ಭಾರತಕ್ಕೆ ಗೆಲುವಿನ ತಿಲಕವಿಟ್ಟ ವರ್ಮಾ – ಸಂಜು 0.. ಸೂರ್ಯ 1.. ಏನಾಯ್ತು?
IND Vs SA.. ಸರಣಿ ಕೈವಶನಾ Or ಡ್ರಾ?
ಸಿಕ್ಸ್, ಫೋರ್ ಗಳ ಸುರಿಮಳೆ. ಒಂದ್ಕಡೆ ಟೀಂ ಇಂಡಿಯಾ ಆಟಗಾರರು ಅಬ್ಬರಿಸಿದ್ರೆ ಮತ್ತೊಂದ್ಕಡೆ ಸೌತ್ ಆಫ್ರಿಕಾ ಪ್ಲೇಯರ್ಸ್ ಕೂಡ ಭರ್ಜರಿಯಾಗೇ ಕೌಂಟರ್ ಕೊಟ್ಟಿದ್ರು. ಮ್ಯಾಚ್ ಓಪನಿಂಗ್ನಿಂದ ಹಿಡಿದು ಎಂಡಿಂಗ್ವರೆಗೂ ಅಭಿಮಾನಿಗಳನ್ನ ತುದಿಗಾಲಲ್ಲಿ ಕೂತು ಪಂದ್ಯ ನೋಡುವಂತ ಮಾಡಿದ್ರು. ಅದ್ರಲ್ಲೂ ಟೀಂ ಇಂಡಿಯಾದ ಕಂಪ್ಲೀಟ್ ಜವಾಬ್ದಾರಿಯನ್ನ ಹೆಗಲ ಮೇಲೆ ಹೊತ್ತು ಗೆಲುವಿನತ್ತ ಮುನ್ನಡೆಸಿದ್ದು ಒನ್ ಌಂಡ್ ಓನ್ಲಿ ತಿಲಕ್ ವರ್ಮಾ. ಬಹುಶಃ ನಿನ್ನೆಯ ಮ್ಯಾಚ್ನಲ್ಲಿ ತಿಲಕ್ ಇರ್ಲಿಲ್ಲ ಅಂದ್ರೆ ಭಾರತ ಪಂದ್ಯ ಕೈಚೆಲ್ಲೋ ಎಲ್ಲಾ ಸಾಧ್ಯತೆನೂ ಇತ್ತು. ಹೀಗೆ ತಿಲಕ್ ಹೀರೋ ಆಗಿ ಮೆರೆದ್ರೆ ಸಂಜು ಮತ್ತೆ ಝೀರೋ ಆಗಿದ್ರು. ಸೂರ್ಯ ಕೂಡ ಶೈನ್ ಆಗ್ಲೇ ಇಲ್ಲ. ಅಷ್ಟಕ್ಕೂ ಹರಿಣಗಳ ವಿರುದ್ಧ ಭಾರತ ಗೆದ್ರೂ ಕೂಡ ಒಂದಷ್ಟು ವಿಚಾರಗಳಲ್ಲಿ ಸೋತಿದೆ.
ಇದನ್ನೂ ಓದಿ: ಮುಡಾ ಕೇಸ್ ಗೆ ಬಿಗ್ ಟ್ವಿಸ್ಟ್ – ಹಂಚಿಕೆಯಾದ 2 ಸಾವಿರ ಸೈಟ್ಗಳ ಮೂಲ ದಾಖಲೆ ಮಿಸ್ಸಿಂಗ್?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದ್ರಂತೆ ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಓಪನಿಂಗ್ನಲ್ಲೇ ಬಿಗ್ ಶಾಕ್ ಕಾದಿತ್ತು. ಫಸ್ಟ್ ಮ್ಯಾಚ್ನಲ್ಲಿ ಸಿಡಿಲಮರಿಯಂತೆ ಅಬ್ಬರಿಸಿ ಸೆಂಚುರಿ ಸಿಡಿಸಿದ್ದ ಸಂಜು ಸ್ಯಾಮ್ಸನ್ 2ನೇ ಪಂದ್ಯದಂತೆಯೇ ಮೂರನೇ ಮ್ಯಾಚ್ನಲ್ಲೂ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ರು. 2 ಬಾಲ್ಗಳನ್ನ ಫೇಸ್ ಮಾಡಿ ಪೆವಿಲಿಯನ್ ಸೇರಿದ್ರು. 3ನೇ ಸ್ಲಾಟ್ನಲ್ಲಿ ತಿಲಕ್ ವರ್ಮಾ ಕ್ರೀಸ್ಗೆ ಬಂದ್ಮೇಲೆ ಟೀಂ ಇಂಡಿಯಾದ ಬ್ಯಾಟಿಂಗ್ ಮತ್ತೆ ಸೌಂಡ್ ಮಾಡೋಕೆ ಶುರು ಮಾಡಿದ್ರು. ಒಂದ್ಕಡೆ ಅಭಿ ಅಬ್ಬರಿಸಿದ್ರೆ ಮತ್ತೊಂದೆಡೆ ತಿಲಕ್ ಸೌತ್ ಆಫ್ರಿಕಾ ಬೌಲರ್ಗಳನ್ನ ಬೆಂಡೆತ್ತೋಕೆ ಸ್ಟಾರ್ಟ್ ಮಾಡಿದ್ರು.
