ಸಿಕ್ಕಿಬಿದ್ದ ತಾಂಡವ್.. ಗುಡ್ಬೈ ಹೇಳಿದ ಭಾಗ್ಯ – ಭಾಗ್ಯ ಲೈಫ್ ನಲ್ಲಿ ಮತ್ತೊಬ್ಬ ಸಂಗಾತಿ?
ಕುಸುಮಾ ಮುಂದೇನು ಮಾಡ್ತಾಳೆ?
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯ ಲಕ್ಷ್ಮೀ ಸೀರಿಯಲ್ ಸದ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ.. ತಾಂಡವ್ ಕಳ್ಳಾಟ ಮನೆಯವರಿಗೆಲ್ಲರಿಗೂ ಗೊತ್ತಾದ್ರೂ ಭಾಗ್ಯದೇ ಗೊತ್ತಾಗೋದೇ.. ಸೊಸೆಗೆ ಮಗನ ಕಳ್ಳಾಟ ಗೊತ್ತಾದ್ರೆ ಭಾಗ್ಯ ಮನೆ ಬಿಟ್ಟು ಹೋಗ್ತಾಳೆ ಅನ್ನೋದು ಕುಸುಮಾಗೆ ಭಯ.. ಹೀಗಾಗಿ ಕುಸುಮಾ ಭಾಗ್ಯಗೆ ಸತ್ಯ ಗೊತ್ತಾಗ್ಬಾರ್ದು.. ತಾಂಡವ್ ತನ್ನ ಸೊಸೆಯನ್ನ ಒಪ್ಪಿಕೊಳ್ಬೇಕು ಅಂತಾ ಏನೇನೋ ಸರ್ಕಸ್ ಮಾಡ್ತಾ ಬಂದಿದ್ದಾಳೆ.. ಇದೀಗ ಭಾಗ್ಯಗೆ ತಾಂಡವ್ ಕಳ್ಳಾಟ ಗೊತ್ತಾಗೋ ಟೈಮ್ ಬಂದೇ ಬಿಟ್ಟಿದೆ.. ಇದೀಗ ಭಾಗ್ಯ ತಾಂಡವ್ ಗೆ ಗುಡ್ಬೈ ಹೇಳ್ತಾಳಾ? ಭಾಗ್ಯಗೆ ಹೊಸ ಪಾರ್ಟನರ್ ಸಿಗ್ತಾರಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದೊಡ್ಮನೆ ದೊರೆ ಶಿವಣ್ಣಗೆ ಕ್ಯಾನ್ಸರ್ – ಅಭಿಮಾನಿಗಳಿಗೆ ಸತ್ಯ ಗೊತ್ತಾಗ್ಲಿ ಎಂದಿದ್ದೇಕೆ?
ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಭಾಗ್ಯಗೆ ಸತ್ಯ ಯಾವಾಗ ಗೊತ್ತಾಗುತ್ತೆ ಅನ್ನೋದು ವೀಕ್ಷಕರ ಪ್ರಶ್ನೆ.. ಆದ್ರೆ ಸೀರಿಯಲ್ ಡೈರೆಕ್ಟರ್ ಮಾತ್ರ ಏನಾದ್ರೂ ಒಂದು ಟ್ವಿಸ್ಟ್ ಕೊಟ್ಟು, ಕತೆಯನ್ನ ರಬ್ಬರ್ ತರ ಎಳಿತಾ ಇದ್ದಾರೆ.. ಇದೀಗ ಭಾಗ್ಯಗೆ ಸತ್ಯ ಗೊತ್ತಾಗೋ ಕಾಲ ಕೂಡಿ ಬಂದಿದೆ.. ಮನೆಯವರು ತಾಂಡವ್ ಮತ್ತು ಶ್ರೇಷ್ಠಾಳ ಸಂಬಂಧವನ್ನು ಗುಟ್ಟಾಗಿ ಇಡಲು ಏನ್ ಸರ್ಕಸ್ ಮಾಡಿದ್ರೂ ಸತ್ಯ ರಿವೀಲ್ ಆಗಲೇ ಬೇಕು. ಒಂದು ತಿಂಗಳಿನಲ್ಲಿ ತಾಂಡವ್ಗೆ ಬೇಕಾದ ಹಾಗೆ ಸೊಸೆಯನ್ನು ಬದಲಿಸುವುದಾಗಿ ಕುಸುಮಾ ಹೇಳಿದ್ಲು.. ಆದ್ರೆ ಕುಸುಮಾ ಕನಸು ನನಸಾಗುವ ಯಾವುದೇ ಲಕ್ಷಣ ಕಾಣ್ತಾ ಇಲ್ಲ.. ಭಾಗ್ಯ ಎಸ್ಎಸ್ಎಲ್ಸಿ ಪಾಸ್ ಆದ್ಲು.. ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಳು.. ಕಾರು ಕಲಿತಳು.. ಡಾನ್ಸ್ ಮಾಡಿದಳು.. ಇಂಗ್ಲಿಷ್ ಕಲಿತ್ಲು.. ಆದ್ರೆ ಮಾರ್ಡನ್ ಆಗೋದಿಕ್ಕೆ ಭಾಗ್ಯ ಒಪ್ಪಿಲ್ಲ.. ಆದ್ರೆ ತಾಂಡವ್ ತಾನು ಬದಲಾಗಿರೋ ಹಾಗೇ ಡ್ರಾಮಾ ಮಾಡಿದ್ದಾನೆ.. ಆದರೆ ಇದ್ದಕ್ಕಿಂತೆಯೇ ತಾಂಡವ್ ಬದಲಾಗಿ ಬಿಟ್ಟರೂ, ಎಲ್ಲರೂ ನಂಬಿರೋದು ಮಾತ್ರ ಹಾಸ್ಯಾಸ್ಪದ ಎನ್ನಿಸುತ್ತೆ.. ಆದ್ರೆ ಸೊಸೆಯ ಜೀವನ ಸರಿ ಮಾಡುವ ಆಸೆ ಕುಸುಮಾಗೆ!
