ಸಿಎಂ ತಲುಪಲು EDಗೆ ಎರಡೇ ಹೆಜ್ಜೆ! – ಸರದಿಯಲ್ಲಿ ಮೊದಲು ಸಿಗೋದ್ಯಾರು?
ಸಿದ್ದರಾಮಯ್ಯ ತಪ್ಪಿಸಿಕೊಳ್ಳೋಕೆ ಆಗಲ್ವಾ?

ಮುಡಾ ಕೇಸ್ ಸಿದ್ದರಾಮಯ್ಯಗೆ ದೊಡ್ಡ ತಲೆನೋವು ಆಗಿದ್ದು, ಇಡಿ ಇಂಚಿಂಚೂ ತನಿಖೆ ನಡೆಸುತ್ತಿದೆ. ಸಿದ್ದರಾಮಯ್ಯ ವಿಚಾರಣೆಗೆ ಎರಡೇ ಹೆಜ್ಜೆ ಬಾಕಿಯಿದ್ದು, ಸಿಎಂಗೆ ಟೆನ್ಶನ್ ಹೆಚ್ಚಾಗಿದೆ. ಲೋಕಾಯುಕ್ತ ತನಿಖೆ ಎದುರಿಸಿರುವ ಸಿಎಂಗೆ ಇಡಿ ವಿಚಾರಣೆ ಅಷ್ಟು ಸುಲಭವಿಲ್ಲ. ಹೀಗಾಗಿ ಶ್ರೀಘ್ರದಲ್ಲೇ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹಾಗಿದ್ರೆ ಸಿಎಂರನ್ನ ಯಾವಾಗ ವಿಚಾರಣೆ ಮಾಡ್ತಾರೆ..? ಎಲ್ಲಿ ಮಾಡ್ತಾರೆ? ಯಾರನೆಲ್ಲಾ ವಿಚಾರಣೆ ನಡೆಸಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: AUSನಲ್ಲಿ ಟೀಂ ಇಂಡಿಯಾ ಲಾಕ್ ಡೌನ್! – ಕ್ರೀಡಾಂಗಣ ಬಂದ್.. ಫೋನ್ ಬ್ಯಾನ್
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳ ಕಂಟಕ ಯಾವಾಗ ಯಾರ ಬುಡಕ್ಕೆ ಬರುತ್ತದೆಯೋ ಗೊತ್ತಿಲ್ಲ. ಒಂದೆಡೆ ಲೋಕಾಯುಕ್ತ ಪೊಲೀಸರು, ಮತ್ತೊಂದ್ಕಡೆ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ಕೂಡಾ ಹಗರಣವನ್ನು ಬಗೆಯುತ್ತಿದೆ.
ಸಿಎಂಗೆ ಮುಡಾ ಸಂಕಷ್ಟ!
ಸಿಎಂ ಸಿದ್ದರಾಮಯ್ಯ ಆಪ್ತ ಸಹಯಕ ಸಿಟಿ ಕುಮಾರ್ ಅಲಿಯಾಸ್ ಎಸ್ಜಿ ದಿನೇಶ್ಕುಮಾರ್ರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಇಡಿ ಕಚೇರಿಯಲ್ಲಿ 14 ಸೈಟುಗಳ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರೆ. ಪ್ರಮುಖವಾಗಿ ಪಾರ್ವತಿಯವರ ಪತ್ರಕ್ಕೆ ಕುಮಾರ್ ಸಹಿ ಹಾಕಿದ್ದ ಬಗ್ಗೆ ವಿಚಾರಣೆ ನಡೆಸಲಾಗಿದೆ. ಹಗರಣ ಸಂಬಂಧ ಸಂಸದ ಕುಮಾರ್ ನಾಯಕ್ ಕೂಡ ಇಡಿ ವಿಚಾರಣೆ ಎದುರಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ ಸದ್ಯ ರಾಯಚೂರು ಕಾಂಗ್ರೆಸ್ ಸಂಸದರಾಗಿದ್ದಾರೆ. ಈ ಹಿಂದೆ ಮೈಸೂರಿನ ಲೋಕಾ ವಿಚಾರಣೆ ಎದುರಿಸಿದ್ದ ಕುಮಾರ್ ನಾಯಕ್ ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಎದುರಿಸಿದ್ದಾರೆ. ಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮತ್ತು ಮುಡಾ ಮಾಜಿ ಅಧ್ಯಕ್ಷ ಮರೀಗೌಡ ಮತ್ತು ಮಾಜಿ ತಹಶೀಲ್ದಾರ್ ಮಾಳಿಗೆ ಶಂಕರ್ ಅವರ ತೀವ್ರ ವಿಚಾರಣೆ ನಡೆಸಿದ್ದಾರೆ. ಸುಮಾರು ಎಂಟು ಗಂಟೆಗಿಂತಲೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಇ.ಡಿ. ಅಧಿಕಾರಿಗಳು, ನಿವೇಶನ ಹಂಚಿಕೆ ಕುರಿತ ಮಾಹಿತಿ ಪಡೆದಿದ್ದಾರೆ .
ಸಿಎಂ ವಿಚಾರಣೆಗೆ ಎರಡೇ ಹೆಜ್ಜೆ ಬಾಕಿ
ಹೌದು ನಾವು ಇಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಸಿಎಂ ಅತ್ಯಾಪ್ತರ ಹಾಗೂ ಇದಕ್ಕೆ ಸಂಬಂಧಪಟ್ಟವರನ್ನ ಇಡಿ ವಿಚಾರಣೆ ಮಾಡಿದ್ದಾರೆ. ಇನ್ನೂ ಉಳಿದಿರೋದು ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ವಿಚಾರಣೆ ಮಾತ್ರ. ಹೀಗಾಗಿ: ಮುಡಾ ಹಗರಣ ಸಂಬಂಧ ಇ.ಡಿ. ತನಿಖೆ ಕೊನೆ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿಗೆ ಇ.ಡಿ. ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ ಎನ್ನಾಲಾಗುತ್ತಿದೆ. ಮೊದಲು ಸಿಎಂ ಪತ್ನಿ ಪಾರ್ವತಿ ಮತ್ತು ಇವರ ಸಹೋದರ ಮಲ್ಲಿಕಾರ್ಜುನ ವಿಚಾರಣೆ ನಡೆಸಲಿರೋ ಇಡಿ, ನಂತ್ರ ಸಿಎಂ ವಿಚಾರಣೆ ನಡೆಸಿಲಿದೆ.. ಹೀಗಾಗಿ ಸಿಎಂಗೆ ಮುಡಾ ಕೇಸ್ನಲ್ಲಿ ಇಡಿ ಟೆನ್ಶನ್ ಹೆಚ್ಚಾಗಿದೆ.