ಆರ್‌ಸಿಬಿ ಬೌಲಿಂಗ್ ಕೋಚ್ ನೇಮಕ – ವೃತ್ತಿಜೀವನದಲ್ಲಿ ಒಂದು ವಿಕೆಟ್ ಕಿತ್ತ ಬೌಲರ್ ಈಗ ಕೋಚ್

ಆರ್‌ಸಿಬಿ ಬೌಲಿಂಗ್ ಕೋಚ್ ನೇಮಕ – ವೃತ್ತಿಜೀವನದಲ್ಲಿ ಒಂದು ವಿಕೆಟ್ ಕಿತ್ತ ಬೌಲರ್ ಈಗ ಕೋಚ್

ಇಂಡಿಯನ್ ಪ್ರೀಮಿಯರ್ ಲೀಗ್‌ 2025ರ ಮೆಗಾ ಹರಾಜಿಗೆ ಕೌಂಟ್​ಡೌನ್ ಶುರುವಾಗಿದೆ. ಚಾಂಪಿಯನ್ ಟ್ರೋಫಿಗೆ ಮುತ್ತಿಡೋಕೆ ಕಾಯ್ತಿರೋ ಆರ್​ಸಿಬಿ ಫ್ರಾಂಚೈಸಿ ಈಗಾಗ್ಲೇ ಸೌದಿ ಅರೇಬಿಯಾದಲ್ಲಿ ಬಿಡ್ಡಿಂಗ್ ಲೆಕ್ಕಾಚಾರಗಳನ್ನ ನಡೆಸ್ತಿದೆ. ಅದಕ್ಕೂ ಮುನ್ನವೇ ಸಹಾಯಕ ಸಿಬ್ಬಂದಿಯನ್ನೂ ಭರ್ತಿ ಮಾಡಿಕೊಳ್ತಿದೆ. ಈ ಪೈಕಿ    ಓಂಕಾರ್ ಸಾಲ್ವಿ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಓಂಕಾರ್ ಅವ್ರು ಮುಂಬೈ ರಣಜಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಕೇವಲ ಒಂದು ವಿಕೆಟ್ ಕಿತ್ತಿರುವ ಓಂಕಾರ್ ಸಾಲ್ವಿ ಅವರ ಆಯ್ಕೆಯೇ ಈಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಫಾರಿನ್ ಪ್ಲೇಯರ್ RCB ಕ್ಯಾಪ್ಟನ್ – ಮ್ಯಾಕ್ಸಿ & ಜಾಕ್ಸ್ ಗೆ ಗುಡ್ ನ್ಯೂಸ್

ಓಂಕಾರ್ ಸಾಲ್ವಿ ನೇಮಕದ ಬಗ್ಗೆ ಕೆಲವ್ರು ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ. ಅದಕ್ಕೆ ಕಾರಣ ಅವ್ರಿಗೆ ಆಟಗಾರನಾಗಿ ಹೆಚ್ಚಿನ ಅನುಭವ ಇಲ್ಲ ಅನ್ನೋದು. 2005 ರಲ್ಲಿ ರೈಲ್ವೇಸ್‌ಗಾಗಿ ಕೇವಲ ಒಂದೇ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ತಮ್ಮ ಕರಿಯರ್​ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಅಚ್ಚರಿಯ ವಿಷಯವೆಂದರೆ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಓಂಕಾರ್ ಸಾಲ್ವಿಗಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಕೊಹ್ಲಿ ರಣಜಿಯಲ್ಲಿ 4 ವಿಕೆಟ್ ಪಡೆದಿದ್ದಾರೆ. ಬಟ್ ವಿಷ್ಯ ಏನಂದ್ರೆ ಸಾಲ್ವಿ ಉತ್ತಮ ಕೋಚ್ ಎಂದು ಗುರುತಿಸಿಕೊಂಡಿದ್ದಾರೆ.

ಅಷ್ಟಕ್ಕೂ ಯಾರು ಈ ಓಂಕಾರ್ ಸಾಲ್ವಿ ಅಂದ್ರೆ  ಭಾರತದ ಮಾಜಿ ವೇಗದ ಬೌಲರ್ ಅವಿಷ್ಕರ್ ಸಾಲ್ವಿ ಅವರ ಸಹೋದರ. ಓಂಕಾರ್​ ಅವರಿಗೆ ಆಟಗಾರನಾಗಿ ಹೆಚ್ಚಿನ ಅನುಭವ ಇಲ್ಲ. ಆದರೆ ಕೋಚ್ ಆಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇವ್ರ ಮಾರ್ಗದರ್ಶನದಲ್ಲೇ ಮುಂಬೈ ತಂಡ ಕಳೆದ ಆವೃತ್ತಿಯಲ್ಲಿ ರಣಜಿ ಟ್ರೋಫಿ ಗೆದ್ದಿತ್ತು. 2005 ರಲ್ಲಿ ಮಧ್ಯಪ್ರದೇಶ ವಿರುದ್ಧ ರೈಲ್ವೇಸ್‌ ಪರ ಮೊದಲ ಪಂದ್ಯವನ್ನು ಆಡಿದ್ದರು. ಆದರೆ ಅದೇ ಕೊನೆಯ ಪಂದ್ಯ. ಅವರು, ತಮ್ಮ ವೃತ್ತಿಜೀವನದಲ್ಲಿ ಪಡೆದಿರುವುದು 1 ವಿಕೆಟ್ ಮಾತ್ರ. ಸದ್ಯ ಮುಂಬೈ ಕೋಚ್ ಆಗಿರೋ ಇವ್ರ ಒಪ್ಪಂದ 2025ರ ಮಾರ್ಚ್​​ಗೆ ಅಂತ್ಯವಾಗಲಿದೆ. ಈಗಾಗ್ಲೇ ಆರ್​ಸಿಬಿ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಿಸಿಕೊಂಡಿದೆ. ಕಾರ್ತಿಕ್ ಮತ್ತು ಸಾಲ್ವಿ ಕೆಕೆಆರ್ ತಂಡದ ಪರ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ಬರ ಕೆಮೆಸ್ಟ್ರಿ ವರ್ಕೌಟ್ ಆಗ್ಬೋದು ಅನ್ನೋದು ಟೀಂ ಮ್ಯಾನೇಜ್​ಮೆಂಟ್ ಪ್ಲ್ಯಾನ್.

ಓಂಕಾರ್ ತಮ್ಮ ಕರಿಯರ್​ನಲ್ಲೇ ಒಂದೇ ವಿಕೆಟ್ ಬೇಟೆಯಾಡಿರಬಹುದು. ಬಟ್ ದೇಶೀ ಕ್ರಿಕೆಟ್​ನಲ್ಲಿ ಕೋಚ್ ಆಗಿ ಸಾಕಷ್ಟು ಸಕ್ಸಸ್ ಕಂಡಿದ್ದಾರೆ. 2023-24 ರ ರಣಜಿ ಟ್ರೋಫಿಗೆ ಮುನ್ನ ಓಂಕಾರ್ ಸಾಲ್ ಮುಂಬೈ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಮೇಲ್ವಿಚಾರಣೆಯಲ್ಲಿ, ಮುಂಬೈ 2023-24 ರಣಜಿ ಟ್ರೋಫಿ ಗೆಲ್ಲುವ ಮೂಲಕ 8 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯವಾಡಿತ್ತು. ಅಷ್ಟೇ ಅಲ್ಲ, ಮುಂಬೈ ತಂಡ 27 ವರ್ಷಗಳ ನಂತರ ಪ್ರತಿಷ್ಠಿತ ಇರಾನಿ ಕಪ್ ಕೂಡ ಗೆದ್ದಿತ್ತು. ಈ ಎರಡು ಗೆಲುವಿನಿಂದ ಓಂಕಾರ್ ಸಾಲ್ವಿ ಹೆಸರು ದೇಶಿ ಕ್ರಿಕೆಟ್​ ವಲಯದಲ್ಲಿ ಸಖತ್ ಸದ್ದು ಮಾಡಿತ್ತು. ಮುಂಬೈ ರಣಜಿ ತಂಡದ ಮುಖ್ಯ ಕೋಚ್ ಆಗಿರುವ ಸಾಲ್ವಿ ಅವರ ಒಪ್ಪಂದ ಮುಂದಿನ ವರ್ಷ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ.

ಕಳೆದ 17 ಸೀಸನ್​ಗಳಲ್ಲಿ ಆರ್​ಸಿಬಿ ಒಂದೇ ಒಂದು ಸಲನೂ ಕಪ್ ಗೆಲ್ಲೋಕೆ ಆಗ್ದೇ ಇರೋದಕ್ಕೆ ಮೇನ್ ರೀಸನ್ನೇ ಬೌಲಿಂಗ್ ವೀಕ್​ನೆಸ್. ಕಳಪೆ ಬೌಲಿಂಗ್​ನಿಂದಾಗಿ ಗೆಲ್ಲಬೇಕಿದ್ದ ಅದೆಷ್ಟೋ ಪಂದ್ಯಗಳಲ್ಲಿ ಆರ್​ಸಿಬಿ ಸೋತಿದೆ. ಬ್ಯಾಟಿಂಗ್​ ವಿಭಾಗವನ್ನು ಸ್ಟ್ರಾಂಗ್ ಮಾಡುವಂಥ ಟೀಮ್ ಮ್ಯಾನೇಜ್​ಮೆಂಟ್, ಬೌಲಿಂಗ್​ನಲ್ಲಿ ಎಕ್ಸ್​ಪೀರಿಯನ್ಸ್ ಇಲ್ದೇ ಇರೋರನ್ನೇ ಖರೀದಿಸಿ ತಂಡವನ್ನು ವೀಕ್ ಮಾಡ್ತಿತ್ತು. ಸ್ಪೆಷಲಿಸ್ಟ್ ಸ್ಪಿನ್ನರ್ಸ್, ಡೆತ್ ಓವರ್ ಸ್ಪೆಷಲಿಸ್ಟ್​ಗಳನ್ನು ಮತ್ತು ಅನುಭವಿಗಳನ್ನು ಖರೀದಿಸುತ್ತಲೇ ಇರ್ಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸೋ ಬೌಲರ್​ಗಳನ್ನೇ ಖರೀದಿಸಿ ಹಿಂದಿನ ತಪ್ಪುಗಳು ರಿಪೀಟ್ ಆಗದಂತೆ ನೋಡಿಕೊಳ್ಬೇಕಿದೆ.

ಒಟ್ನಲ್ಲಿ 2025ರ ಇಂಡಿಯನ್ ಪ್ರೀಮಿಯರ್‌ ಲೀಗ್ ಮೆಗಾ ಹರಾಜಿಗೆ ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಮುಂದಿನ ಸೀಸನ್​​ಗಾಗಿ ಬಲಿಷ್ಠ ತಂಡ ಕಟ್ಟಲು ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಅದರಲ್ಲಿ 21 ಕೋಟಿ ಸಂಭಾವನೆ ನೀಡಿ ವಿರಾಟ್ ಕೊಹ್ಲಿಯನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡಿರುವ ಆರ್​ಸಿಬಿ, 11 ಕೋಟಿ ಸಂಭಾವನೆ ನೀಡಿ ರಜತ್ ಪಾಟಿದಾರ್ ಅವರನ್ನು ಹಾಗೂ ಯಶ್ ದಯಾಳ್ ಅವರನ್ನು 5 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್​ಸಿಬಿಗೆ ಬ್ಯಾಟ್ಸ್‌ಮನ್​ಗಳ ಜೊತೆಗೆ  ಬೌಲರ್‌ಗಳು, ಆಲ್​ರೌಂಡರ್ಸ್​ ಹಾಗೂ ಸ್ಪಿನ್ನರ್​ಗಳ ಮೇಲೆ ಫೋಕಸ್ ಮಾಡ್ಬೇಕು. ಸೋ 83 ಕೋಟಿಯಲ್ಲಿ ಎಷ್ಟು ಯಾರ್ಯಾರನ್ನ ಖರೀದಿ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

suddiyaana