ಇದೀಗ ಸೀರಿಯಲ್ನಲ್ಲಿ ಟ್ವಿಸ್ಟ್ ಸಿಗೂ ಟೈಮ್ ಹತ್ತಿರವಾಗಿದೆ.. ಭಾಗ್ಯ ತನ್ನ ಸಂಬಳದಲ್ಲಿ ಮನೆಗೆ ಹೊಸ ಫ್ರಿಜ್ ತಂದಿದ್ದಳು. ಆ ಫ್ರಿಜ್ ಖರೀದಿ ಸಂದರ್ಭದಲ್ಲಿ ಭಾಗ್ಯಳಿಗೆ ಲಾಟರಿ ಸಿಕ್ಕಿದೆ. ದಂಪತಿ ಪ್ರವಾಸಕ್ಕೆ ಹೋಗುವ ಒಂದು ಟಿಕೆಟ್ ಅವಳಿಗೆ ಸಿಕ್ಕಿದೆ. ಮನೆಯವರೆಲ್ಲರೂ ಸೇರಿ ಭಾಗ್ಯ ಮತ್ತು ತಾಂಡವ್ನನ್ನು ಪ್ರಯಾಣಕ್ಕೆ ಕಳುಹಿಸುವ ಯೋಚನೆಯಲ್ಲಿ ಇದ್ದಾರೆ. ತಾಂಡವ್ನ ಬುದ್ಧಿ ಗೊತ್ತಿದ್ದರೂ ತಾಂಡವ್, ಭಾಗ್ಯಳನ್ನು ಒಪ್ಪಿಕೊಳ್ತಾನೆ ಎನ್ನುವ ಹುಚ್ಚು ಕಲ್ಪನೆ ಕುಸುಮಳದ್ದು. ಇದೇ ಕಾರಣಕ್ಕೆ ಇಬ್ಬರೂ ಟ್ರಿಪ್ಗೆ ಹೋಗುವಂತೆ ಹೇಳಿದ್ದಾಳೆ. ಆ ಟಿಕೆಟ್ ಪಡೆದುಕೊಂಡಿರೋ ತಾಂಡವ್, ಭಾಗ್ಯಳ ಜೊತೆ ಹೋಗಲು ಸುತರಾಂ ಒಪ್ಪಲಿಲ್ಲ. ಅವಳನ್ನು ಮನಸೋ ಇಚ್ಛೆ ಮಾಮೂಲಿನಂತೆ ಬೈದು, ಈ ಟಿಕೆಟ್ ಅನ್ನು ಬೇರೆ ಯಾರಿಗಾದ್ರೂ ಕೊಡುವಂತೆ ಹೇಳುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾನೆ. ಆ ಮೇಲೆ ಶ್ರೇಷ್ಠಾಳ ಜೊತೆ ಹನಿಮೂನ್ಗೆ ಪ್ಲ್ಯಾನ್ ಮಾಡಿದ್ದಾನೆ.
