ವಿಕೆಟ್ ಕೀಪರ್ಸ್ ಗೆ ಭರ್ಜರಿ ಲಾಟರಿ – ರಿಷಭ್ ಪಂತ್ ಗೆ ₹26 ಕೋಟಿ ಆಫರ್
RCB ವಿಕೆಟ್ ಕೀಪರ್ ಯಾರಾಗ್ತಾರೆ?
ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿರೋ ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನು 2 ವಾರ ಕೂಡ ಬಾಕಿ ಇಲ್ಲ. ಇದೇ ತಿಂಗಳ ನವೆಂಬರ್ 24 ಮತ್ತು 25 ರಂದು ಮೆಗಾ ಆಕ್ಷನ್ ನಡೆಯಲಿದೆ. ಒಟ್ಟು 1574 ಕ್ರಿಕೆಟಿಗರು ತಮ್ಮ ಹೆಸರನ್ನ ರಿಜಿಸ್ಟರ್ ಮಾಡಿಕೊಂಡಿದ್ದು, ಫ್ರಾಂಚೈಸಿಗಳು ಈಗಾಗ್ಲೇ ತಮ್ಮ ತಂಡಕ್ಕೆ ಬೇಕಿರೋ ಆಟಗಾರರ ಶಾರ್ಟ್ ಲಿಸ್ಟ್ ಕೂಡ ರೆಡಿ ಮಾಡ್ಕೊಳ್ತಿದ್ದಾರೆ. ಬಟ್ ಈ ಬಾರಿಯ ಹರಾಜಿನಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ವಿಕೆಟ್ ಕೀಪರ್ ಬ್ಯಾಟರ್ಸ್. ಯೆಸ್ ಫ್ರಾಂಚೈಸಿಗಳ ಕಣ್ಣು ಈಗ ವಿಕೆಟ್ ಕೀಪರ್ಗಳ ಮೇಲೆ ನೆಟ್ಟಿದೆ. ಅಷ್ಟಕ್ಕೂ ಹರಾಜಿನಲ್ಲಿ ಇರೋ ವಿಕೆಟ್ ಕೀಪರ್ಸ್ ಯಾರು? ಯಾವ್ಯಾವ ಫ್ರಾಂಚೈಸಿಗಳಿಗೆ ಅವ್ರ ಅವಶ್ಯಕತೆ ಇದೆ? ಹೈಯೆಸ್ಟ್ ಅಮೌಂಟ್ಗೆ ಸೇಲ್ ಆಗುವ ಆಟಗಾರ ಯಾರು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IND Vs SA.. ಹೇಗಿದೆ ಸ್ಟ್ರಾಟಜಿ? – ಹರಿಣಗಳ ಬೇಟೆಗೆ SKY ಗೇಮ್
ಒಂದು ತಂಡಕ್ಕೆ ಕ್ಯಾಪ್ಟನ್ ಎಷ್ಟು ಇಂಪಾರ್ಟೆಂಟೋ ವಿಕೆಟ್ ಕೀಪರ್ ಕೂಡ ಅಷ್ಟೇ ಕೆಪಾಸಿಟಿ ಇರೋ ಪ್ಲೇಯರ್ ಆಗಿರ್ಬೇಕು. ವಿಕೆಟ್ಗಳ ಮುಂದೆ ನಿಂತು ಎದುರಾಳಿಗಳ ಬೌಲಿಂಗ್ಗೆ ಬೀಸಿ ಹೊಡೆಯೋದ್ರ ಜೊತೆಗೆ ಅದೇ ವಿಕೆಟ್ಗಳ ಹಿಂದೆ ನಿಂತು ಚಾಣಾಕ್ಷತನದಿಂದ ಎರುರಾಳಿ ಬ್ಯಾಟರ್ಗಳನ್ನ ಬೇಟೆಯಾಡ್ಬೇಕು. ಹೀಗಾಗಿ ಫ್ರಾಂಚೈಸಿಗಳು ವಿಕೆಟ್ ಕೀಪರ್ ಬ್ಯಾಟರ್ಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ.
