ಅಪ್ಪ ಗ್ಯಾಸ್ ಸಪ್ಲೈ ಮಾಡ್ತಿದ್ದ ಏರಿಯಾದಲ್ಲೇ ಬಂಗಲೆ  – ರಿಂಕು ಸಿಂಗ್ ಐಷಾರಾಮಿ ಮನೆ ಹೇಗಿದೆ?
ಕಾರು, ಬಂಗಲೆ, ರಿಂಕು ಖದರ್ ಚೇಂಜ್..

ಅಪ್ಪ ಗ್ಯಾಸ್ ಸಪ್ಲೈ ಮಾಡ್ತಿದ್ದ ಏರಿಯಾದಲ್ಲೇ ಬಂಗಲೆ  – ರಿಂಕು ಸಿಂಗ್ ಐಷಾರಾಮಿ ಮನೆ ಹೇಗಿದೆ?ಕಾರು, ಬಂಗಲೆ, ರಿಂಕು ಖದರ್ ಚೇಂಜ್..

ರಿಂಕು ಸಿಂಗ್.. ಟೀಮ್ ಇಂಡಿಯಾದಲ್ಲಿ ಸ್ಟಾರ್ ಪ್ಲೇಯರ್. ಕಷ್ಟಪಟ್ಟು ಬೆಳೆದು ಇದೀಗ ಸಾಧನೆಯ ಸರದಾರ ಅನಿಸಿಕೊಂಡ ರಿಂಕು ಸಿಂಗ್ ಸಧ್ಯಕ್ಕೆ ಟೀಮ್ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಅದ್ರೆ, ಅದಕ್ಕೂ ಮುನ್ನ ಕಷ್ಟದಲ್ಲೇ ಬದುಕು ಕಂಡ, ಬಡತನದಲ್ಲೇ ಜೀವನ ಕಳೆದ ರಿಂಕು, ಹೆತ್ತವರಿಗೆ ಗ್ರೇಟ್ ಸರ್‌ಪ್ರೈಸ್ ನೀಡಿದ್ದಾರೆ. ತನ್ನಪ್ಪ ಯಾವ ಏರಿಯಾದಲ್ಲಿ ಮನೆ ಮನೆಗೆ ಗ್ಯಾಸ್ ಸಪ್ಲೈ ಮಾಡ್ತಿದ್ರೋ, ಅದೇ ಏರಿಯಾದಲ್ಲಿ ಐಷಾರಾಮಿ ಬಂಗಲೆ ಖರೀದಿಸಿ ಅದ್ದೂರಿ ಗೃಹಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ: RO-KO 325 ರನ್.. KL 339 ರನ್.. ಕೊಹ್ಲಿ ಶರ್ಮಾಗಿಂತ ರಾಹುಲ್ ಬೆಸ್ಟ್! – 10 ವರ್ಷಗಳಲ್ಲೇ ಇದೆಂಥಾ ದುಸ್ಥಿತಿ?

ರಿಂಕು ಸಿಂಗ್ ಎಂಬ ಪ್ರತಿಭೆ ಬೆಳಕಿಗೆ ಬಂದಿದ್ದು ಐಪಿಎಲ್‌ನಲ್ಲಿ. ಆವತ್ತು ರಿಂಕು ಸಿಂಗ್ ಹೊಡೆದ ಐದು ಸಿಕ್ಸ್ ನಿಂದಾಗಿ ಕ್ರಿಕೆಟ್ ಕೆರಿಯರ್ ಅಷ್ಟೇ ಅಲ್ಲ.. ರಿಂಕು ಜೀವನವೇ ಬದಲಾಗುತ್ತಿದೆ. ಜೀವನದಲ್ಲಿ ಸಾಲದ ಹೊರೆಯೂ ಕಡಿಮೆಯಾಗುತ್ತಿದೆ. ಉತ್ತರ ಪ್ರದೇಶ ಮೂಲದ ರಿಂಕು ಸಿಂಗ್ ಬಡ ಕುಟುಂಬದಿಂದ ಅರಳಿದ ಪ್ರತಿಭೆ. ಎಲ್‌ಪಿಜಿ ಗ್ಯಾಸ್ ವಿತರಕರಾಗಿರುವ ತಂದೆಗೆ ಮಗನ ಕ್ರಿಕೆಟ್ ಅಭ್ಯಾಸಕ್ಕಾಗಿ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಇನ್ನು ಅಣ್ಣ ಆಟೋರಿಕ್ಷಾ ಚಾಲಕ. ಮತ್ತೋರ್ವ ಅಣ್ಣ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ  ರಿಂಕು ಸಿಂಗ್‌ಗೆ ಬೆಂಬಲವಾಗಿ ನಿಂತರೂ ಕೂಡಾ ರಿಂಕು ಸಿಂಗ್ ಆರ್ಥಿಕ ಸಂಕಷ್ಟದಿಂದ ಒದ್ದಾಡಿದ್ದರು. ಕೊನೆಗೂ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ರಿಂಕು ಸಿಂಗ್ ಇದೀಗ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಆಗಿ ಮಿಂಚುತ್ತಿದ್ದಾರೆ. ಒಂದೊಂದು ರೂಪಾಯಿಗೂ ಕಷ್ಟಪಟ್ಟು ದುಡಿಯುತ್ತಿದ್ದ ಹೆತ್ತವರಿಗೆ ಕೋಟಿ ಕೋಟಿ ರೂಪಾಯಿಯ ಬಂಗಲೆಯನ್ನ ಉಡುಗೊರೆಯಾಗಿ ನೀಡಿದ್ದಾರೆ ರಿಂಕು ಸಿಂಗ್.

