ಸಿಪಿವೈ ಪರವಿರೋ ಮತಗಳೇಷ್ಟು? – HDK ಮುಂದಿರೋ ಅಗ್ನಿ ಪರೀಕ್ಷೆ ಏನು?
ಮುಸ್ಮಿಂ ಮತಗಳೇ ನಿರ್ಣಾಯಕನಾ?
ಚನ್ನಪಟ್ಟಣ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರತಿಷ್ಠೆಯ ಕಣವಾಗಿದ್ದು, ಜಾತಿ ಲೆಕ್ಕಚಾರಕ್ಕೆ ಜೋರು ನಡೆಯುತ್ತಿದೆ. ಪಕ್ಷಗಳು ತಮ್ಮ ಪರವಾಗಿರುವ ಜಾತಿಯ ಮತಗಳನ್ನು ಭದ್ರಪಡಿಸಿಕೊಂಡು, ಉಳಿದ ಜಾತಿಗಳ ಮತಸೆಳೆಯಲು ಅನುಸರಿಸ ಬೇಕಾದ ಮತಗಳ ಲೆಕ್ಕಾಚಾರಕ್ಕೆ ಮುಂದಾಗಿವೆ. ಯಾವ ಸಮುದಾಯ ಮುಂದು? ಮಹಿಳೆ, ಪುರುಷ ಮತದಾರರು ಎಷ್ಟು? , ಸಿಪಿ ಯೋಗೇಶ್ವರ್ ಪರ ಇರೋ ಮತಗಳೇಷ್ಟು?ನಿಖಿಲ್ ಕುಮಾರ್ ಸ್ವಾಮಿ ಪರ ಇರೋ ಮತಗಳೇಷ್ಚು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಿಟೇನ್ ಟ್ವಿಸ್ಟ್ ಕೊಟ್ಟ RCB – 9 ಹೆಸ್ರು.. ಕೊಹ್ಲಿ ಕ್ಯಾಪ್ಟನ್.. KL ಎಂಟ್ರಿ?
ಚನ್ನಪಟ್ಟಣದಲ್ಲಿ ಎಲೆಕ್ಷನ್ ಕಣ ರಂಗೇರಿದ್ದು, ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಮೂರು ಪಕ್ಷಗಳು ಜಾತಿವಾರು ಮತದಾರರ ವಿವರ, ಈ ಹಿಂದೆ ಪಕ್ಷಕ್ಕೆ ಬಿದ್ದ ಮತಗಳ ವಿವರವನ್ನ ಹಿಡಿದು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಆಯಾ ಜಾತಿಗಳ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚನ್ನಪಟ್ಟಣ ಒಕ್ಕಲಿಗರ ಶಕ್ತಿ ಕೇಂದ್ರ ಎನಿಸಿದೆಯಾದೆ. ಆದರೂ, ಅಹಿಂದ ಮತಗಳು ಒಕ್ಕಲಿಗ ಮತದಾರರಿಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲೇ ಇದೆ. ಹಾಗಿದ್ರೆ ಚನ್ನಪಟ್ಟಣದಲ್ಲಿ ಎಷ್ಟು ಮತಗಳಿವೆ ಅನ್ನೋದನ್ನ ಡಿಟೈಲ್ಸ್ ಆಗಿದೆ.
