ಆಸ್ಟ್ರೇಲಿಯಾದಲ್ಲೂ KL 4 ರನ್ – ಟೀಂ ಇಂಡಿಯಾ ಜರ್ನಿ ಮುಗಿಯಿತಾ?
RCBಗೆ ರಾಹುಲ್.. ಫ್ಯಾನ್ಸ್ ಗೆ ಭಯನಾ?

ಆಸ್ಟ್ರೇಲಿಯಾದಲ್ಲೂ KL 4 ರನ್ – ಟೀಂ ಇಂಡಿಯಾ ಜರ್ನಿ ಮುಗಿಯಿತಾ?RCBಗೆ ರಾಹುಲ್.. ಫ್ಯಾನ್ಸ್ ಗೆ ಭಯನಾ?

ನಿಜ ಹೇಳ್ಬೇಕು ಅಂದ್ರೆ. ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಬ್ಯಾಟ್ ಗಿಂತ ಅಭಿಮಾನಿಗಳ ಬ್ಯಾಟಿಂಗ್ ಸೌಂಡೇ ಜಾಸ್ತಿ ಇದೆ. ಏಕದಿನ ಮತ್ತು ಟೆಸ್ಟ್ ಸಿರೀಸ್​ನಲ್ಲಿ ರಾಹುಲ್ ಪಲ್ಟಿ ಹೊಡೀತಿದ್ರೂ ಕೂಡ ಫ್ಯಾನ್ಸ್ ಇನ್ನೊಂದು ಮ್ಯಾಚ್, ಮತ್ತೊಂದು ಮ್ಯಾಚ್ ನಲ್ಲಿ ಸಖತ್ತಾಗಿ ಆಡ್ತಾರೆ ಅಂತಾ ಬ್ಯಾಟ್ ಬೀಸ್ತಾನೇ ಇದ್ದಾರೆ. ಬಟ್ ರಾಹುಲ್ ಮಾತ್ರ ಅದೇ ರಾಗ ಅದೇ ಹಾಡು ಅನ್ನೋ ಹಾಗೇ ಆಡ್ಕೊಳ್ಳೋರ ಬಾಯಿಗೆ ಆಹಾರ ಆಗ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಆಗ್ತಿರೋದೂ ಅದೇ. ಚಾನ್ಸ್ ಮೇಲೆ ಚಾನ್ಸ್ ಕೊಟ್ರೂ ರಾಹುಲ್ ಕಮ್ ಬ್ಯಾಕ್ ಮಾಡ್ತಿಲ್ಲ ಯಾಕೆ? ಸಾಲು ಸಾಲು ಫ್ಲ್ಯಾಪ್ ಶೋ ಮೂಲಕ ಕರಿಯರ್​ನೇ ಮುಗಿಸಿಕೊಳ್ತಾರಾ? ಬಿಸಿಸಿಐ ಪ್ಲ್ಯಾನ್ ನಿಜವಾಗುತ್ತಾ? ಕನ್ನಡಿಗನ ಟೀಂ ಇಂಡಿಯಾ ಜರ್ನಿ ಕೊನೇ ಹಂತದಲ್ಲಿದ್ಯಾ?  ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಪ್ಪ ಗ್ಯಾಸ್ ಸಪ್ಲೈ ಮಾಡ್ತಿದ್ದ ಏರಿಯಾದಲ್ಲೇ ಬಂಗಲೆ  – ರಿಂಕು ಸಿಂಗ್ ಐಷಾರಾಮಿ ಮನೆ ಹೇಗಿದೆ?

ಶ್ರೀಲಂಕಾ ಏಕದಿನ ಸರಣಿಯಲ್ಲಿ ಸದ್ದು ಮಾಡ್ಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸಿರೀಸ್​ನಲ್ಲೂ ಆರ್ಭಟ ಕಾಣ್ತಿಲ್ಲ. ಒಂದೇ ಒಂದು ಮ್ಯಾಚ್ ಬಿಟ್ರೆ ಉಳಿದೆಲ್ಲಾ ಕಡೆ ಕಂಡಿದ್ದು ಬರೀ ಫೇಲ್ಯೂರ್. ಟೀಂ ಇಂಡಿಯಾದಲ್ಲಿ ಸದ್ಯ ಕರ್ನಾಟಕದ ಪರ ಸ್ಟಾರ್ ಬ್ಯಾಟರ್ ಆಗಿ ಆಡ್ತಿರೋದು ಕೆಎಲ್ ರಾಹುಲ್ ಒಬ್ರೇ. ಮುಂಬೈಕರ್​ಗಳ ನಡುವೆ ಚಾನ್ಸ್ ಗಿಟ್ಟಿಸಿಕೊಳ್ಳೋಕೆ ಒದ್ದಾಡ್ತಿರೋರ ಮಧ್ಯೆ ರಾಹುಲ್​ಗೆ ಬಿಸಿಸಿಐ ಸಾಲು ಸಾಲು ಅವಕಾಶ ಕೊಟ್ರೂ ತಮ್ಮೊಳಗಿನ ಪ್ರತಿಭೆಯನ್ನ ಪ್ರೂವ್ ಮಾಡಿಕೊಳ್ಳೋಕೆ ಆಗ್ದೇ ಮುಗ್ಗರಿಸ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ನೆಲದಲ್ಲೂ ಅದೇ ರಿಪೀಟ್ ಆಗಿದೆ. ಇದೇ ಕಾರಣಕ್ಕೆ ಕ್ರಿಕೆಟರ್ಸ್, ಮಾಜಿ ಪ್ಲೇಯರ್ಸ್, ಫ್ಯಾನ್ಸ್ ಕೂಡ ಕೆಎಲ್ ರಾಹುಲ್​ಗೆ ಏನಾಗಿದೆ ಅಂಥಾ ಪ್ರಶ್ನೆ ಮಾಡ್ತಿದ್ದಾರೆ.

ಕೆಎಲ್ ರಾಹುಲ್ ಏನಾಯ್ತು? 

ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಸಿದ್ಧತೆಯ ಭಾಗವಾಗಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಟೆಸ್ಟ್​ ಸರಣಿಗೆ ತೆರಳಿರುವ ಕೆ.ಎಲ್.ರಾಹುಲ್​ ಮತ್ತೆ ಬ್ಯಾಟಿಂಗ್ ನಲ್ಲಿ ಎಡವಿದ್ದಾರೆ. ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಎ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ-ಎ ತಂಡವನ್ನು ಪ್ರತಿನಿಧಿಸುತ್ತಿರುವ ರಾಹುಲ್ ಓಪನರ್ ಆಗಿ ಕ್ರೀಸ್​ಗೆ ಇಳ್ದಿದ್ರು. ಆದ್ರೆ ಕೇವಲ ನಾಲ್ಕು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಸ್ಕಾಟ್ ಬೋಲ್ಯಾಂಡ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ರಾಹುಲ್​ ರನ್​ ಕಲೆಹಾಕುವಲ್ಲಿ ವಿಫಲರಾಗಿದ್ದರು. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ರಾಹುಲ್, ಉಳಿದ ಎರಡು ಪಂದ್ಯಗಳಲ್ಲಿ ಬೆಂಚ್‌ಗೆ ಸೀಮಿತರಾಗಿದ್ದರು. ಹೀಗಿದ್ರೂ  ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಪ್ರಕಟಗೊಂಡಿರುವ ಭಾರತ ತಂಡದಲ್ಲಿ ರಾಹುಲ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಸಲುವಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಬಾರ್ಡರ್-ಗವಾಸ್ಕರ್​ ಟ್ರೋಫಿಗೂ ಮೊದಲೇ ರಾಹುಲ್ ಮತ್ತು ಧ್ರುವ್ ಜುರೆಲ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿದೆ. ಇಲ್ಲಿಯೂ ರಾಹುಲ್​ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಗ್ಗರಿಸಿದ್ದಾರೆ. ಮತ್ತೊಂದೆಡೆ ದ್ರುವ್ ಜುರೇಲ್ ಭರ್ಜರಿ 80 ರನ್ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಪ್ಲೇಯಿಂಗ್ 11ನಲ್ಲಿ ಸ್ಥಾನ ಫಿಕ್ಸ್ ಮಾಡಿಕೊಂಡಿದ್ದಾರೆ. ಬಟ್ ಆಸ್ಟ್ರೇಲಿಯಾ ಎ ವಿರುದ್ಧ ಕಳಪೆ ಪ್ರದರ್ಶನ ತೋರಿರುವ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದು ಹೀಗೇ ಕಂಟಿನ್ಯೂ ಆದ್ರೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಪಂದ್ಯಗಳಲ್ಲಿ ಬೆಂಚ್​ಗೆ ಸೀಮಿತವಾಗೋದು ಪಕ್ಕಾ.

ಕೆಎಲ್ ರಾಹುಲ್ ಒಬ್ಬ ಪ್ರತಿಭಾವಂತ ಆಟಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಟೆಸ್ಟ್, ಎಕದಿನ, ಟಿ20 ಮೂರೂ ಮಾದರಿಗಳಲ್ಲಿ ನಿರ್ಭೀತಿಯಿಂದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ ತಾಕತ್ತಿದೆ. ಹೀಗಾಗಿಯೇ ಭಾರತ ಈತನಲ್ಲಿ ಮತ್ತೊಬ್ಬ ರಾಹುಲ್ ದ್ರಾವಿಡ್ ರನ್ನು ಹುಡುಕುತ್ತಿತ್ತು. ರಾಹುಲ್ ಕೂಡ ಹಲವು ಇದನ್ನ ಪ್ರೂವ್ ಮಾಡಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಫೇಲ್ಯೂರ್ ಅನ್ನೋದು ರಾಹುಲ್ ಬೆನ್ನು ಬಿದ್ದಿದೆ. ಇದು ಹೀಗೇ ಕಂಟಿನ್ಯೂ ಆದ್ರೆ  ರಾಷ್ಟ್ರೀಯ ತಂಡಕ್ಕೆ ಶಾಶ್ವತವಾಗಿ ಬಾಗಿಲು ಮುಚ್ಚಿದ್ರೂ ಅಚ್ಚರಿ ಪಡ್ಬೇಕಿಲ್ಲ. ಇನ್ನು ಇದೆಲ್ಲದ್ರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೂ ಆತಂಕ ಶುರುವಾಗಿದೆ. ಕೆಎಲ್ ರಾಹುಲ್ ನೆಕ್ಸ್ಟ್ ಸೀಸನ್​ಗೆ ಬೆಂಗಳೂರು ಕ್ಯಾಪ್ಟನ್ ಆಗಲಿ ಅನ್ನೋದು ಎಷ್ಟೋ ಅಭಿಮಾನಿಗಳ ಕನಸು. ಆದ್ರೆ ಈ ಥರ ಫ್ಲ್ಯಾಪ್ ಶೋ ತೋರಿಸಿದ್ರೆ ತಂಡದ ಗತಿ ಏನು ಅನ್ನೋ ಟೆನ್ಷನ್ನಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *