ನೀವು ಮಾನಸಿಕ ಒತ್ತಡವನ್ನ ಅನುಭವಿಸುತ್ತಾ ಇದ್ದೀರಾ.?
ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ಯಾ..? ಇಲ್ಲಿದೆ ಪರಿಹಾರ

ನಿಮ್ಗೆ ಕೆಲಸದಲ್ಲಿ ಟಾರ್ಚರ್.. ಟ್ರಾಫಿಕ್ ಜಾಮ್.. ಬದುಕಿ ಬಗ್ಗೆ ಯೋಚನೆ ಮಾಡ್ತಾ ನೀವು ಮಾನಸಿಕ ಒತ್ತಡವನ್ನ ಅನುಭವಿಸುತ್ತಾ ಇದ್ದೀರಾ.. ಹೆಚ್ಚೆಚ್ಚು ಟೆನ್ಷನ್ ತಗೊಂಡ್ರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ಯಾ. ಇದಕ್ಕೆಲ್ಲಾ ನಿಮ್ಮ ಬಳಿಯೆ ಪರಿಹಾರವಿದೆ.. ನೈಸರ್ಗಿಕ ಸಲಹೆಗಳನ್ನ ಪಾಲಿಸಿದ್ರೆ ಅದರಿಂದ ಮುಕ್ತರಾಗ ಬಹುದು
ಪ್ರಕೃತಿ ಜೊತೆ ಸಮಯ ಕಳೆದ್ರೆ ನಿಮ್ಮ ಒತ್ತಡ ಕಡಿಮೆ ಮಾಡುತ್ತೆ. ಇದು ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಇಷ್ಟದ ಹಾಡುಗಳನ್ನು ಕೇಳಿ. ಇದು ಒತ್ತಡವನ್ನು ಉಂಟು ಮಾಡುವ ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಪ್ರತಿದಿನ ಯೋಗ ಹಾಗೂ ಧ್ಯಾನದಂತಹ ಚಟುವಟಿಕೆಗಳಿಂದ ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ನಿವಾರಿಸುತ್ತದೆ. ದೈಹಿಕ ವ್ಯಾಯಾಮದಂತಹ ಚಟುವಟಿಕೆಯಿಂದ ಒತ್ತಡ ಕಡಿಮೆ ಮಾಡಲು ಸಹಕಾರಿ. ನಗು ದೇಹದಲ್ಲಿ ಸಂತೋಷದ ಹಾರ್ಮೋನ್ ಹೆಚ್ಚಿಸುತ್ತದೆ. ಇದು ಒತ್ತಡ ನಿವಾರಿಸಿ, ಮನಸ್ಥಿತಿ ಸುಧಾರಿಸುತ್ತದೆ. ಹೀಗಾಗಿ ಸದಾ ನಗುತ್ತಲೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ.