0, 1, 2 ರನ್.. ವೈಟ್ ವಾಷ್! – ರೋಹಿತ್ & ಕೊಹ್ಲಿಗೆ ಗೇಟ್ ಪಾಸ್?
WTC ಫೈನಲ್ ನಿಂದ IND ಔಟ್?

0, 1, 2 ರನ್.. ವೈಟ್ ವಾಷ್! – ರೋಹಿತ್ & ಕೊಹ್ಲಿಗೆ ಗೇಟ್ ಪಾಸ್?WTC ಫೈನಲ್ ನಿಂದ IND ಔಟ್?

ಸರಣಿ ಕೈ ಚೆಲ್ಲಿಹೋಗಿತ್ತು. ತವರಲ್ಲೇ ಸೋಲಿನ ಆಘಾತವೂ ತಟ್ಟಿತ್ತು. ಇರೋ ಒಂದು ಪಂದ್ಯದಲ್ಲಾದ್ರೂ ಗೆದ್ದು ವೈಟ್​ವಾಶ್ ಮುಖಭಂಗ ತಪ್ಪಿಸಿಕೊಳ್ತಾರೆ ಅಂದ್ರೆ ನೋ ವೇ.. ಚಾನ್ಸೇ ಇಲ್ಲ. ಭಾರತೀಯ ಆಟಗಾರರು ಸೋಲಲೆಂದೇ ಮೈದಾನಕ್ಕಿಳಿದಂತಿತ್ತು. ಹೋಮ್​ನಲ್ಲಿ ನಾವೇ ಕಿಂಗ್ ಅಂತಾ ಮೆರೆಯುತ್ತಿದ್ದ ಟೀಂ ಇಂಡಿಯಾ ದಾಖಲೆಗೆ  ಹಿರಿಯರೇ ಕೊಳ್ಳಿ ಇಟ್ಟಿದ್ದಾರೆ. ಬ್ಯಾಟ್ ಬೀಸೋಕೇ ಬರದವರಂತೆ ಆಡಿ ಹೀನಾಯ ಸೋಲು ಕಂಡಿದ್ದಾರೆ. ಇದೇ ಕ್ಲೀನ್​ಸ್ವೀಪ್ ಈಗ ವಿಶ್ವಟೆಸ್ಟ್ ಚಾಂಪಿಯನ್ ಶಿಪ್​ ಮೇಲೂ ಬರೆ ಎಳೆದಿದೆ. ರೇಸ್​ನಿಂದ ಹೊರಬೀಳೋ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ಇದೇ ತಿಂಗಳಲ್ಲಿ ಆರಂಭವಾಗಿರೋ ಬಾರ್ಡರ್ ಗವಾಸ್ಕರ್ ಸರಣಿ ಡು ಆರ್ ಡೈ ಸರಣಿಯಂತೆ ಬದಲಾಗಿದೆ. ಅಷ್ಟಕ್ಕೂ ಫಾರ್ಮ್ ಕಳ್ಕೊಂಡ್ರಾ ಭಾರತೀಯ ಆಟಗಾರರು? ರೋಹಿತ್ ಮತ್ತು ಕೊಹ್ಲಿ ಬ್ಯಾಟ್ ಸೈಲೆಂಟ್ ಆಗಿದ್ದೇಕೆ? ಕೆಎಲ್ ರಾಹುಲ್​ರನ್ನ ಹೊರಗಿಟ್ಟು ತಪ್ಪು ಮಾಡಿದ್ರಾ? ಸೀನಿಯರ್ಸ್​ಗೆ ಗೇಟ್ ಪಾಸ್ ಮುಹೂರ್ತ ಇಟ್ರಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಾನಸ ಕೂಗಾಟಕ್ಕೆ CM ಶಾಕ್‌!  -ಬಾಹುಬಲಿಯಲ್ಲಿ ತುಕಾಲಿ ಸಂತು ಪತ್ನಿ

ಬೆಂಗಳೂರು ಮತ್ತು ಪುಣೆ ಮೈದಾನದಲ್ಲಿ ಸೋತು ಸುಣ್ಣವಾಗಿದ್ದ ಟೀಂ ಇಂಡಿಯಾ ಪ್ಲೇಯರ್ಸ್ ಮುಂಬೈನ ವಾಂಖೆಡೆ ಸ್ಟೇಡಿಯಮ್​ನಲ್ಲಿ ಅದಕ್ಕಿಂತ ತೀರಾ ಕೆಟ್ಟ ಪ್ರದರ್ಶನ ನೀಡಿ ಕಿವೀಸ್ ಪಡೆ ಎದುರು ಮಂಡಿಯೂರಿದ್ದಾರೆ. ಯಾವ ಮೈದಾನದಲ್ಲಿ ಟೀಮ್​ ಇಂಡಿಯಾ ಇತಿಹಾಸ ಸೃಷ್ಟಿಸಿತ್ತೋ, ಅದೇ ಮೈದಾನದಲ್ಲಿ ಹಿಂದೆಂದೂ ಕಾಣದಂತಹ ಅವಮಾನ ಎದುರಿಸಿದೆ. 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ವೈಟ್​ವಾಶ್​ ಆಗಿದೆ. ಗೆದ್ದ ನ್ಯೂಜಿಲೆಂಡ್​ ಇತಿಹಾಸ ಸೃಷ್ಟಿಸಿದೆ. ಸಣ್ಣ ಮೊತ್ತದ ಟಾರ್ಗೆಟ್​ ರೀಚ್ ಆಗುವಲ್ಲಿಯೂ ಎಡವಿದ್ದು, ಬಲಿಷ್ಠ ಭಾರತ ತಂಡದ ಮಾನ ವಿಶ್ವಮಟ್ಟದಲ್ಲಿ ಹರಾಜಾಗಿದೆ.

ಸಾಧಾರಣ ಗುರಿಯನ್ನೂ ಮುಟ್ಟದ ಟೀಂ ಇಂಡಿಯಾ ಸ್ಟಾರ್ಸ್!

ಟೀಂ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ರೂ ನ್ಯೂಜಿಲೆಂಡ್ ಎದುರು ಕಂಪ್ಲೀಟ್ ಫೇಲ್ಯೂರ್ ಅನುಭವಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 28 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕಿವೀಸ್​ ಬ್ಯಾಟರ್​ಗಳು ಭಾರತೀಯ ಸ್ಪಿನ್ನರ್​ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಆ ಬಳಿಕ ನ್ಯೂಝಿಲೆಂಡ್ ಆಟಗಾರರ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಕೇವಲ 174 ರನ್​ಗಳಿಗೆ ಆಲೌಟ್ ಆಗಿದ್ರು. ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ 147 ರನ್​ಗಳ ಗುರಿ ಪಡೆದ ಭಾರತ ಪಂದ್ಯವನ್ನ ಗೆಲ್ಲೋ ಚಾನ್ಸಸ್ ಜಾಸ್ತಿನೇ ಇತ್ತು. ಬಟ್ ಭಾರತದ ಆಟಗಾರರ ಪ್ರದರ್ಶನ ನೋಡಿದ್ರೆ ಸೋಲಲೆಂದೇ ಕ್ರೀಸ್​ಗೆ ಬಂದಂತೆ ಆಡಿದ್ರು. ಜಸ್ಟ್ 29 ರನ್ ​ಗಳಿಸುವಷ್ಟರಲ್ಲಿ 5 ವಿಕೆಟ್​​ಗಳು ಉರುಳಿದ್ವು. ರಿಷಭ್ ಪಂತ್ ಮತ್ತು ಜಡೇಜಾ ಕೊಂಚ ಆಸರೆಯಾದ್ರೂ ಕೂಡ ಅಂತಿಮವಾಗಿ 121 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ 25 ರನ್​ಗಳಿಂದ ಸೋಲೊಪ್ಪಿಕೊಳ್ತು.

92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತದಲ್ಲಿ ಸರಣಿ ಗೆದ್ದ ಕಿವೀಸ್ ಪಡೆ!

ಭಾರತವನ್ನ ವೈಟ್ ವಾಶ್ ಮಾಡಿ ನ್ಯೂಜಿಲೆಂಡ್ ತಂಡ ಹಲವು ದಾಖಲೆಗಳನ್ನ ಬರೆದಿದೆ. 12 ವರ್ಷಗಳ ಬಳಿಕ ತವರು ನೆಲದಲ್ಲಿ ಟೆಸ್ಟ್ ಸರಣಿ ಸೋತಿದೆ. ಸರಣಿ ಸೋಲು ಮಾತ್ರವಲ್ಲದೆ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ತವರಿನಲ್ಲೇ 3 ಪಂದ್ಯಗಳ ಸರಣಿಯನ್ನ ವೈಟ್​ವಾಶ್ ಮುಖಭಂಗ ಅನುಭವಿಸಿದೆ. ಸರಣಿಯನ್ನು ಸೋಲಿನೊಂದಿಗೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹ್ಯಾಟ್ರಿಕ್​ ಫೈನಲ್ ತಲುಪುವ ಅವಕಾಶವನ್ನ ಕಳೆದುಕೊಂಡಿದೆ. 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಭಾರತ ತಂಡವನ್ನು 3-0 ಅಂತರದಿಂದ ಸೋಲಿಸಿ ತವರಿನಲ್ಲಿ ಟೀಮ್ ಇಂಡಿಯಾವನ್ನು ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ಸಹ ಮಾಡಿದೆ.

ಡಬ್ಲ್ಯೂಟಿಸಿ ಫೈನಲ್‌ ಪ್ರವೇಶಿಸದಿದ್ರೆ ಸೀನಿಯರ್ಸ್​ ಗೆ ಗೇಟ್ ಪಾಸ್?

