ವಿಶ್ವದ ಅತ್ಯಂತ ಹಳೆೇ ದೇಶಗಳು – ಭಾರತ ಎಷ್ಟು ಪುರಾತನವಾದ ದೇಶ?
ಜಗತ್ತಿಗೆ ಎಷ್ಟು ವರ್ಷ ಆಯಸ್ಸು?

ವಿಶ್ವದ ಅತ್ಯಂತ ಹಳೆೇ ದೇಶಗಳು – ಭಾರತ ಎಷ್ಟು ಪುರಾತನವಾದ ದೇಶ?ಜಗತ್ತಿಗೆ ಎಷ್ಟು ವರ್ಷ ಆಯಸ್ಸು?

ಭೂಮಿ ಮೇಲೆ ಮಾನವರು  ಹುಟ್ಟಿದ ನಂತರ ಜಗತ್ತು ಅನೇಕ ಬದಲಾವಣೆ ಕಾರಣವಾಗಿದೆ. ನಾಗರಿಕತೆ, ಇತಿಹಾಸಗಳಿಗೆ ಸಾಕ್ಷಿಯಾಗಿದೆ. ಬೇರೆ ಬೇರೆ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಈ ನೆಲ ಕಂಡಿದೆ. ನಾವು ಹುಟ್ಟಿ ಇಷ್ಟು ವರ್ಷ ಆಗಿದೆ ಎನ್ನುವ ನಮಗೆ  ನಮ್ಮ ನೆಲ, ನಮ್ಮ ದೇಶ ಎಷ್ಟು ಹಳೆಯದ್ದಾಗಿದೆ ಎಂಬುದರ ಬಗ್ಗೆ ಗೊತ್ತೇ ಇಲ್ಲ. ವಿಶ್ವಕ್ಕೂ ಶತಕೋಟಿ ವರ್ಷಗಳಷ್ಟು ಆಯಸ್ಸಾಗಿದೆ. ಬೂಮಿಯ ಮೇಲೆ 800 ಕೋಟಿಗೂ ಹೆಚ್ಚು ಜನ ಹುಟ್ಟಿಕೊಂಡಿದ್ದಾರೆ. ಹಾಗಿದ್ರೆ ಬನ್ನಿ ವಿಶ್ವದ ಅತ್ಯಂತ ಪುರಾತನವಾದ ದೇಶಗಳು ಯಾವುವು ಅಂತಾ ನೋಡೋಣ.

ಒಬ್ಬ ಮನುಷ್ಯ ಹೆಚ್ಚು ಅಂದ್ರೆ 100 ವರ್ಷ ಬದುಕುತ್ತಾನೆ. ಈಗ ಈಗ್ 60 ವರ್ಷ ಬದುಕಿದ್ರೆ ಹೆಚ್ಚು ಅನ್ನುವಂತವಾಗಿದೆ. ಆದ್ರೆ ನಾವು ಬದುಕೋ ನೆಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.. ಸಾಕಷ್ಟು ದೇಶಗಳು ಸಾವಿರಾರು ವರ್ಷಗಳ ಹಿಂದೆ ಹುಟ್ಟಿಕೊಂಡಿವೆ. ಹಾಗಿದ್ರೆ ಯಾವ್ಯಾವ ದೇಶಗಳಿಗೆ ಎಷ್ಟೆಷ್ಟು ವರ್ಷಗಳಾಗಿವೆ ಅನ್ನೋದನ್ನ ನೋಡೋಣ ಬನ್ನಿ..

3000 ವರ್ಷಗಳಿಗೂ ಹಳೇ ದೇಶ ಇರಾನ್‌

ಹೌದು ಐತಿಹಾಸಿಕವಾಗಿ ಪರ್ಷಿಯಾ ಎಂದು ಕರೆಯಲ್ಪಡುವ ಇರಾನ್, 3,000 ವರ್ಷಗಳ ಹಿಂದಿನ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಇರಾನ್ ಅಕೆಮೆನಿಡ್, ಪಾರ್ಥಿಯನ್ ಮತ್ತು ಸಸ್ಸಾನಿಯನ್ ಸಾಮ್ರಾಜ್ಯಗಳ ಅಡಿಯಲ್ಲಿ ಅಭಿವೃದ್ಧಿಯಾಗುತ್ತಾ  ಬಂತು.. ಪ್ರತಿಯೊಂದೂ ಕಲೆ, ಸಾಹಿತ್ಯ ಮತ್ತು ಆಡಳಿತಕ್ಕೆ ಗಮನಾರ್ಹವಾಗಿ ಕೊಡುಗೆಯನ್ನ ಇರಾನ್ ನೀಡಿದೆ.