ಸತತ ಎರಡನೇ ಬಾರಿ ಡಕೌಟ್ ಆದ ಸಂಜು ಸ್ಯಾಮ್ಸನ್!
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡದ ಓಪನರ್ ಆಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಸತತ ಎರಡನೇ ಬಾರಿಗೂ ಡಕೌಟ್ ಆದರು. ಬಟ್ ಕಳೆದ ಕೆಲ ಪಂದ್ಯಗಳಲ್ಲಿ ಫಾರ್ಮ್ ಕಳ್ಕೊಂಡಿದ್ದ ಅಭಿಷೇಕ್ ಶರ್ಮಾ ಕಮ್ ಬ್ಯಾಕ್ ಮಾಡಿದ್ರು. 25 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 50 ರನ್ ಗಳಿಸಿ ಎರಡನೇ ವಿಕೆಟ್ಗೆ ತಿಲಕ್ ವರ್ಮಾ ಜೊತೆ ಸೇರಿ 107 ರನ್ಗಳ ಜೊತೆಯಾಟವಾಡಿದ್ರು. ಅಭಿಷೇಕ್ ಶರ್ಮಾ ಔಟ್ ಆದ ಬಳಿಕ ಬಂದ ತಿಲಕ್ ವರ್ಮಾ, ಸೌತ್ ಆಫ್ರಿಕಾ ಬೌಲರ್ಗಳ ಫುಲ್ ಚಾರ್ಜ್ ಮಾಡಿದ್ರು.
ಚೊಚ್ಚಲ ಟಿ-20ಐ ಶತಕ ಸಿಡಿಸಿ ಮಿಂಚಿದ ತಿಲಕ್ ವರ್ಮಾ!
ನಿನ್ನೆ ಪಂದ್ಯದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ನೋಡೋದೇ ಚೆಂದ. ಮೈದಾನದ ಮೂಲೆ ಮೂಲೆಗೂ ಚೆಂಡು ಅಟ್ಟಿದ ತಿಲಕ್ ವರ್ಮಾ, ಟಿ20ಐ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು. ಬಟ್ ತಿಲಕ್ಗೆ ಮಾತ್ರ ಯಾರೂ ಸರಿಯಾಗಿ ನಿಂತು ಸಪೋರ್ಟ್ ಮಾಡ್ಲೇ ಇಲ್ಲ. ಚ್ಯುಯಿಂಗ್ ಗಮ್ ಸೂರ್ಯ ಸ್ಟೈಲಾಗಿ ಬಂದು 1 ರನ್ ಗಳಿಸಿ ಟಾಟಾ ಬೈ ಹೇಳಿದ್ರು. ಇನ್ನು ಹಾರ್ದಿಕ್ ಪಾಂಡ್ಯ ತಿಲಕ್ಗೆ ಬ್ಯಾಟಿಂಗ್ ಕೊಡ್ದಂಗೆ ತಾವೇ ಎಲ್ಲಾ ರನ್ ಹೊಡ್ಯೋ ಹಾಗೇ ಪೋಸ್ ಕೊಡ್ತಿದ್ರು. ಬಟ್ 18 ರನ್ ಗಳಿಸುವಷ್ಟ್ರಲ್ಲೇ ಸುಸ್ತಾಗಿ ಔಟ್ ಆದ್ರು. ಇನ್ನು ರಿಂಕು ಸಿಂಗ್ ಅಂತೂ 13 ಎಸೆತಗಳಲ್ಲಿ ಗಳಿಸಿದ್ದು 8 ರನ್. ಇನ್ನು ರಮಣ್ ದೀಪ್ ಸಿಂಗ್ ತನ್ನ ಪದಾರ್ಪಣೆ ಪಂದ್ಯದಲ್ಲಿ 15 ರನ್ ಗಳಿಸಿ ರನೌಟ್ ಆದರು. ಯಾರ್ ಬಂದು ಹೋದ್ರೂ ಕೂಡ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ತಿಲಕ್, 7 ಬೌಂಡರಿ, 8 ಸಿಕ್ಸರ್ ಸಹಿತ 107 ರನ್ ಚಚ್ಚಿದರು. ಈ ಮೂಲಕ 20 ಓವರ್ಗಳಲ್ಲಿ ಟೀಮ ಇಂಡಿಯಾ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆ ಹಾಕಿತು.
