಖಾಸಗಿ ಲೇವಾದೇವಿದಾರರ ಮೊರೆ ಹೋಗಬೇಕಾಗುತ್ತದೆ ಎಂದು ರಾಜಣ್ಣ ತಿಳಿಸಿದ್ದಾರೆ.