ಕೀರ್ತಿ ಕಮ್‌ಬ್ಯಾಕ್.. ಕಾವೇರಿ ಕೃತ್ಯಕ್ಕೆ ಬ್ರೇಕ್‌ – ವೈಷ್ಣವ್‌ ನ ಬಿಟ್ಟುಕೊಟ್ಟ ಲಕ್ಷ್ಮೀ?

ಕೀರ್ತಿ ಕಮ್‌ಬ್ಯಾಕ್.. ಕಾವೇರಿ ಕೃತ್ಯಕ್ಕೆ ಬ್ರೇಕ್‌ – ವೈಷ್ಣವ್‌ ನ ಬಿಟ್ಟುಕೊಟ್ಟ ಲಕ್ಷ್ಮೀ?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ಮಹಾ ತಿರುವು ಪಡೆದುಕೊಂಡಿದೆ.. ಮಗನ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಕಾವೇರಿ ತನಗೇನು ಅನ್ಸುತ್ತೆ ಅದನ್ನೇ ಮಾಡುತ್ತಾ ಬಂದಿದ್ದಾಳೆ.. ಜೀವ ತೆಗೆಯೋದಕ್ಕೂ ಹೇಸೋದಿಲ್ಲ.. ಇದೀಗ ಕಾವೇರಿ ಆಟಕ್ಕೆ ಬ್ರೇಕ್‌ ಬೀಳೋ ಟೈಮ್‌ ಹತ್ತಿರವಾಗಿದೆ.. ಸತ್ತಿದ್ದಾಳೆ ಅಂದ್ಕೊಂಡಿದ್ದ ಕೀರ್ತಿ ಮತ್ತೆ ಎಂಟ್ರಿಕೊಟ್ಟಿದ್ದಾಳೆ.. ಕೀರ್ತಿ ಕಮ್‌ಬ್ಯಾಕ್‌ ಮಾಡ್ತಿದ್ದಂತೆ ಕಾವೇರಿ ಹುಚ್ಚಾಟಕ್ಕೆ ಬ್ರೇಕ್‌ ಬೀಳುತ್ತಾ? ಹಾಗೇ ಲಕ್ಷ್ಮೀ ವೈಷ್ಣವ್‌ ನ ಬಿಟ್ಟು ಹೋಗ್ತಾಳಾ? ಈ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ:J&K ಕಲಾಪದಲ್ಲೇ ಶಾಸಕರ ಕುಸ್ತಿ – ಮರುಸ್ಥಾಪನೆ ಆಗುತ್ತಾ ಆರ್ಟಿಕಲ್ 370?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಗೆ ರೋಚಕ ಟ್ವಿಸ್ಟ್‌ ಸಿಕ್ಕಿದೆ.. ತನ್ನ ಬಣ್ಣ ಎಲ್ಲರ ಮುಂದೆ ಬಯಲಾಗುತ್ತೆ ಅಂತಾ ಕಾವೇರಿ ಕೀರ್ತಿಯನ್ನ ಬೆಟ್ಟದಿಂದ ದೂಡಿ ಹಾಕಿದ್ಲು.. ಅದಾದ್ಮೇಲೆ ಕೀರ್ತಿ ಬೆಟ್ಟದಿಂದ ಹಾರಿ ಸತ್ತು ಹೋದ್ಲು ಅಂತಾ ಬಿಂಬಿಸಿದ್ಲು.. ಕೀರ್ತಿ ಸಾಯಿಸಿರುವ ಸತ್ಯ ಲಕ್ಷ್ಮೀಗೆ ಗೊತ್ತಾಗಿತ್ತು. .. ಕೀರ್ತಿ ಸಾವಿಗೆ ನ್ಯಾಯ ಕೊಡಿಸ್ಬೇಕು.. ಅಂತಾ ಲಕ್ಷ್ಮೀ  ಪಣ ತೊಟ್ಟಿದ್ದಾಳೆ.. ಇದಾದ ಬಳಿಕ ಲಕ್ಷ್ಮೀ ಮಾಡಿದ ನಾಟಕ ಅಷ್ಟಿಷ್ಟಲ್ಲ. ಕೀರ್ತಿ ಆತ್ಮ ಮೈಮೇಲೆ ಬಂದವರಂತೆ ಡ್ರಾಮ ಮಾಡಿದ್ಲು..  