ಹೌದು..ಯುವ ಕ್ರಿಕೆಟ್ ತಾರೆ ರಿಂಕು ಸಿಂಗ್ ಅಲಿಗಢದ ಓಝೋನ್ ಸಿಟಿಯಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಗೋಲ್ಡನ್ ಎಸ್ಟೇಟ್‌ನಲ್ಲಿರುವ 500 ಚದರ ಅಡಿ ವಿಸ್ತೀರ್ಣದ ಈ ಮನೆ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಮನೆಯ ಬೆಲೆ ಸರಿ ಸುಮಾರು 7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಮೊದಲು, ರಿಂಕು ಸಿಂಗ್ ತಮ್ಮ ಕುಟುಂಬದೊಂದಿಗೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಗೃಹ ಪ್ರವೇಶ ಸಮಾರಂಭದಲ್ಲಿ ಓಝೋನ್ ಸಿಟಿ ಅಧ್ಯಕ್ಷ ಪ್ರವೀಣ್ ಮಂಗಳಾ ಅವರು ರಿಂಕು ಅವರ ಹೊಸ ಮನೆಯ ಕೀಯನ್ನು ರಿಂಕು ಸಿಂಗ್, ತಂದೆ ಖಾಂಚಂದ್ ಮತ್ತು ಅವರ ತಾಯಿ ಬೀನಾ ದೇವಿ ಅವರಿಗೆ ಹಸ್ತಾಂತರಿಸಿದರು. ಇದಾದ ಬಳಿಕ ಪೂಜೆ ಸಲ್ಲಿಸಿ ಸಂಜೆ ರಿಬ್ಬನ್ ಕಟ್ ಮಾಡಿ ರಿಂಕು ಸಿಂಗ್ ತಮ್ಮ ಕುಟುಂಬ ಸಮೇತ ಹೊಸ ಮನೆಗೆ ಕಾಲಿರಿಸಿದರು.

ಓಝೋನ್ ಸಿಟಿಯಲ್ಲಿರುವ ಗೋಲ್ಡನ್ ಎಸ್ಟೇಟ್‌ ಅನ್ನು ಅಲಿಘರ್‌ನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಸೊಸೈಟಿಗಳಲ್ಲಿ ಒಂದಾಗಿದೆ. ಇಲ್ಲಿ ಕೇವಲ 40 ಮನೆಗಳಿದ್ದು, ಚಿಕಾಗೋ, ಲಂಡನ್ ಮತ್ತು ಸಿಂಗಾಪುರದಂತಹ ದೇಶಗಳ ಐಷಾರಾಮಿ ಜೀವನಶೈಲಿಯಿಂದ ಪ್ರೇರಿತವಾಗಿ ಈ ಸೊಸೈಟಿಯನ್ನು ವಿನ್ಯಾಸಗೊಳಿಸಲಾಗಿದೆ. ಇಡೀ ಎಸ್ಟೇಟ್ 7 ಸ್ತರದ ಭದ್ರತೆಯನ್ನು ಹೊಂದಿದೆ. ಇದಲ್ಲದೇ ಬ್ಯಾಡ್ಮಿಂಟನ್ ಅಂಕಣ, ಸ್ಕ್ವಾಷ್ ಅಂಕಣ, ಬಾಸ್ಕೆಟ್ ಬಾಲ್ ಅಂಕಣ ಸೇರಿದಂತೆ ಹಲವು ಸೌಲಭ್ಯಗಳ ಜೊತೆಗೆ 24 ಗಂಟೆಯೂ ಗಾಲ್ಫ್ ಆಡುವ ಸೌಲಭ್ಯ ಈ ಸೊಸೈಟಿಯಲ್ಲಿದೆ. ಇನ್ನು ರಿಂಕು ಸಿಂಗ್ ಖರೀದಿಸಿರುವ ಐಷಾರಾಮಿ ಮನೆಯಲ್ಲಿ ಐಷಾರಾಮಿ ಮಲಗುವ ಕೋಣೆ, ಸ್ಟೋರ್ ರೂಂ, ಪ್ಯಾಂಟ್ರಿ, ಅಡುಗೆಮನೆ, ಡೈನಿಂಗ್, ಡ್ರಾಯಿಂಗ್ ಮತ್ತು ಲಿವಿಂಗ್ ರೂಮ್ ಜೊತೆಗೆ ಲಾಂಜ್ ಇದೆ. ಇದಲ್ಲದೇ ಖಾಸಗಿ ಕೊಳ, ತಾರಸಿ, ಆಂಫಿಥಿಯೇಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ರಿಂಕು ಅವರ ತಂದೆ ಒಂದು ಕಾಲದಲ್ಲಿ ಇದೇ ಓಝೋನ್ ಸಿಟಿಯಲ್ಲಿ ಗ್ಯಾಸ್ ಪೂರೈಕೆದಾರರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಅದೇ ಸಿಟಿಯಲ್ಲೇ ಮಗ ಮನೆಯನ್ನು ಖರೀದಿಸಿದ್ದಾನೆ. ಇದು ಹೆತ್ತವರ ಸಂಭ್ರಮವನ್ನ ಡಬಲ್ ಮಾಡಿದೆ. ಜೊತೆಗೆ ಕೆಕೆಆರ್ ರಿಂಕು ಸಿಂಗ್ ಅವ್ರಿಗೆ 13 ಕೋಟಿ ರೂ. ನೀಡಿ ಉಳಿಸಿಕೊಂಡಿದೆ. ಇದಾದ ಬೆನ್ನಲ್ಲೇ ರಿಂಕು ಸಿಂಗ್ ಈ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ.

Shwetha M

Leave a Reply

Your email address will not be published. Required fields are marked *