RCB ಕ್ಯಾಪ್ಟನ್ ಕೊಹ್ಲಿ Or ಕೆಎಲ್? – ಐವರ ರೇಸ್.. ವಿದೇಶಿಗನಿಗೆ ಲಕ್?
ಪಂತ್ & ಶ್ರೇಯಸ್ ಗೆ ₹20ಕೋಟಿ

RCB ಕ್ಯಾಪ್ಟನ್ ಕೊಹ್ಲಿ Or ಕೆಎಲ್? – ಐವರ ರೇಸ್.. ವಿದೇಶಿಗನಿಗೆ ಲಕ್?ಪಂತ್ & ಶ್ರೇಯಸ್ ಗೆ ₹20ಕೋಟಿ

ಐಪಿಎಲ್ ಹರಾಜಿಗೂ ಮುನ್ನ ಕೇವಲ ಮೂರೇ ಮೂರು ಆಟಗಾರರನ್ನ ಉಳಿಸಿಕೊಂಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂದೆ ಇರೋ ಮೇನ್ ಟಾಸ್ಕ್ ಅಂದ್ರೆ ಕ್ಯಾಪ್ಟನ್ ಆಯ್ಕೆ ಮಾಡೋದು. ಮೆಗಾ ಆಕ್ಷನ್​ನಲ್ಲಿ ತಂಡಕ್ಕೆ ಜಸ್ಟ್ ಪ್ಲೇಯರ್ಸ್ ಮಾತ್ರ ಅಲ್ಲದೇ ನಾಯಕನನ್ನ ಹುಡುಕುವ ಸವಾಲಿದೆ. ಯಾಕಂದ್ರೆ ಒಂದು ಟೀಮ್​ಗೆ ನಾಯಕನೇ ಮೇನ್ ಪಿಲ್ಲರ್. ಹೀಗಾಗಿ ಇಡೀ ಟೀಮ್​ನ ಕಂಪ್ಲೀಟ್ ಕಂಟ್ರೋಲ್​ಗೆ ತಗೊಂಡು ಬ್ಯಾಟಿಂಗ್ ಮತ್ತು ಬೌಲಿಂಗ್​​ನಲ್ಲಿ ಯಾವಾಗ ಯಾರನ್ನ ಕಳಿಸ್ಬೇಕು? ಅವ್ರ​ ಅಡ್ವಾಂಟೇಜಸ್ ಹಾಗೇ ಮ್ಯಾನೇಜ್ ಮಾಡ್ಬೇಕು. ಹೀಗಾಗಿ ಅಂತಾ ಸಾಮರ್ಥ್ಯ ಇರೋ ಆಟಗಾರನೇ ನಾಯಕನಾಗಿ ಬರ್ಬೇಕು. ಸದ್ಯ ಆರ್​ಸಿಬಿಯ ಸಾರಥ್ಯ ವಹಿಸುವಂಥ ಕೆಪಾಸಿಟಿ ಇರೋ ಐವರು ಆಟಗಾರರಿದ್ದಾರೆ. ಯಾರು ಆ ಐವರು ಪ್ಲೇಯರ್ಸ್? ಅವ್ರ ಪ್ಲಸ್ ಮತ್ತು ಮೈನಸ್ ಏನು? ಈ ಸಲ ನಾಯಕತ್ವ ಸ್ವದೇಶಿಗರಿಗೋ ಅಥವಾ ವಿದೇಶಿಗರಿಗೋ? ಫ್ರಾಂಚೈಸಿಯ ಪ್ಲ್ಯಾನ್ ಏನು? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸರ್ಜರಿ ಬಳಿಕ ದರ್ಶನ್‌ ಗೆ ದೀರ್ಘ ವಿಶ್ರಾಂತಿ! – ಮತ್ತೆ ಜೈಲಿಗೆ ಹೋಗಲ್ವಾ ದಾಸ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ರಿಟೇನ್ ಆಗಿರೋದೇ ಮೂವರು. ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್​ರನ್ನ ರಿಲೀಸ್ ಮಾಡಿದೆ. ಸೋ ಬೆಂಗಳೂರು ತಂಡಕ್ಕೆ ಓಪನರ್ ಸ್ಲಾಟ್​ನಿಂದ ಹಿಡಿದು ಬೆಸ್ಟ್ ಫಿನಿಶರ್ ಆಯ್ಕೆ ಮಾಡ್ಬೇಕು. ವಿಕೆಟ್​​ಗಳ ಹಿಂದೆ ನಿಂತು ಬ್ಯಾಟರ್​ಗಳನ್ನ ಬೇಟೆಯಾಡೋ ಚಾಣಾಕ್ಷ ಕೀಪರ್ ಸೆಲೆಕ್ಟ್ ಮಾಡ್ಬೇಕು. ಅದ್ರಲ್ಲೂ ಮೇನ್ ಇಂಪಾರ್ಟೆಂಟ್ ಅಂದ್ರೆ ಮ್ಯಾಜಿಕಲ್ ಬೌಲರ್​​ನ ಕರೆತರೋದು. ಬ್ಯಾಟಿಂಗ್​ನಲ್ಲಿ ಎಷ್ಟೇ ಸ್ಟ್ರಾಂಗ್ ಆಗಿದ್ರೂ ಆರ್​ಸಿಬಿಯ ವೀಕ್ನೆಸ್ ಇರೋದೇ ಬೌಲಿಂಗ್ ವಿಭಾಗದಲ್ಲಿ. ಇದೆಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆ ನಾಯಕನನ್ನ ಆಯ್ಕೆ ಮಾಡ್ಬೇಕು. ಫ್ಯೂಚರ್​ನಲ್ಲೂ ಕೂಡ ತಂಡವನ್ನ ಉತ್ತಮವಾಗಿ ಲೀಡ್ ಮಾಡುವಂಥ ಒಬ್ಬ ಸ್ಟಾರ್ ಆಟಗಾರನೇ ಬೇಕು. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂದೆ ಐವರು ಹೆಸರುಗಳಿವೆ.

ಕ್ಯಾಪ್ಟನ್ ರೇಸ್ ಫಸ್ಟ್ ಲಿಸ್ಟ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್!

ಕೆಎಲ್ ರಾಹುಲ್. ಕರ್ನಾಟಕದ ಆಟಗಾರ. ಟೀಂ ಇಂಡಿಯಾದ ಕೂಲ್ ಌಂಡ್ ಕ್ಲಾಸಿಕ್ ಪ್ಲೇಯರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಮ್ಮ ಕನ್ನಡಿಗ ಕೆಎಲ್ ರಾಹುಲ್​ರೇ ಕ್ಯಾಪ್ಟನ್ ಆಗ್ಬೇಕು ಅನ್ನೋದು ಅಭಿಮಾನಿಗಳ ಕನಸೂ ಹೌದು. ಸದ್ಯ ಆರ್​ಸಿಬಿಯ ಕ್ಯಾಪ್ಟನ್​ ರೇಸ್​ನಲ್ಲಿ ರಾಹುಲ್ ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಕೆ.ಎಲ್​ ರಾಹುಲ್ ಸ್ಟಾರ್ ಬ್ಯಾಟರ್. ಯಾವುದೇ ಒತ್ತಡದ ಸಂದರ್ಭದಲ್ಲೂ ಬ್ಯಾಟ್​ ಬೀಸುವ ಸಾಮರ್ಥ್ಯ ಇವರಿಗಿದೆ. ಅಲ್ದೇ ಕರ್ನಾಟಕದ ಅಪಾರ ಅಭಿಮಾನಿಗಳು ಇದ್ದು, ಬ್ರ್ಯಾಂಡ್​ ವ್ಯಾಲ್ಯೂ ಕೂಡ ಇದೆ. ಮಿಡಲ್​ ಆರ್ಡರ್​ ಬ್ಯಾಟರ್​​ ಮತ್ತು ಟಾಪ್​ ಆರ್ಡರ್​ನಲ್ಲೂ ಬ್ಯಾಟಿಂಗ್​ ಮಾಡಬಲ್ಲರು. ವಿಕೆಟ್​ ಕೀಪಿಂಗ್​ ಮತ್ತು ಫಿನಿಶಿಂಗ್​ಗೂ ಫೇಮಸ್. ಈ ಹಿಂದೆ ಆರ್​ಸಿಬಿಯಲ್ಲಿ ಆಡಿದ ಅನುಭವ ಕೂಡ ಇದೆ. ಹೀಗಾಗಿ ರಾಹುಲ್ ತಂಡಕ್ಕೆ ಬರಲಿ ಅನ್ನೋದು ಕನ್ನಡಿಗರ ಆಸೆ ಕೂಡ ಹೌದು.

