ಹೆಚ್ಚಿದ ಮುಸ್ಮಿಂ ವೋಟ್‌, ನಿಖಿಲ್‌ಗೆ ಟೆನ್ಶನ್ – 3 ಕ್ಷೇತ್ರ.. ಯಾರ ಗೆಲುವು ಸುಲಭ?
ಮತಗಟ್ಟೆಯಲ್ಲೇ ಮತದಾರರಿಗೆ ದುಡ್ಡು!

ಹೆಚ್ಚಿದ ಮುಸ್ಮಿಂ ವೋಟ್‌, ನಿಖಿಲ್‌ಗೆ ಟೆನ್ಶನ್ – 3 ಕ್ಷೇತ್ರ.. ಯಾರ ಗೆಲುವು ಸುಲಭ?ಮತಗಟ್ಟೆಯಲ್ಲೇ ಮತದಾರರಿಗೆ ದುಡ್ಡು!

ರಾಜ್ಯದಲ್ಲಿ ನಡೆಯುತ್ತಿರೋ ಬೈ ಎಲೆಕ್ಷನ್‌ಗೆ ಅಂತಿಮ ತೆರೆ ಬಿದ್ದಿದ್ದು, ಭರ್ಜರಿ ಮತದಾನ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದ್ದು, ಇದೇ ತಿಂಗಳ 23 ರಂದು ಹೊರ ಬೀಳಲಿದೆ. ಜೊತೆಗೆ ಮತದಾನದ ದಿನವೇ ಕಾಂಚಾಣ ಕೂಡ ಸದ್ದು ಮಾಡಿದೆ.

ಇದನ್ನೂ ಓದಿ: IND Vs SA.. ಯಾರಿಗೆ ಬ್ಯಾಡ್​ಲಕ್? – ಭಾರತಕ್ಕೆ ಬ್ಯಾಟಿಂಗ್ ಫೇಲ್ಯೂರ್ ಶಾಪ

ದೇಶದ ವಿವಿಧ ಭಾಗಗಳಲ್ಲಿ ಎಲೆಕ್ಷನ್ ನಡೆದಿದೆ. 81 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಮೊದಲ ಹಂತದಲ್ಲಿ 43 ಸ್ಥಾನಗಳಿಗೆ ಮತದಾನ ನಡೆದಿದೆ.  ಇದಲ್ಲದೇ  10 ರಾಜ್ಯಗಳ ಒಟ್ಟು 31 ವಿಧಾನಸಭಾ ಸ್ಥಾನಗಳಿಗೆ ಮತ್ತು ಕೇರಳದ ವಯನಾಡ್ ಹಾಗೂ ಮಹಾರಾಷ್ಟ್ರದ ನಂದೆದ್ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆದಿದೆ.

ಬೈ ಎಲೆಕ್ಷನ್ ಸಮರ

ರಾಜಸ್ಥಾನ 7 ಪಶ್ಚಿಮ ಬಂಗಾಳ- 6 ಅಸ್ಸಾಂ -5  ಬಿಹಾರ –  4, ಕರ್ನಾಟಕ 3, ಮಧ್ಯಪ್ರದೇಶ 2, ಛತ್ತೀಸ್​ಗಢ, ಗುಜರಾತ್, ಕೇರಳ, ಮೇಘಾಲಯ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇನ್ನು ಸಿಕ್ಕಿಂನಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ

ಕರುನಾಡಿನಲ್ಲಿ ಯಾರಿಗೆ ವಿಜಯ ಮಾಲೆ?

ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮನೆ ಪ್ರಚಾರ ನಡೆಸಿ ಮತಬೇಟೆಯಾಡಿದ್ದಾರೆ. ಸದ್ಯ ಇಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮತದಾರ ಪ್ರಭು ಯಾರಿಗೆ ಗೆಲುವಿನ ಚುಕ್ಕಾಣಿ, ಯಾರಿಗೆ ಸೋಲಿನ ರುಚಿ ತೋರಿಸ್ತಾನೆ ಅನ್ನೋದು ನವೆಂಬರ್ 23ಕ್ಕೆ ಗೊತ್ತಾಗಲಿದೆ. ಅದ್ರಲ್ಲೂ ಮರು ಕ್ಷೇತ್ರದ ಮಿನಿಯುದ್ಧದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ರೆ, ಅಭ್ಯರ್ಥಿಗಳಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಇನ್ನು ಚನ್ನಪಟ್ಟಣದಲ್ಲಿ ಮಸ್ಮಿಂ ಮತದಾರರಿಂದ ಹೆಚ್ಚು ವೋಟಿಂಗ್ ಮಾಡಿದ್ದಾರೆ. ಇದು ಕಾಂಗ್ರೆಸ್‌ಗೆ ಪ್ಲಸ್ ಆಗುವ ಚಾನ್ಸ್‌ ಇದೆ. ಯಾಕಂದ್ರೆ ಇಷ್ಟು ವರ್ಷ ಚನ್ನಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಫೈಟ್ ಇತ್ತು. ಆಗ ಮುಸ್ಮಿಂ ಮತದಾರರ ವೋಟ್ ಜೆಡಿಎಸ್‌ಗೆ ಬೀಳುತ್ತಿದ್ದವು. ಆದ್ರೆ ಈಗ ವೋಟ್‌ ಕಾಂಗ್ರೆಸ್ ಪಾಲಾಗುತ್ತೆ. ಹೀಗಾಗಿ ಇದು ಸಿಪಿ ಯೋಗೇಶ್ವರ್‌ ಗೆಲುವಿನಲ್ಲಿ ಈ ಮತಗಳು ಹೆಚ್ಚು ಪಾತ್ರವಹಿಸಲಿವೆ.

ಚನ್ನಪಟ್ಟಣದಲ್ಲಿ ಕುಣಿದ ಝಣ ಝಣ ಕಾಂಚಾಣ

ಈ ಬೈ ಎಲೆಕ್ಷನ್‌ನಲ್ಲಿ ಚನ್ನಪಟ್ಟಣ ಕ್ಷೇತ್ರವೇ ಹೈವೋಲ್ಟೆಜ್ ಕ್ಷೇತ್ರವಾಗಿದೆ. ಈ ಗೆಲುವು ಹೆಚ್‌ಡಿಕೆ Vs ಡಿಕೆಶಿ ಎನ್ನುವಂತಾಗಿದೆ. ಯಾಕಂದ್ರೆ ಬಿಜೆಪಿಯಲ್ಲಿದ್ದ ಸಿಪಿ ಯೋಗೇಶ್ವರ್‌ನ್ನ ತಮ್ಮ ಕಾಂಗ್ರೆಸ್‌ ಪಕ್ಷಕ್ಕೆ ಕರೆದುಕೊಂಡ ಬಂದು ಮೈತ್ರಿ ವಿರುದ್ಧ ಸಮರ ಸಾರಿದ್ದಾರೆ. ಕುಮಾರಸ್ವಾಮಿ ತನ್ನ ಕ್ಷೇತ್ರ ಉಳಿಸಿಕೊಳ್ಳೋಕೆ ಅನಿವಾರ್ಯವಾಗಿ ನಿಖಿಲ್ ಕುಮಾರಸ್ವಾಮಿಯನ್ನ ಅಖಾಡಕ್ಕೆ ಇಳಿಸಿದ್ದಾರೆ. ಅಲ್ಲದೇ ಇಬ್ಬರಲ್ಲಿ ಒಬ್ಬರು ಸೋತ್ರೆ ಅವರಿಗೆ ಇದು 3ನೇ ಸೋಲಾಗಲಿದೆ. ಹೀಗಾಗಿ ಗೆಲುವು ಸಾಕಷ್ಟು ಮುಖ್ಯವಾಗಿದ್ದು, ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಅದ್ರಲ್ಲೂ ಮತದಾನದ ದಿನವೇ ಮತಗಟ್ಟೆ ಬಳಿ ಹಣ ಹಂಚುವ ದೃಶ್ಯ ಕಂಡು ಬಂದಿದೆ. ರಾಜ್ಯದ 3 ಕ್ಷೇತ್ರದಲ್ಲೂ ಚೆನ್ನಾಗಿ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಇದೇ ತಿಂಗಳ 23ಕ್ಕೆ ಹೊರ ಬೀಳಲಿದೆ.

Shwetha M