ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಹಸೆಮಣೆಯೇರಲು ರೆಡಿನಾ ? – ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಮದುವೆ ಸೌಂಡ್..!

ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಹಸೆಮಣೆಯೇರಲು ರೆಡಿನಾ ? – ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಮದುವೆ ಸೌಂಡ್..!

ಸ್ಯಾಂಡಲ್‌ವುಡ್ ಅಂಗಳದಲ್ಲಿ ಸ್ಟಾರ್ ಜೋಡಿಯ ಮದುವೆ ಬಗ್ಗೆ ಜೋರಾಗಿಯೇ ಸೌಂಡ್ ಕೇಳಿಬರುತ್ತಿದೆ. ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಮದುವೆಯಾಗ್ತಿದ್ದಾರೆ ಅನ್ನೋ ಮಾತು ಜೋರಾಗಿಯೇ ಕೇಳಿಬರುತ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಇಬ್ಬರೂ ಜೊತೆಯಲ್ಲೇ ದುಬೈ ಪ್ರವಾಸ ಮಾಡಿದ್ದು, ಅಲ್ಲಿಯೇ ಮದುವೆ ಶಾಪಿಂಗ್ ಕೂಡಾ ಮುಗಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ‘ಕಾಳಿ’ಗೆ ಜೊತೆಯಾದ ಸಿಂಗಾರದ ಸಿರಿ ಸಪ್ತಮಿ ಗೌಡ

ಕೆಲ ದಿನಗಳ ಹಿಂದಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಮೂಗು ಚುಚ್ಚಿದ ನೋವಲ್ಲಿ ಹರಿಪ್ರಿಯಾ ಕಣ್ಣಲ್ಲಿ ನೀರು ಬಂದಾಗ ಸ್ವತಃ ವಸಿಷ್ಠ ಸಿಂಹ ಪ್ರೀತಿಯಿಂದ ಕೆನ್ನೆ ಸವರುತ್ತಿದ್ದ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ನಂತರ ನಗುತ್ತಲೇ ಇಬ್ಬರೂ ಕೂಡಾ ತಬ್ಬಿಕೊಂಡಿದ್ದು ನೋಡಿ ಈ ಜೋಡಿ ಮದುವೆಯಾಗುವುದು ಗ್ಯಾರಂಟಿ ಅನ್ನೋ ಮಾತು ಸ್ಯಾಂಡಲ್‌ವುಡ್ ತುಂಬಾ ಹರಿದಾಡಿತ್ತು.

ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ್ದರು. ವಿಡಿಯೋಗಳಿಗೆ ‘ಪಾರ್ಟನರ್’ ಎಂದೆಲ್ಲ ಬರೆದುಕೊಂಡಿದ್ದರು. ಇದು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರಬೇಕು ಎಂದು ಹೇಳಲಾಗ್ತಿತ್ತು. ಇದೆಲ್ಲದರ ನಡುವೆ ಇವರಿಬ್ಬರೂ ತೆಲುಗು ಸಿನಿಮಾವೊಂದರ ಶೂಟಿಂಗ್ ನಲ್ಲಿರುವಾಗ ಪ್ರೀತಿಸಲಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ.

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರ ಪ್ರೀತಿಯ ಪಯಣ ಶುರುವಾಗಿದೆ ಎನ್ನಲಾಗ್ತಿದೆ.

suddiyaana