IND ಬಗ್ಗೆ ನಾಲಗೆ ಹರಿಬಿಟ್ಟ NZ – ಟೆಸ್ಟ್ ಸರಣಿ ಗೆದ್ದು ಸೌಥಿ ದರ್ಪ
ಸೌಥಿ ಸೊಕ್ಕು ಇಳಿಸ್ತಾರಾ RO-KO
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗ್ಲೇ ಎರಡು ಪಂದ್ಯಗಳಲ್ಲಿ ಸೋತು ಶರಣಾಗಿದೆ. ಭರ್ತಿ 36 ವರ್ಷಗಳ ನಂತರ, ಕಿವೀಸ್ ಪಡೆ ಭಾರತದಲ್ಲಿ ಗೆದ್ದು ಬೀಗಿದೆ. 3ನೇ ಟೆಸ್ಟ್ ಮ್ಯಾಚ್ ನವೆಂಬರ್ 1ರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಬಟ್ ವಿಷ್ಯ ಏನಪ್ಪ ಅಂದ್ರೆ ಟೀಂ ಇಂಡಿಯಾದ ನೀರಸ ಪ್ರದರ್ಶನಕ್ಕೆ ನ್ಯೂಜಿಲೆಂಡ್ನ ಆಟಗಾರರು ನಾಲಗೆ ಹರಿ ಬಿಡ್ತಿದ್ದಾರೆ. ಬಲಿಷ್ಠ ಭಾರತವನ್ನೇ ಟೀಕೆ ಮಾಡ್ತಿದ್ದಾರೆ. ಒಂದು ಸರಣಿಯ ಸೋಲು ಭಾರತಕ್ಕೆ ಎಂಥಾ ಅವಮಾನ ತಂದಿದೆ..? ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಪಾಕ್ನಂಥ ತಂಡಗಳ ಆಟಗಾರರು ಯಾಕೆ ಆ ಮಟ್ಟಿಗೆ ನಾಲಗೆ ಹರಿ ಬಿಡ್ತಾರೆ? ಸ್ಟ್ರಾಂಗ್ ಟೀಂ ಆಗಿದ್ರೂ ಭಾರತೀಯ ಪ್ಲೇಯರ್ಸ್ನಿಂದ ಕಲಿಯಬೇಕಿರೋ ಸಂಸ್ಕ್ರತಿ ಎಂಥಾದ್ದು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೋಕ್ಷಿತಾ ಅಸಲಿ ಮುಖ ರಿವೀಲ್! – ಸೈಲೆಂಟ್.. ವೈಲೆಂಟ್.. ಗೇಮ್ ಪ್ಲ್ಯಾನ್!!
ಜೀವನದಲ್ಲಿ ಸಕ್ಸಸ್ ಅನ್ನೋದು ಎಷ್ಟು ಮುಖ್ಯ ಅನ್ನೋದಕ್ಕಿಂತ ಆ ಸಕ್ಸಸ್ ಸಿಕ್ಕ ಮೇಲೆ ಹೇಗೆ ಬಿಹೇವ್ ಮಾಡ್ತೇವೆ ಅನ್ನೋದು ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಗುರಿ ತಲುಪಿದ್ವಿ ಅನ್ನೋ ಖುಷಿಯಲ್ಲಿ ಹತ್ತಿದ ಏಣಿಯನ್ನೇ ಒದ್ರೆ ಮತ್ತೊಂದು ದಿನ ಮೇಲಿಂದ ಕೆಳಗೆ ಬೀಳಲೇಬೇಕಾಗುತ್ತೆ. ಈ ಮಾತನ್ನ ಈಗ ಯಾಕೆ ಹೇಳ್ತಿದ್ದೇನೆ ಅಂದ್ರೆ ಭಾರತವನ್ನ ಟೆಸ್ಟ್ ಸರಣಿಯಲ್ಲಿ ಸೋಲಿಸಿರೋ ನ್ಯೂಜಿಲೆಂಡ್ ಆಟಗಾರರ ಅಹಂಕಾರ ಜಾಸ್ತಿ ಆಗ್ತಿದೆ. ಒಂದೇ ಒಂದು ವಿಕ್ಟರಿಯಿಂದ ಟೀಂ ಇಂಡಿಯಾವನ್ನ ಅಣಕಿಸೋಕೆ ಸ್ಟಾರ್ಟ್ ಮಾಡ್ತಿದ್ದಾರೆ.