ಟಿ-20 ವಿಶ್ವಕಪ್ ಬಳಿಕ ಸೀನಿಯರ್ಸ್​ನ ಏಕದಿನ ಮತ್ತು ಟೆಸ್ಟ್ ಗೆ ಸೀಮಿತ ಮಾಡಿ ಯಂಗ್ ಸ್ಟರ್ಸ್ ಗೆ ಟಿ-20 ಸರಣಿಗಳಲ್ಲಿ ಚಾನ್ಸ್ ನೀಡಲಾಗ್ತಿದೆ. ಸೂಪರ್ ಡೂಪರ್ ಪ್ರದರ್ಶನ ನೀಡ್ತಿರೋ ಯಂಗ್ ಸ್ಟರ್ಸ್ ಒಂದೇ ಒಂದು ಸರಣಿಯನ್ನೂ ಸೋತಿಲ್ಲ. ಬಟ್ ಸೀನಿಯರ್ಸ್ ಮಾತ್ರ ನೀರಸ ಪ್ರದರ್ಶನ ನೀಡ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನೂ ಕೈ ಚೆಲ್ಲಿಕೊಂಡಿದ್ರು. ಇದೀಗ ನ್ಯೂಜಿಲೆಂಡ್ ವಿರುದ್ಧ ವೈಟ್ ವಾಶ್ ಆಗಿದ್ದಾರೆ. ಇದೇ ಎಫೆಕ್ಟ್ ನಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಪ್ರವೇಶಿಸಲು ಟೀಂ ಇಂಡಿಯಾ ವಿಫಲವಾದರೆ 2025ರ ಜನವರಿಯಲ್ಲಿನ ಇಂಗ್ಲೆಂಡ್ ಟೆಸ್ಟ್​ ಸರಣಿಯಿಂದ ಹಿರಿಯ ಸ್ಟಾರ್ ಆಟಗಾರರನ್ನು ಕೈ ಬಿಡೋ ಸಾಧ್ಯತೆ ಇದೆ. ಕಳಪೆ ಫಾರ್ಮ್​ನಲ್ಲಿರುವ ಆಟಗಾರರಿಗೆ ಭಾರತ ತಂಡದಿಂದ ಗೇಟ್ ಪಾಸ್ ನೀಡಲು ಮುಂದಾಗಿದೆ.

ಬಾರ್ಡರ್-ಗವಾಸ್ಕರ್​ ಟೆಸ್ಟ್ ಸರಣಿಯೇ ನಿರ್ಣಾಯಕ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್​ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 5 ಪಂದ್ಯಗಳ ಈ ಸರಣಿಯು ಟೀಮ್ ಇಂಡಿಯಾದ ನಾಲ್ವರು ಆಟಗಾರರ ಪಾಲಿಗೆ ನಿರ್ಣಾಯಕ. ನ್ಯೂಝಿಲೆಂಡ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿರೋ ಸೆಲೆಕ್ಟರ್ಸ್ ಟೀಮ್ ಇಂಡಿಯಾದಲ್ಲಿರುವ ಹಿರಿಯ ಆಟಗಾರರ ಮೇಲೆ ನಿಗಾಯಿಡಲು ನಿರ್ಧರಿಸಿದ್ದಾರೆ. ಪ್ರಸ್ತುತ ತಂಡದಲ್ಲಿರುವ ಹಿರಿಯ ಆಟಗಾರರೆಂದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಈ ನಾಲ್ವರಲ್ಲಿ ಇಬ್ಬರು ಭಾರತ ತಂಡದಿಂದ ಹೊರಬೀಳೋದು ಗ್ಯಾರಂಟಿ.

ಇನ್ನು ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೇರಲು ಇನ್ನೂ ಐದು ಪಂದ್ಯಗಳಿವೆ. ಅಂದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 4-0 ಅಂತರದಿಂದ ಗೆಲ್ಲಬೇಕು. ಈ ಮೂಲಕ 65.79% ಅಂಕಗಳನ್ನು ಕಲೆಹಾಕಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೇರಬಹುದು. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯಗಳಾಗಿ ಬದಲಾಗಿದೆ. ಆದ್ರೆ ಭಾರತೀಯರ ಫಾರ್ಮ್ ನೋಡ್ತಿದ್ರೆ ಆಸ್ಟ್ರೇಲಿಯಾ ನೆಲದಲ್ಲಿ ಇದನ್ನ ಊಹೆ ಮಾಡೋಕೂ ಕೂಡ ಸಾಧ್ಯ ಇಲ್ಲ.

ಒಟ್ನಲ್ಲಿ ಬೆಂಗಳೂರು ಪಂದ್ಯದಲ್ಲಿ ಕೆಎಲ್ ರಾಹುಲ್ ಸ್ಕೋರ್ ಮಾಡ್ಲಿಲ್ಲ ಅಂತಾ ಪ್ಲೇಯಿಂಗ್ 11ನಲ್ಲಿ ಬದಲಾವಣೇ ತಂದ್ರೂ ನೋ ಯೂಸ್. ಸೋ ಬಾರ್ಡರ್ ಗವಾಸ್ಕರ್ ಸರಣಿಯಾದ್ರೂ ಗೆಲ್ತಾರೋ ಇಲ್ಲಾ ಆಸ್ಟ್ರೇಲಿಯನ್ನರ ಮುಂದೆ ಶರಣಾಗಿ ಬರ್ತಾರೋ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *