RCB ಗೇಮ್.. ಕಪ್ ನಮ್ದೇ! – KL, DP, ಚಹಲ್.. ಯಾರು ಬೆಸ್ಟ್?
ಬೆಂಗಳೂರಿಗೆ ಸಿಕ್ಕೇ ಬಿಟ್ರಾ ಕ್ಯಾಪ್ಟನ್?

RCB ಗೇಮ್.. ಕಪ್ ನಮ್ದೇ! – KL, DP, ಚಹಲ್.. ಯಾರು ಬೆಸ್ಟ್?ಬೆಂಗಳೂರಿಗೆ ಸಿಕ್ಕೇ ಬಿಟ್ರಾ ಕ್ಯಾಪ್ಟನ್?

ಐಪಿಎಲ್ ರಿಟೇನ್ ಸಸ್ಪೆನ್ಸ್ ಥ್ರಿಲ್ಲರ್ ಗೆ ತೆರೆ ಬಿದ್ದಿದ್ದು, ಸ್ಟಾರ್ ಆಟಗಾರರ ದಂಡೇ ಮೆಗಾ ಆಕ್ಷನ್​ಗೆ ಲಗ್ಗೆ ಇಟ್ಟಿದೆ. ಕೆಲವ್ರಿಗೆ ಕೋಟಿ ಕೋಟಿ ಸುರಿದು ತಂಡದಲ್ಲೇ ಉಳಿಸಿಕೊಂಡಿರೋ ಫ್ರಾಂಚೈಸಿಗಳು ಮತ್ತೊಂದಷ್ಟು ದುಡ್ಡನ್ನ ಹಾಗೇ ಇಟ್ಟುಕೊಂಡು ಹರಾಜಿನಲ್ಲಿ ಬಿಡ್ ಮಾಡೋಕೆ ರೆಡಿಯಾಗಿದ್ದಾರೆ. ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅತಿ ಹೆಚ್ಚು ಅಂದ್ರೆ ಆರು ಆಟಗಾರರನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲೋ ಕನಸಿನಲ್ಲಿರೋ ಪಂಜಾಬ್ ಕಿಂಗ್ಸ್ ಬರೀ ಇಬ್ಬರನ್ನ ಉಳಿಸಿಕೊಂಡಿದೆ. ಇನ್ನು ಎಂಎಸ್ ಧೋನಿ ನಿವೃತ್ತಿ ಘೋಷಿಸ್ತಾರಾ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೂ ಉತ್ತರ ಸಿಕ್ಕಿದ್ದು ಮುಂದಿನ ಸೀಸನ್​ನಲ್ಲೂ ಮಾಹಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಎಲ್ಲಾ ಫ್ರಾಂಚೈಸಿಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರನ್ನ ಮಾತ್ರ ಉಳಿಸಿಕೊಂಡು ಟ್ವಿಸ್ಟ್ ಕೊಟ್ಟಿದೆ. ಹಾಗೇ ಐವರು ಮಾಜಿ ಆಟಗಾರರ ಮೇಲೆ ಕಣ್ಣಿಟ್ಟು ಮೆಗಾ ಹರಾಜಿನಲ್ಲಿ ಬಿಡ್ ಮಾಡೋ ಪ್ಲ್ಯಾನ್​ನಲ್ಲಿದೆ. ಅಷ್ಟಕ್ಕೂ ಬೆಂಗಳೂರು ಫ್ರಾಂಚೈಸಿ ಲೆಕ್ಕಾಚಾರ ಏನು? ಯಾವೆಲ್ಲಾ ಆಟಗಾರರನ್ನ ಆರ್​ಸಿಬಿ ಟಾರ್ಗೆಟ್ ಮಾಡಿದೆ? ಐವರು ಕ್ಯಾಪ್ಟನ್​ಗಳೇ ತಂಡಗಳಿಂದ ಹೊರಬಿದ್ದಿದ್ದೇಕೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 0, 1, 2 ರನ್.. ವೈಟ್ ವಾಷ್! – ರೋಹಿತ್ & ಕೊಹ್ಲಿಗೆ ಗೇಟ್ ಪಾಸ್?

2025ರ ಐಪಿಎಲ್​ಗೂ ಮುನ್ನ ಐದು ಫ್ರಾಂಚೈಸಿಗಳು ತಮ್ಮ ಕ್ಯಾಪ್ಟನ್​ಗಳಿಗೇ ಗೇಟ್​ಪಾಸ್ ಕೊಟ್ಟಿವೆ. 2024ರ ಸೀಸನ್​ನಲ್ಲಿ ಕೆಕೆಆರ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನೂ ಕೆಕೆಆರ್ ಕೈಬಿಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಡುಪ್ಲೆಸಿಸ್ ಮತ್ತು ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅವರನ್ನ ರಿಲೀಸ್ ಮಾಡಿವೆ.

ಕೊಹ್ಲಿ, ರಜತ್ & ದಯಾಳ್ ಗೆ ಮಾತ್ರ ರಿಟೇನ್!

ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ಐಪಿಎಲ್ 2025ರ ಮೆಗಾ ಹರಾಜಿಗೆ ಮುಂಚಿತವಾಗಿ, RCB ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಕೊಹ್ಲಿಯನ್ನು ₹21 ಕೋಟಿಗೆ ಉಳಿಸಿಕೊಂಡರೆ, ಆರ್‌ಸಿಬಿ ಪಾಟಿದಾರ್‌ಗೆ ₹11 ಕೋಟಿ ಮತ್ತು ಅನ್‌ಕ್ಯಾಪ್ಡ್ ಭಾರತೀಯ ವೇಗಿ ದಯಾಳ್​ಗೆ ₹5 ಕೋಟಿ ನೀಡಿದೆ. ಈ ಮೂಲಕ ಬೆಂಗಳೂರು ಫ್ರಾಂಚೈಸಿ ಮೂರು ರೈಟ್ ಟು ಮ್ಯಾಚ್ ಕಾರ್ಡ್‌ಗಳನ್ನು ಹೊಂದಿದ್ದು, ಫ್ರಾಂಚೈಸಿ ಮಾಲೀಕರು ಮತ್ತೆ ಮೂವರನ್ನ ಉಳಿಸಿಕೊಳ್ಳಬಹುದು. ಇದರ ಜೊತೆಗೆ RCB ಕೆಲವು ಮಾಜಿ ಆಟಗಾರರನ್ನು ಮರಳಿ ಖರೀದಿಸಲು ತಯಾರಾಗಿದೆ. ಬೆಂಗಳೂರು ಫ್ರಾಂಚೈಸಿ ಫಾಫ್ ಡುಪ್ಲೆಸಿಸ್​​ರನ್ನ ಕೈ ಬಿಟ್ಟಿರೋದ್ರಿಂದ ಮುಂದಿನ ಸೀಸನ್​ಗೆ ಹೊಸ ಕ್ಯಾಪ್ಟನ್​​ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗೇ ಟೀಂ ಸ್ಟ್ರಾಂಗ್ ಮಾಡೋಕೆ ಸ್ಟಾರ್ ಆಟಗಾರರನ್ನೇ ಖರೀದಿ ಮಾಡಬೇಕಿದೆ. ಸದ್ಯ ಫ್ರಾಂಚೈಸಿಯು ಈ ಐವರು ಮಾಜಿ ಪ್ಲೇಯರ್ಸ್ ಮೇಲೆ ಕಣ್ಣಿಟ್ಟಿದೆ.

ಬೆಂಗಳೂರು ತಂಡದ ಕ್ಯಾಪ್ಟನ್ ಆಗ್ತಾರಾ ಕೆಎಲ್ ರಾಹುಲ್?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಹುದೊಡ್ಡ ಬೇಡಿಕೆ ಅಂದ್ರೆ ಕೆಎಲ್ ರಾಹುಲ್ ನಮ್ಮ ತಂಡದಲ್ಲೇ ಆಡ್ಬೇಕು ಅನ್ನೋದು. ಕನ್ನಡಿಗ ರಾಹುಲ್ RCB ಪರವೇ 2013 ರಲ್ಲಿ IPL ಗೆ ಪಾದಾರ್ಪಣೆ ಮಾಡಿದರು. ರಡು ಸೀಸನ್​ಗಳಲ್ಲಿ ಫ್ರಾಂಚೈಸಿಗಾಗಿ ಆಡಿದ ರಾಹುಲ್ 19 ಪಂದ್ಯಗಳಲ್ಲಿ 417 ರನ್ ಗಳಿಸಿದ್ದಾರೆ. 32 ವರ್ಷದ ಬಲಗೈ ಬ್ಯಾಟರ್ ಹಿಂದೆ ಅನೇಕ ಸಂದರ್ಭಗಳಲ್ಲಿ RCB ಗಾಗಿ ಮತ್ತೆ ಆಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್‌ ಕೈಬಿಟ್ಟಿದ್ದು, ಮತ್ತೊಮ್ಮೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೇನಾದ್ರೂ ರಾಹುಲ್ ಬೆಂಗಳೂರು ತಂಡಕ್ಕೆ ಬಂದ್ರೆ ಕ್ಯಾಪ್ಟನ್, ಓಪನರ್ ಹಾಗೇ ವಿಕೆಟ್ ಕೀಪರ್ ಕೂಡ ಆಗಬಹುದು.

ಬೆಂಗಳೂರಿಗೆ ಬರ್ತಾರಾ 200 ವಿಕೆಟ್ ಗಳ ಸರದಾರ ಚಹಾಲ್?

ಯುಜ್ವೇಂದ್ರ ಚಹಾಲ್.. ಐಪಿಎಲ್​ನ ಯಶಸ್ವೀ ಬೌಲರ್. ಐಪಿಎಲ್ ಇತಿಹಾಸದಲ್ಲಿ RCBಯ ಪ್ರಮುಖ ವಿಕೆಟ್ ಟೇಕರ್. ಫ್ರಾಂಚೈಸಿಗಾಗಿ 113 ಪಂದ್ಯಗಳಲ್ಲಿ, 139 ಬ್ಯಾಟರ್‌ಗಳನ್ನು ಔಟ್ ಮಾಡಿದ್ದರು. ಹೀಗಿದ್ರೂ ಐಪಿಎಲ್ 2022ರ ಮೆಗಾ ಹರಾಜಿನ ಮೊದಲು ಅವರನ್ನು ಫ್ರಾಂಚೈಸ್ ಬಿಡುಗಡೆ ಮಾಡಿತ್ತು, ನಂತರ ಅವರು ರಾಜಸ್ಥಾನ್ ರಾಯಲ್ಸ್‌ಗೆ ಸೇರಿದ್ದರು. ಚಹಾಲ್ ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ಬೌಲರ್ ಆಗಿದ್ದಾರೆ. ಈ ಬಾರಿ ಚಹಾಲ್ ಹರಾಜಿನಲ್ಲಿ ಭಾಹವಹಿಸಲಿದ್ದು ಆರ್​ಸಿಬಿ ತಂಡ ಮತ್ತೆ ಅವರನ್ನು ಕರೆತರುವ ಪ್ಲಾನ್​ನಲ್ಲಿದೆ ಎನ್ನಲಾಗಿದೆ.

ಹರ್ಷಲ್ ಪಟೇಲ್ ಮೇಲೆ ಕಣ್ಣಿಟ್ಟ ಬೆಂಗಳೂರು!

ಆರ್‌ಸಿಬಿ ಪರ 80 ಐಪಿಎಲ್ ಪಂದ್ಯಗಳನ್ನ ಆಡಿದ್ದ ಹರ್ಷಲ್ ಪಟೇಲ್ 99 ಬ್ಯಾಟರ್‌ಗಳನ್ನು ಪೆವಿಲಿಯನ್​ಗೆ ಕಳಿಸಿದ್ರು. ಎರಡು ಬಾರಿ ಪರ್ಪಲ್ ಕ್ಯಾಪ್ ವಿಜೇತರಾಗಿದ್ರು. ಅದ್ರಲ್ಲೂ ಡೆತ್ ಓವರ್‌ಗಳಲ್ಲಿ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್‌ ಪರ 2024ರ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಹೀಗಿದ್ರೂ ಫ್ರಾಂಚೈಸಿ ಅವ್ರನ್ನ ರಿಲೀಸ್ ಮಾಡಿದ್ದು, ಹರ್ಷಲ್ ಪಟೇಲ್ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ.

ಕನ್ನಡಿಗ ದೇವದತ್ ಪಡಿಕ್ಕಲ್ ಬಂದ್ರೆ ಡಬಲ್ ಪವರ್!

ದೇವದತ್ ಪಡಿಕ್ಕಲ್ RCB ಪರ ಐಪಿಎಲ್‌ನಲ್ಲಿ ಎರಡು ಸೀಸನ್‌ಗಳನ್ನು ಆಡಿದ್ದಾರೆ.2020 ಮತ್ತು 21ರಲ್ಲಿ  ಆಡಿದ 29 ಪಂದ್ಯಗಳಲ್ಲಿ 884 ರನ್ ಗಳಿಸಿದ್ದಾರೆ. ಕರ್ನಾಟಕ ಮೂಲದ ಕ್ರಿಕೆಟಿಗ RR ಮತ್ತು LSG ಗಾಗಿ ಕಳೆದ ಮೂರು ಸೀಸನ್‌ಗಳಲ್ಲಿ ಕಣಕ್ಕಿಳಿದಿದ್ರು. ಇದೀಗ ಮೆಗಾ ಹರಾಜಿನ ಭಾಗವಾಗಲಿದ್ದಾರೆ.  ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಿದ್ರೆ ಮತ್ತಷ್ಟು ಬಲ ಸಿಕ್ಕಂತಾಗುತ್ತೆ.

ಆಲೌಂಡರ್ ವಾಷಿಂಗ್ಟನ್ ಸುಂದರ್ ಟಾರ್ಗೆಟ್!

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತೀಹೆಚ್ಚು ಸದ್ದು ಮಾಡಿದ ಹೆಸ್ರೇ ವಾಷಿಂಗ್ಟನ್ ಸುಂದರ್. ತಮಿಳುನಾಡು ಮೂಲದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಆರ್‌ಸಿಬಿ ಪರ 2018 ರಿಂದ 2021 ರವರೆಗೆ 31 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 208 ರನ್ ಗಳಿಸಿದ್ದಲ್ಲದೆ 19 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ. ಸುಂದರ್ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಎಸ್‌ಆರ್‌ಹೆಚ್ ಸೇರಿಕೊಂಡಿದ್ರು. ಆದರೆ ಹೈದರಾಬಾದ್ ಮೂಲದ ಫ್ರಾಂಚೈಸ್‌ ಪರ ಆಡಲು  ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಹೀಗಿದ್ರೂ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಸುಂದರ್ ಇದೀಗ ಟೀಂ ಇಂಡಿಯಾದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದಕ್ಕಾಗಿಯೇ ಮುಂಬರುವ ಹರಾಜಿನ ಸಮಯದಲ್ಲಿ ಅವರ ಮೇಲೆ ಅನೇಕ ತಂಡಗಳು ಕಣ್ಣಿಟ್ಟಿವೆ. ಇದಕ್ಕೆ ಬೆಂಗಳೂರು ಫ್ರಾಂಚೈಸಿ ಕೂಡ ಟಾರ್ಗೆಟ್ ಮಾಡಿದೆ.

ಒಟ್ನಲ್ಲಿ ಐಪಿಎಲ್ ನ 10 ಫ್ರಾಂಚೈಸಿಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ಜನಪ್ರಿಯ  ತಂಡವಾಗಿದೆ. ಐಪಿಎಲ್ ನ​ ಎಲ್ಲಾ 17 ಸೀಸನ್​ಗಳಲ್ಲೂ ಭಾಗವಹಿಸಿದೆ. ಆದ್ರೂ ಕೂಡ ಇನ್ನೂ ಒಂದು ಸಲವೂ ಚಾಂಪಿಯನ್ ಆಗಿಲ್ಲ. ಹೀಗಾಗಿ ಹಿಂದಿನದ್ದೇ ಒಂದು ಲೆಕ್ಕ. ಮುಂದಿನ ದಿನಗಳಲ್ಲಿ ಮತ್ತೊಂದು ಲೆಕ್ಕ ಎಂಬ ಅಜೆಂಡಾದೊಂದಿಗೆ ಹೊಸ ತಂಡವನ್ನ ಕಟ್ಟೋಕೆ ಪ್ಲ್ಯಾನ್ ಮಾಡಿದೆ. ಅದ್ರಂತೆ ಮೂವರನ್ನ ಮಾತ್ರ ಉಳಿಸಿಕೊಂಡು ಮಿಕ್ಕವ್ರಿಗೆಲ್ಲಾ ಗೇಟ್​​ಪಾಸ್ ನೀಡಿದೆ.

Shwetha M

Leave a Reply

Your email address will not be published. Required fields are marked *