ಇತ್ತ ಹೋಟೆಲ್ನಲ್ಲಿ, ಓನರ್ ಬಂದು ಭಾಗ್ಯಳಿಗೆ ನಮಗೆ ಒಂದು ಒಳ್ಳೆಯ ಆಫರ್ ಬಂದಿದೆ. ಟೂರ್ ಪ್ಯಾಕೇಜ್ನವರಿಗೆ ನಮ್ಮದೇ ಹೋಟೆಲ್ ಅಡುಗೆ.. ನೀವೇ ಹೋಗಬೇಕು ಎಂದಿದ್ದಾನೆ. ಆಗ ಮಾತುಮಾತಿನಲ್ಲಿ ಭಾಗ್ಯಳಿಗೆ ಇದು ತನಗೆ ಸಿಕ್ಕಿರುವ ಲಾಟರಿ ಟಿಕೆಟ್ ಟೂರ್ ಪ್ಯಾಕೇಜ್ ಎನ್ನುವುದು ತಿಳಿದಿದೆ. ಆ ಅದೃಷ್ಟ ತನಗಂತೂ ಸಿಕ್ಕಿಲ್ಲ. ಆದರೆ ತನಗೆ ಸಿಕ್ಕಿರುವ ಲಾಟರಿಯಲ್ಲಿ ಬೇರೆ ಯಾರೋ ದಂಪತಿ ಹೋಗುತ್ತಿದ್ದಾರಲ್ಲ, ಅವರನ್ನು ನೋಡುವ ಭಾಗ್ಯ ಆದರೂ ತನಗೆ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿ ತಾನೇ ಹೋಗುವುದಾಗಿ ಹೇಳಿದ್ದಾಳೆ. ಆದರೆ ಇಲ್ಲಿ ಇರುವುದೇ ಟ್ವಿಸ್ಟ್. ಅಷ್ಟಕ್ಕೂ ಭಾಗ್ಯಳಿಗೆ ಸಿಕ್ಕಿರುವ ಟಿಕೆಟ್ ಪಡೆದು ಲವರ್ ಜೊತೆ ಹನಿಮೂನ್ ಪ್ಲ್ಯಾನ್ ಮಾಡಿದ್ದಾನೆ ತಾಂಡವ್.. ಹೌದು. ಆ ಟಿಕೆಟ್ ಅನ್ನು ಬೇರೆ ಯಾರಿಗೂ ಕೊಡದೇ ಶ್ರೇಷ್ಠಾಳ ಜೊತೆ ತಾನೇ ಗಂಡ-ಹೆಂಡತಿ ರೂಪದಲ್ಲಿ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ದಾನೆ. ಮುಂದೇನಾಗುತ್ತೆ ಎನ್ನುವುದು ಈಗಿರುವ ಕುತೂಹಲ.
ಇದೀಗ ಭಾಗ್ಯ ಮನೆಗೆ ಫಕೀರನ ಎಂಟ್ರಿ ಆಗಿದೆ. ಆತ ಈಗ ಎಲ್ಲವೂ ಗೊತ್ತಾಗುವ ಕಾಲ ಬಂದಿದೆ ಎಂದು ಭವಿಷ್ಯ ನುಡಿದಿದ್ದಾನೆ. ಅಲ್ಲಿಗೆ ಭಾಗ್ಯಳಿಗೆ ಎಲ್ಲಾ ಸತ್ಯ ಗೊತ್ತಾಗುವ ಹಾಗಿದೆ. ಆದರೆ ಬರುವಾಗ ಎಲ್ಲವೂ ಬದಲಾಗುತ್ತದೆ ಎಂದಿದ್ದಾನೆ ಫಕೀರ.
ಅದೇ ಇನ್ನೊಂದೆಡೆ, ತನ್ನ ಚಿಕ್ಕ ಚಿಕ್ಕ ಆಸೆಗಳನ್ನು ಪೂಜಾಳ ಬಳಿ ಹೇಳಿಕೊಂಡಿದ್ದಾಳೆ ಭಾಗ್ಯ. ಸಾಮಾನ್ಯವಾಗಿ ಚಿಕ್ಕ ಪುಟ್ಟ ಆಸೆಗಳೇ ಬದುಕಿನ ಬಹುದೊಡ್ಡ ವರದಾನ ಎನ್ನುವ ಅದೆಷ್ಟೋ ಮಹಿಳೆಯರು ಇದ್ದಾರೆ. ಪತಿ ತಮ್ಮನ್ನು ಕೇರ್ ಮಾಡಿದರೆ, ಚಿಕ್ಕ ಪುಟ್ಟ ಆಸೆ ನೆರವೇರಿಸಿದರೆ, ಅದರಿಂದಲೇ ತಮ್ಮ ಜೀವನ ಪಾವನ ಆಯಿತು, ಅದೇ ಸುಖ ಸಂಸಾರ ಎಂದುಕೊಳ್ಳುವವರು ಇದ್ದಾರೆ. ಇದನ್ನೇ ಭಾಗ್ಯ ಹೇಳುತ್ತಿದ್ದರೆ, ಭಾಗ್ಯಳ ಜೀವನದಲ್ಲಿ ಖಂಡಿತವಾಗಿಯೂ ಆ ಆಸೆ ಈಡೇರಿಸುವ ಇನ್ನೊಬ್ಬನ ಎಂಟ್ರಿ ಆಗಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗ್ತಿರುವ ಅನುಪಮ ಸೀರಿಯಲ್ನ ಈಗ ಹೋಲಿಕೆ ಮಾಡುತ್ತಿದ್ದಾರೆ. ಭಾಗ್ಯಳಿಗೂ ಇನ್ನೊಬ್ಬ ಜೀವನ ಸಂಗಾತಿ ಕೊಡಿಸಿ ಎನ್ನುತ್ತಿದ್ದಾರೆ. ಮುಂದೆ ಸತ್ಯ ಗೊತ್ತಾದ ಭಾಗ್ಯ ತಾಂಡವ್ ನ ಬಿಟ್ಟು ಬಿಡ್ತಾಳಾ? ಭಾಗ್ಯ ಜೀವನಕ್ಕೆ ಹೊಸ ವ್ಯಕ್ತಿ ಎಂಟ್ರಿ ಕೊಡ್ತಾನಾ ಅಂತಾ ಕಾದು ನೋಡ್ಬೇಕಿದೆ.