ನಟಿ ಸಮಂತಾಗೆ ಮತ್ತೆ ಮತ್ತೆ ಕಾಡುತ್ತಿದೆ ಅನಾರೋಗ್ಯದ ಸಮಸ್ಯೆ, ವಿದೇಶದಲ್ಲಿ ಚಿಕಿತ್ಸೆ ?
ತೆಲುಗು ನಟಿ ಸಮಂತಾ ರುತ್ ಪ್ರಭು ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ತೆರಳಿದ್ದಾರೆ ಅನ್ನೋ ವಿಚಾರ ಕೇಳಿಬರುತ್ತಿದೆ. ನಟಿ ಸಮಂತಾ ತಾನು ಮೈಯೋಸಿಟಿಸ್ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದು, ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ಹೇಳಿಕೊಂಡಿದ್ದರು. ನಂತರ ವಾಪಸ್ ಬಂದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಕೈಗೆ ಡ್ರಿಪ್ಸ್ ಹಾಕಿಕೊಂಡೇ ಅವರು ‘ಯಶೋದಾ’ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು. ಇದಾದ ಬಳಿಕವೂ ಸಂಪೂರ್ಣ ಗುಣಮುಖವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಚಿಕಿತ್ಸೆ ಪಡೆಯಲು ದಕ್ಷಿಣ ಕೊರಿಯಾಗಿ ತೆರಳಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಹಸೆಮಣೆಯೇರಲು ರೆಡಿನಾ ? – ಸ್ಯಾಂಡಲ್ವುಡ್ ಅಂಗಳದಲ್ಲಿ ಮದುವೆ ಸೌಂಡ್..!
ನಟಿ ಸಮಂತಾ ಭಾರತದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೂ ಕೂಡ ಅವರಿಗೆ ಪೂರ್ತಿ ವಾಸಿ ಆಗಿಲ್ಲ. ಸಮಂತಾ ಇಷ್ಟೊತ್ತಿಗೆಲ್ಲಾ ನಟ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಚಿಕಿತ್ಸೆಗೆ ತೆರಳಿದ್ದರಿಂದ ಸಿನಿಮಾದ ಕೆಲಸ ವಿಳಂಬವಾಗಿದೆ ಎನ್ನಲಾಗುತ್ತಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ಸೂಪರ್ ಹಿಟ್ ಆದ ಬಳಿಕ ಹಾಗೂ ‘ಪುಷ್ಪ’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ ನಂತರ ಸಮಂತಾ ಅವರಿಗೆ ಹತ್ತಾರು ಆಫರ್ಗಳು ಬರಲು ಶುರುವಾದವು. ಆದರೆ ಅನಾರೋಗ್ಯದ ಕಾರಣದಿಂದ ಎಲ್ಲವನ್ನೂ ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೇಗೋ ಕಷ್ಟಪಟ್ಟು ‘ಯಶೋದಾ’ ಸಿನಿಮಾದ ಕೆಲಸಗಳನ್ನು ಮುಗಿಸಿಸಿದ್ದರು. ಇನ್ನೇನು ಪೂರ್ತಿ ಗುಣಮುಖರಾಗಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಈ ಸುದ್ದಿ ಕೇಳಿಬಂದಿದೆ.