ದಾಖಲೆ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರಾ ರಿಷಭ್ ಪಂತ್?
ಟೀಂ ಇಂಡಿಯಾದ ವಿಕೆಟ್ ಕೀಪರ್-ಕಮ್-ಬ್ಯಾಟರ್ ರಿಷಬ್ ಪಂತ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಬಹುದಾದ ಐವರು ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ ಟಾಪ್ನಲ್ಲಿದ್ದಾರೆ. ಈಗಾಗಲೇ ಐದಾರು ಫ್ರಾಂಚೈಸಿಗಳು ಪಂತ್ರನ್ನ ಖರೀದಿಸಲು ಗೇಮ್ ಪ್ಲ್ಯಾನ್ ರೆಡಿ ಮಾಡಿವೆ. ಈ ಐವರ ಫ್ರಾಂಚೈಸಿಗಳಲ್ಲಿ ಆರ್ಸಿಬಿ, ಸಿಎಸ್ಕೆ, ಪಂಬಾಬ್ ಕಿಂಗ್ಸ್, ಲಕ್ನೋ ಮತ್ತು ಕೆಕೆಆರ್ ತಂಡಗಳಿವೆ. ತಂಡಕ್ಕೆ ಸೇರ್ಪಡೆಗೊಳ್ಳುವುದರಿಂದ ವಿಕೆಟ್ ಕೀಪರ್ ಜೊತೆಗೆ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ನಾಯಕನಾಗಿ ಮಿಂಚಲಿರುವ ಪಂತ್ ಮೇಲೆ ಎಲ್ಲ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆಕಾಶ್ ಚೋಪ್ರಾ ಹೇಳಿಕೆ ಪ್ರಕಾರ, ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಐಪಿಎಲ್ ಇತಿಹಾಸದಲ್ಲೇ ಪಂತ್ ದುಬಾರಿ ಆಟಗಾರನಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಪಂತ್ ಈ ಬಾರಿ ಮೆಗಾ ಹರಾಜಿನಲ್ಲಿ 25-26 ಕೋಟಿ ರೂಪಾಯಿಗೆ ಮಾರಾಟವಾಗಬಹುದು ಎಂದು ಅವರು ಹೇಳಿದ್ದಾರೆ. 2024ರ ಐಪಿಎಲ್ ಹರಾಜಿನಲ್ಲಿ 24.75 ಕೋಟಿ ರೂಪಾಯಿ ಪಡೆದಿದ್ದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಾರಿ ರಿಷಬ್ ಪಂತ್ ಈ ದಾಖಲೆಯನ್ನು ಮುರಿದು ದುಬಾರಿ ಆಟಗಾರನಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ .
ಕೆಎಲ್ ರಾಹುಲ್ ಮೇಲೆಯೂ ಕಣ್ಣಿಟ್ಟಿರೋ ಫ್ರಾಂಚೈಸಿಗಳು!
ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿರುವ ಕೆಎಲ್ ರಾಹುಲ್ ಅವರಿಗೂ ಹಲವು ಫ್ರಾಂಚೈಸಿಗಳು ಗಾಳ ಹಾಕುತ್ತಿವೆ. ಪಂತ್ರಂತೆ ರಾಹುಲ್ ತಂಡವನ್ನು ಸೇರಿಕೊಳ್ಳುವುದರಿಂದ ತಂಡಕ್ಕೆ ವಿಕೆಟ್ ಕೀಪರ್ ಜೊತೆಗೆ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ನಾಯಕ ಕೂಡ ಸಿಗಲಿದ್ದು, ಎಲ್ಲಾ ಫ್ರಾಂಚೈಸಿಗಳು ರಾಹುಲ್ ಮೇಲೆ ಕಣ್ಣಿಟ್ಟಿವೆ. ಮುಖ್ಯವಾಗಿ ರಾಹುಲ್ ಅವರನ್ನು ಖರೀದಿಸಲು ಆರ್ಸಿಬಿ ಮುಂದಾಗಿದೆ.
ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಯಾವ ತಂಡಕ್ಕೆ?
ಮುಂಬೈ ಇಂಡಿಯನ್ಸ್ ಪರ ಆಡಿದ್ದ ಇಶಾನ್ ಕಿಶನ್ ಕೂಡ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲ್ ಆಗುವುದು ಗ್ಯಾರಂಟಿ. ಮುಂಬೈ ತಂಡದಲ್ಲಿ ಈಗಾಗಲೇ ಐದು ಸೀಮಿತ ಓವರ್ಗಳ ಆಟಗಾರರನ್ನು ಉಳಿಸಿಕೊಂಡಿರುವುದರಿಂದ ಕಿಶನ್ಗಾಗಿ ಆರ್ಟಿಎಂ ಕಾರ್ಡ್ ಅನ್ನು ಬಳಸೋ ಸಾಧ್ಯತೆ ಕಡಿಮೆ. ಹೀಗಾಗಿ ಮುಂದಿನ ಆವೃತ್ತಿಯಿಂದ ಕಿಶನ್ ಹೊಸ ತಂಡದೊಂದಿಗೆ ಕಣಕ್ಕೆ ಇಳಿಯೋದು ಗ್ಯಾರಂಟಿ. ಕಿಶನ್ ವಿಕೆಟ್ ಕೀಪರ್ ಮಾತ್ರವಲ್ಲದೆ ಆರಂಭಿಕ ಬ್ಯಾಟ್ಸ್ಮನ್ ಕೂಡ ಆಗಿದ್ದು, ತಂಡಕ್ಕೆ ವೇಗದ ಸ್ಫೋಟಕ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ.
ವಿಕೆಟ್ ಕೀಪರ್ ಜೋಸ್ ಬಟ್ಲರ್ ಹೈಲೆಟ್!
ಕಳೆದ ಕೆಲವು ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ನ ಮುಖ್ಯ ಬ್ಯಾಟರ್ ಆಗಿದ್ದ ಇಂಗ್ಲಿಷ್ ಆಟಗಾರ ಜೋಸ್ ಬಟ್ಲರ್ ಅವರನ್ನು ಇದೀಗ ತಂಡದಿಂದ ಕೈಬಿಡಲಾಗಿದೆ. ಫ್ರಾಂಚೈಸಿ ಈಗಾಗಲೇ ಆರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಬಟ್ಲರ್ ಮುಂದಿನ ಆವೃತ್ತಿಯಿಂದ ಹೊಸ ತಂಡದೊಂದಿಗೆ ಆಡಲಿದ್ದಾರೆ. ಬಟ್ಲರ್ ಆರಂಭಿಕರಾಗಿ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ಸ್ಟ್ರಾಂಗ್ ಪ್ಲೇಯರ್. ಹಾಗೇ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಲಕ್ನೋ ಸೂಪರ್ಜೈಂಟ್ಸ್ ಫ್ರಾಂಚೈಸಿ ಹರಾಜಿಗೆ ಬಿಡುಗಡೆ ಮಾಡಿದೆ. ಹಾಗಾಗಿ ಅವರು ಆರಂಭಿಕರಾಗಿ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಕೊಡುಗೆ ನೀಡಬಲ್ಲರು. ಡಿಕಾಕ್ ಅನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಮುಂದೆ ಬರಲಿವೆ.
ಒಟ್ಟಾರೆ ಐಪಿಎಲ್ ಹರಾಜಿಗೂ ಮುನ್ನ ವಿಕೆಟ್ ಕೀಪರ್ಸ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಈ ಸಲ ದಿನೇಶ್ ಕಾರ್ತಿಕ್ ಇಲ್ದೇ ಇರೋದ್ರಿಂದ ಬೆಂಗಳೂರು ಫ್ರಾಂಚೈಸಿ ಕೂಡ ವಿಕೆಟ್ ಕೀಪರ್ ಹುಡುಕಾಟದಲ್ಲಿದೆ.