 ಈಜಿಪ್ಟ್‌ಗೆ 5000 ವರ್ಷಗಳ ಇತಿಹಾಸ

ಇನ್ನು 5,000 ವರ್ಷಗಳ ಇತಿಹಾಸವನ್ನು ಹೊಂದಿರುವ ಈಜಿಪ್ಟ್, ನೈಲ್ ನದಿಯ ಮೇಲಿದ್ದು, ವಿಶ್ವದ ಅತ್ಯಂತ  ಪ್ರಾಚೀನ ಮತ್ತು ಅತ್ಯಂತ ಪ್ರಭಾವಶಾಲಿ ನಾಗರಿಕತೆಯ ತೊಟ್ಟಿಲು ಎಂದು ಕರೆಯುತ್ತಾರೆ. ಗಿಜಾದ ಪಿರಮಿಡ್‌ಗಳು, ಸಿಂಹನಾರಿಗಳು ,ಲಕ್ಸರ್ ಮತ್ತು ಕಾರ್ನಾಕ್ ದೇವಾಲಯಗಳು ಸೇರಿದಂತೆ ಸಾಕಷ್ಟು ಹೆಗ್ಗುರುತುಗಳಿಗ ಈಜಿಪ್ಟ್ ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಭಾರತದಲ್ಲಿರೋ ಬೆಚ್ಚಿ ಬೀಳಿಸೋ ಗುಹೆಗಳು- ಹತ್ತಿರ ಹೋದ್ರೆ ಫಿನಿಷ್

ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಚೀನಾವು ಒಂದು 

ಚೀನಾವು ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ, ಇದು 4,000 ವರ್ಷಗಳ ಹಿಂದಿನದು. ಕೆಲವು ಪುರಾವೆಗಳು 5,800 ವರ್ಷಗಳ ಹಿಂದೆಯೇ ನಾಗರಿಕತೆಯ ಲಕ್ಷಣಗಳನ್ನು ಸೂಚಿಸುತ್ತವೆ. ಚೀನೀ ಇತಿಹಾಸದ ಪ್ರಮುಖ ಅವಧಿಗಳು ಕ್ಸಿಯಾ, ಶಾಂಗ್ ಮತ್ತು ಝೌ ರಾಜವಂಶಗಳ ಆಳ್ವಿಕೆಯನ್ನು ಉಲ್ಲೇಖಿಸುತ್ತವೆ.    ಪೌರಾಣಿಕ ಕ್ಸಿಯಾ ರಾಜವಂಶದಿಂದ ಮಿಂಗ್ ಮತ್ತು ಕ್ವಿಂಗ್ ರಾಜವಂಶಗಳವರೆಗೆ, ಚೀನಾವು ಹಲವಾರು ರಾಜವಂಶಗಳ ಉದಯ ಮತ್ತು ಪತನಕ್ಕೆ ಸಾಕ್ಷಿಯಾಗಿದೆ., ಪ್ರತಿಯೊಂದೂ ಅದರ ಸಂಸ್ಕೃತಿ ಮತ್ತು ಆಡಳಿತದ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಗ್ರೇಟ್ ವಾಲ್ ,ಕ್ಸಿಯಾನ್‌ನಲ್ಲಿರುವ ಟೆರಾಕೋಟಾ ಆರ್ಮಿ ಚೀನಾದ ಪ್ರಾಚೀನ ವೈಭವಕ್ಕ ಸಾಕ್ಷಿಯಾಗಿದೆ.

 

ಭಾರತಕ್ಕೆ 5000 ವರ್ಷಗಳ ಇತಿಹಾತ

 

ನಮ್ಮ ಹೆಮ್ಮೆಯ ದೇಶ ಭಾರತ ಸಾಷ್ಟು ಇತಿಹಾಸವಿದ್ದು, 5,000 ವರ್ಷಗಳಷ್ಟು ಹಳೆಯದಾಗಿದೆ. ಇದು ವಿಶ್ವದ ಅತ್ಯಂತ ಹಳೆಯ ದೇಶಗಳಲ್ಲಿ ಒಂದಾಗಿದೆ. ಈ ದೇಶವು ಪ್ರಾಚೀನ ಸಿಂಧೂ ಕಣಿವೆ ನಾಗರಿಕತೆಯ ನೆಲೆಯಾಗಿದೆ. ಹಾಗೇ ಮೌರ್ಯ, ಗುಪ್ತ ಮತ್ತು ಮೊಘಲ್ ಅವಧಿಗಳನ್ನು ಒಳಗೊಂಡಂತೆ ಹಲವಾರು ರಾಜವಂಶಗಳು ಮತ್ತು ಸಾಮ್ರಾಜ್ಯಗಳಿಂದ ರೂಪುಗೊಂಡಿದೆ. ಇಲ್ಲಿನ ಕಲೆ ಮತ್ತು ಲಾಸ್ತು ಶಿಲ್ವ ಸಾಕಷ್ಟು ಪ್ರಮುಖ್ಯತೆಯನ್ನ ಪಡೆದಿವೆ.

 ಗ್ರೀಸ್‌ಗಿದೆ 3000 ವರ್ಷಗಳ ಇತಿಹಾಸ

ಗ್ರೀಸ್ 3000 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಪ್ರಜಾಪ್ರಭುತ್ವ, ತತ್ವಶಾಸ್ತ್ರ ಮತ್ತು ಒಲಿಂಪಿಕ್ ಕ್ರೀಡಾಕೂಟಗಳ ಜನ್ಮಸ್ಥಳ. ಪ್ರಾಚೀನ ಗ್ರೀಸ್ ಅಥೆನ್ಸ್ ಮತ್ತು ಸ್ಪಾರ್ಟಾದಂತಹ ನಗರದಡಿಯಲ್ಲಿ ಅಭಿವೃದ್ಧಿ ಹೊಂದಿತು. ಅಥೆನ್ಸ್‌ನ ಆಕ್ರೊಪೊಲಿಸ್, ಡೆಲ್ಫಿ ಮತ್ತು ಒಲಂಪಿಯಾದ ದೇವಾಲಯಗಳು ಗ್ರೀಸ್‌ನ ಪರಂಪರೆ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ಜಗತ್ತಿಗೆ ನೀಡಿವೆ.

ಜಪಾನ್ 2000 ವರ್ಷಗಳಿಗಿಂತ ಹಳೆಯ ದೇಶ

ಪ್ರಾಚೀನ ಜಪಾನ್ ತನ್ನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಅಭಿವೃದ್ಧಿಪಡಿಸುವಾಗ ಚೀನೀ ನಾಗರಿಕತೆ, ಬೌದ್ಧಧರ್ಮ ಮತ್ತು ಕನ್ಫ್ಯೂಷಿಯನಿಸಂನಿಂದ ಪ್ರಭಾವಿತವಾಗಿತ್ತು. ಕ್ಯೋಟೋದ ದೇವಾಲಯಗಳು, ನಾರಾದ ಐತಿಹಾಸಿಕ ತಾಣಗಳು ಮತ್ತು ಟೋಕಿಯೊದ ಆಧುನಿಕ ಸ್ಕೈಲೈನ್‌ಗಳು ಪ್ರಾಚೀನ ಸಂಪ್ರದಾಯಗಳಿಂದ ತಾಂತ್ರಿಕ ಆವಿಷ್ಕಾರಕ್ಕೆ ಜಪಾನ್‌ನ ಪ್ರಯಾಣವನ್ನು ಪ್ರತಿಬಿಂಬಿಸುತ್ತವೆ.

ಜಾರ್ಜಿಯಾವನ್ನು 1300 BCE ಹಳೆಯ ದೇಶ ಎಂದು ಪರಿಗಣಿಸಲಾಗಿದೆ. ಪರ್ಶಿಯಾ, ಬೈಜಾಂಟಿಯಮ್‌ ಮತ್ತು ರಷ್ಯಾದ ಪ್ರಭಾವಗಳು ಈ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಕೊಡುಗೆ ನೀಡಿವೆ.    ಇಸ್ರೇಲ್ ಅಂದಾಜು 1200 BCE ಗೆ ಹಿಂದಿನ ಪುರಾತನ ದೇಶವಾಗಿದೆ. ಅಲೆಮಾರಿ ಮತ್ತು ಬುಡಕಟ್ಟು ಜನರು ಈ ಸಮಯದಲ್ಲಿ ಕೆನಾನ್‌ನಲ್ಲಿ ನೆಲೆಸಿದ್ದರು.

 

 

 

Kishor KV

Leave a Reply

Your email address will not be published. Required fields are marked *