RCB ಪ್ಲೇಯಿಂಗ್ 11 ಸ್ಲಾಟ್ ಫಿಕ್ಸ್ – ಓಪನರ್ TO ಡೆತ್ ಓವರ್ ಬೌಲರ್
₹83 ಕೋಟಿ.. ಲಿಸ್ಟ್ ನಲ್ಲಿ ಯಾರು?
2025ರ ಐಪಿಎಲ್ಗೆ ಚಾಂಪಿಯನ್ ಪಟ್ಟಕ್ಕೇರಲೇಬೇಕು ಅನ್ನೋದು ಆರ್ಸಿಬಿ ಟಾರ್ಗೆಟ್. ಅದಕ್ಕಾಗೇ ಟೀಂ ಮ್ಯಾನೇಜ್ಮೆಂಟ್ ಬಲಿಷ್ಠ ತಂಡ ಕಟ್ಟೋಕೆ ಸೌದಿ ಅರೇಬಿಯಾಗೆ ಹಾರಿದೆ. ಇದೇ ವಾರ ನಡೆಯಲಿರುವ ಮೆಗಾ ಹರಾಜಿನಲ್ಲಿ ಸ್ಟಾರ್ ಪ್ಲೇಯರ್ಗಳ ಮೇಲೆ ಬಿಡ್ ಮಾಡೋಕೆ ಲಿಸ್ಟ್ ಕೂಡ ರೆಡಿಯಾಗಿದೆ. ಬಟ್ ಆಕ್ಷನ್ನಲ್ಲಿ ಆಟಗಾರರ ಖರೀದಿ ಅಷ್ಟು ಸುಲಭವಾಗಿಲ್ಲ. ಸ್ಲಾಟ್ ಟು ಸ್ಲಾಟ್ ಪ್ಲೇಯರ್ಸ್ನ ಖರೀದಿ ಮಾಡ್ಬೇಕು. ಬ್ಯಾಟಿಂಗ್ ಓಪನರ್ ಟು ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ವರೆಗೂ ಕೇಪೆಬಲ್ ಇರುವಂಥ ಆಟಗಾರರನ್ನೇ ಸೆಲೆಕ್ಟ್ ಮಾಡ್ಬೇಕು. ಅಷ್ಟಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಸ್ಟ್ರಾಂಗ್ ಆಗೋಕೆ ಯಾರೆಲ್ಲಾ ಬಂದ್ರೆ ಚೆನ್ನಾಗಿರುತ್ತೆ..? ಅವ್ರ ಕೆಪಾಸಿಟಿ ಏನು? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೋ & ಗಿಲ್ ಔಟ್.. KL ಓಪನರ್! – ಆಸಿಸ್ ಸರಣಿಗೆ ಶಮಿ ಕಮ್ ಬ್ಯಾಕ್
ಹೆಡ್ ಕೋಚ್ ಌಂಡಿ ಫ್ಲವರ್.. ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್. ಇದೀಗ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಲ್ವಿ ಅವ್ರನ್ನ ನೇಮಕ ಮಾಡ್ಲಾಗಿದೆ. ಬಟ್ ಈಗ ಮ್ಯಾನೇಜ್ಮೆಂಟ್ಗೆ ಇರೋ ಸವಾಲು ಅಂದ್ರೆ ಆಟಗಾರರ ಆಯ್ಕೆ ಹಾಗೇ ಖರೀದಿ. 2025ರ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು ಅದಕ್ಕೂ ಮುನ್ನ ಆರ್ಸಿಬಿ ಮೂವರನ್ನಷ್ಟೇ ಉಳಿಸಿಕೊಂಡಿದೆ. ಕಿಂಗ್ ವಿರಾಟ್ ಕೊಹ್ಲಿ, ರಜತ್ ಪಟೀದಾರ್ ಹಾಗೇ ಯಶ್ ದಯಾಳ್ ಮಾತ್ರ. ಹೀಗಾಗಿ ಫ್ರಾಂಚೈಸಿ ಪರ್ಸ್ನಲ್ಲಿ 83 ಕೋಟಿ ರೂಪಾಯಿ ಬಾಕಿ ಇದ್ದು ಅಷ್ಟು ಹಣದಲ್ಲಿ ಉಳಿದ ತಂಡವನ್ನ ಕಟ್ಟಬೇಕು. ಬಲಿಷ್ಠ ಪಡೆಯನ್ನೇ ಬಿಲ್ಡ್ ಮಾಡ್ಬೇಕು. ಹಾಗಾದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಬಳಿ ಉಳಿದಿರುವ 83 ಕೋಟಿ ಪರ್ಸ್ನಲ್ಲಿ ಟಾರ್ಗೆಟ್ ಮಾಡಬೇಕಾದ ಆಟಗಾರರು ಯಾರು? ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.
ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಸ್ಕ್ವಾಡ್ ಸ್ಟ್ರಾಂಗ್ ಮಾಡ್ಬೇಕು!
ಆರ್ಸಿಬಿ ತಂಡದಲ್ಲಿ ಡೇ ಒನ್ನಿಂದ ಇರೋ ಕಂಪ್ಲೇಂಟ್ ಬೌಲಿಂಗ್ ವೀಕ್ನೆಸ್.. ಬ್ಯಾಟಿಂಗ್ನಲ್ಲಿ ಘಟಾನುಘಟಿ ಆಟಗಾರರನ್ನೇ ಖರೀದಿಸುವ ಆರ್ಸಿಬಿ, ಬೌಲಿಂಗ್ ವಿಚಾರಕ್ಕೆ ಬಂದಾಗ ಅನಾನುಭವಿಗಳನ್ನೇ ಖರೀದಿಸುವ ಮೂಲಕ ಟೀಕೆಗೆ ಗುರಿಯಾಗುತ್ತದೆ. ಬ್ಯಾಟಿಂಗ್ನಲ್ಲಿ ನೀವು ಚೆನ್ನಾಗಿ ಆಡಿ ದಾಖಲೆ ಮೇಲೆ ದಾಖಲೆ ಬರೆದ್ರೂ ಕಪ್ ಗೆಲ್ಲೋಕೆ ಆಗಿಲ್ಲ ಅಂದ್ರೆ ಅದಕ್ಕೆ ಮೇನ್ ರೀಸನ್ ಬೌಲಿಂಗ್ ನಲ್ಲಿನ ಫೇಲ್ಯೂರ್. ಬಟ್ ಈ ಸಲ ಅದು ರಿಪೀಟ್ ಆಗ್ಬಾರ್ದು. ಹಾಗಾಗಿ ಎರಡು ವಿಭಾಗಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಒಂದಷ್ಟು ಪ್ಲೇಯರ್ಸ್ ಅನುಭವಿಗಳಿದ್ರೆ ಮತ್ತೊಂದಷ್ಟು ಯುವ ಆಟಗಾರರಿಗೆ ಚಾನ್ಸ್ ಕೊಡ್ಬೇಕು. ಬ್ಯಾಟ್ ಹಿಡಿದು ಓಪನರ್ ಆಗಿ ಕಣಕ್ಕಿಳಿಯೋ ಆಟಗಾರನಿಂದ ಹಿಡಿದು 11ನೇ ಸ್ಲಾಟ್ನಲ್ಲಿ ಆಡುವ ಆಟಗಾರನವರೆಗೂ ಅಳೆದು ತೂಗಿ ತಂಡ ಕಟ್ಟಬೇಕು.
ಬ್ಯಾಟಿಂಗ್ ಬೇಸ್ ಮೆಂಟ್ ಹಾಕಿಕೊಡುವಂಥ ಓಪನರ್ ಯಾರು?