ಗೆಲುವಿನ ಸನಿಹಕ್ಕೆ ಬಂದು ಟಫ್ ಫೈಟ್ ಕೊಟ್ಟ ಸೌತ್ ಆಫ್ರಿಕಾ!
ಇನ್ನು ಟೀಂ ಇಂಡಿಯಾ ನೀಡಿದ್ದ 220 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಸೌತ್ ಆಫ್ರಿಕಾಕ್ಕೆ ಒಳ್ಳೆ ಓಪನಿಂಗ್ ಸಿಗ್ಲಿಲ್ಲ. ರಯಾನ್ ರಿಕೆಲ್ಟನ್ 20 ರನ್ ಗಳಿಸಿದರೆ, ರೀಜಾ ಹೆಂಡ್ರಿಕ್ಸ್ 21, ಟ್ರಿಸ್ಟಾನ್ ಸ್ಟಬ್ಸ್ 12, ಏಡನ್ ಮಾರ್ಕ್ರಮ್ 29, ಡೇವಿಡ್ ಮಿಲ್ಲರ್ 18 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೋ ಜಾನ್ಸನ್ ಹೋರಾಟ ನಡೆಸಿದರು. ಮಾರ್ಕೋ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ದಾಖಲೆಯ ವೇಗದ ಅರ್ಧಶತಕ ಸಿಡಿಸಿದರು. 16 ಎಸೆತಗಳಲ್ಲಿ 50ರ ಗಡಿ ದಾಟಿದರು. 17 ಎಸೆತಗಳಲ್ಲಿ 54 ರನ್ ಗಳಿಸಿದ ಜಾನ್ಸನ್ ಇನ್ನಿಂಗ್ಸ್ನಲ್ಲಿ 4 ಬೌಂಡರಿ, 5 ಸಿಕ್ಸರ್ಗಳಿದ್ದವು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 7 ವಿಕೆಟ್ಗೆ 208 ರನ್ ಗಳಿಸಲಷ್ಟೇ ಸಾದ್ಯವಾಯ್ತು. ಪರಿಣಾಮ ಭಾರತ 11 ರನ್ ಗಳ ಜಯ ಸಾಧಿಸಿತು.
ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿದ್ದಾರೆ. ವರುಣ್ ಚಕ್ರವರ್ತಿ 2, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಸೆಂಚುರಿ.. ಜೀರೋ.. ಜೀರೋ.. ಸಂಜು ಕೆಟ್ಟ ದಾಖಲೆ!
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅಬ್ಬರದಿಂದಲೇ ಆರಂಭಿಸಿದ್ದ ಸಂಜು, 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆದರೆ ನಂತ್ರ ದಿಢೀರ್ ಫಾರ್ಮ್ ಕಳೆದುಕೊಂಡಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ಖಾತೆ ತೆರೆಯದ ಸಂಜು, ಸರಣಿಯ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ್ರು. ಇದರೊಂದಿಗೆ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಟಿ20ಯಲ್ಲಿ ಇದುವರೆಗೆ ಟೀಂ ಇಂಡಿಯಾ ಪರ 32 ಇನ್ನಿಂಗ್ಸ್ ಆಡಿದ್ದು, ಈ ಅವಧಿಯಲ್ಲಿ 6 ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಈ ವರ್ಷ 5 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ. ಈ ಮೂಲಕ ಒಂದು ವರ್ಷದಲ್ಲಿ 5 ಬಾರಿ ಖಾತೆ ತೆರೆಯದೆ ಔಟ್ ಆದ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ಬೇಡದ ದಾಖಲೆ ಸಂಜು ಪಾಲಾಗಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಈಗ ಮೂರನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಇದುವರೆಗೆ 12 ಬಾರಿ ಸೊನ್ನೆ ಸುತ್ತಿದ್ದರೆ, ವಿರಾಟ್ ಕೊಹ್ಲಿ 7 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಒಟ್ನಲ್ಲಿ 22 ವರ್ಷದ ಯುವ ಬ್ಯಾಟ್ಸ್ಮನ್ ತಿಲಕ್ ವರ್ಮ್ ರೋಚಕ ಶತಕದಿಂದ ಭಾರತ ಮೂರನೇ ಪಂದ್ಯವನ್ನ ಗೆದ್ದು ಕೊಂಡಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಕೊನೇ ಪಂದ್ಯ ನವೆಂಬರ್ 15ರಂದು ನಡೆಯಲಿದ್ದು, ಈ ಪಂದ್ಯವನ್ನ ಗೆದ್ರೆ ಭಾರತ ಸರಣಿಯನ್ನ ಕೈ ವಶ ಮಾಡಿಕೊಳ್ಳಲಿದೆ. ಇಲ್ದಿದ್ರೆ ಸರಣಿ ಡ್ರಾ ಆಗಲಿದೆ.