ಗೆಲುವಿನ ನಾಗಾಲೋಟಕ್ಕೆ ನಾವು ಬ್ರೇಕ್ ಹಾಕಿದ್ದೇವೆಂದ ಟಿಮ್ ಸೌಥಿ!
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವು ನವೆಂಬರ್ 1 ರಿಂದ ಶುರುವಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿದ್ದ ಕಿವೀಸ್ ಪಡೆ, ಪುಣೆಯಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 113 ರನ್ಗಳಿಂದ ಗೆದ್ದುಕೊಂಡಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಬೆನ್ನಲ್ಲೇ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ ಜಂಭ ಕೊಚ್ಚಿಕೊಳ್ತಿದ್ದಾರೆ. ಆದ್ರೆ ಜಂಭ ಕೊಚ್ಚಿಕೊಳ್ಳೋ ಜೋಶ್ನಲ್ಲಿ ಭಾರತವನ್ನ ಅಣಕಿಸೋಕೆ ಶುರು ಮಾಡಿದ್ದಾರೆ.
ಟೀಂ ಇಂಡಿಯಾವನ್ನ ಹೇಗೆ ಸೋಲಿಸಬೇಕೆಂದು ತೋರಿಸಿಕೊಟ್ಟಿದ್ದೇವೆ
ಭಾರತವನ್ನ ಸರಣಿಯಲ್ಲಿ ಸೋಲಿಸಿದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರೋ ನ್ಯೂಜಿಲೆಂಡ್ ಆಟಗಾರ ಟಿಮ್ ಸೌಥಿ, ನಾವು ಭಾರತ ತಂಡವನ್ನು ಭಾರತದಲ್ಲೇ ಸೋಲಿಸಿದ್ದೇವೆ. ಟೀಮ್ ಇಂಡಿಯಾವನ್ನು ತವರಿನಲ್ಲಿ ಹೇಗೆ ಸೋಲಿಸಬೇಕೆಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಏಕೆಂದರೆ ಭಾರತ ತಂಡವು ಕಳೆದ 12 ವರ್ಷಗಳಲ್ಲಿ ತವರಿನಲ್ಲಿ ಯಾವುದೇ ಸರಣಿ ಸೋತಿರಲಿಲ್ಲ. ಇದೀಗ ಅವರ ಗೆಲುವಿನ ನಾಗಾಲೋಟಕ್ಕೆ ನಾವು ಬ್ರೇಕ್ ಹಾಕಿದ್ದೇವೆ ಎಂದು ಟಿಮ್ ಸೌಥಿ ಹೇಳಿಕೊಂಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಅವರ ತವರಿನಲ್ಲಿ ಸೋಲಿಸುವುದು ಸುಲಭವಲ್ಲ. ಆದರೆ ಇದೀಗ ನಾವು ಟೀಮ್ ಇಂಡಿಯಾವನ್ನು ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲಿಸಿದ್ದೇವೆ. ಅಲ್ಲದೆ 18 ಸರಣಿಗಳ ಅವರ ಗೆಲುವಿನ ಓಟಕ್ಕೂ ಬ್ರೇಕ್ ಬಿದ್ದಿದೆ. ಈ ಗೆಲುವುಗಳ ಮೂಲಕ ಭಾರತದಲ್ಲಿ ಭಾರತ ತಂಡವನ್ನು ಸೋಲಿಸಲು ಸಾಧ್ಯ ಎಂಬುದನ್ನು ನಾವು ವಿಶ್ವದಾದ್ಯಂತದ ತಂಡಗಳಿಗೆ ಸಾರಿ ಹೇಳಿದ್ದೇವೆ ಎಂದಿದ್ದಾರೆ.
ಎದುರಾಳಿ ತಂಡದ ಬಗ್ಗೆ ಕೇವಲವಾಗಿ ಮಾತನಾಡಲ್ಲ ಭಾರತೀಯರು!
ಯೆಸ್. ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಆಟಗಾರರು ಎಷ್ಟು ಸ್ಟ್ರಾಂಗ್, ಏನೆಲ್ಲಾ ರೆಕಾರ್ಡ್ಸ್ ಮಾಡಿದ್ದಾರೆ ಅನ್ನೋದನ್ನ ಮತ್ತೊಮ್ಮೆ ಹೇಳ್ಬೇಕಾಗಿಲ್ಲ. ಕ್ರಿಕೆಟ್ ನಲ್ಲಿ ಸ್ಲೆಡ್ಜಿಂಗ್ ಮತ್ತು ಮೈಂಡ್ ಗೇಮ್ ಹೊಸದೇನೂ ಅಲ್ಲ. ಬಟ್ 90ರ ದಶಕದಲ್ಲಿ ಭಾರತ ತಂಡದಲ್ಲಿ ಇದನ್ನೆಲ್ಲಾ ನೋಡೋಕೆ ಸಾಧ್ಯನೇ ಇರ್ಲಿಲ್ಲ. ಸಚಿನ್, ರಾಹುಲ್ ದ್ರಾವಿಡ್, ಶ್ರೀನಾಥ್, ಕುಂಬ್ಳೆ ಅವರಂತಹ ಆಟಗಾರರಿಂದ ಇದನ್ನ ಇಮ್ಯಾಜಿನ್ ಮಾಡಿಕೊಳ್ಳೋಕೂ ಆಗಲ್ಲ. ಬಟ್ ಈಗ ಭಾರತದ ಒಂದಷ್ಟು ಪ್ಲೇಯರ್ಸ್ ಮೈದಾನದ ಒಳಗೆ ಸ್ವಲ್ಪ ಅಗ್ರೆಸ್ಸಿವ್ ಆಗಿ ಬಿಹೇವ್ ಮಾಡಿದ್ರೂ ಕೂಡ ಹೊರಗೆ ಬಂದ್ಮೇಲೆ ಆ ಥರ ಯಾವತ್ತೂ ಬಾಯಿ ಬಿಡಲ್ಲ. ಪತ್ರಕರ್ತರು ಎಷ್ಟೇ ಕೆಣಕಿದರೂ ಸುಮ್ಮನೇ ನಕ್ಕು ಮುಂದೆ ಹೋಗುತ್ತಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಮ್ ನಲ್ಲಿ ಇತಿಹಾಸ ಬರೆಯುತ್ತಾ ನ್ಯೂಜಿಲೆಂಡ್?
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ಕೂಡ ನ್ಯೂಝಿಲೆಂಡ್ ಮುಂದಿದೆ. ಅಂದರೆ ಭಾರತ ತಂಡವು ತವರಿನಲ್ಲಿ 3-0 ಅಂತರದಿಂದ ಸರಣಿ ಸೋತು 40 ವರ್ಷಗಳೇ ಕಳೆದಿವೆ. ಹೀಗಾಗಿ ಈ ಬಾರಿ ಹೊಸ ಇತಿಹಾಸ ಬರೆಯುವ ಅವಕಾಶ ಕಿವೀಸ್ ಪಡೆ ಮುಂದಿದ್ದು, ಸರಣಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡವು ಟೀಮ್ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡುತ್ತಾ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.
ಒಟ್ನಲ್ಲಿ ಟೀಂ ಇಂಡಿಯಾ ಆಟಗಾರರು ಎಂಥದ್ದೇ ಸಿಚುಯೇಷನ್ ಇದ್ರೂ ಕೂಲ್ ಆಂಡ್ ಕಾಮ್ ಆಗಿರ್ತಾರೆ. ಎದುರಾಳಿ ತಂಡಕ್ಕೆ ಆಟದಲ್ಲಷ್ಟೇ ಉತ್ತರ ಕೊಡ್ತಾರೆ. ಬಟ್ ಕೆಲ ರಾಷ್ಟ್ರಗಳ ಪ್ಲೇಯರ್ಸ್ ಅಹಂಕಾರ ತೋರಿಸ್ತಾರೆ. ಇದೀಗ ನ್ಯೂಜಿಲೆಂಡ್ ಕ್ರಿಕೆಟಿಗರು ಇದನ್ನೇ ಮಾಡ್ತಿದ್ದಾರೆ. ಇನ್ನಾದ್ರೂ ನಮ್ಮ ಟೀಂ ಇಂಡಿಯಾ ಪ್ಲೇಯರ್ಸ್ ಮೂರನೆ ಪಂದ್ಯವನ್ನ ಗೆದ್ದು ಅಹಂಕಾರದಲ್ಲಿ ಮೆರೆಯುತ್ತಿರೋ ಕಿವೀಸ್ ಪಡೆಗೆ ಸ್ವಲ್ಪ ಬಿಸಿ ಮುಟ್ಟಿಸಬೇಕಿದೆ.