IND Vs SA.. ಹೇಗಿದೆ ಸ್ಟ್ರಾಟಜಿ? – ಹರಿಣಗಳ ಬೇಟೆಗೆ SKY ಗೇಮ್
RCB ಬೌಲರ್ಸ್ ಲಕ್ ಬದಲಿಸುತ್ತಾ?

IND Vs SA.. ಹೇಗಿದೆ ಸ್ಟ್ರಾಟಜಿ? – ಹರಿಣಗಳ ಬೇಟೆಗೆ SKY ಗೇಮ್RCB ಬೌಲರ್ಸ್ ಲಕ್ ಬದಲಿಸುತ್ತಾ?

ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಟೀಂ ಇಂಡಿಯಾದಲ್ಲಿ ಸೀನಿಯರ್ಸ್ ಮುಖಭಂಗ ಅನುಭವಿಸ್ತಿದ್ದಾರೆ. ಮತ್ತೊಂದೆಡೆ ಯಂಗ್ ಸ್ಟರ್ಸ್ ಸಾಲು ಸಾಲು ಸರಣಿ ಗೆದ್ದು ಅಬ್ಬರಿಸ್ತಿದ್ದಾರೆ. ಲಂಕನ್ನರ ದಹನ ಮಾಡಿ ಬಾಂಗ್ಲಾ ಪಡೆಯನ್ನ ಮಕಾಡೆ ಮಲಗಿಸಿ ಇದೀಗ ಸೌತ್ ಆಫ್ರಿಕನ್ನರ ಸೊಕ್ಕಡಗಿಸೋಕೆ ರೆಡಿಯಾಗಿದ್ದಾರೆ. ಹೊಸಬರೇ ತುಂಬಿರೋ ಟಿ-20 ಸ್ವ್ಲಾಡ್ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದು, ಇದೀಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ದಕ್ಷಿಣಾ ಆಫ್ರಿಕಾದಲ್ಲಿ ನಡೆಯುತ್ತಿರುವ ಈ ಸರಣಿ ಭಾರತಕ್ಕೆ ಎಷ್ಟು ಇಂಪಾರ್ಟೆಂಟ್? ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್​ಗೆ ಪ್ರತಿಷ್ಠೆಯಾಗಿದ್ದೇಕೆ? ಆರ್​ಸಿಬಿಯ ಇಬ್ಬರು ಬೌಲರ್ಸ್​ ಲಕ್ ಬದಲಾಗುತ್ತಾ? ಸೇಡು ತೀರಿಸಿಕೊಳ್ಳುತ್ತಾ ಸೌತ್ ಆಫ್ರಿಕಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂಓದಿ:  ಸಿಕ್ಕಿಬಿದ್ದ ತಾಂಡವ್.. ಗುಡ್‌ಬೈ ಹೇಳಿದ ಭಾಗ್ಯ – ಭಾಗ್ಯ ಲೈಫ್‌ ನಲ್ಲಿ ಮತ್ತೊಬ್ಬ ಸಂಗಾತಿ? 

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭ ಆಗಲಿದೆ. ಫಸ್ಟ್ ಮ್ಯಾಚ್ ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಹಲವು ಯಂಗ್ ಪ್ಲೇಯರ್ಸ್ ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷವೂ ಸೂರ್ಯಕುಮಾರ್ ಅವರ ಹಂಗಾಮಿ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಿತ್ತು. ಇದರಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿತ್ತು. ಬಟ್ ಈ ಸಲ ಸರಣಿಯಲ್ಲಿ ಆಫ್ರಿಕಾ ಪಡೆಯನ್ನ ವೈಟ್ ವಾಶ್ ಮಾಡೋ ಪಣತೊಟ್ಟಿದೆ ಟೀಂ ಇಂಡಿಯಾ. ಮತ್ತೊಂದೆಡೆ ಟಿ20 ಸ್ಪೆಷಲಿಸ್ಟ್​ ಸೌತ್ ಆಫ್ರಿಕಾ ಕೂಡ ತಮ್ಮ ತವರು ನೆಲದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಶ್ರೀಲಂಕಾ ಮತ್ತು ಬಾಂಗ್ಲಾ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ! 