ಒಂದು ಟೀಮ್ಗೆ ಬ್ಯಾಟಿಂಗ್ನಲ್ಲಿ ಓಪನರ್ ಆಗಿ ಕಣಕ್ಕಿಳಿಯೋ ಆಟಗಾರನೇ ಮೇನ್ ಇಂಪಾರ್ಟೆಂಟ್. ಆತ ಹಾಕಿಕೊಂಡೋ ಬೇಸ್ಮೆಂಟ್ ನೆಕ್ಸ್ಟ್ ಬ್ಯಾಟರ್ಸ್ಗೆ ಪ್ಲಸ್ ಆಗುತ್ತೆ. ಹಾಗೇ ಸ್ಪಿನ್ ಬೌಲಿಂಗ್ ವಿರುದ್ಧ ಕ್ರೀಸ್ ಕಚ್ಚಿ ನಿಲ್ಲುವಂಥ ಸ್ಟಾಮಿನ ಇರ್ಬೇಕು. ಓಪನರ್ ಜೊತೆಗೆ ವಿಕೆಟ್ ಕೀಪರ್ ಆಗಿದ್ರಂತೂ ಇನ್ನೂ ಪ್ಲಸ್. ಸೋ ಆರ್ಸಿಬಿಗೆ ಓಪನರ್ ಆಗುವಂಥ ಲಿಸ್ಟ್ನಲ್ಲಿ 8 ಆಟಗಾರರಿದ್ದಾರೆ. ನಂಬರ್ 1 ನಮ್ಮ ಕನ್ನಡಿಗ ಕೆಎಲ್ ರಾಹುಲ್. ಹಾಗೇ ಡೆವೊನ್ ಕಾನ್ವೆ, ಜಾನಿ ಬೈರ್ಸ್ಟೋ, ಡೇವಿಡ್ ವಾರ್ನರ್, ರಚಿನ್ ರವೀಂದ್ರ, ರಹಮಾನುಲ್ಲಾ ಗುರ್ಬಾಜ್, ಜೇಕ್ ಫ್ರೇಸರ್-ಮೆಕ್ಗುರ್ಕ್ ಹಾಗೇ ಜೋಸ್ ಬಟ್ಲರ್. ಇಷ್ಟು ಜನರ ಪೈಕಿ ಒಬ್ಬ ಆಟಗಾರನಾದ್ರೂ ಬೆಂಗಳೂರು ತಂಡಕ್ಕೆ ಬಂದ್ರೆ ಓಪನಿಂಗ್ ಸ್ಲಾಟ್ ಸೂಪರ್ ಆಗಿರಲಿದೆ.
ಬೆಂಗಳೂರು ತಂಡಕ್ಕಿದೆ ಮಿಡಲ್ ಆರ್ಡರ್ ಬ್ಯಾಟಿಂಗ್ ವೀಕ್ ನೆಸ್!
ಆರ್ಸಿಬಿಯಲ್ಲಿ ಓಪನರ್ಸ್ ಔಟ್ ಆದ್ರೆ ಆ ನಂತ್ರ ಮಿಡಲ್ ಆರ್ಡರ್ ಬ್ಯಾಟಿಂಗ್ ಬಲ ಅಷ್ಟಕ್ಕಷ್ಟೇ ಇತ್ತು. ಹೀಗಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪಿನ್ ಮತ್ತು ವೇಗದ ಬೌಲರ್ಸ್ ವಿರುದ್ಧ ಅಬ್ಬರಿಸುವಂಥ ಆಟಗಾರ ಬೇಕು. ಈ ಲಿಸ್ಟ್ನಲ್ಲಿ ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್ವೆಲ್, ರಿಲೀ ರೊಸ್ಸೌವ್,
ಲಿಯಾಮ್ ಲಿವಿಂಗ್ಸ್ಟನ್, ಶ್ರೇಯಸ್ ಅಯ್ಯರ್, ಐಡೆನ್ ಮಾರ್ಕ್ರಾಮ್ ಇದ್ದಾರೆ. ಸೋ ಫೈನಲ್ಲಾಗಿ ಆರ್ಟಿಎಂ ಕಾರ್ಡ್ ಬಳಸಿ ವಿಲ್ ಜಾಕ್ಸ್ ಅಥವಾ ಗ್ಲೆನ್ ಮ್ಯಾಕ್ಸ್ವೆಲ್ರನ್ನ ಫ್ರಾಂಚೈಸಿ ಉಳಿಸಿಕೊಳ್ಬೋದು.
5 & 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಶಕ್ತಿಯಾಗುವ ಪ್ಲೇಯರ್!
ಐಪಿಎಲ್ನಲ್ಲಿ ಹೀರೋ ಆಗಿ ಮೆರೆಯೋದೇ ಬೆಸ್ಟ್ ಫಿನಿಶರ್ಸ್. ಕಳೆದ ಬಾರಿ ಈ ಲಿಸ್ಟ್ನಲ್ಲಿ ನಮ್ಮ ದಿನೇಶ್ ಕಾರ್ತಿಕ್ ಇದ್ರು. ಬಟ್ ಈ ಸಲ ಡಿಕೆ ಇಲ್ದೇ ಇರೋದ್ರಿಂದ 5 ಮತ್ತು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಫಿನಿಶಿಂಗ್ ಮಾಡುವವರು ಬೇಕಿದೆ. ಡೇವಿಡ್ ಮಿಲ್ಲರ್, ಟಿಮ್ ಡೇವಿಡ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ಮಾರ್ಕಸ್ ಸ್ಟೊಯಿನಿಸ್ ಈ ನಂಬರ್ನಲ್ಲಿ ಅಬ್ಬರಿಸೋ ತಾಕತ್ತನ್ನ ಹೊಂದಿದ್ದಾರೆ. ಹೀಗಾಗಿ ಮಾಲೀಕರು ಇಷ್ಟು ಜನರ ಪೈಕಿ ಒಬ್ಬರನ್ನಾದ್ರೂ ತಂಡಕ್ಕೆ ಕರೆತರಬೇಕಿದೆ.
ಬ್ಯಾಟಿಂಗ್ ಜೊತೆ ಜೊತೆಗೆ ಬೌಲಿಂಗ್ ನಲ್ಲೂ ಮಿಂಚುವ ಆಲ್ ರೌಂಡರ್ಸ್!
ಬ್ಯಾಟಿಂಗ್ ಲೈನಪ್ ಕಂಪ್ಲೀಟ್ ಪೆವಿಲಿಯನ್ ಸೇರಿದ್ಮೇಲೆ ಜವಾಬ್ದಾರಿಯುತ ಆಟವಾಡುವ ಆಲೌಂಡರ್ಸ್ ಅಗತ್ಯ ಇದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ನಿಭಾಯಿಸಬೇಕು. ಈ ಪೈಕಿ ವಾಷಿಂಗ್ಟನ್ ಸುಂದರ್, ಹರ್ಪ್ರೀತ್ ಬ್ರಾರ್, ಕೃನಾಲ್ ಪಾಂಡ್ಯ, ಅಕೇಲ್ ಹೊಸೈನ್, ಕೇಶವ ಮಹಾರಾಜ್, ಶಹಬಾಜ್ ಅಹ್ಮದ್ ಈ ಕೆಲಸವನ್ನ ಚೆನ್ನಾಗಿ ಮಾಡ್ತಾರೆ. ಸೋ ಇಷ್ಟು ಜನ್ರ ಪೈಕಿ ಯಾರನ್ನಾದ್ರೂ ಪಿಕ್ ಮಾಡ್ಬೇಕಿದೆ.
ವಿಕೆಟ್ ಟೇಕರ್ ಸ್ಪಿನ್ನರ್ & ಮಿಡಲ್ ಓವರ್ಸ್ ಬೌಲರ್!