ರಿಷಭ್ ಪಂತ್ ಗೆ ಇದ್ಯಾ ಕ್ಯಾಪ್ಟನ್ ಚಾನ್ಸ್?

ಸದ್ಯ ಟೀಂ ಇಂಡಿಯಾದಲ್ಲಿ ಸ್ಥಿರ ಪ್ರದರ್ಶನ ನಿಡ್ತಿರೋ ಆಟಗಾರ ಅಂದ್ರೆ ಅದು ರಿಷಭ್ ಪಂತ್ ಮಾತ್ರ. ಆದ್ರೆ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟೀಂ ತಮ್ಮ ಕ್ಯಾಪ್ಟನ್ ಆಗಿದ್ದ ಪಂತ್​ರನ್ನ ರಿಲೀಸ್ ಮಾಡಿದೆ. ಹೀಗಾಗಿ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಂತ್ ಮೇಲೆ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿದೆ. ಪಂತ್​ರನ್ನ ತಂಡಕ್ಕೆ ಕರೆತಂದ್ರೆ ಕ್ಯಾಪ್ಟನ್, ಫಿನಿಶರ್, ಓಪನರ್, ವಿಕೆಟ್ ಕೀಪರ್ ಹೀಗೆ ಎಲ್ಲಾ ಸ್ಥಾನಗಳಿಗೂ ಸೂಟ್ ಆಗಬಲ್ಲರು. ಹೀಗಾಗಿ ಎಲ್ಲಾ ಫ್ರಾಂಚೈಸಿಗಳ ಕಣ್ಣು ಈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೇಲೆ ನೆಟ್ಟಿದೆ. ಈ ಬಾರಿ ಹರಾಜಿನಲ್ಲಿ ಪಂತ್ ಗೆ 20 ಕೋಟಿ ರೂ.ಗೂ ಹೆಚ್ಚು ಬಿಡ್ ಆಗಬಹುದು.

ಕರ್ನಾಟಕವನ್ನೂ ಚಾಂಪಿಯನ್ ಮಾಡ್ತಾರಾ ಶ್ರೇಯಸ್ ಅಯ್ಯರ್?

2025ರ ಐಪಿಎಲ್​ಗೂ ಮುನ್ನ ಮೆಗಾ ಹರಾಜಿನಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಮತ್ತೊಂದು ಹೆಸ್ರೇ ಶ್ರೇಯಸ್ ಅಯ್ಯರ್. 2024ರ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ಚಾಂಪಿಯನ್ ಮಾಡಿದ್ರು. ಆದ್ರೆ 18ನೇ ಸೀಸನ್ ಆರಂಭಕ್ಕೂ ಮುನ್ನ ಶಾರುಖ್ ಖಾನ್ ಒಡೆತನದ ಫ್ರಾಂಚೈಸಿ ಶ್ರೇಯಸ್​ರನ್ನ ರಿಲೀಸ್ ಮಾಡಿದೆ. ರಿಲೀಸ್ ಮಾಡಿದೆ ಅನ್ನೋದಕ್ಕಿಂತ ಶ್ರೇಯಸ್ ಅಯ್ಯರ್ ಅವ್ರೇ ತಂಡದಿಂದ ಹೊರಬಂದಿದ್ದಾರೆ. ಹೀಗಾಗಿ ಹಾಲಿ ಚಾಂಪಿಯನ್ ಟೀಮ್​ನ ಸಾರಥ್ಯ ಹೊತ್ತಿದ್ದ ಶ್ರೇಯಸ್ ಮೇಲೆ ಎಲ್ಲಾ ಮಾಲೀಕರ ಕಣ್ಣು ನೆಟ್ಟಿದೆ. ಅಲ್ದೇ ಹರಾಜಿಗೂ ಮುನ್ನ ಶ್ರೇಯಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಗ್ ಆಫರ್ ನೀಡಿದೆ. ಇದೇ ಕಾರಣಕ್ಕೆ ಕೆಕೆಆರ್ ತಂಡವನ್ನ ತೊರೆದಿದ್ದಾರೆ. ಹೀಗಾಗಿ 20 ಕೋಟಿಗೂ ಹೆಚ್ಚು ಸಂಭಾವನೆಯೊಂದಿಗೆ ಶ್ರೇಯಸ್ ಬೇರೆ ಫ್ರಾಂಚೈಸಿಯ ಪಾಲಾಗೋದ್ರಲ್ಲಿ ಡೌಟೇ ಇಲ್ಲ. ಬೆಂಗಳೂರು ತಂಡಕ್ಕೆ ಬಂದ್ರೂ ಉತ್ತಮವಾಗಿ ತಂಡವನ್ನ ಮುನ್ನಡೆಸೋ ಎಲ್ಲಾ ಕ್ವಾಲಿಟೀಸ್ ಅವ್ರಲ್ಲಿದೆ.

ಬೆಂಗಳೂರು ಕ್ಯಾಪ್ಟನ್ ರೇಸ್ ನಲ್ಲಿ ಜೋಸ್ ಬಟ್ಲರ್!

ಸ್ವದೇಶಿ ಆಟಗಾರರ ನಡುವೆ ಬೆಂಗಳೂರು ತಂಡದ ಕ್ಯಾಪ್ಟನ್ ರೇಸ್​ನಲ್ಲಿ ಕೇಳಿ ಬರ್ತಿರೋ ವಿದೇಶಿ ಆಟಗಾರ ಅಂದ್ರೆ ಅದು ಜೋಸ್ ಬಟ್ಲರ್. ಇಂಗ್ಲೆಂಡ್ ತಂಡದ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್. ಕಳೆದ 7 ಆವೃತ್ತಿಗಳಿಂದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಶಕ್ತಿಯಾಗಿದ್ದರು. ಆದರೂ ಅವರನ್ನು ರಾಜಸ್ಥಾನ ಫ್ರಾಂಚೈಸಿ ಉಳಿಸಿಕೊಂಡಿಲ್ಲ. ಬಟ್ಲರ್ 2016 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಬಟ್ಲರ್ ಅವರನ್ನು 2018 ರಲ್ಲಿ ಸೇರಿಸಿಕೊಂಡಿತ್ತು. ಅಲ್ಲಿಂದ ಆರ್‌ಆರ್‌ ಪರ ಅವರು 7 ಶತಕ ಮತ್ತು 18 ಅರ್ಧ ಶತಕಗಳೊಂದಿಗೆ 3055 ರನ್ ಗಳಿಸಿದ್ದಾರೆ. ಅವರು ಐಪಿಎಲ್ 2022ರ ಆವೃತ್ತಿಯಲ್ಲಿ ಆರ್‌ಆರ್‌ ಪರ ಗರಿಷ್ಠ 863 ರನ್ ಬಾರಿಸಿದ್ದರು. ಐಪಿಎಲ್‌ನಲ್ಲಿ ಇದುವರೆಗೆ ಬಟ್ಲರ್ 107 ಪಂದ್ಯಗಳಲ್ಲಿ 7 ಶತಕ ಮತ್ತು 19 ಶತಕಗಳ ನೆರವಿನಿಂದ 3582 ರನ್ ಗಳಿಸಿದ್ದಾರೆ. ಹೀಗಾಗಿ ಆರ್​ಸಿಬಿಗೆ ಬಂದ್ರೆ ಒಳ್ಳೆ ಬ್ಯಾಟರ್ ಹಾಗೇ ನಾಯಕನಾಗುವ ಎಲ್ಲಾ ಸಾಧ್ಯತೆ ಇದೆ.

ಅಚ್ಚರಿಯ ರೀತಿಯಲ್ಲಿ ಮತ್ತೊಮ್ಮೆ ಕ್ಯಾಪ್ಟನ್ ಆಗ್ತಾರಾ ವಿರಾಟ್ ಕೊಹ್ಲಿ?

ಫಾಫ್ ಡುಪ್ಲೆಸಿಸ್​ರನ್ನ ರಿಲೀಸ್ ಮಾಡೋ ಮೊದ್ಲಿಂದಲೂ ಕೂಡ ಆರ್​ಸಿಬಿ ಅಭಿಮಾನಗಳ ಬೇಡಿಕೆ ಕಿಂಗ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಕ್ಯಾಪ್ಟನ್ ಆಗ್ಬೇಕು ಅನ್ನೋದು. ಈ ಸಲವೂ ಅದೇ ಟಾಕಿಂಗ್ ಇದೆ. ಈ ಬಗ್ಗೆ ಕ್ಲಾರಿಟಿ ಕೊಟ್ಟಿರುವಂಥ ಆರ್‌ಸಿಬಿ ತಂಡದ ನಿರ್ದೇಶಕ ಮೊ ಬೊಬಾಟ್, ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಹೀಗಾಗಿ ವಿರಾಟ್ ಕ್ಯಾಪ್ಟನ್ ಆಗಲೂ ಬಹುದು. ಆಗದೆಯೂ ಇರಬಹುದು. ಈ ಹಿಂದೆ 2013 ರಿಂದ 2021 ರವರೆಗೆ ಕೊಹ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ತಂಡವನ್ನು ನಾಲ್ಕು ಬಾರಿ ಪ್ಲೇ ಆಫ್‌ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ರು. ಆದರೆ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿರಲಿಲ್ಲ. ಇದೀಗ 18ನೇ ಸೀಸನ್​ಗೆ 21 ಕೋಟಿ ರೂಪಾಯಿ ಸಂಭಾವನೆ ಏರಿಸಿಕೊಂಡಿರೋ ವಿರಾಟ್ ಈ ಸಲವೂ ರೆಡ್ ಆರ್ಮಿಯಲ್ಲೇ ಆಡಲಿದ್ದಾರೆ.

ಒಟ್ನಲ್ಲಿ 2025ರ ಐಪಿಎಲ್​ಗೆ ಬೆಂಗಳೂರು ತಂಡ ಕಂಪ್ಲೀಟ್ ಬದಲಾವಣೆ ಆಗಲಿದೆ. ಕ್ಯಾಪ್ಟನ್​​ ಕೂಡ ಚೇಂಜ್ ಆಗ್ತಾರೆ. ಸದ್ಯ ನಾಯಕನ ರೇಸ್​ನಲ್ಲಿ ಈ ಐವರ ಹೆಸರು ಮುಂಚೂಣಿಯಲ್ಲಿದೆ. ಅಂತಿಮವಾಗಿ ನಿಷ್ಥಾವಂತ ಅಭಿಮಾನಿಗಳನ್ನ ಹೊಂದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾರಥ್ಯ ಯಾರ ಹೆಗಲಿಗೆ ಏರುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *