ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ಶಬರಿಮಲೆಗೆ ಹೋಗಲು KSRTC ಯಿಂದ ವಿಶೇಷ ವ್ಯವಸ್ಥೆ!

ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ಶಬರಿಮಲೆಗೆ ಹೋಗಲು KSRTC ಯಿಂದ ವಿಶೇಷ ವ್ಯವಸ್ಥೆ!

ಕೇರಳದ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ಈ ವರ್ಷದ ಅವಧಿ ಶುರುವಾಗಿದೆ. ಇದೀಗ ಶಬರಿಮಲೆ ಯಾತ್ರೆ ಕೈಗೊಳ್ಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಬಿಡಲಿದೆ.

ಇದನ್ನೂ ಓದಿ: IND Vs SA.. ಯಾರಿಗೆ ಬ್ಯಾಡ್​ಲಕ್? – ಭಾರತಕ್ಕೆ ಬ್ಯಾಟಿಂಗ್ ಫೇಲ್ಯೂರ್ ಶಾಪ

ನವೆಂಬರ್‌ 29 ರಿಂದ ಬೆಂಗಳೂರು ಟು ಶಬರಿಮಲೆಗೆ ಬಸ್ ಸಂಚಾರ ಶುರುವಾಗಲಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ಸೀಸನ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ವೋಲ್ವೋ ಬಸ್ ಸಂಚಾರ ಮಾಡಲಿದೆ.

ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್​ಗೆ ಬಸ್ ಪ್ರಯಾಣ ಬೆಳಸಲಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್​ನಿಂದ ಶಾಂತಿನಗರಕ್ಕೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ 1.50ಕ್ಕೆ ಶಾಂತಿನಗರದಿಂದ ಹೊರಟು ಬೆಳಗ್ಗೆ 6.40ಕ್ಕೆ ನೀಲಕ್ಕಲ್ ತಲುಪಲಿದೆ.

Shwetha M

Leave a Reply

Your email address will not be published. Required fields are marked *