ಮುಡಾ ಕೇಸ್‌ ಗೆ ಬಿಗ್‌ ಟ್ವಿಸ್ಟ್‌ – ಹಂಚಿಕೆಯಾದ 2 ಸಾವಿರ ಸೈಟ್‌ಗಳ ಮೂಲ ದಾಖಲೆ ಮಿಸ್ಸಿಂಗ್?‌  

ಮುಡಾ ಕೇಸ್‌ ಗೆ ಬಿಗ್‌ ಟ್ವಿಸ್ಟ್‌ – ಹಂಚಿಕೆಯಾದ 2 ಸಾವಿರ ಸೈಟ್‌ಗಳ ಮೂಲ ದಾಖಲೆ ಮಿಸ್ಸಿಂಗ್?‌  

ಮುಡಾ ಕೇಸ್‌ ರಾಜ್ಯದಾದ್ಯಂತ ಭಾರಿ ಸದ್ದು ಮಾಡ್ತಾ ಇದೆ. ಇದೀಗ ಈ ಕೇಸ್‌ ಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ  ಹಂಚಿಕೆ ಮಾಡಿದ ಸುಮಾರು 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲದೇ ಇರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪಾಕ್ ಕಂಪ್ಲೀಂಟ್ ಪಾಪರ್! – ಲೀ.ಹಾಲಿಗೆ $220.. ಚಿಕನ್‌ಗೆ $650

ಮುಡಾ ಹಂಚಿಕೆ ಮಾಡಿದ 5 ಸಾವಿರ ಸೈಟ್‌ಗಳಲ್ಲಿ ಸುಮಾರು 2 ಸಾವಿರ ಸೈಟ್‌ಗಳಿಗೆ ಯಾವುದೇ ಬಾಂಡ್ ಪೇಪರ್‌ಗಳೇ ಇಲ್ಲದಿರುವ ವಿಚಾರ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ಮುಡಾದಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. 50:50 ಅನುಪಾತವನ್ನೇ ವರದಾನ ಮಾಡಿಕೊಂಡ ಖದೀಮರು 1950 ಸೈಟ್‌ಗಳನ್ನು ಪಡೆದಿದ್ದಾರೆ. 1950 ಸೈಟ್‌ಗಳ ಪೈಕಿ ಒಬ್ಬೊಬ್ಬರು 30, 40, 50 ಸೈಟ್ ಪಡೆದುಕೊಂಡಿದ್ದಾರೆ.

60:40, 50:50ರ ಅನುಪಾತದಲ್ಲಿ ಒಟ್ಟು ಮುಡಾ 5 ಸಾವಿರ ಸೈಟ್‌ಗಳನ್ನು ಹಂಚಿಕೆ ಮಾಡಿದೆ. ಈ ಪ್ರಕರಣದ ತನಿಖೆಗೆ ಇಳಿದ ಇಡಿ ಮೂಲ ದಾಖಲೆಯನ್ನು ಹುಡುಕಿದೆ. ಈ ವೇಳೆ ಮುಡಾದಲ್ಲಿ ಈ ಆಸ್ತಿಗೆ ಸಂಬಂಧಿಸಿದಂತೆ ಬಾಂಡ್ ಪೇಪರ್‌ಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಮುಡಾ ಯಾವ ಮಾನದಂಡದ ಅಡಿಯಲ್ಲಿ ಈ ಸೈಟ್‌ ಹಂಚಿಕೆ ಮಾಡಲಾಗಿದೆ? ಈ ಸೈಟ್‌ಗಳನ್ನು ಪಡೆದವರ ಹಿನ್ನೆಲೆ ಏನು? ಈ ಸೈಟ್‌ ಪಡೆಯಲು ಇವರು ನೀಡಿದ ದಾಖಲೆ ಏನು ಇತ್ಯಾದಿಗಳ ವಿವರವನ್ನು ಈಗ ಇಡಿ ಕಲೆ ಹಾಕಲು ಮುಂದಾಗಿದೆ.

Shwetha M