ಬೆಂಗಳೂರು ತಂಡದ ಪ್ರಾಬ್ಲಮ್ಮೇ ಬೌಲಿಂಗ್. ಬಟ್ ಈ ಸಲ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕು. ವಿಕೆಟ್ ಟೇಕರ್ ಸ್ಪಿನ್ನರ್ ಮತ್ತು ಮಧ್ಯಮ ಓವರ್ ಬೌಲರ್ಸ್ ಅಗತ್ಯ ಇದೆ. ಯುಜ್ವೇಂದ್ರ ಚಹಲ್, ನೂರ್ ಅಹ್ಮದ್, ಮಹೇಶ್ ತೀಕ್ಷಣ, ಮಯಾಂಕ್ ಮಾರ್ಕಾಂಡೆ, ಸುಯಾಶ್ ಶರ್ಮಾ, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಸೇನ್, ಯಶ್ ಠಾಕೂರ್ ಇಷ್ಟ್ರಲ್ಲಿ ಬೆಸ್ಟ್ ಅನ್ನೋರನ್ನ ತಂಡಕ್ಕೆ ಕರೆತರಬೇಕು. ಮಾಜಿ ಬೌಲರ್ ಚಹಾಲ್ ಬಂದ್ರಂತೂ ಇನ್ನು ಖುಷಿಯೇ.
ಡೆತ್ ಓವರ್ ಸ್ಪೆಷಲಿಸ್ಟ್ ಮೇಲೆ ಕಣ್ಣಿಟ್ರಷ್ಟೇ ಈ ಸಲ ಕಪ್ ನಮ್ದು!
ಬೆಂಗಳೂರು ತಂಡ ಎಷ್ಟೋ ಪಂದ್ಯಗಳನ್ನ ಲಾಸ್ಟ್ ಓವರ್ನಲ್ಲಿ ಕಳ್ಕೊಂಡಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಇಲ್ಲದೆ ಪಂದ್ಯಗಳನ್ನ ಕೈ ಚೆಲ್ಲಿದೆ. ಹೀಗಾಗಿ ಆರ್ಸಿಬಿಗೆ ಬೇಕಾದ ಮಸ್ಟ್ ಌಂಡ್ ಶುಡ್ ರೋಲ್ ಅಂದ್ರೆ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್. ಈ ಪೈಕಿ ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಮಿಚೆಲ್ ಸ್ಟಾರ್ಕ್, ಮುಸ್ತಫಿಜುರ್ ರೆಹಮಾನ್, ಟಿ ನಟರಾಜನ್, ಅರ್ಷದೀಪ್ ಸಿಂಗ್ ಸೋ ಇಷ್ಟು ಬೌಲರ್ಗಳಲ್ಲಿ ಒಬ್ಬರನ್ನಾದ್ರೂ ಕರೆ ತಂದ್ರೆ ಲಾಸ್ಟ್ ಓವರ್ನಲ್ಲಿ ಎದುರಾಳಿ ತಂಡವನ್ನ ಆಟ ಆಡಿಸಬಹುದು.
ಒಟ್ಟಾರೆ ಹರಾಜಿಗೂ ಮುನ್ನ 37 ಕೋಟಿ ರೂಪಾಯಿ ಕೊಟ್ಟು ಮೂವರು ಆಟಗಾರರನ್ನು ಬೆಂಗಳೂರು ತಂಡ ಉಳಿಸಿಕೊಂಡಿದೆ. 120 ಕೋಟಿ ಪರ್ಸ್ನಲ್ಲಿ ಇನ್ನೂ 83 ಕೋಟಿ ಉಳಿದಿದೆ. ಐಪಿಎಲ್ನ 10 ಫ್ರಾಂಚೈಸಿಗಳ ಪೈಕಿ ಮೋಸ್ಟ್ ಪಾಪ್ಯುಲರ್ ಟೀಂ ಆಗಿದ್ರೂ ಕಪ್ ಗೆದ್ದಿಲ್ಲ ಅನ್ನೋ ಹಣೆಪಟ್ಟಿ ಹಾಗೇ ಉಳಿದಿದೆ. ಬಟ್ ಈ ಸಲ ಕಪ್ ನಮ್ದೇ ಅಂತಾ ಹೇಳೋಕೆ ಎಲ್ಲಾ ಚಾನ್ಸಸ್ ಇದೆ. ಅದನ್ನ ಫ್ರಾಂಚೈಸಿ ಹೇಗೆ ಉಳಿಸಿಕೊಳ್ಳುತ್ತೆ ಅನ್ನೋದೇ ಈಗಿರೋ ಪ್ರಶ್ನೆ.