ಲೋಕಾ ಪ್ರಶ್ನೆಗೆ ಸಿಎಂ ಸಿದ್ದು ತತ್ತರ – ತನಿಖೆಯಾಗುತ್ತಿದ್ದಂತೆ ಮತ್ತೊಂದು ನೋಟಿಸ್
ವಿಚಾರಣೆಯಲ್ಲಿ ನಡೀತಾ ಗೋಲ್ಮಾಲ್?
ಮುಡಾ ಕೇಸ್ನಲ್ಲಿ ತನಿಖೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ಬುಲಾವ್ ಬರತ್ತಿದ್ದಂತೆ ಸಿಎಂ ಕುರ್ಚಿ ಶೇಕ್ ಆಗುತ್ತಾ ಅನ್ನೋ ಮಾತು ಕೇಳಿ ಬಂದಿತ್ತು..ಆದ್ರೆ ಹಾಗೇನು ಆಗಿಲ್ಲ ಎಲ್ಲಾ ಕೂಲ್ ಕೂಲ್ ಆಗಿ ನಡೆದಿದೆ. ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ರು. ಲೋಕಾಯುಕ್ತ ಎಸ್.ಪಿ. ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸಿದ್ರು. ಹಾಗಿದ್ರೆ ಏನೆಲ್ಲಾ ತನಿಖೆ ಆಯ್ತು..? ಸಿಎಂ ಏನು ಉತ್ತರವನ್ನ ನೀಡಿದ್ರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಕೊಹ್ಲಿ Or ಕೆಎಲ್? – ಐವರ ರೇಸ್.. ವಿದೇಶಿಗನಿಗೆ ಲಕ್?
ಎ1 ಆಗಿರುವ ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇತ್ತು. ಹೀಗಾಗಿ ಖಾಸಗಿ ವಾಹನದಲ್ಲಿ ಎಂಟ್ರಿ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಜೊತೆ ಸಭೆ ನಡಸಿದ್ದರು. ಸರ್ಕಾರಿ ಕಾರಿನಲ್ಲಿ, ಬೆಂಗಾವಲು ವಾಹನದಲ್ಲಿ ವಿಚಾರಣೆಗೆ ಬರಲು ಸಿಎಂ ಸಜ್ಜಾಗಿದ್ದರು. ಆದರೆ, ಕಾನೂನು ಸಲಹೆಗಾರು ನೀಡಿದ ಸಲಹೆಯಂತೆ ಸರ್ಕಾರಿ ಸವಲತ್ತು ಬಳಸದೇ, ಸರ್ಕಾರಿ ಕಾರನ್ನೂ ಬಳಸದೇ ತಮ್ಮ ಸಿಬ್ಬಂದಿಯನ್ನೂ ಜೊತೆಗೆ ಕರೆ ತರದೇ ಸಿಎಂ ಸಿದ್ದರಾಮಯ್ಯ ಸಾಮಾನ್ಯರಂತೆ ಹೋದ್ರು. ಮೊದಲಿಗೆ ಅನೌಪಚಾರಿಕವಾಗಿ ಎಸ್ಪಿ ಉದೇಶ್ ಜೊತೆ ಮಾತನಾಡಿದರು. ‘ನಾನು ಸಿಎಂ ಎಂದು ಅಂಜಿಕೆ ಇಟ್ಟುಕೊಳ್ಳಬೇಡಿ, ಆರಾಮಾಗಿ ನಿಮ್ಮ ಕೆಲಸ ನೀವು ಮಾಡಿ. ನಾನು ಈ ಕ್ಷಣಕ್ಕೆ ನಿಮಗೆ ಸಿಎಂ ಅಲ್ಲ, ನೀವು ಒಂದು ಕೇಸ್ನಲ್ಲಿ ನನಗೆ ನೋಟಿಸ್ ಕೊಟ್ಟಿದ್ದೀರಿ. ನೋಟಿಸ್ ಕೊಟ್ಟಿದ್ದಕ್ಕೆ ನಾನು ಬಂದಿದ್ದೇನೆ. ನಿಮ್ಮ ಪ್ರಕ್ರಿಯೆಗಳು ಹೇಗಿದೆಯೋ ಹಾಗೇ ಮಾಡಿ. ನೀವು ಯಾವ ಪ್ರಶ್ನೆ ಬೇಕಾದರೂ ಕೇಳಿ, ನನಗೆ ಗೊತ್ತಿರುವುದನ್ನು ಹೇಳುತ್ತೇನೆ. ಎಷ್ಟು ಸಮಯವಾದ್ರೂ ತೆಗೆದುಕೊಳ್ಳಿ, ಯಾವ ಪ್ರಶ್ನೆಗಳಿದ್ರೂ ಕೇಳಿ ಎಂದು ಲೋಕಾಯುಕ್ತ ಎಸ್ಪಿಗೆ ಸಿದ್ದರಾಮಯ್ಯ ಹೇಳಿದರು. ಹಾಗಿದ್ರೆ ಸಿಎಂಗೆ ಲೋಕಾಯುಕ್ತ ಏನೆಲ್ಲಾ ಪ್ರಶ್ನೆ ಕೇಳಿದ್ರು, ಸಿಎಂ ಏನೆಲ್ಲಾ ಉತ್ತರವನ್ನ ನೀಡಿದ್ರು ಅನ್ನೋದನ್ನ ನಡೋಣ ಬನ್ನಿ..
ಲೋಕಾ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ
ಎಸ್ಪಿ: ತಮ್ಮ ಅಧಿಕಾರವಧಿಯಲ್ಲಿ ಮುಡಾ ಸೈಟ್ ಬಗ್ಗೆ ನಿಮ್ಮ ಗಮನಕ್ಕೆ ಬಂದಿತ್ತಾ?
ಸಿದ್ದರಾಮಯ್ಯ: ನನ್ನ ಗಮನಕ್ಕೆ ಇದು ಬಂದಿಲ್ಲ. ಕಾನೂನುಬದ್ಧವಾಗಿ ನಾವು ಸೈಟ್ ತೆಗದುಕೊಂಡಿದ್ದೇವೆ.
ಎಸ್ಪಿ: ನೀವು ಪ್ರಭಾವ ಬಳಸಿದ್ದೀರಾ?
ಸಿದ್ದರಾಮಯ್ಯ: ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ. ಪ್ರಭಾವ ಬೀರುವಂತಹ ಪ್ರಮೇಯ ಬಂದಿಲ್ಲ.
ಎಸ್ಪಿ: ಈ ಹಗರಣದಲ್ಲಿ ನಿಮ್ಮ ಪಾತ್ರವೇನು?
ಸಿದ್ದರಾಮಯ್ಯ: ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ
ಎಸ್ಪಿ: ನಿಮ್ಮ ಪತ್ನಿ ಹಾಗೂ ಮಗನ ಪಾತ್ರವೇನು?
ಸಿದ್ದರಾಮಯ್ಯ: ನನ್ನ ಪತ್ನಿ ಇಲ್ಲೇ ಸೈಟ್ ಕೊಡಿ ಎಂದು ಕೇಳಿಲ್ಲ. ಈ ಪ್ರಕರಣದಲ್ಲಿ ನನ್ನ ಮಗನ ಪಾತ್ರ ಇಲ್ಲ.
ಎಸ್ಪಿ: ಸೈಟ್ ಹಂಚಿಕೆಗಾಗಿ ಯಾರಿಗಾದ್ರೂ ಕರೆ ಮಾಡಲಾಗಿತ್ತಾ?
ಸಿದ್ದರಾಮಯ್ಯ: ನಾನು ಯಾರಿಗೂ ಕರೆ ಮಾಡಿಲ್ಲ, ಪ್ರಭಾವವನ್ನೂ ಬೀರಿಲ್ಲ
ಹೀಗೆ ಎರಡು ಗಂಟೆಗಳ ವಿಚಾರಣೆಯಲ್ಲಿ ಸಾಕಷ್ಟು ಪ್ರಶ್ನೆಗಳನ್ನ ಲೋಕಾಯುಕ್ತ ಅಧಿಕಾರಿಗಳು ಸಿಎಂಗೆ ಕೇಳಿದ್ದಾರೆ. ಸಿಎಂ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ..ಕೆಲವೊಂದು ಪ್ರಶ್ನೆಗೆಳಿಗೆ ನನಗೇನು ಗೊತ್ತಿಲ್ಲ ಎಂಬ ಉತ್ತರವನ್ನ ಸಿಎಂ ನೀಡಿದ್ದಾರೆ. ಹಾಗೇ ವಿಚಾರಣೆ ಮುಗಿದ ನಂತ್ರ ಸಿಎಂಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ನಾವು ವಿಚಾರಣೆಗೆ ಕರೆದ್ರೆ ನೀವು ಬರಬೇಕು ಎಂದು ಸಿಎಂಗೆ ನೋಟಿಸ್ ನೀಡಲಾಗಿದೆ.
ಬಿಜೆಪಿ, ಜೆಡಿಎಸ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿವೆ
ವಿಚಾರಣೆ ಎದುರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಾನೂನು ಪ್ರಕಾರವೇ ನಿವೇಶನ ಪಡೆದಿದ್ದೇನೆ. ಬಿಜೆಪಿ, ಜೆಡಿಎಸ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿವೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದ್ರು. ಹಾಗೇ ಬಿಜೆಪಿಯವರು ಯಾವುದಾದರೂ ಕೇಸ್ ಸಿಬಿಐಗೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು. ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ಮಾಡುತ್ತಿರುವ ಸಂಸ್ಥೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗೆ ಉತ್ತರಿಸಿದ್ದೇನೆ. ಎಲ್ಲವೂ ಕೂಡ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ, ಜೆಡಿಎಸ್ನವರು ಮಾಡಿದ್ದ ಸುಳ್ಳು ಆರೋಪಗಳಿಗೆ ಕೋರ್ಟ್ನಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು.
‘ಲೋಕಾಯುಕ್ತ ಜೊತೆ ಸಿಎಂ ಮ್ಯಾಚ್ಫಿಕ್ಸಿಂಗ್’
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ ವಾಪಸ್ಸಾದ ನಂತರ ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಆರ್ ಅಶೋಕ, ಮುಖ್ಯಮಂತ್ರಿಯವರು ಲೋಕಾಯುಕ್ತ ಅಧಿಕಾರಿಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಂತಿದೆ, ಸಿಎಂ ಅವರ ಇವತ್ತಿನ ವೇಳಾಪಟ್ಟಿಯಲ್ಲಿ 10 ಗಂಟೆಗೆ ಲೋಕಾಯುಕ್ತ ಕಚೇರಿ 12 ಗಂಟೆಗೆ ಚನ್ನಪಟ್ಟಣ ಅಂತ ಉಲ್ಲೇಖವಾಗಿದೆ. ಲೋಕಾಯುಕ್ತ ವಿಚಾರಣೆ ಎರಡು ಗಂಟೆ ಮಾತ್ರ ನಡೆಯುತ್ತದೆ ಅಂತ ಸಿಎಂಗೆ ಮೊದಲೇ ಹೇಗೆ ಗೊತ್ತಾಯಿತು? ಎಂದು ಪ್ರಶ್ನಿಸಿದ್ದಾರೆ.