ಮತಕ್ಕಾಗಿ ಟ್ರಂಪ್ ಹಿಂದೂ ಅಸ್ತ್ರ – ಅಮೆರಿಕದಲ್ಲಿ ಅರುಳುತ್ತಾ ಭಾರತದ ಕಮಲ
US ನಲ್ಲಿ ‘INDIA’ ವೋಟ್ ಲೆಕ್ಕವೇನು?
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವಿನ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆದ್ದರೆ, ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಮತ್ತು ಭಾರತೀಯ ಮೂಲದ ಅಧ್ಯಕ್ಷೆ ಎಂಬ ಇತಿಹಾಸ ನಿರ್ಮಾಣವಾಗಲಿದೆ. 74 ವರ್ಷದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತೀಯ ಮೂಲದವರಾದ ಡೆಮಾಕ್ರೆಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಸಡ್ಡು ಹೊಡೆದಿದ್ದಾರೆ. ಟ್ರಂಪ್ ಗೆಲ್ತಾರಾ ಅಥವಾ ಕಮಲಾ ಗೆದ್ದು, ಅಮೆರಿಕದ ಅಧ್ಯಕ್ಷೆ ಆದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನ್ನಿಸಿಕೊಳ್ಳುತ್ತಾರಾ ಎಂಬ ಎಂಬ ಬಗ್ಗೆ ಕುತೂಹಲವಿದೆ. ಹೀಗಾಗಿ ಜಗತ್ತು, ಅದರಲ್ಲೂ ವಿಶೇಷವಾಗಿ ಭಾರತ ಈ ಚುನಾವಣೆಯ ಬಗ್ಗೆ ಮನಹರಿಸಿದೆ.
ಅಮೆರಿಕಾದಲ್ಲಿರುವ ಭಾರತೀಯರ ವೋಟು ಯಾರು ಬಾಚಿಕೊಳ್ಳುತ್ತಿದ್ದಾರೆ ಎಂಬ ಚರ್ಚೆಯೂ ಕೂಡ ಮುನ್ನೆಲೆಗೆ ಬಂದಿದೆ. ಅಮೆರಿಕಾದ ಹಲವು ರಾಜ್ಯಗಳಲ್ಲಿ ಭಾರತೀಯ ಮೂಲದವರ ವೋಟುಗಳು ಕೂಡ ನಿರ್ಣಾಯಕ ಪಾತ್ರವಹಿಸುತ್ತವೆ. ಸದ್ಯದ ಟ್ರೆಂಡ್ ನೋಡಿದಾಗ ಯುಎಸ್ನಲ್ಲಿರುವ ಭಾರತೀಯರ ಮತಗಳು ಡೆಮಾಕ್ರಟಿಕ್ ಪಕ್ಷದತ್ತ ಹೊರುಳುತ್ತಿರುವ ಸ್ಪಷ್ಟ ಅಂಕಿ ಅಂಶಗಳು ಎದುರಿಗೆ ಬಂದಿವೆ. ಅದರಲ್ಲೂ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧಕ್ಷೀಯ ಅಭ್ಯರ್ಥಿಯಾದ ಮೇಲೆ ಭಾರತೀಯ ಮೂಲದ ಅಮೆರಿಕಾ ನಿವಾಸಿಗಳು ಡೆಮಾಕ್ರಟಿಕ್ ಪಕ್ಷದತ್ತ ಹೊರಳಿದ್ದಾರೆ ಅದರಲ್ಲೂ ಮಹಿಳೆಯರು ಹೆಚ್ಚು ಕಮಲಾ ಹ್ಯಾರಿಸ್ ಬಗ್ಗೆ ಒಲವು ತೋರಿದ್ದಾರೆ.
ಹ್ಯಾರಿಸ್ ಬಗ್ಗೆ ಭಾರತೀಯರ ಒಲವು
ಹೆಚ್ಚು ಭಾರತೀಯರು ವಾಸವಿರುವ ನ್ಯೂಯಾರ್ಕ್ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಕಮಲಾ ಹ್ಯಾರಿಸ್ ಜನಪ್ರಿಯತೆ ಉತ್ತುಂಗದಲ್ಲಿದೆ. ಇಲ್ಲಿನ ಸುಮಾರು ಶೇಕಡಾ 51ರಷ್ಟು ಅಮೆರಿಕಾದ ಭಾರತೀಯ ಮಹಿಳಾ ಮತದಾರರು ಕಮಲಾ ಹ್ಯಾರಿಸ್ಗೆ ಮತ ಹಾಕುವುದಾಗಿ ಹೇಳಿದ್ರೆ ಶೇಕಡಾ 41 ರಷ್ಟು ಮಹಿಳೆಯರು ಟ್ರಂಪ್ಗೆ ಮತ ಹಾಕುವುದಾಗಿ ಹೇಳಿದ್ದಾರೆ. ಇನ್ನು ಪುರುಷರಲ್ಲಿ ಶೇಕಡಾ 45 ರಷ್ಟು ಮಂದಿ ಕಮಲಾ ಹ್ಯಾರಿಸ್ ಅವರತ್ತ ಒಲವು ತೋರಿದ್ದರೆ ಶೇಕಡಾ 49 ರಷ್ಟು ಜನರು ಟ್ರಂಪ್ ಎನ್ನುತ್ತಿದ್ದಾರೆ. ಆದರೆ ಇನ್ನೊಂದು ಸರ್ವೆ 2024 ಇಂಡಿಯನ್ ಅಮೆರಿಕನ್ ಆ್ಯಟಿಟ್ಯೂಡ್ ಪ್ರಕಾರ ಭಾರತೀಯ ಮೂಲದ ಮಹಿಳಾ ಮತದಾರರು ಅತಿಹೆಚ್ಚು ಒಲವನ್ನು ಕಮಲಾ ಹ್ಯಾರಿಸ್ರತ್ತ ತೋರಿದ್ದಾರೆ. ಈಗಾಗಲೇ ಹೇಳಿದಂತೆ ಶೇಕಡಾ 67ರಷ್ಟು ಮಹಿಳೆಯರು ನಮ್ಮ ಮತ ಕಮಲಾ ಹ್ಯಾರಿಸ್ಗೆ ಎನ್ನುತ್ತಿದ್ದಾರೆ. ಕಮಲಾ ಹ್ಯಾರಿಸ್ ಭಾರತೀಯ ಮೂಲದವರು ಎನ್ನುವ ಒಂದು ಭಾವನಾತ್ಮಕ ನಂಟು ಹಾಗೂ ಮೊದಲ ಮಹಿಳಾ ಅಧ್ಯಕ್ಷರನ್ನು ಅಮೆರಿಕಾ ಪಡೆಯಲಿ ಎಂಬ ಸ್ತ್ರೀವಾದ ಇವೆಲ್ಲವೂ ಕೂಡ ಭಾರತೀಯ ಮಹಿಳಾ ಮತದಾರರನ್ನು ಕಮಲಾ ಹ್ಯಾರಿಸ್ರತ್ತ ಸೆಳೆದಿವೆ ಎಂದು ಹೇಳಲಾಗುತ್ತಿದೆ.
ಗೆಲ್ಲೋಕೆ ಹಿಂದೂ ಅಸ್ತ್ರ ಬಿಟ್ಟ ಟ್ರಂಪ್
ಅಮೆರಿಕಾದಲ್ಲಿ ಡೋನಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇಲ್ಲಿ ಭಾರತೀಯ ಅಮೆರಿಕನ್ನರ ಒಲವು ಕಮಸಾ ಹ್ಯಾರಿಸ್ ಮೇಲೆ ಇದೆ. ಯಾಕಂದ್ರೆ ನಮ್ಮವರು ಅನ್ನೋ ಭಾವನೆ..ಹಾಗೇ ನಾನೂ ಕೂಡ ಹಿಂದೂ ಪರವಾಗಿದ್ದೇನೆ ಎಂದು ಟ್ರಂಪ್ ಕೂಡ ಹಿಂದೂ ಅಸ್ತ್ರ ಪ್ರಯೋಗಿಸಿದ್ದಾರೆ. ಅಮೆರಿಕಾದ ಹಿಂದೂಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್, ಇತ್ತೀಚಿಗೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ತಾನು ಅಧ್ಯಕ್ಷನಾದ್ರೆ ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಭರವಸೆ ನೀಡಿದ್ದಾರೆ. ಭಾರತ ನನಗೆ ಒಳ್ಳೆಯ ಸ್ನೇಹಿತ, ನಾನು ಹಿಂದೂ ಅಮೆರಿಕರನ್ನ ರಕ್ಷಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಅಂದ್ರೆ ಈ ಮಾತುಗಳು ಅಮೆರಿಕ ಭಾರತೀಯರನ್ನ ಮನವೊಲಿಸೋಕೆ ಹೇಳಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಯಾಕಂದ್ರೆ ಅಮೆರಿಕದಲ್ಲಿ ನೆಲಸಿರೋ ಭಾರತೀಯರು ಕಮಲಾ ಹ್ಯಾರಿಸ್ ಪರವಾಗಿದ್ದಾರೆ. ಆ ಮಾತುಗಳನ್ನ ಸೆಳೆಯೋಕೆ ಟ್ರಂಪ್ ಹಿಂದೂ ಅಸ್ತ್ರ ಪ್ರಯೋಗಿಸಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಸದ್ಯ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದೂಗಳ ಮತ ನಿರ್ಣಾಯಕವಾಗಿರೋದಂತು ಸತ್ಯ..
ಒಂದ್ಕಡೆ ಅಮೆರಿಕಾ ಹಿಂದೂ ಪರವಿದ್ದೇವೆ ಅಂದ್ರೆ ಕೆನಡಾದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿದ್ದು, ದೇವಸ್ಥಾನಗಳನ್ನ ಧ್ವಂಸ ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿರೋ ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಖಾಲಿಸ್ತಾನಿ ಬೆಂಬಲಿಗರು ಕೆನಡಾದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವುದು ತೀವ್ರ ಕಳವಳಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.. ಹೀಗಾಗಿ ಒಂದ್ಕಡೆ ಹಿಂದೂ ಮೇಲೆ ಹಲ್ಲೆ ಆಗುತ್ತಿದ್ದಾರೆ, ಮತ್ತೊಂದ್ಕಡೆ ಹಿಂದೂಗಳ ವೋಟ್ಗಳು ಅಮೆರಿಕಾದ ಚಿತ್ರಣವನ್ನೇ ಚೇಂಜ್ ಮಾಡಲಿದೆ. ಹೀಗಾಗಿ ಅಮೆರಿಕಾದಲ್ಲಿ ಯಾರ ಪರ ಭಾರತೀಯ ಮೂಲದ ಅಮೆರಿಕನ್ನರು ನಿಲ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.