ಸದ್ಯ ಟೀಂ ಇಂಡಿಯಾದಲ್ಲಿ ಟಿ-20 ಆಟಗಾರರು ಅದ್ಭುತ ಪ್ರದರ್ಶನ ನೀಡ್ತಿದ್ರೆ ಏಕದಿನ ಮತ್ತು ಟೆಸ್ಟ್ ಫಾರ್ಮೆಟ್​ನಲ್ಲಿ ಸೀನಿಯರ್ಸ್ ಸೋಲೊಪ್ಪಿಕೊಳ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ-20 ಕ್ಯಾಪ್ಟನ್ ಆದ್ಮೇಲೆ ಒಂದೇಒಂದು ಸರಣಿ ಕಳ್ಕೊಂಡಿಲ್ಲ. ಮೊದಲಿಗೆ ಸಿಂಹಳೀಯ ಬೇಟೆಯಾಡಿದ್ದ ಟೀಮ್ ಇಂಡಿಯಾ, ಬಾಂಗ್ಲಾ ಟೈಗರ್ಸ್​ನ ಬೆಂಡೆತ್ತಿತ್ತು. ಎರಡು ಸರಣಿಗಳಲ್ಲೂ ವೈಟ್​ವಾಶ್​ ಸಾಧನೆ ಮಾಡಿತ್ತು. ಇದೀಗ ಅದೇ ಹುಮ್ಮಸ್ಸಿನಲ್ಲಿ ಹರಿಣಗಳ ಬೇಟೆಗೆ ಸಜ್ಜಾಗಿದೆ. ಟೀಮ್ ಇಂಡಿಯಾ ವರ್ಸಸ್ ಸೌತ್ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಎರಡೂ ತಂಡಗಳಲ್ಲೂ ಟಿ20 ಸ್ಪೆಷಲಿಸ್ಟ್​ಗಳೇ ತುಂಬಿದ್ದು, ಯಾರ್​ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಹುಟ್ಟಿದೆ. ಅತ್ತ ಟಿ20 ವಿಶ್ವಕಪ್ ಫೈನಲ್​ನ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಸೌತ್ ಆಫ್ರಿಕಾ ಕೂಡ ಕಾದುಕುಳಿತಿದೆ.

ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ ಓಪನರ್ಸ್!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಲ್ಲಿ ಅಭಿಷೇಕ್ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್ ಓಪನರ್ ಆಗಿ ಕಣಕ್ಕಿಳಿಯೋದು ಬಹುತೇಕ ಖಚಿತ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಆರಂಭಿಕ ಅವಕಾಶ ಸಿಕ್ಕಿತು. ನಂತರ ಅಮೋಘ ಶತಕವನ್ನೂ ಬಾರಿಸಿದರು. ಸೂರ್ಯಕುಮಾರ್ ಯಾದವ್ ಅವರನ್ನು ಮೂರನೇ ಸ್ಥಾನದಲ್ಲಿ ಕಣಕ್ಕಿಳಿಸಬಹುದು. ರಿಯಾನ್‌ ಪರಾಗ್​ ಆಬ್ಸೆನ್ಸ್​ನಲ್ಲಿ ತಿಲಕ್​ ವರ್ಮ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು. ಹಾರ್ದಿಕ್ ಪಾಂಡ್ಯ 5ನೇ ಸ್ಥಾನದಲ್ಲಿ ಆಡಲಿದ್ದಾರೆ. ಇದಲ್ಲದೇ ಫಿನಿಶಿಂಗ್ ಜವಾಬ್ದಾರಿ ರಿಂಕು ಸಿಂಗ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಸಿಗಬಹುದು. ಭಾರತ ತಂಡವು ಒಬ್ಬ ಸ್ಪಿನ್ನರ್ ಮತ್ತು 3 ವೇಗದ ಬೌಲರ್‌ಗಳನ್ನು ಆಡುವ 11 ರಲ್ಲಿ ಸೇರಿಸಿಕೊಳ್ಳೋ ಸಾಧ್ಯತೆ ಇದೆ.

ಅಕ್ಷರ್ ಪಟೇಲ್ ಕಣಕ್ಕಿಳಿಯೋದು ಬಹುತೇಕ ಫಿಕ್ಸ್!

ಟಿ20 ವಿಶ್ವಕಪ್‌ ಬಳಿಕ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಇದೇ ಮೊದಲ ಬಾರಿಗೆ ಟಿ20 ತಂಡದಲ್ಲಿ ಕಾಣಿಕೊಂಡಿದ್ದಾರೆ. ಹೀಗಾಗಿ ಅಕ್ಷರ್ ಪಟೇಲ್​ ಕಣಕ್ಕಿಳಿಯೋದು ಬಹುತೇಕ ಫಿಕ್ಸ್.. ಕಳೆದ ಬಾಂಗ್ಲಾ ಸರಣಿಯಲ್ಲಿ ವರುಣ್ ಚಕ್ರವರ್ತಿಗೆ ಚಾನ್ಸ್​ ನೀಡಿ, ರವಿ ಬಿಷ್ಣೋಯಿಗೆ ಬೆಂಚ್ ಬಿಸಿ ಮಾಡಿಸಲಾಗಿತ್ತು. ಸೌತ್ ಆಫ್ರಿಕನ್ಸ್​ನ ಅವರದ್ದೇ ನೆಲದಲ್ಲಿ ಬಗ್ಗು ಬಡಿಯಲು ಸ್ಪಿನ್ನರ್​ಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಫಲಿತಾಂಶದಲ್ಲಿ ಸ್ಪಿನ್ನರ್​​ಗಳ ಪಾತ್ರ ಮಹತ್ವ. ಸೌತ್ ಆಫ್ರಿಕನ್ ಸ್ವಿಂಗ್ ಆ್ಯಂಡ್ ಬೌನ್ಸಿ ಟ್ರ್ಯಾಕ್​​ನಲ್ಲಿ ವೇಗಿಗಳ ದರ್ಬಾರ್ ನಡೆಯಲಿದ್ದು, ಮೂವರು ವೇಗಿಗಳು ಮೈದಾನಕ್ಕಿಳಿಯಲಿದ್ದಾರೆ. ಆರ್ಷ್​ದೀಪ್ ಸಿಂಗ್, ಅವೇಶ್​ ಖಾನ್ ಜೊತೆಗೆ 3ನೇ ವೇಗಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಕಾಡ್ತಿದೆ. ಆರ್​ಸಿಬಿ ವೇಗಿ ಯಶ್ ದಯಾಳ್ ಡೆಬ್ಯೂ ಮಾಡುವ ಚಾನ್ಸಸ್ ಜಾಸ್ತಿ ಇದೆ.

ಟಿ-20 ಸ್ಟಾರ್ಸ್ ನಡುವೆ ಹೈವೋಲ್ಟೇಜ್ ಫೈಟ್!

ಒಂದ್ಕಡೆ ಯಂಗ್ ಇಂಡಿಯಾ ಸೂಪರ್ ಪವರ್ ಟೀಂ ಆಗಿ ಕಾಣ್ತಿದ್ರೆ ಅತ್ತ ಸೌತ್ ಆಫ್ರಿಕಾ ಕೂಡ ಬೆಸ್ಟ್ ಟೀಂ.  ಕ್ಯಾಪ್ಟನ್ ಮಾಕ್ರಂ ನೇತೃತ್ವದ ಸೌತ್ ಆಫ್ರಿಕಾ ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದ್ದು, ಸಖತ್ ಸ್ಟ್ರಾಂಗ್ ಆಗಿದೆ. ಹೆನ್ರಿಚ್ ಕ್ಲಾಸೆನ್, ಡೇವಿಡ್​ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್​ರಂಥ ಪವರ್ ಹಿಟ್ಟರ್​ ಬ್ಯಾಟರ್ಸ್ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೆರಾಲ್ಡ್ ಕೊಟ್ಜಿ, ಒಟ್ನೀಲ್ ಬಾರ್ಟ್‌ಮನ್, ಮಿಹ್ಲಾಲಿ ಎಂಪೊಂಗ್ವಾನಾ, ನ್ಕಾಬಾ ಸಿಮೆಲ್ಟನ್​ರಂಥ ಯಂಗ್ ಪೇಸರ್​​ಗಳ ಬಲ ಇದೆ. ಹೀಗಾಗಿ ಬಿಗ್ ಬ್ಯಾಟಲ್ ನಡೆಯೋದು ಫಿಕ್ಸ್.  ಹೀಗಾಗಿ 2023ರ ಸೌತ್ ಆಫ್ರಿಕಾ ಪ್ರವಾಸದಲ್ಲಿ ಸರಣಿ ಸಮಬಲ ಸಾಧಿಸಿದ್ದ ಸೂರ್ಯಗೆ, ನಾಯಕನಾಗಿ ಮತ್ತೊಮ್ಮೆ ತನ್ನ ಕ್ಯಾಪ್ಟನ್ಸಿ ಪ್ರೂವ್ ಮಾಡ್ಬೇಕಿದೆ. ಇಂಡಿಯನ್ ಕಂಡೀಷನ್ಸ್​ನ ಅಡ್ವಾಂಟೇಜ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸರಣಿ ಗೆದ್ದ ಸೂರ್ಯ, 2026ರ ಟಿ20 ವಿಶ್ವಕಪ್​ ದೃಷ್ಟಿಯಿಂದ ಸೌತ್ ಆಫ್ರಿಕಾದಲ್ಲಿ ಗೆಲುವಿನ ನಗಾರಿ ಬಾರಿಸಬೇಕಿದೆ.