ಏನ್‌ ಮಾಡಿದರೂ ಕಾವೇರಿಯ ನಾಟಕವನ್ನು ಮಾತ್ರ ಬಯಲು ಮಾಡಲು ಲಕ್ಷ್ಮಿಗೆ ಸಾಧ್ಯವಾಗಲೇ ಇಲ್ಲ. ಆದ್ರೆ ಕೊನೆಗೆ ಆಗಿದ್ದು ಮಾತ್ರ ಬೇರೆ, ಎಲ್ಲಾ ಆರೋಪಗಳನ್ನು ಲಕ್ಷ್ಮೀ ಮೇಲೆ ಹೊರೆಸಿ, ಆಕೆಗೆ ಹುಚ್ಚಿ ಪಟ್ಟ ಕಟ್ಟಿದ್ಲು ಕಾವೇರಿ.. ಆಕೆಯ ಪ್ಲ್ಯಾನ್‌ ನಂತೆ ಲಕ್ಷ್ಮೀಯನ್ನ ಹುಚ್ಚಾಸ್ಪತ್ರೆಗೆ ಸೇರಿಸಿದ್ಲು.. ಅಲ್ಲಿ ಲಕ್ಷ್ಮೀಯನ್ನ ಮುಗಿಸಲು ಎಲ್ಲಾ ಸಿದ್ಧತೆ ಮಾಡಿದ್ಲು.. ಆದ್ರೆ ಲಕ್ಷ್ಮೀ ಮೈಯೆಲ್ಲಾ ಕಣ್ಣಾಗಿಸಿ ಇಟ್ಟಿದ್ಲು.. ಅದ್ರಿಂದಾಗಿ ಬಚಾವ್‌ ಆಗಿದ್ದಾಳೆ.. ಇದೀಗ ಕೀರ್ತಿ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟಿದ್ದಾಳೆ..

ಕೀರ್ತಿ ಬೆಟ್ಟದಿಂದ ಬೀಳುತ್ತಿದ್ದಂತೆ ಆಕೆ ಸತ್ತಿದ್ದಾಳೆ ಎಂದು ಬಿಂಬಿಸಲಾಗಿತ್ತು.. ಈ ಬೆನ್ನಲ್ಲೇ ಕೀರ್ತಿ ಪಾತ್ರವನ್ನ ಕೊನೆಗೊಳಿಸಬೇಡಿ.. ಕೀರ್ತಿ ಪಾತ್ರವನ್ನ ಮುಂದುವರಿಸಿ ಎಂದು ವೀಕ್ಷಕರು ಕೇಳಿಕೊಂಡಿದ್ರು.. ಇನ್ನೂ ಕೆಲವರು ಕೀರ್ತಿ ಇನ್ನೂ ಸತ್ತಿಲ್ಲ ಆಕೆ ಬದುಕಿದ್ದಾಳೆ.. ಯಾಕಂದ್ರೆ ಅಂತ್ಯ ಸಂಸ್ಕಾರ ಮಾಡುವಾಗ ಕೀರ್ತಿ ಮುಖವನ್ನ ತೋರಿಸಿಲ್ಲ ಅಂತ ವೀಕ್ಷಕರು ಹೇಳಿದ್ರು.. ಇದೀಗ ವೀಕ್ಷಕರ ಊಹೆ ನಿಜ ಆಯ್ತಾ ಅನ್ನೋ ಅನುಮಾನ ಮೂಡಿದೆ.. ಯಾಕಂದ್ರೆ ಲಕ್ಷ್ಮೀ ಕಣ್ಣಿಗೆ ಕೀರ್ತಿ ಬಿದ್ದಿದ್ದಾಳೆ..

ಹೌದು ಲಕ್ಷ್ಮೀ ಕಾವೇರಿಗೆ ನಿಮ್ಮ ಅಸಲಿ ಮುಖವನ್ನು ರಿವೀಲ್‌ ಮಾಡೊಳು ನಾನೇ ಎಂದು ಚಾಲೆಂಜ್‌ ಹಾಕಿದ್ಲು.. ಬಳಿಕ ರೋಡ್‌ ನಲ್ಲಿ ಒಬ್ಬಳೆ ನಡೆದುಕೊಂಡು ಹೋಗಿದ್ದಾಳೆ.. ಈ ವೇಳೆ ಲಕ್ಷ್ಮೀ ಕಣ್ಣಿಗೆ ಕೀರ್ತಿ ಬಿದ್ದಿದ್ದಾಳೆ. ಕಾರಿನಲ್ಲಿ ಕೀರ್ತಿ ಡೋರ್‌ ಓಪನ್‌ ಮಾಡಿ ಎಂದು ಕಿರುಚಾಡುತ್ತಿರುತ್ತಾಳೆ. ಲಕ್ಷ್ಮೀ ಅಲ್ಲಿಗೆ ಬಂದು ನೋಡುತ್ತಾಳೆ. ಕಾರಿನೊಳಗೆ ಇರುವ ಕೀರ್ತಿಯನ್ನ ಕಾಪಾಡಲು ಒದ್ದಾಡಿದ್ದಾಳೆ.. ಇಷ್ಟು ದಿನಗಳಿಂದ ಕಾಣೆಯಾಗಿದ್ದ ಕೀರ್ತಿ ಈಗ ಎಂಟ್ರಿ ಕೊಟ್ಟಿದ್ದು ನೋಡಿ, ಫ್ಯಾನ್ಸ್‌ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನು ಅಸಲಿ ಆಟ ಶುರು ಅಂತಿದ್ದಾರೆ. ಇನ್ನು ಕೆಲವರು ಕೀರ್ತಿ ಬಂದಿರೋದು ನಿಜಾ ಇರ್ಬೋದು.. ಆದರೆ ಕೀರ್ತಿ ಬೆಟ್ಟದಿಂದ ಬಿದ್ದಿರೋದರಿಂದ ನೆನಪಿನ ಶಕ್ತಿ ಕಳೆದುಕೊಂಡಿರಬಹುದು, ಆಕೆ ಹುಚ್ಚಿಯಾಗಿರಬಹುದು.. ಒಂದ್ವೇಳೆ ಆಕೆ ಅರ್ಧಂಬರ್ಧ ಮೆರೆತು ಹೋಗಿದ್ರೆ ಮತ್ತೆ ವೈಷ್ಣವ್‌ ಹಿಂದೆ ಓಡಾಡ್ಬೋದು.. ಇದ್ರಿಂದಾಗಿ ಲಕ್ಷ್ಮೀ ಗಂಡನನ್ನ ಬಿಟ್ಟು ಕೊಡುವ ಸನ್ನಿವೇಶವೂ ಬರ್ಬೋದು ಎಂದಿದ್ದಾರೆ. ಇನ್ನೂ ಕೆಲವರು ಕೀರ್ತಿಗೆ ಲಕ್ಷ್ಮೀಯೇ ಶಕ್ತಿ ಎಂದು ಹೇಳಿದ್ರೆ ಮತ್ತೆ ಕೆಲವರು ಇದು ಲಕ್ಷ್ಮೀಯ ಭ್ರಮೆ ಆಗಿರ್ಬೋದು.. ಯಾಕಂದ್ರೆ ಲಕ್ಷ್ಮೀ ಮೂರ್ಹೊತ್ತು ಕೀರ್ತಿ ಕೀರ್ತಿ ಅಂತ ಜಪ ಮಾಡ್ತಾ ಇರ್ತಾಳೆ.. ಕನಸಲ್ಲೂ ಆಕೆಯೇ ಬರ್ತಾಳೆ.. ಹೀಗಾಗಿ ಇದು ಪಕ್ಕಾ ಭ್ರಮೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.. ಒಟ್ಟಾರೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *