ಬಿಗ್‌ಬಾಸ್‌ ಮನೆಯಲ್ಲಿ ಅರಳಿದ ಪ್ರೀತಿಗೆ ಮತ್ತೆ ಹುಳಿ – ಕಿತ್ತಾಡಿಕೊಂಡ ಅನುಷಾ ಮತ್ತು ಧರ್ಮ
ಮನೆ ಮಂದಿಗೆ ಮಾತಿನಲ್ಲೇ ಟಕ್ಕರ್ ಕೊಟ್ಟ ಅನುಷಾ

ಬಿಗ್‌ಬಾಸ್‌ ಮನೆಯಲ್ಲಿ ಅರಳಿದ ಪ್ರೀತಿಗೆ ಮತ್ತೆ ಹುಳಿ – ಕಿತ್ತಾಡಿಕೊಂಡ ಅನುಷಾ ಮತ್ತು ಧರ್ಮಮನೆ ಮಂದಿಗೆ ಮಾತಿನಲ್ಲೇ ಟಕ್ಕರ್ ಕೊಟ್ಟ ಅನುಷಾ

 

ಬಿಗ್ ಬಾಸ್ ಸೀಸನ್ -11 43ನೇ ದಿನಕ್ಕೆ ಕಾಲಿಟ್ಟಿದೆ, ವೀಕ್ಷಕರಿಗೆ ಮನೋರಂಜನೆ ಹೆಚ್ಚಿಸಲು ಜೋಡಿ ಟಾಸ್ಕ್‌ ನೀಡಿದ್ದಾರೆ. ಪಾರ್ಟನರ್‌ಗಳ ಆಯ್ಕೆಯಲ್ಲಿ ಸ್ಪರ್ಧಿಗಳು ಎಡವುತ್ತಾರೆ ಎಂದು ಸ್ವತಃ ಬಿಗ್ ಬಾಸ್ ಜೋಡಿಗಳ ಪಟ್ಟಿಯನ್ನು ಕ್ರಿಯೇಟ್ ಮಾಡಿದ್ದಾರೆ. ಯಾವುದೇ ಆಟವಾಡಿದರೂ ಜೋಡಿಯಾಗಿ ಆಡಬೇಕು, ಜೋಡಿಯಾಗಿ ಓಡಾಡಬೇಕು ಅಲ್ಲದೆ ಜೋಡಿಯಾಗಿಯೇ ಗಾಸಿಪ್ ಮಾಡಬೇಕು.

ಇದನ್ನೂ ಓದಿ : ರೆಬೆಲೆ ಸ್ಟಾರ್ ಅಂಬರೀಷ್ ಮನೆಗೆ ಜ್ಯೂನಿಯರ್ ಅಂಬರೀಷ್ ಎಂಟ್ರಿ – ಗಂಡು ಮಗುವೆ ಜನ್ಮ ನೀಡಿದ ಅವಿವಾ ಬಿದ್ದಪ್ಪ

ಕ್ಯಾಪ್ಟನ್ಸಿ ಟಾಸ್ಕ್‌ ಗೆಲ್ಲಲ್ಲು ತ್ರಿವಿಕ್ರಮ್ ಮತ್ತು ಮಂಜಣ್ಣ ಮಾಡಿಕೊಂಡ ಮ್ಯಾಚ್‌ ಫಿಕ್ಸಿಂಗ್‌ ಗೇಮ್‌ನಿಂದ ಬಿಗ್ ಬಾಸ್ ಬೇಸರ ಮಾಡಿಕೊಂಡು ಈ ವಾರ ಕ್ಯಾಪ್ಟನ್‌ಗೆ ಯಾವುದೇ ವಿಶೇಷ ಅಧಿಕಾರ ನೀಡುತ್ತಿಲ್ಲ. ಸ್ಪರ್ಧಿಗಳೇ ಮಾತನಾಡಿಕೊಂಡು ಒಂದು ಜೋಡಿಯನ್ನು ಈ ವಾರ ನೇರ ನಾಮಿನೇಟ್ ಮಾಡಬೇಕಿದೆ. ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಪ್ರತಿಯೊಂದು ಜೋಡಿನೂ ಅನುಷಾ ಮತ್ತು ಗೋಲ್ಡ್‌ ಸುರೇಶ್‌ರನ್ನು ನಾಮಿನೇಟ್ ಮಾಡಿದ್ದಾರೆ. ‘ನಿಮ್ಮ ಸ್ಮೈಲ್ ನೋಡಿದರೆ ಖುಷಿ ಆಗುತ್ತೆ ಅಂತ ಅನುಷ ಹೇಳ್ತಾರೆ ಹಾಗೆ ಮತ್ತೊಂದು ದಿನ ನೋಡಿದರೆ ನೀವು ಫೇಕ್‌ ಎಂದು ಮುಖಕ್ಕೆ ಹೇಳುತ್ತಾರೆ’ ಎಂದು ಗೌತಮಿ ಕಾರಣ ಕೊಡುತ್ತಾರೆ. ‘ಮನೆಯಲ್ಲಿ ಅನುಷಾ ಇನ್‌ವಾಲ್ಮೆಂಟ್ ಬಹಳ ಕಡಿಮೆ ಇದೆ ಮನೆಯಲ್ಲಿ’ ಎಂದು ಚೈತ್ರಾ ಹೇಳಿದರೆ ‘ಅನುಷಾ ಅವರಲ್ಲಿ ಎಂಟರ್ಟೈನಿಂಗ್ ಫ್ಯಾಕ್ಟ್‌ ಅಷ್ಟು ಇಲ್ಲ’ಎಂದು ಮೋಕ್ಷಿತಾ ಹೇಳುತ್ತಾರೆ. ಇನ್ನು ಅನುಷಾ ಆಪ್ತ ಸ್ನೇಹಿತಾ ಧರ್ಮಕೀರ್ತಿ ರಾಜ್‌ ‘ಅನುಷಾ ಅವರಲ್ಲಿ ಅಗ್ರೆಷನ್‌ ತುಂಬಾನೇ ಕಡಿಮೆ ಇದೆ ಇನ್ನು ಮುಂದೆ ನುಗ್ಗಬೇಕು’ಎನ್ನುತ್ತಾರೆ.

ಪ್ರತಿ ಜೋಡಿಯ ಕಾರಣ ಕೇಳಿದ ಮೇಲೆ ಅನುಷಾ ಉತ್ತರ ಕೊಡಲು ಮುಂದಾಗುತ್ತಾರೆ. ‘ಮೋಕ್ಷಿತಾ ಅವರೇ ಬಿಗ್ ಬಾಸ್ ಮನೆಯಲ್ಲಿ ನೀವು ಎಷ್ಟು ಎಂಟರ್ಟೈನಿಂಗ್ ಆಗಿದ್ದೀರಾ? ಗೌತಮಿ ಈಗಲೂ ನಿಮ್ಮ ಮುಖಕ್ಕೆ ನಾನು ಉತ್ತರಿಸುತ್ತಿರುವ ನೀವು ಫೇಕ್, ಧರ್ಮ ನನ್ನ ಅಗ್ರೆಷನ್‌ ಬಗ್ಗೆ ನೀವು ಮಾತನಾಡುತ್ತಿದ್ದೀರಾ ನನ್ನ ಅಗ್ರೆಷನ್ ಕಡಿಮೆ ಆಯ್ತು ಎಂದು ನಿಮ್ಮ ಅಗ್ರೆಷನ್ ಎಷ್ಟಿದೆ? ಧರ್ಮ ನೀವೂ ಏನೂ ಆಟವಾಡಿಲ್ಲ ನೀವು ಎಷ್ಟು ಭಾಗಿಯಾಗಿದ್ದೀರಾ? ಎಂದು ಅನುಷಾ ಹೇಳುತ್ತಾರೆ. ನನ್ನ ಬಗ್ಗೆ ನಾನು ಒಪ್ಪಿಕೊಂಡಿರುವೆ…ಮನೆ ಮಂದಿ ಎಲ್ಲಾ ಸೇರಿಕೊಂಡು ನನ್ನನ್ನು ನಾಲಾಯಕ್ ಬೇವರ್ಸಿ ಎಂದು ಉಗಿದ್ದಿದ್ದಾರೆ ಅಷ್ಟು ಸಾಲದಾ? ಎಂದು ಧರ್ಮ ಉಲ್ಟಾ ಉತ್ತರಿಸುತ್ತಾರೆ.

Kishor KV

Leave a Reply

Your email address will not be published. Required fields are marked *