ಆರ್ ಸಿಬಿ ಇಬ್ಬರು ಬೌಲರ್ ಗಳಿಗೆ ಖುಲಾಯಿಸುತ್ತಾ ಅದೃಷ್ಟ?

ಡರ್ಬನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿಯ ಇಬ್ಬರು ವೇಗದ ಬೌಲರ್‌ಗಳಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ. ಯಶ್ ದಯಾಳ್ ಮತ್ತು ವಿಜಯ್‌ಕುಮಾರ್ ವೈಶಾಖ್ ಟಿ-20 ಕ್ರಿಕೆಟ್​​ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಯಶ್ ದಯಾಳ್ ಈ ಹಿಂದೆ ಟೀಮ್ ಇಂಡಿಯಾದ ಭಾಗವಾಗಿದ್ದದ್ರೂ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ವಿಜಯ್‌ಕುಮಾರ್ ವೈಶಾಖ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆ ಆಗಿದ್ದಾರೆ. ಆರ್​ಸಿಬಿ ಈಗಾಗ್ಲೇ ಹರಾಜಿಗೂ ಮುನ್ನ ವೈಶಾಖ್ ಹೆಸರನ್ನ ಕೈ ಬಿಟ್ಟಿದೆ. ಯಶ್ ದಯಾಳ್​ರನ್ನ 5 ಕೋಟಿಗೆ ಉಳಿಸಿಕೊಂಡಿದೆ. ಈ ಇಬ್ಬರಲ್ಲಿ ಒಬ್ಬರು ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯೋದಂತೂ ಗ್ಯಾರಂಟಿ.

ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯ ನಡೆಯೋ ಕಿಂಗ್ಸ್‌ಮೀಡ್ ಕ್ರೀಡಾಂಗಣ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳವ ತಂಡಕ್ಕೆ ಅನುಕೂಲ ಆಗಲಿದೆ. ಈ ಪಿಚ್‌ನಲ್ಲಿ 18 ಅಂತರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 9 ಬಾರಿ ಗೆದ್ದಿದ್ದರೆ, ಚೇಸಿಂಗ್ ತಂಡ 8 ಬಾರಿ ಗೆದ್ದಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಒಟ್ನಲ್ಲಿ ಸೂರ್ಯಕುಮಾರ್ ನಾಯಕತ್ವದ ಯಂಗ್ ಇಂಡಿಯಾ ಸ್ಟ್ರೆಂಥ್ ನೋಡ್ತಿದ್ರೆ ಈ ಸರಣಿಯನ್ನೂ ಕೈವಶ ಮಾಡಿಕೊಳ್ಳೋ ಜೋಶ್​ನಲ್ಲಿದ್ದಾರೆ. ಹಾಗೇ ಹರಿಣಗಳೂ ಕೂಡ ವಿಶ್ವಕಪ್ ಫೈನಲ್​ ಸೋಲಿನ ಸೇಡು ತೀರಿಸಿಕೊಳ್ಳೋಕೆ ಕಾಯ್ತಿದ್ದಾರೆ. ಹೀಗಾಗಿ ಈ ಸಿರೀಸ್ ನಲ್ಲಿ ಹೈವೋಲ್ಟೇಜ್ ಫೈಟ್ ನಡೆಯೋದಂತೂ ಪಕ್ಕಾ.

Shwetha M

Leave a Reply

Your email address will not be published. Required fields are marked *