ಬಾಲಿವುಡ್‌ಗೆ ಶಾರುಖ್ ಖಾನ್ ಪುತ್ರನ ಎಂಟ್ರಿ – ವೆಬ್ ಸರಣಿ ಮೂಲಕ ಆರ್ಯನ್ ಖಾನ್ ಅದೃಷ್ಟ ಪರೀಕ್ಷೆ

ಬಾಲಿವುಡ್‌ಗೆ ಶಾರುಖ್ ಖಾನ್ ಪುತ್ರನ ಎಂಟ್ರಿ – ವೆಬ್ ಸರಣಿ ಮೂಲಕ ಆರ್ಯನ್ ಖಾನ್ ಅದೃಷ್ಟ ಪರೀಕ್ಷೆ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮಕ್ಕಳು ಬಾಲಿವುಡ್‌ಗೆ ಯಾವ ರೀತಿ ಕಾಲಿಡಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳ ಕುತೂಹಲ ಇವತ್ತು ನಿನ್ನೆಯದಲ್ಲ. ಕೊನೆಗೂ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈಗಾಗಲೇ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ‘ಆರ್ಚಿಸ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈಗ ಶಾರುಖ್ ಪುತ್ರ ಆರ್ಯನ್ ಖಾನ್ ಸರದಿ.

ಇದನ್ನೂ ಓದಿ: TV ಶೋಗಿಂತ ದನ ಕಾಯೋದು ವಾಸಿ! – ತುಕಾಲಿ ಸಂತು ಹೆಂಡ್ತಿ ಮಾನಸಗೆ ಏನಾಯ್ತು? 

ಆರ್ಯನ್ ಖಾನ್ ಶಾರುಖ್ ಖಾನ್ ಅಭಿಮಾನಿಗಳ ಲೆಕ್ಕಾಚಾರವನ್ನೇ ಉಲ್ಟಾಪಲ್ಟಾ ಮಾಡಿದ್ದಾರೆ. ಆರ್ಯನ್ ಖಾನ್ ಕೂಡಾ ಯಾವುದೋ ದೊಡ್ಡ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್ಯನ್ ಖಾನ್, ನಿರ್ದೇಶನದ ಹಾದಿ ಹಿಡಿದಿದ್ದಾರೆ. ಆರ್ಯನ್ ಖಾನ್, ವೆಬ್ ಸರಣಿ ಒಂದನ್ನು ನಿರ್ದೇಶನ ಮಾಡಿದ್ದು, ಡಾಕ್ಯುಮೆಂಟರಿ ಮಾದರಿಯ ಈ ವೆಬ್ ಸರಣಿಯ ಬಿಡುಗಡೆ ಘೋಷಣೆ ಮಾಡಲಾಗಿದೆ. ಅಮೆರಿಕದಲ್ಲಿ ನಡೆದ ಇವೆಂಟ್​ನಲ್ಲಿ ತಮ್ಮ ಮುಂದಿನ ವರ್ಷದ ಪ್ರಾಜೆಕ್ಟ್​ಗಳನ್ನು ಘೋಷಣೆ ಮಾಡಿರುವ ನೆಟ್​ಫ್ಲಿಕ್ಸ್​, ಆರ್ಯನ್ ಖಾನ್ ಅವರ ವೆಬ್ ಸರಣಿಯನ್ನ ಘೋಷಣೆ ಮಾಡಿದೆ.

ಬಾಲಿವುಡ್​ ಜೀವನದ ಬಗ್ಗೆ ವಿಶಿಷ್ಟವಾದ ವೆಬ್ ಸರಣಿಯನ್ನು ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿಗೆ ಆರ್ಯನ್ ತಾಯಿ ಗೌರಿ ಖಾನ್ ಬಂಡವಾಳ ಹೂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್​ಮೆಂಟ್​ ಅಡಿಯಲ್ಲಿ ಈ ವೆಬ್ ಸರಣಿ ನಿರ್ಮಾಣಗೊಂಡಿದೆ. ನೆಟ್​ಫ್ಲಿಕ್ಸ್​ ಸಹ ಇದರ ಜೊತೆಗೂಡಿದೆ. 2025 ರಲ್ಲಿ ವೆಬ್ ಸರಣಿ ಬಿಡುಗಡೆ ಆಗಲಿದೆ. ಆದರೆ ನಿಖರವಾದ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಶಾರುಖ್ ಖಾನ್, ‘ಈ ಹೊಸ ಸರಣಿಯನ್ನು ನೆಟ್​ಫ್ಲಿಕ್ಸ್​ ಜೊತೆಗೂಡಿ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಸಿನಿಮಾ ಜಗತ್ತಿನ ಬಗ್ಗೆ ವಿಶಿಷ್ಟ ನೋಟವನ್ನು ಈ ವೆಬ್ ಸರಣಿ ಒಳಗೊಂಡಿದೆ. ಮನೊರಂಜನಾ ಕ್ಷೇತ್ರ ಹೊರಗಿನವರಿಗೆ ಹೇಗೆ ಕಾಣುತ್ತದೆ ಎಂಬುದನ್ನು ಈ ವೆಬ್ ಸರಣಿ ತೋರಿಸಲಾಗಿದೆ. ಆರ್ಯನ್ ಹಾಗೂ ಅವರೊಟ್ಟಿಗೆ ಅನೇಕ ಕ್ರಿಯಾಶೀಲ ಮನಸ್ಸುಗಳು ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ತಂಡ ಸೇರಿಕೊಂಡು ಕಟ್ಟಿರುವ ಅದ್ಭುತ ಪ್ರಾಡೆಕ್ಟ್ ಆಗಿದ್ದು, ಎಲ್ಲರ ಹೃದಯ ತಲುಪುವ ಮನೊರಂಜನಾ ಸರಕು ಇದಾಗಿರಲಿದೆ’ ಎಂದಿದ್ದಾರೆ ಶಾರುಖ್ ಖಾನ್.

suddiyaana