RO-KO 325 ರನ್.. KL 339 ರನ್.. ಕೊಹ್ಲಿ ಶರ್ಮಾಗಿಂತ ರಾಹುಲ್ ಬೆಸ್ಟ್! – 10 ವರ್ಷಗಳಲ್ಲೇ ಇದೆಂಥಾ ದುಸ್ಥಿತಿ?

RO-KO 325 ರನ್.. KL 339 ರನ್.. ಕೊಹ್ಲಿ ಶರ್ಮಾಗಿಂತ ರಾಹುಲ್ ಬೆಸ್ಟ್! – 10 ವರ್ಷಗಳಲ್ಲೇ ಇದೆಂಥಾ ದುಸ್ಥಿತಿ?

ಟೀಂ ಇಂಡಿಯಾದಲ್ಲಿ ಈಗ ಸ್ಟಾರ್ ಆಟಗಾರರ ಬ್ಯಾಟ್​ಗಳು ಸೈಲೆಂಟ್ ಆಗಿವೆ. ಮತ್ತೊಂದ್ಕಡೆ ಯಂಗಸ್ಟರ್ಸ್ ಅಬ್ಬರಿಸುತ್ತಿದ್ದಾರೆ. ಭಾರತ ತಂಡದ ಲೆಜೆಂಡರಿ ಕ್ರಿಕೆಟರ್ಸ್ ಆದಂತಹ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತೂ ರನ್ ಗಳಿಸೋಕೆ ಆಗ್ದೇ ಒದ್ದಾಡ್ತಿದ್ದಾರೆ. ಹಿಂದೆಲ್ಲಾ ಈ ಇಬ್ಬರು ಕ್ರೀಸ್​ಗೆ ಬಂದ್ರೆ ರನ್ ಮಳೆ ನೋಡ್ತಿದ್ದ ಅಭಿಮಾನಿಗಳಿಗೆ ಈಗ ವಿಕೆಟ್ ಬೀಳೋದನ್ನ ನೋಡಿ ನೋಡಿ ಸಾಕಾಗಿದೆ. ರನ್ ಮಷಿನ್, ಕಿಂಗ್ ಅಂತೆಲ್ಲಾ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಅಂತೂ ಕಂಪ್ಲೀಟ್ ಫೇಲ್ಯೂರ್ ಆಗಿದ್ದಾರೆ. ಟೆಸ್ಟ್ ರ್ಯಾಂಕಿಂಗ್​ನಲ್ಲಿ ಮಹಾಕುಸಿತ ಕಂಡಿದ್ದಾರೆ. ಅಷ್ಟಕ್ಕೂ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಭಾರತೀಯ ಆಟಗಾರರು ಜಾರಿ ಬಿದ್ದಿದ್ದೇಗೆ? ಕೊಹ್ಲಿಗೆ ಮತ್ತೆ ಸಂಕಷ್ಟದ ದಿನಗಳು ಎದುರಾದ್ವಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜಾಹ್ನವಿ ಮುಂದೆ ಜಯಂತ್‌ ರಹಸ್ಯ! – ಲಕ್ಷ್ಮೀ ನಿವಾಸಕ್ಕೆ BBK ಮಾನಸ?

ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ರು. ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಕೋಟಿ ಕೋಟಿ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ವಿರಾಟ್‌ ಕೊಹ್ಲಿಗೆ ಅವರೇ ಸಾಟಿ. ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪರ ಹತ್ತು ಹಲವಾರು ದಾಖಲೆ ನಿರ್ಮಿಸಿರುವ ವಿರಾಟ್‌, ತಮ್ಮ ವೃತ್ತಿಜೀವನದಲ್ಲಿ ಕ್ರಿಕೆಟ್‌ನ ಬ್ರಾಂಡ್‌ ಆಗಿ ಬೆಳೆದಿದ್ದಾರೆ. ಜಗತ್ತಿನ ದಿಗ್ಗಜ, ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಗೆ ಸೇರಿದ್ದಾರೆ. ಸದ್ಯ ಟಿ-20 ವಿಶ್ವಕಪ್ ಬಳಿಕ ಟಿ-20 ಸಮರಕ್ಕೆ ಗುಡ್ ಬೈ ಹೇಳಿರೋ ಕೊಹ್ಲಿ ಭಾರತದ ಪರ ಏಕದಿನ ಮತ್ತು ಟೆಸ್ಟ್ ಮ್ಯಾಚ್​ಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಬಟ್ ಯಾಕೋ ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಫಾರ್ಮ್ ಪದೇಪದೆ ಕೈ ಕೊಡ್ತಿದೆ. ಈ ಫೇಲ್ಯೂರ್ ಕಳೆದ 10 ವರ್ಷಗಳಲ್ಲೇ ಮಹಾ ಕುಸಿತಕ್ಕೆ ದೂಡಿದೆ.

46 ರನ್ ಗೆ ಆಲೌಟ್.. 147 ರನ್ ಟಾರ್ಗೆಟ್ ಕೂಡ ಫೇಲ್!

ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ ಬ್ಯಾಟಿಂಗ್ ತುಂಬಾ ಹೀನಾಯವಾಗಿತ್ತು. ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡರೆ, ಕೊನೆಯ ಪಂದ್ಯದಲ್ಲಿ ಪಂದ್ಯದಲ್ಲಿ ಕೇವಲ 147 ರನ್​ಗಳ ಗುರಿಯನ್ನು ಬೆನ್ನಟ್ಟಲಾಗದೆ ಸೋಲು ಕಂಡಿತು. ತವರಿನಲ್ಲಿ ಈ ಎರಡೂ ಇನ್ನಿಂಗ್ಸ್​ಗಳ ಆಟವನ್ನ ಎಂದಿಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇದೇ ಫೇಲ್ಯೂರ್ ಈಗ ಶ್ರೇಯಾಂಕದ ಮೇಲೆ ತಟ್ಟಿದೆ.

ನ್ಯೂಜಿಲೆಂಡ್ ವಿರುದ್ಧ ಸೋಲು.. ಐಸಿಸಿ ರ್ಯಾಂಕಿಂಗ್ ನಲ್ಲಿ ಮಹಾಕುಸಿತ!

ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಸೋತಿರೋ ಭಾರತ ತಂಡ ಸದ್ಯ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನದಲ್ಲಿದೆ. ಬಟ್ ಆಟಗಾರರು ಮಾತ್ರ ಜಾರಿ ಬಿದ್ದಿದ್ದಾರೆ. ಅದ್ರಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸರಣಿ ಆರಂಭದಲ್ಲಿ ಟಾಪ್ 10ನಲ್ಲಿದ್ದವ್ರು ಈಗ ಊಹೆಗೂ ಮೀರಿದ ಕುಸಿತ ಕಂಡಿದ್ದಾರೆ. ಅದರಲ್ಲೂ ರನ್​ಮಷಿನ್ ವಿರಾಟ್ ಕೊಹ್ಲಿ 10 ವರ್ಷಗಳಲ್ಲಿ ಮೊದಲ ಬಾರಿಗೆ ಟಾಪ್ 20ಯಿಂದ ಹೊರಬಿದ್ದಿದ್ದಾರೆ. ಭಾರತದ ಬ್ಯಾಟ್ಸ್​ಮನ್​ಗಳ ಪೈಕಿ ರಿಷಭ್ ಪಂತ್ 5 ಸ್ಥಾನಗಳ ಏರಿಕೆ ಕಂಡು ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ. ಜೈಸ್ವಾಲ್ ಒಂದು ಸ್ಥಾನ ಕುಸಿತ ಕಂಡು 4ನೇ ಸ್ಥಾನ ಪಡೆದಿದ್ದಾರೆ.

6 ಇನ್ನಿಂಗ್ಸ್.. 93 ರನ್.. ಕೊಹ್ಲಿಗೆ ಏನಾಯ್ತು?

