ಲಕ್ಷ್ಮೀ ಚಾಪ್ಟರ್‌ ಕ್ಲೋಸ್‌? – ಕಾವೇರಿ ಸೊಕ್ಕಡಗಿಸಲು ಬಂದ ಕೀರ್ತಿ
ಸೀರಿಯಲ್‌ ಗೆ ಹೊಸ ನಾಯಕಿ ಎಂಟ್ರಿ?

ಲಕ್ಷ್ಮೀ ಚಾಪ್ಟರ್‌ ಕ್ಲೋಸ್‌? – ಕಾವೇರಿ ಸೊಕ್ಕಡಗಿಸಲು ಬಂದ ಕೀರ್ತಿಸೀರಿಯಲ್‌ ಗೆ ಹೊಸ ನಾಯಕಿ ಎಂಟ್ರಿ?

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ಸೈಕೋ ಕಾವೇರಿ ಅಟ್ಟಹಾಸ ಜೋರಾಗಿದೆ.. ತನ್ನ ಸಾರ್ಥಕ್ಕಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಕೊಲ್ಲುತ್ತಾ ಬರ್ತಿದ್ದಾಳೆ.. ಕೀರ್ತಿಯನ್ನ ಬೆಟ್ಟದಿಂದ ದೂಡಿ ಹಾಕಿದ ಕಾವೇರಿ, ಈಗ ಲಕ್ಷ್ಮೀಯ ಕತೆ ಮುಗಿಸಿದ್ದಾಳೆ. ಇದೀಗ ಲಕ್ಷ್ಮೀಯ ನೆನಪಲ್ಲಿ ಹುಚ್ಚನಾಗ್ತಿದ್ದಾನೆ ವೈಷ್ಣವ್..‌ ಸೀರಿಯಲ್‌ ನಲ್ಲಿ ಟ್ವಿಸ್ಟ್‌ ಸಿಗ್ತಾ ಇದ್ದಂತೆ ವೀಕ್ಷಕರು ಈಗ ಫುಲ್‌ ಗರಂ ಆಗಿದ್ದಾರೆ..  ಸೀರಿಯಲ್‌ ನಲ್ಲಿ ಮನುಷ್ಯರಿಗಿಂತ ಪ್ರೇತಗಳ ಓಡಾಟವೇ ಜಾಸ್ತಿ ಆಗಿದೆ. ಟಿಆರ್‌ ಪಿಗಾಗಿ ಹೀಗೆ ಮಾಡೋದು ಎಷ್ಟು ಸರಿ ಅಂತಾ ವೀಕ್ಷಕರು ಪ್ರಶ್ನೆ ಮಾಟ್ತಾ ಇದ್ದಾರೆ.. ಅಷ್ಟಕ್ಕೂ ಆಗಿದ್ದೇನು? ಲಕ್ಷ್ಮೀ ಚಾಪ್ಟರ್‌ ಕ್ಲೋಸ್‌ ಆಯ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KLಗೆ ₹2 ಕೋಟಿ.. ಉಳಿದವರಿಗೆಷ್ಟು? – 24 ಕನ್ನಡಿಗರ IPL ಅದೃಷ್ಟಪರೀಕ್ಷೆ

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಕತೆ ಈಗ ಎತ್ತಲೋ ಸಾಗುತ್ತಿದೆ. ಸೀರಿಯಲ್‌ ನಲ್ಲಿ ಮನುಷ್ಯರಿಗಿಂತ ಜಾಸ್ತಿ ದೆವ್ವ, ಪ್ರೇತಗಳ ಕಾಟವೇ ಹೆಚ್ಚಾಗಿದೆ ಅನ್ನೋ ದೂರು ವೀಕ್ಷಕರದ್ದು.. ಕೀರ್ತಿ ಬೆಟ್ಟದಿಂದ ಬಿದ್ದ ಬಳಿಕ ಲಕ್ಷ್ಮೀ ಮೈಯಲ್ಲಿ ಆಕೆಯ ಆತ್ಮ ಸೇರಿಕೊಂಡಿದೆ ಅಂತಾ ತೋರಿಸಲಾಗ್ತಿತ್ತು.. ಲಕ್ಷ್ಮೀ, ಕೀರ್ತಿ ಆಕ್ಟಿಂಗ್‌ ಗೆ ವೀಕ್ಷಕರು ಬಹುಪರಾಕ್‌ ಅಂತಾ ಹೇಳಿದ್ರು.. ಅಷ್ಟೇ ಅಲ್ಲ.. ಈ ಪ್ರೇತ, ಆತ್ಮದ ಸೀನ್ ನಿಂದಾಗಿ  ಟಿಆರ್‌ಪಿ ರೇಸ್‌ ನಲ್ಲೂ ಸೀರಿಯಲ್‌ ಮುಂದಿತ್ತು.. ಇದೀಗ ಅದನ್ನೇ ನೆಪವಾಗಿಟ್ಟುಕೊಂಡು ಈಗ ಸತ್ತು ಹೋದ ಪಾತ್ರಗಳನ್ನು ಮತ್ತೆ ಕರೆತರುವ, ಬದುಕಿರುವ ಪಾತ್ರಗಳನ್ನು ಮತ್ತೆ ಮತ್ತೆ ಸಾಯಿಸುವ ಪ್ರಯೋಗ ನಡಿತಾ ಇದೆ.

ಹೌದು, ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈಗ ಯಾರೂ ಊಹಿಸದಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಲಕ್ಷ್ಮೀ ಕೀರ್ತಿ ಸಾವಿಗೆ ನ್ಯಾಯ ಕೊಡಿಸಿ, ಕಾವೇರಿ ಆಟಕ್ಕೆ ಬ್ರೇಕ್‌ ಹಾಕ್ತಾಳೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಕತೆಯ ಟ್ರ್ಯಾಕ್‌ ಕೂಡ ಹಾಗೇ ಹೋಗ್ತಿತ್ತು.. ಆದ್ರೆ ಏಕಾಏಕಿ ಸೀರಿಯಲ್‌ ಡೈರೆಕ್ಟರ್‌ ಟ್ವಿಸ್ಟ್‌ ಕೊಟ್ಟುಬಿಟ್ಟಿದ್ದಾರೆ.. ತನ್ನ ಹಾಗೂ ಮಗನ ಮಧ್ಯೆ ಲಕ್ಷ್ಮೀ ಬಂದಿದ್ದಾಳೆ ಅಂತಾ ಕಾವೇರಿ ಆಕೆಯನ್ನ ಮುಗಿಸಲು ಒಂದಲ್ಲ ಒಂದು ಪ್ಲ್ಯಾನ್‌ ಮಾಡಿದ್ಲು.. ಇದೀಗ ಡ್ರಾಮಾ ವೇಳೆ ಲಕ್ಷ್ಮೀಯನ್ನ ರಾವಣನ ಮೂರ್ತಿಯೊಳಗೆ ಹಾಕಿ ಕಾವೇರಿ ಕೊಂದಿದ್ದಾಳೆ ಅಂತ ತೋರಿಸಲಾಗ್ತಿದೆ. ಸದ್ಯ ತನ್ನ ಮುಂದಿರುವ ಕಾಟಗಳೆಲ್ಲ ಮುಗಿದುಹೋಯ್ತು, ಇನ್ನು ಮೇಲೆ ತನ್ನ ಮಗನ ನಡುವೆ ಯಾರೂ ಬರಲ್ಲ ಅಂತ ಕಾವೇರಿ ಫುಲ್ ಖುಷಿಯಲ್ಲಿ ತೇಲಾಡ್ತಾಳೆ.. ಆಗ ಕಾವೇರಿಗೆ ಕೀರ್ತಿಯ ಎಂಟ್ರಿ ಶಾಕ್‌ ಕೊಟ್ಟಿದೆ.

ಹೌದು, ಸತ್ತಿದ್ದಾಳೆ ಅಂದುಕೊಂಡಿದ್ದ ಕೀರ್ತಿ ಈಗ ಮನೆಯವರ ಮುಂದೆ  ಪ್ರತ್ಯಕ್ಷವಾಗಿದ್ದಾಳೆ. ಸತ್ತು ಹೋದವಳು ಈಗ ಮತ್ತೆ ಮರಳಿ ಯಾಕೆ ಬಂದಿದ್ದಾಳೆ ಎಂದು ಕಾವೇರಿಗೆ ಚಿಂತೆಯಾಗಿದೆ. ತನ್ನ ಕಣ್ಣುಗಳನ್ನೇ ತನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಮನೆಯವರ ಮುಂದೆ ಬಂದ ಕೀರ್ತಿ ಎಲ್ಲ ಸತ್ಯ ಬಯಲಾಗುತ್ತೆ.. ಲಕ್ಷ್ಮೀ ದೇವರಿಗೆ ದೀಪ ಹಚ್ಚೇ ಹಚ್ಚುತ್ತಾಳೆ ಅಂತಾ ಕೀರ್ತಿ ಮನೆಯವರ ಮುಂದೆ ಹೇಳಿದ್ದಾಳೆ. ಕೀರ್ತಿ ಮಾತಿನಿಂದ ಮನೆಯವರೆಲ್ಲಾ ಶಾಕ್‌ ಆಗಿದ್ದಾರೆ. ಇದೀಗ ಟ್ರ್ಯಾಕ್ ತಪ್ಪಿ ಸಾಗುತ್ತಿರುವ ಸೀರಿಯಲ್‌ ನೋಡಿ ವೀಕ್ಷಕರಿಗೂ ಸಾಕಾಗಿ ಹೋಗಿದೆ. ಶಾಕ್ ನೆಪದಲ್ಲಿ ಸತ್ತವರನ್ನು ಮತ್ತೆ ಮತ್ತೆ ತರುವುದನ್ನು ನೋಡಿ ವೀಕ್ಷಕರು ರೋಸಿಹೋಗಿದ್ದಾರೆ. ಕೀರ್ತಿ ಪಾತ್ರವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ವೀಕ್ಷಕರು ಹೇಳಿದ ಬೆನ್ನಲ್ಲೇ ಆಕೆಯನ್ನ ದೆವ್ವದ ರೂಪದಲ್ಲಿ ತೋರಿಸಲಾಗ್ತಿದೆ. ಅದು ಸಾಲದು ಅಂತ ಕಾವೇರಿ ಅತ್ತೆ ಬೇರೆ ವಿಸಿಟ್ ಮಾಡುತ್ತಿದ್ದಾರೆ. ಇದೀಗ ಲಕ್ಷ್ಮೀಯನ್ನ ಯಾವ ತರ ಸೀರಿಯಲ್‌ ಡೈರೆಕ್ಟರ್‌ ತೋರಿಸುತ್ತಾರೆ ಅನ್ನೋದು ವೀಕ್ಷಕರ ಮುಂದಿರುವ ಕುತೂಹಲ..

ಇನ್ನು ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಮನೆ ಕೆಲಸದಾಕೆ ಗಂಗಾ ಪಾತ್ರದಲ್ಲಿ ನಟಿಸುತ್ತಿರೋ ನಟಿ ಹರ್ಷಿತಾ ಸೀರಿಯಲ್‌ ನಿಂದ ಆಚೆ ಬಂದಿದ್ದಾರೆ. ಇದೀಗ ಗಂಗಾ ಪಾತ್ರಕ್ಕೆ ಹೊಸ ನಾಯಕಿಯ ಎಂಟ್ರಿ ಆಗಿದೆ. ನಟಿ ಹರ್ಷಿತಾ ಸೀರಿಯಲ್‌ ನಿಂದ ಯಾಕೆ ಆಚೆ ಬಂದ್ರು ಅನ್ನೋ  ಚರ್ಚೆ ನಡಿತಾ ಇದೆ.

Shwetha M

Leave a Reply

Your email address will not be published. Required fields are marked *