ಚನ್ನಪಟ್ಟಣದ ಮತಗಳ ಸಂಖ್ಯೆ
2.28 ಲಕ್ಷ ಮತದಾರರನ್ನು ಹೊಂದಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿಒಕ್ಕಲಿಗ ಮತದಾರರೇ ಪ್ರಬಲರು. ಕ್ಷೇತ್ರದಲ್ಲಿ 1.05 ಲಕ್ಷ ಒಕ್ಕಲಿಗ ಮತದಾರರು ಇದ್ದಾರೆ. ಒಕ್ಕಲಿಗರನ್ನು ಹೊರತು ಪಡಿಸಿದರೆ 40 ಸಾವಿರಷ್ಟು ದಲಿತ ಮತದಾರರು ಇದ್ದಾರೆ. ಉಳಿದಂತೆ 30 ಸಾವಿರ ಅಲ್ಪಸಂಖ್ಯಾತ ಮತದಾರರಿದ್ದು, ಹಿಂದುಳಿದ ಸಮುದಾಯಗಳಾದ ಕುರುಬರು 7 ಸಾವಿರ, ಬೆಸ್ತರು ಮತ್ತು ತಿಗುಳರು ತಲಾ 10 ಸಾವಿರ, ಇತರೆ ಹಿಂದುಳಿದ ವರ್ಗಗಳು 25 ಸಾವಿರದಷ್ಟಿದ್ದರೆ, ಲಿಂಗಾಯತರು, ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯಗಳಲ್ಲಿ5 ಸಾವಿರದಷ್ಟು ಮತಗಳು ಇವೆ. 2018 ಮತ್ತು 2023ರಲ್ಲಿ ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗೆಲ್ಲಲು ಮುಖ್ಯಕಾರಣ ಮುಸ್ಮಿಂ ಮತ್ತು ಅಹಿಂದ ಮತಗಳು ಅವರ ಕೈಹಿಡಿದಿದ್ದು.
ಹೆಚ್‌ಡಿಕೆ ಪರವಿದ್ದ ಮುಸ್ಮಿಂ ಮತಗಳು
2008ರ ವಿಧಾನಸಭಾ ಚುನಾವಣೆಯಿಂದ ಚನ್ನಪಟ್ಟಣದ ಮುಸ್ಲಿಮರು ಜೆಡಿಎಸ್ ಪರವಾಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು ಎಂಬ ಕಾರಣಕ್ಕೆ ಮುಸ್ಲಿಂ ಮತದಾರರು ಸಾಮೂಹಿಕವಾಗಿ ಎಚ್.ಡಿ.ಕುಮಾರಸ್ವಾಮಿಗೆ ಮತದಾನ ಮಾಡಿದ್ದರು. ಇನ್ನು ದಲಿತರು ಹೆಚ್ಚಿರುವ ಮತಗಟ್ಟೆಗಳಲ್ಲು ಬಿಜೆಪಿ ಎಂಬ ಕಾರಣಕ್ಕೆ ಯೋಗೇಶ್ವರ್ ವಿರುದ್ಧವಾಗಿ, ಎಚ್.ಡಿ.ಕುಮಾರಸ್ವಾಮಿ ಪರವಾಗಿ ಮತಗಳು ಚಲಾವಣೆಯಾಗಿತ್ತು. ಆದರೆ ಇದೀಗ ಪರಿಸ್ಥಿತಿ ವಿಭಿನ್ನವಾಗಿದ್ದು, ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷವಾಗಿರುವ ಕಾರಣ ತನ್ನ ಅಹಿಂದ ಮತಗಳನ್ನು ಉಳಿಸಿಕೊಳ್ಳ ಬೇಕಿದೆ. ಇದಕ್ಕಾಗಿ ಜೆಡಿಎಸ್ ಇನ್ನಿಲ್ಲದ ಕಸತ್ತು ನಡೆಸುತ್ತಿದೆ. ಸಿ.ಪಿ.ಯೋಗೇಶ್ವರ್ ಅವರು ಈಗ ಕಾಂಗ್ರೆಸ್ ಪಾಳಯದಲ್ಲಿರುವುದರಿಂದ ಅಹಿಂತ ಮತಗಳು ಕೈ ವಶವಾಗುವ ಸಾಧ್ಯತೆಗಳು ಇವೆ.) ಇನ್ನೂ ಕುಮಾರಸ್ವಾಮಿ ಪ್ಲ್ಯಾನ್‌ಗಳೇ ಚನ್ನಪಟ್ಟಣದಲ್ಲಿ ಉಲ್ಟಾ ಆಗಬಹುದು.. ಯಾಕಂದ್ರೆ ಚನ್ನಪಟ್ಟಣದಲ್ಲಿ ಸಿಪಿವೈಗೆ ಸ್ವಂತ ಬಲವಿದೆ. ಅಂದ್ರೆ ಅವರು ಯಾವುದೇ ಪಕ್ಷಕ್ಕೆ ಹೋದ್ರೂ ಅವರಿಗೆ ಒಂದಿಷ್ಟು ಮತಗಳು ಬಿದ್ದೆ ಬೀಳುತ್ತೆ..
ಸಿಪಿವೈ ಗೆಲುವಿನ ಹಾದಿ ಸುಲಭನಾ?
ಸಿಪಿ ಯೋಗೇಶ್ವರ್ ಏಳು ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಗೆಲವು ಸಾಧಿಸಿದ್ದಾರೆ. ಗೆದ್ದ ನಾಲ್ಕೂ ಬಾರಿಯೂ ಬೇರೆ ಬೇರೆ ಚಿಹ್ನೆಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. . 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಆಗಲೂ ಜೆಡಿಎಸ್ ಅಭ್ಯರ್ಥಿಯನ್ನು 4,930 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯಪತಾಕೆ ಹಾರಿಸಿದರು. 2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳಿಂದ ಸೋಲು ಉಣಿಸಿದರು. 2018ರಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಮತ್ತೆ 2023ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ಸಮರ ಸಾರಿದ್ರು. ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ 96,592 ಮತಗಳು ಸಿಕ್ಕರೆ, ಸಿ.ಪಿ.ಯೋಗೇಶ್ವರ್ ಅವರಿಗೆ 80,677 ಮತಗಳು ಸಿಕ್ಕಿತ್ತು. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಗಂಗಾಧರ್ ಅವರು 15,374 ಮತಗಳನ್ನು ಪಡೆದಿದ್ದರು. ಅಂದ್ರೆ ಸಿಪಿವೈ ಸೋತಿದ್ದು ಕೇವಲ 15 ಸಾವಿರ ಮತಗಳಿಂದ ಅಷ್ಟೇ.. ಇದೇ ಲೆಕ್ಕಾಚಾರವನ್ನು ತಾಳೆ ಹಾಕುವುದಾದರೆ, ಈ ಬಾರಿ ಸಿ.ಪಿ.ಯೋಗೇಶ್ವರ್ ಅವರಿಗೆ ತಮ್ಮ ಬೆಂಬಲದ ಮತಗಳ ಜೊತೆಗೆ ಕಾಂಗ್ರೆಸ್‌ನ ಮತಗಳು ಸಿಗುವುದು ಫಿಕ್ಸ್. ಅದ್ರೆ ಕಳೆದ ಬಾರಿ ಜೆಡಿಎಸ್‌ಗೆ ಬಿದ್ದ ಮತಗಳು ಸಿಪಿವೈಗೆ ಪಾಲಾಗುತ್ತೆ. ಈ ಎರಡೂ ಕಡೆಯ ಮತಗಳು ಯೋಗೇಶ್ವರ್ ಅವರ ಪಾಲಾಗುವುದರಿಂದ ಸಹಜವಾಗಿ ಇವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ಮೈತ್ರಿಬಲಕ್ಕೆ ಮತಬಲದ ಕೊರತೆ ಇರುವುದರಿಂದ ಕಾಂಗ್ರೆಸ್‌ಗೆ ಸೈನಿಕನೇ ದೊಡ್ಡ ಬಲ ಎಂದು ಹೇಳಲಾಗುತ್ತಿದೆ. ಮುಸ್ಮಿಂ ಮತಗಳು ಅವಶ್ಯಕತೆ ಇಲ್ಲ ಅಂತಾ ಬಿಜೆಪಿ ಸೇರಿರುವ ಹೆಚ್‌ಡಿಕೆಗೆ ತನ್ನ ಮಗನನ್ನ ಗೆಲ್ಲಿಸೋಕೆ ಚನ್ನಪಟ್ಟಣದಲ್ಲಿ ಆ ಮತಗಳೇ ನಿರ್ಗಾಣಯಕವಾಗುತ್ತೆ ಅನ್ನೋದು ನಿಜ.