ಮೊದ್ಲೆಲ್ಲಾ ವಿರಾಟ್ ಕೊಹ್ಲಿ ಮೈದಾನಕ್ಕೆ ಬಂದ್ರೆ ನೋಡೋದೇ ಚೆಂದ. ಬಟ್ ಈಗ ವಿರಾಟ್ ಬಂದ್ರು ಅಂತಾ ಫ್ಯಾನ್ಸ್ ಖುಷಿಯಾಗಿ ನೋಡೊ ಅಷ್ಟ್ರಲ್ಲೇ ವಿಕೆಟ್ ಢಮಾರ್ ಎಂದಿರುತ್ತೆ. ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರ್ತಿದ್ದಾರೆ. ಇದೇ ಕಳಪೆ ಪ್ರದರ್ಶನದಿಂದ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ 8 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಪ್ರಸೆಂಟ್ ರ್ಯಾಂಕಿಂಗ್​ ನಲ್ಲಿ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ಡಿಸೆಂಬರ್ 2014 ರ ನಂತರ ವಿರಾಟ್ ಕೊಹ್ಲಿಯ ಅತ್ಯಂತ ಕೆಟ್ಟ ರ್ಯಾಂಕಿಂಗ್ ಆಗಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 6 ಇನ್ನಿಂಗ್ಸ್​ಗಳಲ್ಲಿ ಕೇವಲ 93 ರನ್ ಗಳಿಸಿದ್ದರು. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. ವಿರಾಟ್ ಕೊಹ್ಲಿಯಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದಾರೆ. ರೋಹಿತ್ ವಿರಾಟ್ ಗಿಂತ ಕಡಿಮೆ ರನ್ ಗಳಿಸಿದ್ದು, 6 ಇನ್ನಿಂಗ್ಸ್ ಗಳಲ್ಲಿ ಕೇವಲ 91 ರನ್ ಕಲೆ ಹಾಕಿದ್ದಾರೆ. ಐಸಿಸಿ ರ್ಯಾಂಕಿಂಗ್ ನಲ್ಲಿ ಸದ್ಯ ರೋಹಿತ್ ಶರ್ಮಾ 26ನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ನಾಲ್ಕನೇ ಮತ್ತು ರಿಷಭ್ ಪಂತ್ ಆರನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ಬ್ಯಾಟ್ಸ್ಮನ್ಗಳು ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ. ಶುಬ್ಮನ್ ಗಿಲ್ 16ನೇ ಸ್ಥಾನದಲ್ಲಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಟೆಸ್ಟ್ ನಲ್ಲಿ ಕೊಹ್ಲಿ ಸಿಡಿಸಿದ್ದು ಎರಡೇ ಶತಕ!

ಕಳೆದ ಕೆಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಬ್ಯಾಟ್ ಸದ್ದು ಮಾಡ್ತಿಲ್ಲ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲರ್‌ಗಳ ವಿರುದ್ಧ ರನ್ ಗಳಿಸುವಲ್ಲಿ ಒದ್ದಾಡ್ತಿದ್ದಾರೆ. ಸ್ಪಿನ್‌ ಬೌಲಿಂಗ್ ಬಹುತೇಕ ಬಾರಿ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿರಾಟ್ ಅವರ ಟೆಸ್ಟ್ ಅಂಕಿ-ಅಂಶಗಳ ಬಗ್ಗೆ ನೋಡುವುದಾದರೆ ತೀರಾ ಕಳಪೆಯಾಗಿದೆ. 2020 ರಿಂದ ಇಲ್ಲಿಯವರೆಗೆ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 2 ಶತಕಗಳು ಬಂದಿವೆ.

ರೋಹಿತ್ ಮತ್ತು ಕೊಹ್ಲಿಗಿಂತ ಕೆಎಲ್ ರಾಹುಲ್ ಬೆಸ್ಟ್!

ನ್ಯೂಜಿಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ ರನ್ ಸಿಡಿಸದ ಕೆಎಲ್ ರಾಹುಲ್​ರನ್ನ ಎರಡು ಮತ್ತು ಮೂರು ಪಂದ್ಯಗಳಿಂದ ಕೈ ಬಿಡ್ಲಾಗಿತ್ತು. ಌಕ್ಚುಲಿ ಸಿರೀಸ್​ನಲ್ಲಿ ಎಡವಿದ್ದು ಬರೀ ರಾಹುಲ್ ಮಾತ್ರ ಅಲ್ಲ. ದಿಗ್ಗಜ ಬ್ಯಾಟರ್ಸ್ ಎನಿಸಿಕೊಳ್ಳೋ ರೋಹಿತ್ ಮತ್ತು ಕೊಹ್ಲಿ ಕೂಡ ಬ್ಯಾಟ್ ಬೀಸಲಿಲ್ಲ. ಕಳೆದ ಹತ್ತು ಪಂದ್ಯಗಳ ಅಂಕಿಅಂಶಗಳನ್ನ ನೋಡಿದ್ರೆ ಇವ್ರಿಬ್ಬರಿಗಿಂತ ರಾಹುಲ್ ಬೆಸ್ಟ್ ಇದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳೆದ 10 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 325 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಕೆಎಲ್ ರಾಹುಲ್ ಕೊನೆಯ 10 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 339 ರನ್ ಸಿಡಿಸಿ ಅವರಿಬ್ಬರಿಗಿಂತ 14 ರನ್ ಹೆಚ್ಚೇ ಗಳಿಸಿದ್ದಾರೆ. ಈ ಅಂಕಿ ಅಂಶಗಳನ್ನ ಗಮನಿಸಿದರೆ, ಭಾರತಕ್ಕೆ ದೊಡ್ಡ ಸಮಸ್ಯೆಯಾಗುತ್ತಿರುವುದು ಕೆಎಲ್ ರಾಹುಲ್ ಅಲ್ಲ, ಲೆಜೆಂಡರಿ ಬ್ಯಾಟರ್​ಗಳೆಂದು ಕರೆಸಿಕೊಳ್ಳುತ್ತಿರುವ ವಿರಾಟ್​-ರೋಹಿತ್​ ಎಂಬುದು ಸ್ಪಷ್ಟವಾಗಿದೆ.

ಒಟ್ನಲ್ಲಿ ಟೀಂ ಇಂಡಿಯಾದಲ್ಲಿ ರೋಹಿತ್ ಮತ್ತು ಕೊಹ್ಲಿ ಪದೇಪದೆ ಫೇಲ್ಯೂರ್ ಆಗ್ತಿದ್ರೂ ಚಾನ್ಸ್ ಮೇಲೆ ಚಾನ್ಸ್ ಸಿಗ್ತಿದೆ. ಹಿಂದಿನ ಪರ್ಫಾಮೆನ್ಸ್ ನೋಡಿ ತಂಡದಲ್ಲಿ ಕಂಟಿನ್ಯೂ ಆಗ್ತಿದ್ದಾರೆ. ಆದ್ರೆ ಅವ್ರ ಫೇಲ್ಯೂರ್ ಎಷ್ಟಿದೆ ಅನ್ನೋದು ಐಸಿಸಿ ರ್ಯಾಂಕಿಂಗ್​ಗಳಲ್ಲಿ ಹೊರ ಬೀಳ್ತಿದೆ. ಬಟ್ ರಾಹುಲ್ ವಿಚಾರದಲ್ಲಿ ಮಾತ್ರ ಒಂದೆರಡು ಪಂದ್ಯಗಳಿಗೆ ಕಳಪೆ ಪಟ್ಟ ಕಟ್ಟಿ ಡ್ರಾಪ್ ಮಾಡ್ತಿರೋದು ದುರಂತ.

Shwetha M

Leave a Reply

Your email address will not be published. Required fields are marked *