IPL ಹರಾಜಿಗೆ ಹಾಲಿ ಕ್ಯಾಪ್ಟನ್ಸ್ – ರಾಹುಲ್, ಪಂತ್, ಅಯ್ಯರ್, ಶಮಿ!
RCB ಕಣ್ಣಿಟ್ಟಿರೋ ಪ್ಲೇಯರ್ಸ್ ಇವ್ರೇ
ಐಪಿಎಲ್ ರಿಟೇನ್ ಲಿಸ್ಟ್ ಅನೌನ್ಸ್ ಆದ್ಮೇಲೆ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ ಆಗಿವೆ. ಹರಾಜಿಗೆ ಬರ್ತಾರೆ ಅನ್ಕೊಂಡಿದ್ದ ಕೆಲ ಸ್ಟಾರ್ ಆಟಗಾರರು ತಂಡಗಳಲ್ಲೇ ಉಳ್ಕೊಂಡಿದ್ರೆ ಇನ್ನೂ ಕೆಲ ಸೂಪರ್ಪವರ್ ಪ್ಲೇಯರ್ಸ್ ಆಕ್ಷನ್ಗೆ ಎಂಟ್ರಿ ಕೊಟ್ಟಿದ್ದಾರೆ. 10 ಫ್ರಾಂಚೈಸಿಗಳು ಒಟ್ಟು 46 ಆಟಗಾರರನ್ನು ಉಳಿಸಿಕೊಂಡಿದ್ದು, ಉಳಿದವರೆಲ್ಲಾ ಬಿಡ್ನಲ್ಲಿ ಭಾಗಿಯಾಗಲಿದ್ದಾರೆ. ಐಪಿಎಲ್ 2025ರ ಸೀಸನ್ಗೂ ಮುನ್ನ ರಿಟೇನ್ ಮಾಡಿಕೊಂಡಿರುವ ದೇಶೀ ಆಟಗಾರರ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಂಗ್ ವಿರಾಟ್ ಕೊಹ್ಲಿ ಅತಿಹೆಚ್ಚು ಮೊತ್ತಕ್ಕೆ ರಿಟೇನ್ ಆಗಿದ್ದಾರೆ. ಆರ್ಸಿಬಿ ವಿರಾಟ್ಗೆ ಬರೋಬ್ಬರಿ 21 ಕೋಟಿ ರೂಪಾಯಿ ನೀಡಿದೆ. ಇನ್ನು ರೋಹಿತ್ ಶರ್ಮಾ ಮುಂಬೈನಲ್ಲೇ ಉಳಿದ್ರೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಪರ ಈ ಸಲವೂ ಕಣಕ್ಕಿಳಿಯಲಿದ್ದಾರೆ. ಬಟ್ ಇವ್ರನ್ನೆಲ್ಲಾ ಹೊರತುಪಡಿಸಿ ಕೆಲ ಸ್ಟಾರ್ ಆಟಗಾರರು ಅಚ್ಚರಿ ಎನ್ನುವಂತೆ ಮೆಗಾ ಹರಾಜು ಅಖಾಡಕ್ಕೆ ಧುಮುಕಿದ್ದಾರೆ. ಅಷ್ಟಕ್ಕೂ ಯಾರೆಲ್ಲಾ ತಂಡಗಳಿಂದ ಹೊರಬಿದ್ದಿದ್ದಾರೆ..? ಯಾರ ಮೇಲೆ ಯಾವ ಫ್ರಾಂಚೈಸಿ ಕಣ್ಣಿಟ್ಟಿದೆ..? ಕ್ಯಾಪ್ಟನ್ಗಳನ್ನೇ ರಿಲೀಸ್ ಮಾಡಿರೋದೇಕೆ ಮಾಲೀಕರು? ಮ್ಯಾಜಿಕಲ್ ಬೌಲರ್ಸ್ ತಂಡಗಳಿಗೆ ಬೇಡವಾದ್ರಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮತಕ್ಕಾಗಿ ಟ್ರಂಪ್ ಹಿಂದೂ ಅಸ್ತ್ರ – ಅಮೆರಿಕದಲ್ಲಿ ಅರುಳುತ್ತಾ ಭಾರತದ ಕಮಲ
2025ರ ಐಪಿಎಲ್ ಈಗಾಗ್ಲೇ ವಿಶ್ವಮಟ್ಟದಲ್ಲಿ ಸದ್ದು ಮಾಡೋಕೆ ಶುರು ಮಾಡಿದೆ. ಈ ಸಲ ಹಿಂದಿನ ಎಲ್ಲಾ ದಾಖಲೆಗಳು ಬ್ರೇಕ್ ಆಗೋದಂತೂ ಪಕ್ಕಾ. ಈಗಾಗ್ಲೇ ದಾಖಲೆಯ ಮಟ್ಟದಲ್ಲಿ ಆಟಗಾರರನ್ನ ಫ್ರಾಂಚೈಸಿಗಳು ತಂಡದಲ್ಲೇ ಉಳಿಸಿಕೊಂಡಿವೆ. ಈ ಪೈಕಿ ಕಾಸ್ಟ್ಲಿಯಸ್ಟ್ ಪ್ಲೇಯರ್ ಅಂದ್ರೆ ದಕ್ಷಿಣ ಆಫ್ರಿಕಾದ ಪವರ್ ಹಿಟ್ಟರ್ ಹೆನ್ರಿಕ್ ಕ್ಲಾಸೆನ್. ಕ್ಲಾಸೆನ್ ಅವ್ರನ್ನ ಸನ್ ರೈಸರ್ಸ್ ಹೈದರಾಬಾದ್ 23 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ 21 ಕೋಟಿಗೆ ಉಳಿಸಿಕೊಂಡಿದೆ. ಹೀಗಿದ್ರೂ ಕೆಲ ಫ್ರಾಂಚೈಸಿಗಳಿಂದ ಸ್ಟಾರ್ ಆಟಗಾರರೇ ಹೊರಬಿದ್ದಿದ್ದಾರೆ.
ಲಕ್ನೋದಿಂದ ಹೊರ ಬಿದ್ದ ಸ್ಟಾರ್ ಪ್ಲೇಯರ್ ಕೆಎಲ್ ರಾಹುಲ್!
ಟೀಂ ಇಂಡಿಯಾ ಮತ್ತು ಐಪಿಎಲ್‌ನಲ್ಲಿ ಒನ್ ಆಫ್ ದಿ ಸ್ಟಾರ್ ಪ್ಲೇಯರ್ ಕೆಎಲ್ ರಾಹುಲ್. ರಾಹುಲ್ರನ್ನ ಕಳೆದ ಸೀಸನ್ನಲ್ಲೇ ಲಕ್ನೋ ಸೂಪರ್ ಜೇಂಟ್ಸ್ ರಿಲೀಸ್ ಮಾಡೋ ಹಿಂಟ್ ಸಿಕ್ಕಿತ್ತು. ಆದ್ರೂ ಕೂಡ ಕೊನೇ ಗಳಿಗೆಯಲ್ಲಿ ಉಳಿಸಿಕೊಳ್ಳಬಹುದು ಅನ್ನೋ ನಿರೀಕ್ಷೆ ಇತ್ತು. ಬಟ್ ಫೈನಲಿ ಎಲ್‌ಎಸ್‌ಜಿ ರಿಲೀಸ್ ಮಾಡಿದೆ. ಕೆಎಲ್ ರಾಹುಲ್ ಐಪಿಎಲ್‌ನ ಅನುಭವಿ ಆಟಗಾರರಲ್ಲಿ ಒಬ್ಬರಾಗಿದ್ದು, ಅನೇಕ ತಂಡಗಳಲ್ಲಿ ಆಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಹಲವು ಸೀಸನ್ ಆಡಿದ್ದ ಕೆಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆ ಸೇರಿದ್ದರು. ಮೂರು ಸೀಸನ್ಗಳಿಂದ ಕ್ಯಾಪ್ಟನ್ ಆಗಿ ತಂಡವನ್ನ ಲೀಡ್ ಮಾಡಿದ್ರು.. ಆದರೆ ಐಪಿಎಲ್ 2025ರ ಟೂರ್ನಿಗಾಗಿ ಅವರನ್ನು ಎಲ್‌ಎಸ್‌ಜಿ ಉಳಿಸಿಕೊಂಡಿಲ್ಲ. ಹೀಗಾಗಿ ರಾಹುಲ್ ಮೇಲೆ ಆರ್ಸಿಬಿ ಸೇರಿದಂತೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಪವರ್ ಹಿಟ್ಟರ್ ಪಂತ್ ರನ್ನೇ ಕೈ ಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್!
ಸದ್ಯ ಟೀಂ ಇಂಡಿಯಾದಲ್ಲಿ ಸ್ಥಿರ ಪ್ರದರ್ಶನ ನೀಡ್ತಿರೋ ಪ್ಲೇಯರ್ ಅಂದ್ರೆ ಅದು ರಿಷಭ್ ಪಂತ್ ಮಾತ್ರ. ಕಳೆದ ಐಪಿಎಲ್ನಲ್ಲೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಆಗಿ ಅದ್ಭುತ ಪ್ರದರ್ಶನ ನಿಡಿದ್ರು. 2016ರಲ್ಲಿ ಡೆಲ್ಲಿ ತಂಡ ಸೇರಿದ ಅವರು ಅತಿಹೆಚ್ಚು ರನ್ ಗಳಿಸಿದ್ದಾರೆ. 2018 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 128 ರನ್ ಬಾರಿಸಿ ದಾಖಲೆ ಸೃಷ್ಟಿಸಿದ್ದರು. 100ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಡೆಲ್ಲಿ ತಂಡದ ಏಕೈಕ ಬ್ಯಾಟರ್ ಕೂಡ ಪಂತ್. 2021 ರಲ್ಲಿ ಐಪಿಎಲ್‌ನ ಐದನೇ ಕಿರಿಯ ಕ್ಯಾಪ್ಟನ್ ಎನಿಸಿಕೊಂಡಿದ್ರು. ಹೀಗಿದ್ರೂ ನೆಕ್ಸ್ಟ್ ಸೀಸನ್ಗೂ ಮುನ್ನ ಡೆಲ್ಲಿ ಪಂತ್ರನ್ನ ಕೈ ಬಿಟ್ಟಿದೆ. ಪಂತ್ ಯಾವುದೇ ತಂಡ ಸೇರಿದ್ರೂ ಪ್ಲಸ್ ಆಗೋದಂತೂ ಪಕ್ಕಾ.
ಚಾಂಪಿಯನ್ ತಂಡದ ಕ್ಯಾಪ್ಟನ್ ಗೆ ಕೈಕೊಟ್ಟ ಕೆಕೆಆರ್!
2024ರ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ಲೀಡ್ ಮಾಡಿದ್ದ ಶ್ರೇಯಸ್ ಅಯ್ಯರ್ ಕೂಡ ಆಕ್ಷನ್ಗೆ ಬಂದಿರೋದು ಕುತೂಹಲ ಮೂಡಿಸಿದೆ. ಕೆಕೆಆರ್ ತಂಡ 10 ವರ್ಷಗಳ ನಂತರ ಐಪಿಎಲ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಹೊರತಾಗಿಯೂ ಅವರನ್ನು ಕೆಕೆಆರ್ ಬಿಡುಗಡೆ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ನಾಯಕನನ್ನು ರಿಟೇನ್ ಮಾಡಿಕೊಳ್ಳದಿರುವುದು. ಹೀಗಾಗಿ ಶ್ರೇಯಸ್ ಮೇಲೆ ಬಹುತೇಕ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಸ್ಫೋಟಕ ಬ್ಯಾಟ್ಸ್ ಮನ್ ಇಶನ್ ಗೆ ಮುಂಬೈ ಗೇಟ್ ಪಾಸ್!
ಟೀಂ ಇಂಡಿಯಾದಿಂದ ಹೊರ ಬಿದ್ದಿರೋ ಪವರ್ ಹಿಟ್ಟರ್ ಇಶಾನ್ ಕಿಶನ್ ಐಪಿಎಲ್ ಸೇರಿದಂತೆ ದೇಶೀ ಟೂರ್ನಿಗಳಲ್ಲಿ ಸದ್ದು ಮಾಡ್ತಿದ್ದಾರೆ. ಎದುರಾಳಿ ಬೌಲರ್ ಯಾರೆ ಇದ್ದರೂ ಸಿಕ್ಸರ್ ಹೊಡೆಯಬಲ್ಲ ಸ್ಪೋಟಕ ಎಡಗೈ ಬ್ಯಾಟರ್ ಇಶಾನ್ ಕಿಶನ್ ಆವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿಲ್ಲ. ಮೊದಲ ಬಾರಿಗೆ ಗುಜರಾತ್ ಲಯನ್ಸ್ ಪರ ಕಿಶನ್ ನಂತರ 2018 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸೇರಿದ್ದರು. ಅಲ್ಲಿಂದ ಕಿಶನ್ ವೃತ್ತಿಜೀವನವೇ ಬದಲಾಗಿತ್ತು. ಆದರೆ ಸತತ 7 ಆವೃತ್ತಿಗಳ ನಂತರ ಮುಂಬೈ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್‌ನಲ್ಲಿ 2000ಕ್ಕೂ ಹೆಚ್ಚು ರನ್ ಗಳಿಸಿದ ಮುಂಬೈ ಇಂಡಿಯನ್ಸ್‌ನ 6 ಬ್ಯಾಟರ್‌ಗಳಲ್ಲಿ ಕಿಶನ್ ಕೂಡ ಒಬ್ಬರು. ಹೀಗಾಗಿ ಕಿಶನ್ ರನ್ನ ದೊಡ್ಡ ಮೊತ್ತಕ್ಕೆ ಖರೀದಿ ಮಾಡೋಕೆ ಫ್ರಾಂಚೈಸಿಗಳು ಲೆಕ್ಕಾಚಾರ ಹಾಕಿಕೊಂಡಿವೆ.
ಐಪಿಎಲ್ ನಲ್ಲಿ ಯಾವ ತಂಡ ಸೇರ್ತಾರೆ ಶಮಿ?
ಟೀಂ ಇಂಡಿಯಾ ಸೂಪರ್ ಸ್ಟಾರ್ ಪ್ಲೇಯರ್ ಮೊಹಮ್ಮದ್ ಶಮಿ ಯಾವಾಗ ಮೈದಾನಕ್ಕೆ ಇಳೀತಾರೆ ಅನ್ನೋದನ್ನ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಅಲ್ದೇ ಈ ಸಲ ಹರಾಜಿನಲ್ಲಿ ಭಾಗಿಯಾಗಲಿದ್ದು, ಬಾರೀ ಕುತೂಹಲ ಮೂಡಿಸಿದೆ. ಐಪಿಎಲ್ 2023ರಲ್ಲಿ ಮೊಹಮ್ಮದ್ ಶಮಿ ಗುಜರಾತ್ ಟೈಟನ್ಸ್ ಪರ 17 ಪಂದ್ಯಗಳಲ್ಲಿ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಆದ್ರೆ ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿ ನಂತರ ಶಮಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಇದೀಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದಿಂದ ರಿಲೀಸ್ ಮಾಡಿದೆ. ಹೀಗಾಗಿ ಶಮಿ ಮೇಲೆ ಯಾವುದೇ ಫ್ರಾಂಚೈಸಿ ಬಿಡ್ ಮಾಡಿದ್ರೂ ತಂಡಕ್ಕೆ ಒಳ್ಳೆ ಬೌಲರ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ಅತೀ ಹೆಚ್ಚು ವಿಕೆಟ್ ಪಡೆದ ಚಹಾಲ್ ಮೇಲೆ ಮಾಲೀಕರ ಕಣ್ಣು!
ಯುಜ್ವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಐಪಿಎಲ್ ನಲ್ಲಿ ಚಹಾಲ್ 200 ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ಬಾರಿಯೂ ರಾಜಸ್ತಾನ್ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ರು. ಹಿಗಿದ್ರೂರಾಜಸ್ಥಾನ ಅವರನ್ನು ಬಿಡುಗಡೆ ಮಾಡಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಚಹಾಲ್ ಬಹುದೊಡ್ಡ ಮೊತ್ತಕ್ಕೆ ಬಿಡ್ ಆಗೋದಂತೂ ಪಕ್ಕಾ. ಈ ಪೈಕಿ ಚಹಾಲ್ರನ್ನ ವಾಪಸ್ ತಂಡಕ್ಕೆ ಸೇರಿಸಿಕೊಳ್ಳೋಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎದುರು ನೋಡ್ತಿದೆ.
ಇನ್ನು ಇಷ್ಟೇ ಅಲ್ದೇ ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಗ್ಲೆನ್ ಮ್ಯಾಕ್ಸ್ ವೆಲ್ ಹೀಗೆ ಹಲವು ಸ್ಟಾರ್ ಪ್ಲೇಯರ್ಸ್ ಈ ಸಲ ಬಿಡ್ನಲ್ಲಿ ಭಾಗಿಯಾಗ್ತಾರೆ. ಅಂತಿಮವಾಗಿ ಯಾರು ಯಾವ ತಂಡ ಸೇರ್ತಾರೆ ಅನ್ನೋ ಕುತೂಹಲ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಸಲ ಸ್ಟಾರ್ ಪ್ಲೇಯರ್ಸ್ ಸಂಭಾವನೆಯಲ್ಲಿ ಇತಿಹಾಸ ಸೃಷ್ಟಿಸೋದಂತೂ ಪಕ್ಕಾ.