ಡಿಸೆಂಬರ್‌ನಲ್ಲಿ ಕಮಲದಲ್ಲಿ ಕ್ರಾಂತಿ! – ವಿಜಯೇಂದ್ರ ಕೈ ತಪ್ಪಲಿದ್ಯಾ ರಾಜ್ಯಾಧ್ಯಕ್ಷ ಪಟ್ಟ!
ಸೋಮಣ್ಣ, ಯತ್ನಾಳ್ ಯಾರಿಗೆ ಸ್ಥಾನ?

ಡಿಸೆಂಬರ್‌ನಲ್ಲಿ ಕಮಲದಲ್ಲಿ ಕ್ರಾಂತಿ! – ವಿಜಯೇಂದ್ರ ಕೈ ತಪ್ಪಲಿದ್ಯಾ ರಾಜ್ಯಾಧ್ಯಕ್ಷ ಪಟ್ಟ!ಸೋಮಣ್ಣ, ಯತ್ನಾಳ್ ಯಾರಿಗೆ ಸ್ಥಾನ?

ರಾಜ್ಯ ಕಮಲ ನಾಯಕರು ಬೀದಿಗಳಿದು ವಕ್ಫ್ ವಿರುದ್ಧ ಸಮರ ಸಾರುತ್ತಿದ್ದಾರೆ. ಆದ್ರೆ  ಇಲ್ಲಿ ಬಿಜೆಪಿ ಒಗ್ಗಟ್ಟಿನಿಂದ ಹೋರಾಡುತ್ತಿಲ್ಲ. ಬದಲಾಗಿ ಎರಡು ಬಣಗಳಾಗಿ ಹೋರಾಡುತ್ತಿದೆ.  ಇಲ್ಲಿ ಬಿಜೆಪಿ Vs ಕಾಂಗ್ರೆಸ್ ಅನ್ನೊದಕ್ಕಿಂತ ಹೆಚ್ಚಾಗಿ Bjp Vs Bjp ಅನ್ನೋ ಹಾಗಾಗಿದೆ. ಅಂದ್ರೆ ವಿಜಯೇಂದ್ರ ಬಣ Vs ಯತ್ನಾಳ್ ಬಣದ ಹೋರಾಟ ಜೋರಾಗಿದೆ. ಈ ಹೋರಾಟ ಬಿಜೆಪಿಗೆ ಪ್ಲೆಸ್ ಆಗುತ್ತಾ ಅನ್ನದ್ದಕಿಂತ ಹೆಚ್ಚಾಗಿ ವಿಜಯೇಂದ್ರ ಮತ್ತು ಯತ್ನಾಳ್‌ರಲ್ಲಿ ಯಾರಿಗೆ ಪ್ಲೆಸ್ ಆಗುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಹಾಗಿದ್ರೆ ಬನ್ನಿ ಹೈ ಕಮಾಂಡ್ ಒಲವು ಇವರಿಬ್ಬರಲ್ಲಿ ಯಾರ ಬಗ್ಗೆ ಹೆಚ್ಚಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: AUS ಫೈಟ್.. ಕೊಹ್ಲಿಯೇ KING -ಪರ್ತ್ ನಲ್ಲಿ ಸ್ಪೆಷಲ್ ಸೆಂಚುರಿ ಸಿಡಿಸ್ತಾರಾ?

ಬಿಜೆಪಿಯಲ್ಲಿ ಯಾವುದೂ ಸರಿಯಿಲ್ಲ ಅನ್ನೋದು ವಕ್ಫ್ ಹೋರಾಟದಿಂದ ಗೊತ್ತಾಗುತ್ತಿದೆ. ಒಂದಾಗಿ ವಕ್ಫ್ ವಿರುದ್ಧ ಹೋರಾಟ ನಡೆಸಬೇಕಾದ ಕಮಲ ನಾಯಕರು ಎರಡು ಟೀಂ ಮೂಲಕ ಕಣಕ್ಕೆ ಇಳಿದಿದ್ದಾರೆ. ಇದ್ರಲ್ಲಿ  ಬಸನಗೌಡ ಯತ್ನಾಳ್ ಟೀಂ ಹೈಕಮಾಂಡ್ ಸೆಳೆಯವಲ್ಲಿ ಯಶಸ್ವಿಯಾಗಿದ್ದಾರಾ ಅನ್ನೋದು ಡೌಟ್ ಶುರುವಾಗಿದೆ. ವಕ್ಫ್ ವಿಚಾರದಲ್ಲಿ ಯತ್ನಾಳ್ ಬರೆದ ಪತ್ರಕ್ಕೆ ಕೇಂದ್ರ ಸ್ಪಂದಿಸಿದೆ. ಹೀಗಾಗಿ ಯತ್ನಾಳ್ ಹೋರಾಟ  ವಿಜಯೇಂದ್ರ ಸ್ಥಾನಕ್ಕೂ ಕುತ್ತು ತಂದಿದ್ಯಾ ಅನ್ನೋ ಅನುಮಾನ ಹೆಚ್ಚಾಗಿದೆ. ವಿಜಯೇಂದ್ರ ಸ್ಥಾನ ಯತ್ನಾಳ್ ಪಾಲಾಗಬಹುದು ಅಥವಾ ಬೇರೆ ಬಿಜೆಪಿ ನಾಯಕರ ಪಾಲಾಗುವ ಚಾನ್ಸ್ ತುಂಬಾಯಿದೆ. ಅದಕ್ಕೆ ಕಾರಣ ಕೂಡ ಇದೆ.

ವಕ್ಫ್ ಹೋರಾಟದಿಂದ ನಮ್ಗೆ ಗೊತ್ತಾಗ್ತಿರೋದ್‌ ಏನಂದ್ರೆ, ಒಂದೆರಡು ತಿಂಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಸರ್ಜರಿ ಆಗಬಹುದು ಅನ್ನೋದು. ಯಾಂಕಂದ್ರೆ ರಾಜ್ಯ ಕಮಲ ಪಡೆಯಲ್ಲಿ ಸದ್ಯ ಫುಲ್ ಆ್ಯಕ್ಟಿವ್ ಆಗಿರೋ ನಾಯಕ ಅಂದ್ರೆ ಅದು ಬಸನಗೌಡ ಪಾಟೀಲ್ ಯತ್ನಾಳ್‌.. ವಕ್ಫ್ ಆಸ್ತಿ ವಿರುದ್ಧ ಹೋರಾಟ ಶುರುಮಾಡಿದ್ದೇ ಇವರು. ನಂತ್ರ ವಿಜಯೇಂದ್ರ ಕೌಂಟರ್ ಕೊಡೋಕೆ 3 ತಂಡ ರಚನೆ ಮಾಡಿದ್ರು. ಆದ್ರೆ ರೆಬಲ್‌ ನಾಯಕರನ್ನ ತನ್ನ ಜೊತೆ ಸೇರಿಸಿಕೊಂಡು ಯತ್ನಾಳ್ ಕೇಂದ್ರದ ಗಮನ ಸೆಳೆಯುತ್ತಿದ್ದಾರೆ.  ಇದ್ರ ಎಫೆಕ್ಟ್ ಬಿ.ವೈ ವಿಜಯೇಂದ್ರಗೆ ಮೇಲೆ ಆಗಲಿದೆ. ಯಾಕಂದ್ರೆ ಯತ್ನಾಳ್ ಟೀಂ ನಿರಂತರವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕಳಗಿಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಎರಡು ಬಣವಾಗಿ ಹೋರಾಟ ಮಾಡಿದ್ರೆ ಮುಂದೆ ರಾಜ್ಯದ ಎಲೆಕ್ಷನ್‌ಗೆ ಎಫೆಕ್ಟ್ ಆಗಿ ರಾಜ್ಯ ಬಿಜೆಪಿಯಲ್ಲಿರುವ ಒಡಕು ದೊಡ್ಡದಾಗುತ್ತೆ. ಹೀಗಾಗಿ ಇದು ಕೇಂದ್ರವನ್ನ ಇಕ್ಕಟಿಗೆ ಸಿಲುಕಿಸಿದೆ. ಒಂದು ವೇಳೆ ವಿಜಯೇಂದ್ರ ಅವರನ್ನ ಅವರನ್ನ ಕಳಗಿಳಿಸಿ ಯತ್ನಾಳ್ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ, ವಿಜಯೇಂದ್ರ  ಬಣ ಸುಮ್ಮನೆ ಇರಲ್ಲ.. ಆಗ ವಿಜಯೇಂದ್ರ ಬಣ ಮತ್ತೆ ಹೋರಾಟ ನಡೆಸಬಹುದು. ವಿಜಯೇಂದ್ರ ಅವರನ್ನ ಕಳಗಿಳಿಸಿಲ್ಲ ಅಂದ್ರೆ ಈ ಒಡಕು ಸರಿ ಹೋಗಲ್ಲ.. ಹೀಗಾಗಿ  ಈ ಎರಡು ಬಣದ ನಾಯಕರನ್ನ ಹೊರತು ಪಡಿಸಿ ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನ ಬಿಜೆಪಿ ರಾಜಾಧ್ಯಕ್ಷರಾಗಿ ಮಾಡುವ ಸಾಧ್ಯತೆ ಹೆಚ್ಚಿದೆ.  ಆಗ ವಿಜಯೇಂದ್ರಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನ ನೀಡಿ, ರಾಜ್ಯ ರಾಜಕೀಯದಿಂದ ದೂರ ಮಾಡಬಹುದು. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ರಾಜಕೀಯಕ್ಕೆ ಬ್ರೇಕ್ ಹಾಕೋಕೆ ವರಿಷ್ಕರು ಪ್ಲ್ಯಾನ್ ಮಾಡಬಹುದು.

Shwetha M

Leave a Reply

Your email address will not be published. Required fields are marked *